*ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ ರಾಜ್ಯದ ಜನರಿಗಾಗಿ ಮರೆಯಬೇಕು.
*ಬಿಜೆಪಿಯಲ್ಲಿ ಭಿನ್ನಮತ ಇಲ್ಲ; ಇದ್ದರೂ ರಾಜ್ಯದ ಜನರಿಗಾಗಿ ಮರೆಯಬೇಕು.
- ಶೋಭಾ ಕರಂದ್ಲಾಜೆ , ಸಂಸದೆ
ಇದ್ದರೂ ಅಧಿಕಾರ ಪಡೆಯುವವರೆಗೆ ಮರೆಯಬೇಕು ಎಂದರೆ ಚೆನ್ನಾಗಿತ್ತು.
---------------------
ನಾವು ಭಿನ್ನರೂ ಅಲ್ಲ , ಅತೃಪ್ತರೂ ಅಲ್ಲ, ನಾವೇ ಪಕ್ಷ ನಿಷ್ಠರು.
- ಸಿ.ಟಿ. ರವಿ, ಶಾಸಕ
ಅದರರ್ಥ ಯಡಿಯೂರಪ್ಪ ಪಕ್ಷ ನಿಷ್ಠರಲ್ಲ ಎಂದೇ?
---------------------
ಯೋಗ ಅಭ್ಯಸಿಸಲು ನೂತನ ವಿದ್ಯಾ ಸಂಸ್ಥೆಗಳನ್ನು ಆರಂಭಿಸಲಾಗುವುದು .
- ಶ್ರೀಪಾದ್ ನಾಯಕ್, ಕೇಂದ್ರ ಸಚಿವ
ರಾಮ್‌ದೇವ್‌ರನ್ನು ಅದರ ಕುಲಪತಿ ಮಾಡುವ ಹುನ್ನಾರವೂ ಇರಬಹುದು.
---------------------
ಸಚಿವ ಸಂಪುಟ ಯಾರ ಸೊತ್ತೂ ಅಲ್ಲ.
- ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಅದು ಗೊತ್ತಾಗಬೇಕಾದರೆ ತಾವು ಸಚಿವ ಸ್ಥಾನದಿಂದ ಇಳಿಯಬೇಕಾಯಿತು.
---------------------
ಆಸ್ತಿ ಮತ್ತು ಕಪ್ಪು ಹಣ ಘೋಷಿಸಿಕೊಂಡವರ ರಕ್ಷಣೆಯ ಹೊಣೆ ಸರಕಾರದ್ದು.
-ಅರುಣ್ ಜೇಟ್ಲಿ, ಕೇಂದ್ರ ಸಚಿವ
ಘೋಷಿಸಿಕೊಳ್ಳದವರ ರಕ್ಷಣೆಯ ಹೊಣೆ ಹೊತ್ತವರಿಗೆ ಇದು ಕಷ್ಟವೇ?
---------------------
ಆರೆಸ್ಸೆಸ್ ಮುಸ್ಲಿಮರ ಓಲೈಕೆಗೆ ಕಸರತ್ತು ನಡೆಸುತ್ತಿದೆ.
-ಮನೀಶ್ ಕಯಾಂಡೆ, ಶಿವಸೇನೆ ನಾಯಕ
ಬಕ್ರೀದ್ ಹಬ್ಬಕ್ಕೆ ಕುರಿಗಳನ್ನು ಹುಡುಕುತ್ತಿದೆಯಂತೆ.
---------------------
ಮೀಸಲಾತಿ ಸೌಲಭ್ಯ ಪಡೆಯಲು ದಲಿತರು ಮತಾಂತರಗೊಳ್ಳದೆ ಹಿಂದೂ ಧರ್ಮದಲ್ಲಿಯೇ ಮುಂದುವರಿಯಬೇಕು.
-ಎಚ್. ಆಂಜನೇಯ, ಸಚಿವ ಅಂದರೆ ಅಸ್ಪಶ್ಯತೆಯನ್ನು ಸಹಿಸಿಕೊಳ್ಳಲೇ ಬೇಕೇ?
---------------------
ಮುಸ್ಲಿಂ ಆಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ.
-ಮೆಹಬೂಬಾ ಮುಫ್ತಿ , ಕಾಶ್ಮೆರ ಮುಖ್ಯಮಂತ್ರಿ
ಕಾಶ್ಮೀರದ ಎಲ್ಲ ಮುಸ್ಲಿಮರೂ ನಿಮ್ಮ ಕುರಿತಂತೆ ಹೀಗೆಯೇ ನಾಚಿಕೊಂಡಿದ್ದಾರೆ.
---------------------
ಎಸ್.ಎಂ. ಕೃಷ್ಣ ಭಿನ್ನಮತೀಯ ನಾಯಕರಲ್ಲ.
-ಟಿ.ಬಿ ಜಯಚಂದ್ರ, ಸಚಿವ
ಅವರದೇನಿದ್ದರೂ ಭಿನ್ನಮತವನ್ನು ಬಿತ್ತುವ ಕೆಲಸ ಅಷ್ಟೇ.
