*ನಾನು ಎಷ್ಟು ಮೃದುವಾಗಿರುತ್ತೇನೋ ಅಷ್ಟೇ ಕಠಿಣವಾಗಿರುತ್ತೇನೆ.
♦ ನಾನು ಎಷ್ಟು ಮೃದುವಾಗಿರುತ್ತೇನೋ ಅಷ್ಟೇ ಕಠಿಣವಾಗಿರುತ್ತೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಭ್ರಷ್ಟರ ಜೊತೆಗೆ ಮೃದುವಾಗಿಯೂ, ಸಭ್ಯರ ಜೊತೆ ಕಠಿಣವಾಗಿಯೂ ಇಲ್ಲದೇ ಇದ್ದರೆ ಆಯಿತು.
---------------------
♦ ಹಿಂದೂ ಧರ್ಮದಲ್ಲಿ ಯಾವುದೇ ಕೆಲಸ ಮಾಡಿದರೂ ಜಾತಿಯ ಲೇಪ ಹಚ್ಚಲಾಗುತ್ತದೆ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ರಾಜಕಾರಣಿಗಳ ಸಮಸ್ಯೆಗಳಿಗೆ ಈ ಲೇಪವೇ ಪರಿಹಾರ.
---------------------
♦ ಈ ವರ್ಷಾಂತ್ಯ ರಾಮಮಂದಿರ ನಿರ್ಮಾಣ ಆರಂಭಗವಾಲಿದೆ.
-ಸುಬ್ರಮಣಿಯನ್ ಸ್ವಾಮಿ, ಸಂಸದ
ಸೇತುವೆ, ರಸ್ತೆ, ಮನೆ, ಕುಡಿಯುವ ನೀರು, ಶಾಲೆ ಇವೆಲ್ಲ ಯಾವಾಗ ನಿರ್ಮಾಣವಾಗಲಿವೆ ಎನ್ನುವುದನ್ನು ಹೇಳಬಹುದೇ?
---------------------
♦ ಮಹಮ್ಮದೀಯ ಉದ್ದೇಶಕ್ಕೆ ಬಳಕೆಯಾದ ಹಿಂದೂ ಸ್ಮಾರಕಗಳಿಗೆ ಅತ್ಯುತ್ತಮ ನಿದರ್ಶನ ಕುತುಬ್ ಮಿನಾರ್.
-ಡಾ. ಎಂ. ಚಿದಾನಂದ ಮೂರ್ತಿ, ಸಂಶೋಧಕ
ಬಹುಶಃ ಕೇಸರಿ ಉದ್ದೇಶಕ್ಕೆ ಬಳಕೆಯಾದ ಕುಸಿಯುವ ಹಂತದಲ್ಲಿರುವ ಕರ್ನಾಟಕದ ಒಂದೇ ಒಂದು ಸ್ಮಾರಕ ಚಿದಾನಂದ ಮೂರ್ತಿ.
---------------------
♦ ಯೋಗಕ್ಕೆ ಓಂ ಕಡ್ಡಾಯವಲ್ಲ.
-ಅನಿಲ್ ಕುಮಾರ್, ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ
ಯೋಗವೇ ಕಡ್ಡಾಯವಲ್ಲ ಎಂದು ಜನರು ಹೇಳುತ್ತಿದ್ದಾರೆ.
---------------------
♦ ಮಂಗಳೂರು ನನ್ನ ಎರಡನೆ ಮನೆ ಇದ್ದ ಹಾಗೆ.
-ಸುರೇಶ್ ಪ್ರಭು, ಕೇಂದ್ರ ರೈಲ್ವೆ ಸಚಿವ
ಅಂದರೆ ಮಂಗಳೂರನ್ನು ದೋಚುವುದಕ್ಕೆ ಇದು ಪರವಾನಿಗೆಯೇ?
---------------------
♦ ನನಗೆ ಡಿಸಿಎಂ ಸ್ಥಾನ ನೀಡಿದರೆ ಸ್ವಾಗತಿಸುತ್ತೇನೆ.
-ಮೋಟಮ್ಮ, ಮಾಜಿ ಸಚಿವೆ
ಜನರೂ ಸ್ವಾಗತಿಸಬೇಕಲ್ಲ?
