ಜಾಡಮಾಲಿ ಪದ್ಧತಿ ಇನ್ನೂ ಜೀವಂತ

Update: 2016-05-30 18:42 GMT

ಇದು ಅಪರಾಧ; ಜಾಮೀನು ರಹಿತ ಕೃತ್ಯ. ಇಷ್ಟಾಗಿಯೂ ಜಾಡಮಾಲಿ ವ್ಯವಸ್ಥೆ ಅವ್ಯಾಹತವಾಗಿ ಮುಂದುವರಿದಿದೆ. ಮಹಾನಗರಗಳಲ್ಲೇ ಇಂಥ ಅಮಾನವೀಯ ಪದ್ಧತಿ ರಾಜಾರೋಷವಾಗಿ ನಡೆಯುತ್ತಿದೆ. ಗುಜರಾತ್‌ನ ಪಟ್ಟಣವೊಂದರಲ್ಲಿ ಯಾವುದೇ ಸುರಕ್ಷಾ ವ್ಯವಸ್ಥೆಯೂ ಇಲ್ಲದೇ ಒಳಚರಂಡಿ ಮ್ಯಾನ್‌ಹೋಲ್‌ಗಳಿಗೆ ಇಳಿದು ಕೆಲಸ ಮಾಡುವ ವಾಲ್ಮೀಕಿ ಜನಾಂಗದ ಅಥವಾ ದಲಿತರ ದೈನಂದಿನ ಕಾಯಕ. ಈ ಕುರಿತ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು.ಮ್ಮಲ್ಲಿ ಯಾವುದೇ ಕಾನೂನುಬಾಹಿರ ಕೆಲಸ ನಡೆಯುತ್ತಿಲ್ಲ’’ ಎಂದು ಸುರೇಂದ್ರನಗರ ಜಿಲ್ಲೆ ಧೃಂಗಧರ್ ನಗರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಾರು ಮೋರಿ ವೀಡಿಯೊ ಕಾರ್ಯಕರ್ತರಿಗೆ ತಿಳಿಸಿದರು. ಜಾಗತಿಕ ಮಟ್ಟದಲ್ಲಿ ದುರ್ಬಲ ಸಮುದಾಯಗಳ ಪರವಾಗಿ ಮಾಧ್ಯಮಗಳಲ್ಲಿ ಪ್ರಚಾರ ಹಾಗೂ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ. ದೇಶದಲ್ಲಿ ಕಾನೂನು ಪ್ರಕಾರ, ಜಾಡಮಾಲಿ ಪದ್ಧತಿ ನಿಷೇಧಿತ ಕ್ರಮ.


