*ಮೋದಿ ಸರಕಾರದ ಜನಪರ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ
*ಮೋದಿ ಸರಕಾರದ ಜನಪರ ಆಡಳಿತಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ
ಎಸ್.ಎಲ್.ಭೈರಪ್ಪ, ಸಾಹಿತಿ
ಆ ಬಗ್ಗೆಯೇ ಒಂದು ಕಾದಂಬರಿ ಬರೆದು ಬಿಡಿ.
---------------------
ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾದರೆ ಆಗ ಬಿಜೆಪಿ ನಿಜಕ್ಕೂ ಕಠಿಣ ಸವಾಲು ಎದುರಿಸಬೇಕಾಗುತ್ತದೆ
ಬಾಬಾ ರಾಮ್‌ದೇವ್, ಯೋಗ ಗುರು
ರಾಬರ್ಟ್ ವಾದ್ರಾಗೆ ಯೋಗ ಗುರು ಆಗಿ ಬಿಟ್ಟರೆ ನಿಮ್ಮ ಸಮಸ್ಯೆ ಮುಗಿಯುತ್ತದೆ.
---------------------
ನಾನು ಸ್ಪಷ್ಟವಾಗಿ ಹೇಳುತ್ತೇನೆ ನನಗೆ ಈ ಮೊದಲು ಮದುವೆಯಾಗಿತ್ತು ಎಂಬುದು ಸುಳ್ಳು.
ಲುಲಿಯಾ ವೆಂಟುರ್, ಸಲ್ಮಾನ್ ಪ್ರೇಯಸಿ
ಮದುವೆ ಮಾತ್ರ ಆಗಿರಲಿಲ್ಲ ಎನ್ನುತ್ತಿದ್ದೀರಿ.
---------------------
ಸೋನಿಯಾ ಇಲ್ಲದಿದ್ದರೆ ಕಾಂಗ್ರೆಸ್ ಹೋಳಾಗುತ್ತಿತ್ತು
ವೆಂಕಯ್ಯ ನಾಯ್ಡು, ಕೇಂದ್ರ ಸಚಿವ
ಮೋದಿ ಇಲ್ಲದಿದ್ದರೆ ಬಿಜೆಪಿ ಬೋಳಾಗುತ್ತಿತ್ತು ಎನ್ನುವ ಮಾತಿದೆ.
--------------------
ರಾಜಕೀಯದಲ್ಲಿರುವ ನಮ್ಮದೂ ಒಂದು ಯಕ್ಷಗಾನ
ಯು.ಟಿ.ಖಾದರ್, ಆರೋಗ್ಯ ಸಚಿವ
ಕೋಡಂಗಿ ವೇಷ ಮಾತ್ರ ನನಗೇ ಬೇಕು ಎಂದರಂತೆ ಸಿಎಂ ಇಬ್ರಾಹೀಂ.
---------------------
ಎಸಿಬಿಯಿಂದ ಭ್ರಷ್ಟಾಚಾರ ನಿಗ್ರಹ ಅಸಾಧ್ಯ
ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ
ಆ ಕಾರಣಕ್ಕೆ ಅದರ ಮೇಲೆ ಸರಕಾರಕ್ಕೆ ಪ್ರೀತಿ.
---------------------
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯದು ಮಂತ್ರಕ್ಕಿಂತ ಉಗುಳು ಜಾಸ್ತಿ
ಎಸ್.ಎಂ.ಕೃಷ್ಣ, ಕಾಂಗ್ರೆಸ್ ನಾಯಕ
ಆದರೆ ಉಗುಳಿದ್ದು ಕಾಂಗ್ರೆಸ್‌ಗೆ ತಾನೆ. ಅದೇ ಅವರ ತೃಪ್ತಿ.
---------------------
ರಾಜ್ಯಸಭೆ ಚುನಾವಣೆಯಲ್ಲಿ ಹೊರ ರಾಜ್ಯದವರಿಗೆ ಟಿಕೆಟ್ ನೀಡುವುದು ತಪ್ಪಲ್ಲ
ಸಿ.ಟಿ.ರವಿ, ಶಾಸಕ
ತಪ್ಪು ನಿಮ್ಮಂತಹ ಒಳರಾಜ್ಯದವರನ್ನು ಶಾಸಕರಾಗಿ ಆಯ್ಕೆ ಮಾಡಿದ್ದು.
