ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಜೂ.6ರಿಂದ ಪೆಟ್ರೋಲ್, ಡೀಸೆಲ್ ಸರಬರಾಜು ಬಂದ್

Update: 2016-06-03 18:29 GMT

ಬೆಂಗಳೂರು, ಜೂ.3: ಪೆಟ್ರೋಲ್ ಮತ್ತು ಡೀಸೆಲ್ ಲಾರಿ ಚಾಲಕ ಹಾಗೂ ಕ್ಲೀನರ್‌ಗಳಿಗೆ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗುವಷ್ಟು ವೇತನ ನೀಡಬೇಕು ಎಂದು ಮತ್ತು ಇಂಧನ ವಿತರಕರು, ಮಾಲಕರ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಜೂ.6ರಿಂದ ನಗರದಾದ್ಯಂತ ಸರಬರಾಜು ಬಂದ್ ಮಾಡಿ ಅನಿರ್ದಿಷ್ಟ ಕಾಲ ಮುಷ್ಕರ ಕೈಗೊಳ್ಳಲಾಗುತ್ತಿದೆ ಎಂದು ವಿವಿಧ ಪೆಟ್ರೋಲ್ ಮತ್ತು ಡೀಸೆಲ್ ವಿತರಕರು, ಮಾಲಕರ ಸಂಘಟನೆಗಳು ಕರೆ ನೀಡಿವೆ.