ಹೇಗೆ ಕೆಲಸ ಮಾಡುತ್ತದೆ?ಸಾಮಾನ್ಯವಾಗಿ ಮ್ಯಾನ್‌ಹೋಲ್‌ಗಳಿಗೆ ಇಳಿದು ಕೆಲಸ ಮಾಡುವ ಇವರನ್ನು ಗುತ್ತಿಗೆದಾರರು ನೇಮಕ ಮಾಡಿಕೊಳ್ಳುತ್ತಾರೆ. ಇದು ಅವರ ಜವಾಬ್ದಾರಿ ಎಂದು ಮೋರಿ ಹೇಳುತ್ತಾರೆ. ಧೃಂಗಧರದಲ್ಲಿರುವ ಈ ಪರಿಸ್ಥಿತಿ, ಬಹುತೇಕ ಭಾರತದಲ್ಲಿ ದಲಿತರು ಹೀಗೆ ಒಳಚರಂಡಿಗಳಲ್ಲಿ ಸಾಯುವ ಕಥೆಯನ್ನು ಬಿಚ್ಚಿಡುತ್ತದೆ. ಒಳಚರಂಡಿ ಹಾಗೂ ಕೊಚ್ಚೆಗುಂಡಿ ಸ್ವಚ್ಛಗೊಳಿಸುವ ಯಂತ್ರಗಳಿರುವ ನಗರಗಳಲ್ಲಿ ಕೂಡಾ ಬರಿಗೈಯಿಂದ ಮನುಷ್ಯರ ಮಲವನ್ನು ತೆಗೆಯುವ ಅಮಾನವೀಯ ಪದ್ಧತಿ ಜಾರಿಯಲ್ಲಿದೆ.
ದೇಶಾದ್ಯಂತ ಸುಮಾರು 12,226 ಮಂದಿ ಜಾಡಮಾಲಿಗಳು ಕೆಲಸ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಈ ಪೈಕಿ ಶೇಕಡ 82ರಷ್ಟು ಮಂದಿ ಉತ್ತರ ಪ್ರದೇಶದಲ್ಲಿದ್ದಾರೆ ಎಂದು ಈ ತಿಂಗಳ 5ರಂದು ಸಾಮಾಜಿಕ ನ್ಯಾಯ ಖಾತೆ ಸಚಿವ ವಿಜಯ ಸಂಪ್ಲಾ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಇದು ವಾಸ್ತವವನ್ನು ಮುಚ್ಚಿಟ್ಟು, ಕೆಲವೇ ಸಂಖ್ಯೆಯನ್ನು ಹೇಳುವ ಸರಕಾರದ ಅಧಿಕೃತ ಅಂಕಿ ಅಂಶ. ಉದಾಹರಣೆಗೆ ಗುಜರಾತ್‌ನಲ್ಲಿ, ಕೇವಲ ಇಬ್ಬರು ಮಾತ್ರ ಇನ್ನೂ ಜಾಡಮಾಲಿ ವೃತ್ತಿ ಮಾಡುತ್ತಿದ್ದಾರೆ ಎಂದು ಸರಕಾರದ ದಾಖಲೆಗಳು ಹೇಳುತ್ತವೆ.ಅಮಾನವೀಯ ಪದ್ಧತಿ ಮುಂದುವರಿದುಕೊಂಡು ಬರಲು ಮುಖ್ಯ ಕಾರಣವೆಂದರೆ ಹಿಂದೂ ಜಾತಿ ವ್ಯವಸ್ಥೆ. ದೇಶದಲ್ಲಿ ಸುಮಾರು 13 ಲಕ್ಷ ದಲಿತರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಜಾಡಮಾಲಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರಾಚೀನ ಶೌಚಾಲಯ ಮುಖ್ಯ ಕಾರಣಪದ್ಧತಿ ಮುಂದುವರಿಯಲು ಮುಖ್ಯ ಕಾರಣ ಎಂದರೆ ಹಳೆಯ ಕಾಲದ ಶೌಚಾಲಯಗಳು. ಈ ವ್ಯವಸ್ಥೆಯಡಿ, ಶೌಚಾಲಯದ ಹೊಂಡದಲ್ಲಿ ಸಂಗ್ರಹವಾದ ಮಾನವ ಮಲವನ್ನು ದೈಹಿಕವಾಗಿಯೇ ಹೊರತೆಗೆದು ಸ್ವಚ್ಛಗೊಳಿಸಲಾಗುತ್ತದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಕಳೆದ ಫೆಬ್ರವರಿ 25ರಂದು ಲೋಕಸಭೆಯಲ್ಲಿ ನೀಡಿದ ಉತ್ತರದ ಪ್ರಕಾರ, ದೇಶದಲ್ಲಿ 1,67,487 ಕುಟುಂಬಗಳಲ್ಲಿ ಕನಿಷ್ಠ ಒಬ್ಬರಾದರೂ ಜಾಡಮಾಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದು 2011ರ ಸಾಮಾಜಿಕ- ಆರ್ಥಿಕ ಹಾಗೂ ಜಾತಿ ಜನಗಣತಿಯಿಂದ ಬಹಿರಂಗವಾದ ಅಂಕಿ ಅಂಶ.
