ಮೇ 9ರಿಂದ ‘ಕನ್ನಡ ನುಡಿ ಹಬ್ಬ’
Update: 2016-05-05 18:12 GMT
ಬೆಂಗಳೂರು, ಮೇ 5: ಕನ್ನಡ ಭಾಷೆಯ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಮೇ 9ರಿಂದ ಎರಡು ದಿನಗಳ ಕಾಲ ‘ಕನ್ನಡ ನುಡಿ ಹಬ್ಬ’ ಆಯೋಜಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳೀಧರ ತಿಳಿಸಿದ್ದಾರೆ. ಮೇ 9ರಂದು ಇಲ್ಲಿನ ನೆಲಮಂಗಲದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಕನ್ನಡ ನುಡಿ ಹಬ್ಬ ಹಮ್ಮಿಕೊಂಡಿದ್ದು, ಮರುದಿನ ದೊಡ್ಡಬಳ್ಳಾಪುರ ಅರಳು ಮಲ್ಲಿಗೆ ಶಾಲಾ ಮೈದಾನದಲ್ಲಿಯೂ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು, ಸ್ಥಳೀಯ ಜನ ಪ್ರತಿನಿಧಿಗಳು, ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿನಿಧಿಗಳು ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.