ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.

Update: 2016-06-19 17:35 GMT

ಪ್ರಧಾನಿ ಮೋದಿ ಈಗ ಜಾಗತಿಕ ನಾಯಕ.
 
  -ಜಗ್ಗಿ ವಾಸುದೇವ್, ಆಧ್ಯಾತ್ಮಿಕ ಮುಖಂಡ 

ಜಾಗ ಮತ್ತು ನಾಯಕನ ನಡುವೆ ಇರುವ ಎರಡು ಶಬ್ದಗಳ ಬಗ್ಗೆ ಆಕ್ಷೇಪವಿದೆ.
---------------------
  
ಸಿದ್ದರಾಮಯ್ಯ, ಯಡಿಯೂರಪ್ಪ, ಡಿಕೆಶಿ ಎಂಬ ತ್ರಿಮೂರ್ತಿಗಳು ಒಟ್ಟಾಗಿ ಜೆಡಿಎಸ್ ಮುಗಿಸಲು ಹೊರಟಿದ್ದಾರೆ -

ದೇವೇಗೌಡ, ಮಾಜಿ ಪ್ರಧಾನಿ

ಆದರೆ ಜೆಡಿಎಸ್ ಮುಗಿಸಲು ನೀವು ಒಬ್ಬರೇ ಸಾಕು.
 ---------------------

ಕಾನೂನಿನ ಚೌಕಟ್ಟಿನಲ್ಲಿ ಶ್ರೀಮಂತರಾಗುವುದರಲ್ಲಿ ತಪ್ಪಿಲ್ಲ.

 -ನ್ಯಾ. ಸಂತೋಷ್ ಹೆಗ್ಡೆ

ಕಾನೂನಿನ ಚೌಕಟ್ಟಿನ ಒಳಗೆ ಮೋಸ, ವಂಚನೆ ಮಾಡಬಹುದು ಎಂದು ಇದರ ಅರ್ಥ.

 ---------------------

  ಪಕ್ಷದ ವರಿಷ್ಠರು ಹೇಳುವುದನ್ನು ಮಾಡುವುದಷ್ಟೇ ನನ್ನ ಕೆಲಸ.


  -ಡಿ.ಕೆ. ಶಿವಕುಮಾರ್, ಸಚಿವ 

ಅಂದರೆ ಸುಪಾರಿ ಕಿಲ್ಲರ್ ಪಾತ್ರವೇ?

---------------------

ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದಿನ ಚುನಾವಣೆ. 

-ದಿಗ್ವಿಜಯ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ 

ರಾಷ್ಟ್ರಮಮಟ್ಟದಲ್ಲೂ ಅವರಿಗೇ ನೇತೃತ್ವ ವಹಿಸಿಕೊಟ್ಟರೆ ಹೇಗೆ?

---------------------

ನೌಕರರು, ಶ್ರಮಿಕರು, ಸೈನಿಕರಿಂದ ದೇಶ ಸಮೃದ್ಧಿಯಾಗುತ್ತದೆ. 

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ಮತ್ತು ಕಪಟ ಸನ್ಯಾಸಿಗಳಿಂದ ಆ ಸಮೃದ್ಧಿ ದೋಚಲ್ಪಡುತ್ತದೆ.

 ---------------------

  ಕಪ್ಪು ಹಣ ವಾಪಸಾತಿ ವಿಷಯದಲ್ಲಿ ಕೇಂದ್ರ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿಲ್ಲ.

 -ಬಾಬಾರಾಮ್ ದೇವ್ ಯೋಗಗುರು 

ಗರಿಷ್ಠ ಪ್ರಯತ್ನ ಮಾಡಿದ್ದಿದ್ದರೆ ನೀವೀಗ ಜೈಲಲ್ಲಿರಬೇಕಾಗಿತ್ತು. 
---------------------

  ಕಾಂಗ್ರೆಸ್ ಸಾಧನೆ ಹೊಸ ಪೀಳಿಗೆಗೆ ದಾಟಿಸದಿದ್ದರೆ ಪಕ್ಷಕ್ಕೆ ಅಪಾಯವಿದೆ. 

-ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ

ಕುರ್ಚಿಗೆ ಅಂಟಿಕೊಂಡಿರುವ ಹಳೆ ಪೀಳಿಗೆಯನ್ನು ಎಬ್ಬಿಸುವ ಕೆಲಸ ಮೊದಲು ಆಗಬೇಕು.