ದೇಶದಲ್ಲಿ ಜಾರಿಗೆ ಬಂದ 2013ರ ಜಾಡಮಾಲಿಗಳ ನೇಮಕಾತಿ ಮತ್ತು ಪುನರ್ವಸತಿ ಕಾಯ್ದೆಯ ಅನ್ವಯ ಜಾಡಮಾಲಿ ಪದ್ಧತಿ ದೇಶದಲ್ಲಿ ನಿಷಿದ್ಧ. 2013ರ ಡಿಸೆಂಬರ್ 6ರಂದು ಈ ಕಾಯ್ದೆ ಜಾರಿಗೆ ಬಂದಿದೆ. ಜಮ್ಮು ಕಾಶ್ಮೀರ ಹೊರತುಪಡಿಸಿ ದೇಶದ ಎಲ್ಲ ರಾಜ್ಯಗಳಿಗೂ ಈ ಕಾಯ್ದೆ ಅನ್ವಯವಾಗುತ್ತದೆ. ಸರಕಾರದ ಪ್ರಕಾರ, ಈ ಪದ್ಧತಿ ಮುಂದುವರಿದುಕೊಂಡು ಬರಲು ಮುಖ್ಯ ಕಾರಣವೆಂದರೆ, ಹಳೆಯ ಕಾಲದ ಶೌಚಾಲಯ ವ್ಯವಸ್ಥೆ ಇನ್ನೂ ಉಳಿದುಕೊಂಡಿರುವುದು. ನೈರ್ಮಲ್ಯ ವ್ಯವಸ್ಥೆ ಇಲ್ಲದ ಇಂಥ ಶೌಚಾಲಯಗಳು ಅಂದರೆ ನೀರು ರಹಿತ ಶೌಚಾಲಯಗಳಲ್ಲಿ ಮಾನವ ಮಲವನ್ನು ದೈಹಿಕವಾಗಿಯೇ ತೆಗೆಯಬೇಕಾಗುತ್ತದೆ. ದೇಶದಲ್ಲಿ ಇರುವ ಇಂಥ ಒಟ್ಟು ಶೌಚಾಲಯಗಳ ಪೈಕಿ ಆಂಧ್ರಪ್ರದೇಶ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೇ ಶೇಕಡ 72ರಷ್ಟು ಈ ಬಗೆಯ ಶೌಚಾಲಯಗಳಿವೆ ಎಂದು 2011ರ ಮನೆ ಪಟ್ಟಿ ಹಾಗೂ ಗೃಹನಿರ್ಮಾಣ ಗಣತಿಯನ್ನು ಆಧರಿಸಿ ವಿಶ್ವಸಂಸ್ಥೆಯ ವರದಿ ಹೇಳಿದೆ.
ದೇಶದಲ್ಲಿ 2.6 ದಶಲಕ್ಷ ಒಣ ಶೌಚಾಲಯಗಳಿವೆ ಎಂದು 2011ರ ಜನಗಣತಿ ಹೇಳಿದೆ. ಇದರ ಜತೆಗೆ 13.15 ಲಕ್ಷ ಶೌಚಾಲಯಗಳಲ್ಲಿ ಮಲವನ್ನು ತೆರೆದ ಚರಂಡಿಗೆ ಬಿಡುವ ವ್ಯವಸ್ಥೆ ಇದೆ. 7.95 ಲಕ್ಷ ಒಣ ಶೌಚಾಲಯಗಳಲ್ಲಿ ಮಾನವ ಮಲವನ್ನು ದೈಹಿಕವಾಗಿ ಸ್ವಚ್ಛಗೊಳಿಸಲಾಗುತ್ತದೆ.
ಸುಮಾರು 12.6ರಷ್ಟು ನಗರ ಕುಟುಂಬಗಳು ಹಾಗೂ ಶೇಕಡ 55ರಷ್ಟು ಗ್ರಾಮೀಣ ಕುಟುಂಬಗಳ ಮಂದಿ ಬಯಲು ಪ್ರದೇಶದಲ್ಲಿ ಶೌಚ ಕ್ರಿಯೆ ನಡೆಸುತ್ತಾರೆ. ಇನ್ನು ಶೇ. 1.7 ಕುಟುಂಬಗಳು ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಹೊಂದಿದ್ದರೂ, ಬಯಲು ಶೌಚವನ್ನು ಅವಲಂಬಿಸಿರುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.


