ಬ್ರಿಟನ್‌ಗೆ ಐರೋಪ್ಯ ಒಕ್ಕೂಟ ಬೇಕೆ, ಬೇಡವೇ?

Update: 2016-06-22 18:31 GMT

ಲಂಡನ್, ಜೂ. 22: ಐರೋಪ್ಯ ಒಕ್ಕೂಟದಲ್ಲಿ ಬ್ರಿಟನ್ ಉಳಿಯಬೇಕೆ ಅಥವಾ ಹೊರಬರಬೇಕೆ (ಬ್ರೆಕ್ಸಿಟ್) ಎಂಬ ಬಗ್ಗೆ ನಾಳೆ (ಗುರುವಾರ) ಜನಮತಗಣನೆ ನಡೆಯಲಿದೆ.

ಸಾರ್ವಭೌಮತೆ, ಆರ್ಥಿಕ ಬೆಳವಣಿಗೆ, ವಲಸೆ, ಜಾಗತಿಕ ವೇದಿಕೆಯಲ್ಲಿ ಪ್ರಭಾವ- ಇವೇ ಮುಂತಾದ ವಿಷಯಗಳು ಜನರ ಮತಗಳನ್ನು ನಿರ್ಧರಿಸಲಿವೆ.

ಅದೇ ವೇಳೆ, ಚಹಾಚೀಲಗಳು, ವ್ಯಾಕ್ಯೂಮ್ ಕ್ಲೀನರ್‌ಗಳು ಮತ್ತು ಓವನ್ ಗ್ಲೌಸ್‌ಗಳೂ ಜನಮತ ಗಣನೆಯ ಮೇಲೆ ಪರಿಣಾಮ ಬೀರಲಿವೆ.

ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕೆನ್ನುವವರು, ಒಕ್ಕೂಟದ ನಿಯಮಾವಳಿಗಳನ್ನು ಟೀಕಿಸುತ್ತಾರೆ ಹಾಗೂ ಬ್ರಸೆಲ್ಸ್‌ನ ಅಧಿಕಾರಿಗಳ ಹಸ್ತಕ್ಷೇಪ ನಡೆಸುವ ಪ್ರವೃತ್ತಿ ಹಾಗೂ ಅವರ ಸೂಚನೆಗಳನ್ನು ವಿರೋಧಿಸುತ್ತಾರೆ.

 ‘‘ಕೆಲವು ಸಲ ಐರೋಪ್ಯ ಒಕ್ಕೂಟದ ಈ ನಿಯಮಗಳು ಹಾಸ್ಯಾಸ್ಪದವೆನಿಸುತ್ತವೆ. ಉದಾಹರಣೆಗೆ; ಚಹಾ ಚೀಲವನ್ನು ರಿಸೈಕಲ್ ಮಾಡಬಾರದು, ಎಂಟು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಬಲೂನುಗಳನ್ನು ಊದಬಾರದು ಎನ್ನುವ ನಿಯಮಗಳು’’ ಎಂದು ಲಂಡನ್‌ನ ಮಾಜಿ ಮೇಯರ್ ಬೊರಿಸ್ ಜಾನ್ಸನ್ ಲೇಖನವೊಂದರಲ್ಲಿ ಬರೆಯುತ್ತಾರೆ. ಒಕ್ಕೂಟದಿಂದ ಬ್ರಿಟನ್ ಹೊರಬರಬೇಕು ಎಂಬುದಾಗಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಅದೇ ವೇಳೆ, ಬ್ರಿಟನ್ ಒಕ್ಕೂಟದಿಂದ ಹೊರಬಂದರೆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಾಗಿ ಇತರರು ವಾದಿಸುತ್ತಾರೆ.

ಕಿರು ಅಂತರದಿಂದ ಹೊರಗೆ?

ಐರೋಪ್ಯ ಒಕ್ಕೂಟದಿಂದ ಹೊರಬರಬೇಕೆನ್ನುವ ಅಭಿಪ್ರಾಯವನ್ನು ಬ್ರಿಟನ್ ಕಿರು ಅಂತರದಿಂದ ವ್ಯಕ್ತಪಡಿಸಬಹುದು ಎಂಬ ಇಂಗಿತವನ್ನು ಜನಾಭಿಪ್ರಾಯ ಸಂಗ್ರಹವೊಂದು ಹೇಳಿದೆ.

ಒಕ್ಕೂಟದಲ್ಲೇ ಉಳಿಯಬೇಕೆಂದು 44 ಶೇಕಡಾಮಂದಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಹೊರಬರುವ ಒಲವನ್ನು 45 ಶೇ. ಮಂದಿ ವ್ಯಕ್ತಪಡಿಸಬಹುದು ಎಂದು ಅದು ಹೇಳಿದೆ.

ಕೆಲವು ಸಲ ಐರೋಪ್ಯ ಒಕ್ಕೂಟದ ಈ ನಿಯಮಗಳು ಹಾಸ್ಯಾಸ್ಪದವೆನಿಸುತ್ತವೆ. ಉದಾಹರಣೆಗೆ; ಚಹಾ ಚೀಲವನ್ನು ರಿಸೈಕಲ್ ಮಾಡಬಾರದು, ಎಂಟು ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳು ಬಲೂನುಗಳನ್ನು ಊದಬಾರದು ಎನ್ನುವ ನಿಯಮಗಳು.-ಬೊರಿಸ್ ಜಾನ್ಸನ್, ಲಂಡನ್‌ನ ಮಾಜಿ ಮೇಯರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News