 ---------------------

  ದಿನೇಶ್ ಅಮಿನ್ ಮಟ್ಟು ಕಾಂಗ್ರೆಸ್‌ನ ಸುಪಾರಿ ಕಿಲ್ಲರ್.

- ಸುರೇಶ್ ಕುಮಾರ್, ಶಾಸಕ

ಕಿಲ್ಲರ್ ಯಾರೇ ಆಗಿರಲಿ, ಸುಪಾರಿ ಬೆಲೆ ಹೆಚ್ಚಲಿ ಎನ್ನುವುದು ಅಡಿಕೆ ಬೆಳೆಗಾರರ ಆಶಯ.

 ---------------------

ಹಳೆ ಔಷಧಗಳನ್ನು ನಾಶಪಡಿಸಲು ಕ್ರಮ ಕೈಗೊಳ್ಳಲಾಗುವುದು.

-ಯು.ಟಿ. ಖಾದರ್, ಸಚಿವ 

ಅದನ್ನು ನಾಶ ಪಡಿಸಿದರೆ, ರೋಗಿಗಳಿಗೆ ಕೊಡಲು ಹೊಸ ಔಷಧ ನಿಮ್ಮಲ್ಲಿ ಇದೆಯೇ?

---------------------

   ಕಾಂಗ್ರೆಸ್ ಆಡಳಿತದಲ್ಲಿ ದೇಶವು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು .

-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ರಾಜ್ಯದ ಬಿಜೆಪಿ ಆಡಳಿತದಲ್ಲಿ ನೀವು ಕಳೆದುಕೊಂಡದ್ದನ್ನೊಮ್ಮೆ ನೆನಪಿಸಿಕೊಳ್ಳಿ.

---------------------

ಬಿಜೆಪಿ ಮುಖಂಡರು ಕಾಲಕ್ಕೆ ತಕ್ಕಂತೆ ಬದಲಾಗಬೇಕು.

-ನರೇಂದ್ರ ಮೋದಿ , ಪ್ರಧಾನಿ

ಮನುಷ್ಯರಾಗಿ ಬದಲಾಗುವುದಂತೂ ಅಸಾಧ್ಯ. 

---------------------

  ವ್ಯಕ್ತಿಗಿಂತ ಪಕ್ಷ ದೊಡ್ಡದು.

-ದೇವೇಗೌಡ, ಮಾಜಿ ಪ್ರಧಾನಿ.

ಅದಕ್ಕೇ ಭಿನ್ನಮತೀಯರು ಗೌಡರನ್ನು ತೊರೆದು ಪಕ್ಷವನ್ನು ಆರಿಸಿಕೊಂಡರು.

 ---------------------


  ಧರ್ಮಸ್ಥಳ ಇಲ್ಲವೇ ಚಾಮುಂಡೇಶ್ವರಿ ಮುಂದೆ ಆಣೆ ಮಾಡುತ್ತೇನೆ ರಾಜ್ಯಸಭೆ ಚುನಾವಣೆಯಲ್ಲಿ ಒಂದು ರೂ. ಕೂಡಾ ಮುಟ್ಟಿಲ್ಲ.

-ಎಚ್.ಡಿ.ರೇವಣ್ಣ , ಜೆಡಿಎಸ್ ಶಾಸಕ.

ಅಂದರೆ ಎಲ್ಲವನ್ನೂ ಸೋದರ ಕುಮಾರಸ್ವಾಮಿ ಗುಳುಂ ಮಾಡಿದ್ದಾರೆ ಎಂಬ ಆರೋಪವೇ?

---------------------

ಪ್ರತಿಯೊಂದು ಬಯಕೆಯೂ ಸುಪ್ತಾವಸ್ಥೆಯಿಂದ ಏಳುತ್ತದೆ.

-ಶ್ರೆ ರವಿಶಂಕರ್, ಆರ್ಟ್ ಆಫ್ ಲಿವಿಂಗ್ ಸ್ಥಾಪಕ 

ಆದರೆ ಕೆಲವೊಮ್ಮೆ ಅದಕ್ಕೆ ಬಹುದೊಡ್ಡ ದಂಡ ಕಟ್ಟಬೇಕಾಗುತ್ತದೆ ಎಚ್ಚರ.

---------------------

ಯುದ್ಧದ ಆಯುಧಗಳಿಗೆ ನಮ್ಮ ಬೀದಿಗಳಲ್ಲಿ ಸ್ಥಾನವಿಲ್ಲ.