ಲಕ್ಷ ದಲಿತರುಾಡಮಾಲಿ ಪದ್ಧತಿ ಎಂದರೆ, ಕೈಯಿಂದಲೇ ಶೌಚಾಲಯಗಳನ್ನು ಮತ್ತು ಕೊಚ್ಚೆಗುಂಡಿಗಳನ್ನು ಶುಚಿಗೊಳಿಸುವ ವ್ಯವಸ್ಥೆ. ಒಣ ಶೌಚಾಲಯ ಹಾಗೂ ಒಳಚರಂಡಿಯಿಂದ ಮಲ ತೆಗೆದು ಹೊರುವುದು, ಅದನ್ನು ಬೇರೆಡೆಗೆ ಸಾಗಿಸುವುದು ಹಾಗೂ ನಿರ್ವಹಿಸುವುದು ಇದರಲ್ಲಿ ಸೇರುತ್ತದೆ. ಭಾರತದಲ್ಲಿ ಬಹುತೇಕ ಇಂಥ ಉದ್ಯೋಗದಲ್ಲಿ ತೊಡಗಿದವರೆಲ್ಲರೂ ಕಡುಬಡವ ಹಾಗೂ ದುರ್ಬಲ ವರ್ಗಗಳಿಗೆ ಸೇರಿದವರು. ಭಾರತದಲ್ಲಿ ಜಾಡಮಾಲಿ ಪದ್ಧತಿ ಉಳಿದುಕೊಂಡು ಬಂದಿರುವುದನ್ನು ಇಲ್ಲಿನ ಜಾತಿ ವ್ಯವಸ್ಥೆಯ ಜತೆಗೆ ಸಂಬಂಧ ಕಲ್ಪಿಸಲಾಗಿದೆ. ದೇಶದಲ್ಲಿ ಈ ಉದ್ಯೋಗ ಮಾಡುತ್ತಿರುವ ಬಹುತೇಕ ಮಂದಿ ಕೆಳವರ್ಗಕ್ಕೆ ಸೇರಿದವರು ಎಂದು ವಿಶ್ವಸಂಸ್ಥೆ ವರದಿ ವಿವರಿಸಿದೆ.ಂದು ಅಂದಾಜಿನ ಪ್ರಕಾರ ದೇಶದಲ್ಲಿ 13 ಲಕ್ಷ ದಲಿತರು, ಈ ಪೈಕಿ ಬಹುತೇಕ ಮಹಿಳೆಯರು ಜಾಡಮಾಲಿ ಕೆಲಸದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಅಧಿಕೃತವಾಗಿ ಅತ್ಯಧಿಕ ಜಾಡಮಾಲಿಗಳನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ. ಇಲ್ಲಿ 10,016 ಜಾಡಮಾಲಿಗಳು ಇದ್ದಾರೆ ಎಂದು ಅಧಿಕೃತ ಅಂಕಿ ಅಂಶ ತೋರಿಸುತ್ತದೆ. ರಾಜ್ಯದ ನಗರ ಭಾಗಗಳಲ್ಲಿ 2404 ಮಂದಿ ಇದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 7612 ಜಾಡಮಾಲಿಗಳಿದ್ದಾರೆ.ತ್ತರ ಪ್ರದೇಶದ ಬಡೌನ್ ಜಿಲ್ಲೆಯಲ್ಲಿ, 2009ರಲ್ಲಿ ಗಂಭೀರ ಪ್ರಮಾಣದ ಆರೋಗ್ಯ ಹಾಗೂ ನೈರ್ಮಲ್ಯ ಸಮಸ್ಯೆಗಳು ವರದಿಯಾದವು. ಇದಕ್ಕೆ ಮುಖ್ಯ ಕಾರಣ ವ್ಯಾಪಕವಾಗಿ ಇದ್ದ ಒಣ ಶೌಚಾಲಯಗಳು. ಈ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ ಪ್ರತಿ 1000ಕ್ಕೆ 110 ಶಿಶುಮರಣ ಸಂಭವಿಸುತ್ತಿದೆ. ಇದರ ಜತೆಗೆ ವಾಂತಿಭೇದಿ, ಬೇಧಿ, ಜಂತುಹುಳ ಹಾಗೂ ಟೈಫಾಡ್‌ನಂಥ ಸಮಸ್ಯೆಗಳು ಅಧಿಕ ವರದಿಯಾಗುತ್ತಿವೆ. ದೇಶದ ಯಾವುದೇ ಪ್ರದೇಶಗಳಲ್ಲಿ ಇಲ್ಲದ ವೈಲ್ಡ್ ಪೋಲಿಯೊ ವೈರಸ್ ಕೂಡಾ ಇಲ್ಲಿ ಪತ್ತೆಯಾಗುತ್ತಿದೆ ಎಂದು ಹೇಳಲಾಗಿದೆ.ರಲ್ಲಿ ಉತ್ತರ ಪ್ರದೇಶ ರಾಜ್ಯ ಸರಕಾರ ದಲಿಯಾ ಜಲಾವೊ ಎಂಬ ಯೋಜನೆಗೆ ಚಾಲನೆ ನೀಡಿತು. ಇದರಲ್ಲಿ ಬುಟ್ಟಿ ಎಂದರೆ ಮಲ ಹೊರುವ ಬುಟ್ಟಿಯನ್ನು ಸೂಚಿಸುತ್ತದೆ.