---------------------
♦ ಸಿದ್ದರಾಮಯ್ಯ ಸರಕಾರ ತಳಮಟ್ಟದಿಂದ ಕೆಲಸ ಮಾಡುತ್ತಿಲ್ಲ.
-ಶೋಭಾ ಕರಂದ್ಲಾಜೆ, ಸಂಸದೆ
ಆ ಕೆಲಸವನ್ನು ಯಡಿಯೂರಪ್ಪರಿಗೇ ಮೀಸಲು ಎನ್ನುತ್ತಿದ್ದಾರೆ ಸಿದ್ದರಾಮಯ್ಯ.
--------------------
♦ ನಾನು ಪಕ್ಷದ (ಜೆಡಿಎಸ್) ಶಿಸ್ತಿನ ಸಿಪಾಯಿ.
-ಎನ್. ಚೆಲುವರಾಯ ಸ್ವಾಮಿ, ಶಾಸಕ
ಶಿಸ್ತು ಜೆಡಿಎಸ್‌ಗೆ ಬೇಕಾಗಿಲ್ಲದ ಸಂಗತಿಯಂತೆ.
---------------------
♦ ನಾನು 24x7 ರಾಜಕಾರಣಿ, ನಿವೃತ್ತಿಯ ಪ್ರಶ್ನೆಯೇ ಇಲ್ಲ.
-ದೇವೇಗೌಡ, ಮಾಜಿ ಪ್ರಧಾನಿ
ಸದ್ಯಕ್ಕೆ ಗ್ರಾಮಪಂಚಾಯತ್ ರಾಜಕಾರಣ ಮಾಡಿಕೊಂಡು ಆರಾಮವಾಗಿರಬಹುದು.
--------------------
ಪ್ರಿಯಾಂಕಾ ಗಾಂಧಿಗೆ ಜನನಾಯಕಿಯಾಗುವ ಎಲ್ಲ ಸಾಮರ್ಥ್ಯವಿದೆ.
- ದಿಗ್ವಿಜಯಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಹೀಗೆ ಹೇಳಿಯೇ ರಾಹುಲ್ ಗಾಂಧಿಯನ್ನು ಬಲಿ ಹಾಕಿದಿರಿ.
---------------------
♦ ಹೈಕಮಾಂಡ್ ಸೂಚನೆಯಂತೆ ಇಲ್ಲಿ ಎಲ್ಲವೂ ನಡೆಯುತ್ತದೆ.
-ಡಾ.ಜಿ ಪರಮೇಶ್ವರ್, ಗೃಹ ಸಚಿವ
ಅದಕ್ಕಾಗಿ ಆಗಾಗ ಹೈಕಮಾಂಡ್ ಬಳಿ ಓಡುವುದೇ?
---------------------
♦ ಕೇವಲ ಕುರ್ಚಿ ಉಳಿಸಿಕೊಳ್ಳಲೆಂದೇ ಸಿದ್ದರಾಮಯ್ಯ ಶಾಸಕರ ಮೂಗಿಗೆ ಸಂಪುಟ ವಿಸ್ತರಣೆಯ ತುಪ್ಪ ಸವರುತ್ತಿದ್ದಾರೆ.
-ಈಶ್ವರಪ್ಪ, ವಿ.ಪ. ಪ್ರತಿಪಕ್ಷ ನಾಯಕ
ನಿಮ್ಮ ಮೂಗಿಗೆ ಸವರುತ್ತಿಲ್ಲ ಎಂಬ ದುಃಖವೇ?
---------------------
♦ ಭಾರತ ಕಾಂಗ್ರೆಸ್ ಕುಟುಂಬದ ಸೊತ್ತಲ್ಲ.
-ರಿಷಿ ಕಪೂರ್, ಬಾಲಿವುಡ್ ನಟ
ಕಪೂರ್ ಕುಟುಂಬದ ಸೊತ್ತು ಎಂದು ಭಾವಿಸಿದಂತಿದೆ.
--------------------
♦ ಎತ್ತಿನ ಹೊಳೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ.
-ಯು.ಟಿ.ಖಾದರ್, ಆರೋಗ್ಯ ಸಚಿವ
ಮುಂದಿನ ಚುನಾವಣೆಯಲ್ಲಿ ಈ ಎತ್ತು ನಿಮಗೆ ತಿವಿಯದೇ ಇದ್ದರೆ ಸಾಕು.
