ಕಾರಿಗೆ ಎರಡು ಲಾರಿಗಳು ಡಿಕ್ಕಿ; ಐವರು ಸಾವು
Update: 2016-05-25 17:01 IST
.jpg)
ಹೈದರಾಬಾದ್ , ಮೇ 25: ಕಾರೊಂದಕ್ಕೆ ಎರಡು ಲಾರಿಗಳು ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕಾಮರೆಡ್ಡಿ ಟೆಕ್ರಿಯಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕಾರು ರಸ್ತೆಯಲ್ಲಿ ಬಲ ತಿರುವು ಪಡೆಯುತ್ತಿದ್ದ ವೇಳೆ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಎದುರಿನಿಂದ ಬಂದ ಮತ್ತೊಂದು ಲಾರಿಯೂ ಕಾರಿಗೆ ಗುದ್ದಿದೆ. ಎರಡು ಲಾರಿಗಳ ಮಧ್ಯೆ ಸಿಲುಕಿದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಐವರು ಸ್ಥಳದಲ್ಲೇ ಮೃತಪಟ್ಟರು.