ಖಾಸಗಿ ಶಾಲೆಗಳಿಗೆ ಶೇ.40ರಷ್ಟು ಶುಲ್ಕ ಪಾವತಿಸಲು ಹೈಕೋರ್ಟ್ ನಿರ್ದೇಶನ
Update: 2016-06-01 18:29 GMT
ಬೆಂಗಳೂರು, ಜೂ.1: ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿ ಗಳಿಂದ ಖಾಸಗಿ ಶಾಲೆಗಳು ಹೈಕೋರ್ಟ್‌ನ ಅಂತಿಮ ಆದೇಶ ಬರುವವರೆಗೂ ಶೇ.40ರಷ್ಟು ಮಾತ್ರ ಶುಲ್ಕವನ್ನು ಕಟ್ಟಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಮಾಗಡಿ ರಸ್ತೆಯಲ್ಲಿರುವ ಕಾರ್ಮೆಲ್ ಕಾನ್ವೆಂಟ್ ಶಾಲೆಯ ಮಕ್ಕಳ ಪೋಷಕರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ನ್ಯಾಯಪೀಠ. ಈ ಆದೇಶ ನೀಡಿದೆ. ಅರ್ಜಿದಾರರ ಪರ ವಾದಿಸಿದ ವಕೀಲ ಅಮೃತೇಶ್, ಖಾಸಗಿ ಶಾಲೆಗಳು 1983ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಹೊರೆಯಾಗುವಂತೆ ಹೆಚ್ಚುವರಿ ಶುಲ್ಕವನ್ನು ವಿಧಿಸಿವೆ ಹಾಗೂ ಶುಲ್ಕವನ್ನು ವಿಧಿಸಿರುವ ಬಗ್ಗೆ ಯಾವುದೇ ರಶೀದಿಯನ್ನು ನೀಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ನ್ಯಾಯಪೀಠದ ಅಂತಿಮ ಆದೇಶ ಬರುವವರೆಗೂ ವಿದ್ಯಾರ್ಥಿಗಳಿಂದ ಶೇ.40 ರಷ್ಟು ಮಾತ್ರ ಶುಲ್ಕವನ್ನು ಕಟ್ಟಿಸಿಕೊಳ್ಳುವಂತೆ ಖಾಸಗಿ ಶಾಲೆಗಳಿಗೆ ಹೈಕೋರ್ಟ್ ಮಧ್ಯಾಂತರ ಆದೇಶ ನೀಡಿದೆ.