 -ಹಿಲರಿ ಕ್ಲಿಂಟನ್, ಅಮೆರಿಕದ ಅಧ್ಯಕ್ಷೆಯ ಅಭ್ಯರ್ಥಿ 

ಪಕ್ಕದ ದೇಶದ ಬೀದಿಗಳಲ್ಲಿ ಮಾತ್ರ ಬಳಸುವ ಉದ್ದೇಶವಿರಬೇಕು.

 ---------------------

ಈ ಸರಕಾರದಲ್ಲಿ ನಾನು ಸುರಕ್ಷಿತವಾಗಿದ್ದೇನೆ ಆದ್ದರಿಂದ ಮಹಿಳೆಯರೂ ಸುರಕ್ಷಿತವಾಗಿದ್ದಾರೆ.

-ಮೇನಕಾ ಗಾಂಧಿ, ಕೇಂದ್ರ ಸಚಿವೆ.

ಪ್ರಾಣಿಗಳ ಬಗ್ಗೆ ಇರುವ ದಯೆ, ಈ ದೇಶದ ಮಹಿಳೆಯರ ಬಗ್ಗೆಯೂ ಇರಲಿ.

 ---------------------

  ನಾನು ರಾಜಕೀಯಕ್ಕೆ ಬಂದದ್ದು ನಿರುದ್ಯೋಗಿಯಾಗಿದ್ದಾಗ ಅಲ್ಲ, ಯಶಸ್ಸಿನ ಉತ್ತುಂಗದಲ್ಲಿದ್ದಾಗ

-ಸ್ಮತಿ ಇರಾನಿ, ಕೇಂದ್ರ ಸಚಿವೆ

ನಿಮ್ಮ ನಟನೆಯ ಉತ್ತುಂಗವನ್ನು ನೋಡಿಯೇ ರಾಜಕಾರಣಿಗಳು ರಾಜಕೀಯಕ್ಕೆ ಎಳೆತಂದದ್ದು.

---------------------

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಗೂಂಡಾ ರಾಜ್ಯವಾಗಿದೆ.

- ಕೆ.ಎಸ್. ಈಶ್ವರಪ್ಪ, ಬಿಜೆಪಿ ನಾಯಕ

ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ನಿಮ್ಮ ವಿರುದ್ಧ ಗೂಂಡಾ ಕಾಯ್ದೆ ಹಾಕುತ್ತಾರಂತೆ ಎಚ್ಚರಿಕೆ. 

---------------------

ಮಾಸಾಂತ್ಯಕ್ಕೆ ತರಕಾರಿ ಬೆಲೆ ಇಳಿಯಲಿದೆ.

-ಕೃಷ್ಣ ಭೈರೇಗೌಡ ಸಚಿವ

ಯಾವ ಮಾಸ ಎನ್ನುವುದೂ ತಿಳಿಸಿ ಬಿಡಿ. 

---------------------

  
ಬಿಹಾರವು ಜಂಗಲ್‌ರಾಜ್‌ನಿಂದ ಈಗ ಮಹಾಜಂಗಲ್‌ರಾಜ್ ಆಗಿ ಬದಲಾಗಿದೆ

 -ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಬಹುಶಃ ನೀವು ಜಂಗಲ್ ಮಹಾ ರಾಜ ಆಗುವ ಕನಸು ಕಾಣುತ್ತಿರಬೇಕು. 

---------------------

  ಸಾರ್ವಜನಿಕ ಆಸ್ತಿ ಪಾಸ್ತಿಗಳು ನಮ್ಮದೇ ಎಂದು ತಿಳಿದು ಸಂರಕ್ಷಿಸಿದಾಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯ.

-ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ

  ಅದರ ಆಧಾರದಲ್ಲಿ ರೈತರಿಗೆ ತಮ್ಮ ಗ್ರಾಮೀಣಭಿವೃದ್ಧಿ ಫೈನಾನ್ಸ್‌ಗಳಿಂದ ಸಾಲ ಕೊಡುತ್ತೀರಾ?

---------------------

  ನಾವು ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ವಿಫಲರಾಗಿದ್ದೇವೆ.

 - ರಮಾನಾಥ ರೈ, ಅರಣ್ಯ ಸಚಿವ. 

ಸಚಿವ ಸಂಪುಟದಲ್ಲಿ ತಮ್ಮ ಸಚಿವ ಸ್ಥಾನದ ಅಸಮತೋಲನದ ಪರಿಣಾಮ ಇರಬಹುದೇ?
---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!