ನಾಲ್ಕುಸಾವಿರ ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ: ಸಚಿವೆ ಉಮಾಶ್ರೀ

Update: 2016-06-01 18:24 GMT

ಬೆಂಗಳೂರು. ಜೂ. 1: ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ನಾಲ್ಕು ಸಾವಿರ ಹೊಸ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಲಾಖೆ ಉಪ ನಿರ್ದೇಶಕರು ಹಾಗೂ ಡಿಡಿಪಿಓಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾಲ್ಕು ಸಾವಿರ ಹೊಸ ಅಂಗನವಾಡಿ ಕಟ್ಟಡಗಳ ಪೈಕಿ 1 ಸಾವಿರ ಕಟ್ಟಡಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾಗುವುದು. ಉಳಿದ 3 ಸಾವಿರ ಕಟ್ಟಡಗಳನ್ನು ಕೇಂದ್ರದ ನೆರವಿನಿಂದ ನಿರ್ಮಾಣ ಮಾಡಲಾಗುವುದು ಎಂದರು.
ರಾಜ್ಯದಲ್ಲಿ 3 ಸಾವಿರ ಅಂಗನವಾಡಿ ಕಟ್ಟಡಗಳನ್ನು ತಲಾ 8ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರಲ್ಲಿ ನರೇಗಾದಿಂದ 5 ಲಕ್ಷ ರೂ. ಕೇಂದ್ರ ಸರಕಾರದ ಐಸಿಡಿಎಸ್ ಯೋಜನೆಯಡಿ 2ಲಕ್ಷ ರೂ.ಹಾಗೂ ರಾಜ್ಯ ಸರಕಾರದ ವತಿಯಿಂದ 1ಲಕ್ಷ ರೂ.ಆರ್ಥಿಕ ನೆರವಿನಡಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುವುದು. ಇದನ್ನು ಹೊರತುಪಡಿಸಿ ಇನ್ನೂ 1 ಸಾವಿರ ಅಂಗನವಾಡಿ ಕೇಂದ್ರಗಳನ್ನು ಇಲಾಖಾ ವತಿಯಿಂದ ನಿರ್ಮಿಸಲಾಗುತ್ತದೆ ಎಂದು ಅವರು ತಿಳಿಸಿದರು.ತ್ಸಾ ಆಹಾರ ವೆಚ್ಚ ಹೆಚ್ಚಳ: ಅಪೌಷ್ಟಿಕ ಮಕ್ಕಳಿಗೆ ಪ್ರಸ್ತುತ ನೀಡುತ್ತಿರುವ ಚಿಕಿತ್ಸಾ ಆಹಾರ ವೆಚ್ಚವನ್ನು 750 ರೂ.ಗಳಿಂದ 2 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದ ಅವರು, ಅಂಗನವಾಡಿ ಕೇಂದ್ರಗಳಲ್ಲಿ ಇನ್ನು ಮುಂದೆ ವಾರಕ್ಕೆ ಮೂರು ದಿನ ಕೆನೆ ಸಹಿತ ಹಾಲನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಹಿಳಾ ಉದ್ದೇಶಿತ ಆಯವ್ಯಯ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ಸಂಬಂಧ ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ ನಡೆಸುವಾಗ ಪ್ರತ್ಯೇಕವಾಗಿ ಈ ವಿಚಾರವನ್ನು ಪರಿಶೀಲಿಸಬೇಕು. ಈ ಬಗ್ಗೆ ಎಲ್ಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. 2015-16ನೆ ಸಾಲಿನಲ್ಲಿ ಮಹಿಳಾ ಆಯವ್ಯಯದ ಕಾರ್ಯಕ್ರಮದಡಿ ಎ-ವರ್ಗದಡಿ 54 ಯೋಜನೆಗಳಿಗೆ 5622.65 ಕೋಟಿ ರೂ.ಒದಗಿಸಲಾಗಿದ್ದು, ಬಿ-ಯೋಜನೆಯಲ್ಲಿ 724ಯೋಜನೆಗಳಿಗೆ 5637.56 ಕೋಟಿ ರೂ. ಒದಗಿಸಲಾಗಿದೆ. ಮಾರ್ಚ್ 2016ರ ಅಂತ್ಯಕ್ಕೆ ಶೇ.2.28 ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆಂದ ಅವರು, ಪ್ರಸಕ್ತ ಸಾಲಿನಲ್ಲಿ ‘ಎ’ ವರ್ಗದಡಿ 5091.07 ಕೋಟಿ ರೂ., ‘ಬಿ’ ವರ್ಗದಡಿ 61603.40 ಕೋಟಿ ರೂ. ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ ಎಂದರು.ಲಾಖೆಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆಯ ಎಲ್ಲ ಅಧಿಕಾರಿಗಳು ಕಟಿಬದ್ದರಾಗಿ ಕರ್ತವ್ಯ ನಿರ್ವಹಿಸಬೇಕು. ಇದರಲ್ಲಿ ವಿಫಲರಾಗುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿನ ಹತ್ತು ಸಾವಿರ ಅಂಗನವಾಡಿ ಕಟ್ಟಡಗಳನ್ನು ಶೀಘ್ರದಲ್ಲೆ ನವೀಕರಣ ಮಾಡಲಾಗುವುದು. ಅಂಗನವಾಡಿಗೆ ಮಕ್ಕಳನ್ನು ಆಕರ್ಷಿಸುವ ದೃಷ್ಟಿಯಿಂದ ಸುಣ್ಣ-ಬಣ್ಣ, ಗೋಡೆ ಬರಹಗಳನ್ನು ಬರೆಸಲಾಗುವುದು ಎಂದ ಅವರು, ಮಹಿಳೆಯರ ಕಲ್ಯಾಣಕ್ಕೆ ಮೀಸಲಿಟ್ಟ ಶೇ.33ರಷ್ಟು ಅನುದಾನ ಸದ್ಬಳಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News