ರಾಜ್ಯದಲ್ಲಿ 80 ಸಾವಿರ ಒಣ ಶೌಚಾಲಯಗಳನ್ನು ನೀರು ಸುರಿಯುವ ಶೌಚಾಲಯಗಳಾಗಿ ಮಾರ್ಪಡಿಸಿದ ಪರಿಣಾಮವಾಗಿ 2,750 ಮಂದಿಯನ್ನು ಈ ಕೆಲಸದಿಂದ ಮುಕ್ತಿಗೊಳಿಸಲಾಯಿತು. 2010ರ ಬಳಿಕ ಯಾವುದೇ ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿಲ್ಲ. ವಾಂತಿಭೇದಿ ಪ್ರಕರಣಗಳು ಶೇಕಡ 30ರಷ್ಟು ಕಡಿಮೆಯಾಗಿವೆ. 2009-10ರಲ್ಲಿ 18,212 ವಾಂತಿಭೇದಿ ಪ್ರಕರಣ ವರದಿಯಾಗಿದ್ದರೆ, 2010-11ರಲ್ಲಿ ಇದು 12675ಕ್ಕೆ ಇಳಿಯಿತು. ಇಂಥ ಜಾಡಮಾಲಿ ಕುಟುಂಬಗಳ ಪುನರ್ವಸತಿ ಯೋಜನೆಯಡಿ ಇವರಿಗೆ ಒಂದು ಕಂತಿನಲ್ಲಿ 40 ಸಾವಿರ ರೂಪಾಯಿ ನೆರವು ನೀಡಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಜಾಡಮಾಲಿ ಕುಟುಂಬಗಳು ದೇಶದಲ್ಲೇ ಅತ್ಯಧಿಕ. ದೇಶದಲ್ಲಿ ಒಟ್ಟಾರೆ ಇರುವ ಜಾಡಮಾಲಿ ಕುಟುಂಬಗಳ ಪೈಕಿ ಶೇ. 41ರಷ್ಟು ಕುಟುಂಬಗಳು ಈ ರಾಜ್ಯದಲ್ಲಿದ್ದು, ಮಹಾರಾಷ್ಟ್ರದಲ್ಲಿ 68,016 ಜಾಡಮಾಲಿ ಕುಟುಂಬಗಳಿವೆ ಎಂದು ಅಂದಾಜು ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ 23,105, ಉತ್ತರ ಪ್ರದೇಶದಲ್ಲಿ 17,390, ಕರ್ನಾಟಕದಲ್ಲಿ 15,375, ಪಂಜಾಬ್‌ನಲ್ಲಿ 11,951 ಜಾಡಮಾಲಿ ಕುಟುಂಬಗಳಿದ್ದು, ದೇಶದ ಒಟ್ಟು ಜಾಡಮಾಲಿ ಕುಟುಂಬಗಳ ಪೈಕಿ ಶೇ. 81ರಷ್ಟು ಈ ಐದು ರಾಜ್ಯಗಳಲ್ಲಿವೆ.
ಸರಕಾರ 2019ರೊಳಗೆ ದೇಶವನ್ನು ಜಾಡಮಾಲಿ ಪದ್ಧತಿ ಮುಕ್ತ ದೇಶವಾಗಿ ಮಾಡುವ ಕನಸು ಕಾಣುತ್ತಿದೆ.ಾಡಮಾಲಿ ನೇಮಕಾತಿಯಲ್ಲಿ ಭಾರತೀಯ ರೈಲ್ವೆ ಮುಂಚೂಣಿಯಲ್ಲಿದೆ. ಇಲ್ಲಿ ಅಸಂಖ್ಯಾತ ಜಾಡಮಾಲಿಗಳು ಕೆಲಸ ಮಾಡುತ್ತಿದ್ದಾರೆ.
ಕೃಪೆ: ಇಂಡಿಯಾಸ್ಪೆಂಡ್.ಕಾಂ

Writer - ಚೈತನ್ಯ ಮಲ್ಲಾಪುರ

contributor

Editor - ಚೈತನ್ಯ ಮಲ್ಲಾಪುರ

contributor

Similar News