---------------------
ಈಗಿನ ರಾಜಕಾರಣಿಗಳು ‘ಗೂಳಿ’ಗಳಿದ್ದಂತೆ. ಸಿಕ್ಕಿದ್ದನ್ನು ತಿನ್ನುವುದು, ಸಿಕ್ಕವರನ್ನು ತಿವಿಯುವುದು ಇವರ ಕೆಲಸ
ರಮೇಶ್ ಕುಮಾರ್, ಶಾಸಕ
ಲೋಕಾಯುಕ್ತ ಎನ್ನುವ ಕಸಾಯಿಖಾನೆಯ ಅಗತ್ಯವನ್ನು ಇದು ಹೇಳುತ್ತಿದೆ.
---------------------
ಪೂಜಾರಿ ಸಂಸದರಾಗಿದ್ದರೆ ಎತ್ತಿನಹೊಳೆ ಯೋಜನೆ ರದ್ದಾಗುತ್ತಿತ್ತು
ಯು.ಟಿ.ಖಾದರ್, ಆರೋಗ್ಯ ಸಚಿವ
ಅಂದರೆ ಈ ಜನ್ಮದಲ್ಲಿ ಪೂಜಾರಿ ಸಂಸದರಾಗುವುದಿಲ್ಲ, ಎತ್ತಿನಹೊಳೆ ರದ್ದಾಗುವುದಿಲ್ಲ.
--------------------
ಇಂದಿನ ರಾಜಕಾರಣಿಗಳಿಗಿಂತ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ಉತ್ತಮ ಎನಿಸುತ್ತಿದೆ
ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ
ನಿಮಗೋಸ್ಕರ ಮತ್ತೊಮ್ಮೆ ತುರ್ತುಪರಿಸ್ಥಿತಿ ಹೇರಲು ಮೋದಿ ಸಿದ್ಧತೆ ನಡೆಸುತ್ತಿದ್ದಾರೆ. ಚಿಂತೆ ಬಿಡಿ.
---------------------
ಭಾರತ ಕಂಡ ಕಳಂಕ ರಹಿತ ಪ್ರಧಾನಿ ಎಂದರೆ ಅದು ಮೋದಿ
ಸಬರಾನಂದ, ಅಸ್ಸಾಂ ಸಿಎಂ
ತೋಳಕ್ಕೆ ನರಿ ಸಾಕ್ಷಿ.
---------------------
ಯಡಿಯೂರಪ್ಪ ಜೈಲಿಗೆ ಹೋಗಿದ್ದ ಬಗ್ಗೆ ಜನತೆಗೆ ಅಸಮಾಧಾನವಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
ದೇಶದ ಸ್ವಾತಂತ್ರಕ್ಕಾಗಿ ಜೈಲಿಗೆ ಹೋಗಿದ್ದು ಎಂದು ಯಡಿಯೂರಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರಂತೆ.
--------------------
ಪ್ರಜಾಪ್ರಭುತ್ವವೆಂದರೆ ಸಹಭಾಗಿತ್ವ
ನರೇಂದ್ರ ಮೋದಿ, ಪ್ರಧಾನಿ
ಬಹುಶಃ ಆರೆಸ್ಸೆಸ್‌ನ ಸಹಭಾಗಿತ್ವದ ಬಗ್ಗೆ ಹೇಳಿರಬೇಕು.
--------------------
ಬಿಜೆಪಿ ಮತ್ತು ಕಾಂಗ್ರೆಸ್ ಗಂಡ, ಹೆಂಡತಿಯರಂತೆ
ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ವಿವಾಹ ನಡೆಸಿಕೊಟ್ಟ ಪುರೋಹಿತ ನೀವೇ ಎನ್ನುವುದು ದೇಶದ ನಂಬಿಕೆ.