---------------------
♦ ತಮಿಳುನಾಡಿನಲ್ಲಿ ಜಯಲಲಿತಾ ಗೆದ್ದದ್ದು ಮೋಸದಿಂದ
-ಕರುಣಾನಿಧಿ, ಡಿಎಂಕೆ ನಾಯಕ
ಮೋಸವನ್ನು ಮೋಸ ಗೆದ್ದಿತು. ಅಷ್ಟೇ.
---------------------
♦ ಚರಾಜ್ಯಗಳ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಅಂದರೆ ಈ ಫಲಿತಾಂಶ ನಿಮ್ಮ ನಿರೀಕ್ಷೆಯಾಗಿತ್ತೇ?
---------------------
♦ ಕಾಂಗ್ರೆಸ್ ಮುಕ್ತ ಭಾರತಕ್ಕೆ ಇನ್ನರಡೇ ಮೆಟ್ಟಿಲು.
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಮೆಟ್ಟಿಲಿಂದ ಜಾರಿ ಬಿದ್ದರೆ, ಬಿಜೆಪಿಯ ಬದುಕು ಕತ್ತಲು.
---------------------
♦ ನಾನು ಅಮೆರಿಕದ ಅಧ್ಯಕ್ಷನಾದರೆ ಚೀನಾ ನನ್ನ ಆಣತಿಯಂತೆ ನಡೆಯಲಿದೆ
-ಡೊನಾಲ್ಡ್ ಟ್ರಂಪ್, ಅಮೆರಿಕದ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೆಯ ಅಭ್ಯರ್ಥಿ
ಅಂದರೆ ನೀವು ಚೀನಾದ ಏಜೆಂಟ್ ಆಗಿದ್ದೀರಿ ಎಂದಾಯಿತು.
---------------------
♦ ಮಾತನಾಡುವ ಮುನ್ನ ಎರಡೆರಡು ಬಾರಿ ಯೋಚಿಸುವಂತಾಗಿದೆ.
-ಎಚ್. ಆಂಜನೇಯ, ಸಚಿವ
ಮಾತು ಮನೆ ಕೆಡಿಸಿತು ಎನ್ನುವ ಗಾದೆ ನಿಮಗಾಗಿಯೇ ಬರೆದಿರುವುದು.
---------------------
♦ ಕಾಂಗ್ರೆಸ್ ಮುಕ್ತ ಕರ್ನಾಟಕ ದೂರವಿಲ್ಲ.
-ಯಡ್ಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಮುಕ್ತ ಬಿಜೆಪಿಗೂ ಸಂಚು ನಡೆಯುತ್ತಿದೆ. ಎಚ್ಚರ.
---------------------
♦ ಸಿದ್ದರಾಮಯ್ಯ ಕರ್ನಾಟಕದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ.
-ಸಿ.ಎಂ. ಉದಾಸಿ, ಮಾಜಿ ಸಚಿವ
ಬಿಜೆಪಿಯಿಂದ ಯಾರನ್ನಾದರೂ ತಂದು ಮುಖ್ಯಮಂತ್ರಿ ಮಾಡಬೇಕು ಎಂಬ ಆಸೆಯೇ?
---------------------
♦ ರಾಜ್ಯದ ವಕ್ಫ್ ಆಸ್ತಿಯ ಸರ್ವೇ ಆರು ತಿಂಗಳ ಒಳಗೆ ಮುಕ್ತಾಯಗೊಳ್ಳಲಿದೆ
-ಖಮರುಲ್ ಇಸ್ಲಾಂ, ವಕ್ಫ್ ಸಚಿವ
ಸರ್ವೇ ಮುಗಿದರೆ ಸಾಕೇ, ವಕ್ಫ್ ಆಸ್ತಿ ಸೇರಬೇಕಾದವರಿಗೆ ಸೇರಬೇಡವೇ?
---------------------
♦ ದೇಶದ ಎಲ್ಲಾ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿವೆ
-ರಾಜನಾಥ್ ಸಿಂಗ್, ಕೇಂದ್ರ ಸಚಿವ
ಹೌದು, ಪರಿಣಾಮವಾಗಿ ಎಲ್ಲ ಶಂಕಿತ ಕೇಸರಿ ಉಗ್ರರೂ ಒಬ್ಬೊಬ್ಬರಾಗಿ ಸ್ವತಂತ್ರರಾಗುತ್ತಿದ್ದಾರೆ.