  
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋ ಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಬೆಂಗಳೂರು ಪೆಟ್ರೋಲ್ ಡೀಲರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ರವೀಂದ್ರನಾಥ್, ದಿನನಿತ್ಯ ಡೀಸೆಲ್-ಪೆಟ್ರೋಲ್ ಸಾಗಿಸುವ ಟ್ಯಾಂಕರ್ ಚಾಲಕರು ಮತ್ತು ಕ್ಲೀನರ್ ಗಳಿಗೆ ಕಂಪೆನಿ ಕಡಿಮೆ ವೇತನ ನೀಡು ತ್ತಿದೆ. ಇದರಿಂದ ನೌಕರರ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಹಲವು ಚಾಲಕ ಮತ್ತು ಕ್ಲೀನರ್‌ಗಳು ಇಂಧನ ಕಳ್ಳತನ ಮಾಡಲಾಗುತ್ತಿದೆ. ಕಂಪೆನಿ ಮಾತ್ರ ಏನು ತಿಳಿಯದ ಹಾಗೆ ಸುಮ್ಮನೆ ಇದ್ದು, ಕಳ್ಳತನಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಹೊರತು ಅವರ ವೇತನವನ್ನು ಹೆಚ್ಚಳ ಮಾಡಲು ಮುಂದಾ ಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ದರು.ರ್ನಾಟಕ ಪೆಟ್ರೋಲಿಯಂ ಟ್ರಾನ್ಸ್‌ಪೋರ್ಟ್ ಡ್ರೈವರ್ಸ್‌ ಆಂಡ್ ಕ್ಲೀನರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಎಂ.ಶ್ರೀರಾಮ್ ಮಾತನಾಡಿ, ವಿತರಕರಿಗೆ, ನೌಕರರಿಗೆ ಹಾಗೂ ಮಾಲಕರಿಗೆ ಹಲವಾರು ಸಮಸ್ಯೆಗಳಿವೆ. ಈ ಕುರಿತು ಸಮಿತಿ ರಚನೆ ಮಾಡಬೇಕು ಎಂದು ಐಒಸಿ, ಎಚ್‌ಪಿಸಿ ಮತ್ತು ಬಿಪಿಸಿ ಇಂಧನ ಕಂಪೆನಿಗಳನ್ನು ಆಗ್ರಹಿಸಲಾಗಿತ್ತು. ಸಮಿತಿ ರಚಿಸುವ ಭರವಸೆಯನ್ನು ಕಂಪೆನಿಗಳು ನೀಡಿದ್ದವು. ಆದರೆ, ಇದುವರೆಗೂ ಈ ಬಗ್ಗೆ ಚರ್ಚೆಯಾಗಲಿ, ಸಭೆಯಾಗಲಿ ನಡೆಯಲಿಲ್ಲ. ಹಾಗಾಗಿ ಸಮಿತಿ ರಚನೆಯಾಗುವವರೆಗೂ ನಾವು ನಮ್ಮ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದರು.ಂಪೆನಿಗಳ ಬದಲಿಗೆ ಜೂ.6 ರೊಳಗೆ ಸರಕಾರ ಮಧ್ಯಸ್ಥಿಕೆ ವಹಿಸಿ ನಮ್ಮ ಸಮಸ್ಯೆಗಳನ್ನು ಆಲಿಸಿದರೆ ಹೋರಾಟ ವಾಪಸ್ಸು ಪಡೆಯುವ ಕುರಿತು ಚಿಂತನೆ ಮಾಡಲಾಗುತ್ತದೆ. ಇಲ್ಲದಿದ್ದರೆ ಜೂ.6ರಿಂದ ಅನಿರ್ದಿಷ್ಟ ಕಾಲ ಇಂಧನ ಸರಬರಾಜು ಸ್ಥಗಿತ ಮಾಡುತ್ತೇವೆ. ಇದರಿಂದ ನಗರದಲ್ಲಿರುವ 450-500 ಪೆಟ್ರೋಲ್ ಬಂಕ್‌ಗಳಿಗೆ ಸರಬರಾಜು ನಿಲ್ಲಿಸಲಾಗುತ್ತದೆ. ಇದರಿಂದ ಇಂಧನ ಖಾಲಿಯಾಗಲಿದ್ದು, ಸಾರ್ವಜನಿಕರು ಪರದಾಡಬೇಕಾಗುತ್ತದೆ. ಇದರ ಹೊಣೆಯನ್ನು ಕಂಪೆನಿಗಳೆ ಹೊರಬೇಕಾಗುತ್ತದೆ ಎಂದು ಹೇಳಿದರು. ಇಳಿಸಿದ ಸಾಗಣೆ ವೆಚ್ಚ: ಅಖಿಲ ಕರ್ನಾಟಕ ೆಡರೇಷನ್ ಆ್ ಪೆಟ್ರೋಲಿಯಂ ಟ್ರೇಡರ್ಸ್‌ನ ಗೌರವ ಕಾರ್ಯದರ್ಶಿ ರಂಜಿತ್ ಹೆಗಡೆ ಮಾತನಾಡಿ, ಇಂಧನ ಕಂಪೆನಿ ಗಳಿಂದ ವಾಹನ ಚಾಲಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಚಾಲಕರು ಮತ್ತು ಕ್ಲೀನರ್‌ಗಳು ದಿನದಲ್ಲಿ 15 ಗಂಟೆಗಳ ಕಾಲ ದುಡಿಯುತ್ತಾರೆ. ಆದರೆ, ಇವರಿಗೆ ಸರಿಯಾದ ಮೂಲಭೂತ ಸೌಲಭ್ಯಗಳಾದ ಕುಡಿಯವ ನೀರು, ವಿಶ್ರಾಂತಿ ಕೊಠಡಿಯನ್ನು ನೀಡಿಲ್ಲ. ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಈ ಕಾರ್ಮಿಕರು ದುಡಿಯುತ್ತಿದ್ದಾರೆ. ಇದು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ದೇವನಗೊಂದಿ ಬಿಪಿಸಿಎಲ್ ಟರ್ಮಿನಲ್‌ನಲ್ಲಿ ರಸ್ತೆ ದುರಸ್ಥಿ ಮಾಡಿಲ್ಲ. ಇಂತಹ ರಸ್ತೆಗಳಲ್ಲಿ ಯಾವ ಹೇಗೆ ಲಾರಿ ನಡೆಸಲು ಸಾಧ್ಯ. ಅಲ್ಲದೇ ಇಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ಹಾಗಾಗಿ ಚಾಲಕರ ಮತ್ತು ಕ್ಲೀನರ್‌ಗಳ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News