--------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ತಲೆ ತಿರುಕ
ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಬಿಜೆಪಿಯೊಳಗಿನ ತಲೆಹಿಡುಕರಿಗಿಂತ ವಾಸಿ.
--------------------
ಸಚಿವ ಆಂಜನೇಯ ‘ವೇಶ್ಯಾವಾಟಿಕೆ’ ಎಂಬ ಪದ ಪ್ರಯೋಗಿಸಿದ್ದು ತಪ್ಪು
ಉಮಾಶ್ರೀ, ಸಚಿವೆ
ಹೌದು. ವೇಶ್ಯೆಯರಿಗೆ ಅದರಿಂದ ತುಂಬಾ ಅವಮಾನವಾಗಿದೆ.
--------------------
ಹಿರೋಶಿಮಾ ದಾಳಿಗೆ ಕ್ಷಮೆ ಕೇಳುವುದಿಲ್ಲ
ಬರಾಕ್ ಒಬಾಮ, ಅಮೆರಿಕ ಅಧ್ಯಕ್ಷ
ಅದಕ್ಕಿಂತಲೂ ಭೀಕರ ದಾಳಿಗಳಿಗೆ ಕ್ಷಮೆ ಕೇಳಬೇಕಾಗುತ್ತದೆ ಎಂಬ ಭಯವೇ?
---------------------
ಕೆಲವೊಂದು ಸಲ ಸಣ್ಣ ಇರುವೆ ಕೂಡಾ ದೊಡ್ಡ ಆನೆಗೆ ತೊಂದರೆ ಕೊಡಬಲ್ಲದು
ಹರೀಶ್ ರಾವತ್, ಉತ್ತರಾಖಂಡ ಮುಖ್ಯಮಂತ್ರಿ
ಅಂತೂ, ಮೋದಿಯನ್ನು ಆನೆ ಎಂದು ಒಪ್ಪಿಕೊಂಡಿರಿ.
---------------------
ರಾಜ್ಯಸಭೆ ರಾಜಕೀಯ ಪುನರ್ವಸತಿ ಕೇಂದ್ರವಲ್ಲ
ಬರಗೂರು ರಾಮಚಂದ್ರಪ್ಪ, ಸಾಹಿತಿ
ಅದೂ ನಿವೃತ್ತ ಸಾಹಿತಿಗಳ ಪುನರ್ವಸತಿ ಕೇಂದ್ರ ಎನ್ನಬಹುದೇ?
---------------------
* ಭಾರತ ಶಾಂತಿ ಮತ್ತು ಸಮೃದ್ಧಿಗೆ ಹೆಸರಾಗಿರುವ ದೇಶ
ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಇದು ಭೂತಕಾಲ. ಇದನ್ನು ವರ್ತಮಾನ ಕಾಲಕ್ಕೆ ಪರಿವರ್ತಿಸಿ ಹೇಳಿ.
---------------------
* ಪಾತಕಿ ದಾವೂದ್ ಇಬ್ರಾಹೀಮ್‌ನನ್ನು ಶೀಘ್ರವೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು
ರಾಜನಾಥ್ ಸಿಂಗ್, ಕೇಂದ್ರ ಸಚಿವ
ಅದಕ್ಕಾಗಿ ಬಜರಂಗದಳದ ಸಹಾಯ ಪಡೆಯಲಾಗುತ್ತದೆಯೇ?
---------------------
ದೇಶದಲ್ಲಿ ಅತ್ಯಾಚಾರ ಘಟನೆಗಳು ಹೆಚ್ಚುತ್ತಿರುವುದಕ್ಕೆ ನೆಹರೂ, ಗಾಂಧಿ ಕುಟುಂಬಗಳು ಕಾರಣ
ಜ್ಞಾನದೇವ್ ಅಹುಜಾ, ರಾಜಸ್ಥಾನ ಬಿಜೆಪಿ ಶಾಸಕ
ಅವರು ಅಧಿಕಾರದಲ್ಲಿಲ್ಲದೇ ಇರುವುದೇ ಕಾರಣ ಎನ್ನುತ್ತಿದ್ದೀರಾ?