---------------------
ಭಾರತವನ್ನು ಅಸ್ಥಿರಗೊಳಿಸಲು ಪಾಕ್ ಯತ್ನಿಸುತ್ತಿದೆ.
- ರಾಜನಾಥ ಸಿಂಗ್, ಕೇಂದ್ರ ಸಚಿವ
ಮತ್ತೆ ಆರೆಸ್ಸೆಸ್, ಸಂಘಪರಿವಾರ, ಸನಾತನ ಸಂಸ್ಥೆಗಳು ಮಾಡುತ್ತಿರುವುದೇನು?
---------------------
ತುರ್ತು ಪರಿಸ್ಥಿತಿ ವೇಳೆ ಜೈಲಿನಲ್ಲಿದ್ದ ಪೈಕಿ ಶೇ.99ರಷ್ಟು ಜನ ಸಂಘ ಹಾಗೂ ಆರೆಸ್ಸೆಸ್‌ನವರು.
-ಡಾ. ಮುರಳಿ ಮನೋಹರ ಜೋಷಿ, ಬಿಜೆಪಿ ನಾಯಕ
ಸದ್ಯ ಜೈಲಿನಲ್ಲಿರಬೇಕಾದ ಆರೆಸ್ಸೆಸ್, ಬಿಜೆಪಿಯ ಹಲವು ನಾಯಕರು ದೇಶದ ಅತ್ಯುನ್ನತ ಹುದ್ದೆಯಲ್ಲಿರುವುದು ವಿಪರ್ಯಾಸ.
---------------------
ಪ್ರಜಾಪ್ರಭುತ್ವ ಬಲಿಷ್ಠ ಭಾರತಕ್ಕೆ ಅಡಿಗಲ್ಲಾಗಿದೆ.
-ನರೇಂದ್ರ ಮೋದಿ, ಪ್ರಧಾನಿ
ಅಡಿಗಲ್ಲಿನ ಮೇಲೆ ನಿಮ್ಮ ಕಣ್ಣು ಬಿದ್ದಿದೆಯೇ?
---------------------
ಸರಕಾರ ಜ್ಯೋತಿಷ್ಯ ನಿಷೇಧಕ್ಕೆ ಮುಂದಾಗಿರುವುದು ಸರಿಯಲ್ಲ.
-ವಿಶ್ವೇಶ ತೀರ್ಥ ಸ್ವಾಮೀಜಿ , ಪೇಜಾವರ ಮಠ
ಜ್ಯೋತಿಷ್ಯದ ಜೊತೆಗೆ ನಿಮ್ಮ ಭವಿಷ್ಯ ತಳಕು ಹಾಕಿಕೊಂಡಿದೆಯೇ?
---------------------
ಎಚ್.ಡಿ. ಕುಮಾರಸ್ವಾಮಿ ಎಲ್ಲರನ್ನೂ ನಂಬುತ್ತಾರೆ.
-ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
ದೇವೇಗೌಡರನ್ನೊಬ್ಬರನ್ನು ಬಿಟ್ಟು.
---------------------
ಪಕ್ಷಕ್ಕೆ ದ್ರೋಹ ಮಾಡಿದವರನ್ನು ಪಕ್ಷದಲ್ಲಿ ಇರಲು ಬಿಡುವುದಿಲ್ಲ.
-ದೇವೇಗೌಡ ಮಾಜಿ ಪ್ರಧಾನಿ
ತಮ್ಮನ್ನು ಹೊರ ಹಾಕಲು ಮಕ್ಕಳು ಗುಟ್ಟಾಗಿ ಯೋಜನೆ ರೂಪಿಸುತ್ತಿದ್ದಾರಂತೆ
---------------------
ಸ್ಮಾರ್ಟ್ ಸಿಟಿ ಗ್ರಾಮ ಕೇಂದ್ರಿತ ಅಭಿವೃದ್ಧಿಯು ಗಾಂಧಿ ತತ್ವಕ್ಕೆ ವಿರುದ್ಧ.
-ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ ಗಾಂಧಿಗೂ ನಿಮಗೂ ಏನು ಸಂಬಂಧ?
---------------------
ಗವರ್ನರ್ ಹುದ್ದೆಗೆ 3 ವರ್ಷಗಳ ಅವಧಿ ಸಾಲದು.
-ರಘುರಾಮ್ ರಾಜನ್, ಆರ್‌ಬಿಐ ಗವರ್ನರ್
ಆರ್‌ಬಿಐ ಗವರ್ನರ್‌ಗೆ ವರುಷ, ಮೋದಿಗೆ ನಿಮಿಷ.
---------------------
ದಿಲ್ಲಿ ಸರಕಾರದ ಎಲ್ಲ ಇಲಾಖೆಗಳ ಜಾಹೀರಾತಿನ ಒಟ್ಟು ವೆಚ್ಚ ಪ್ರಧಾನಿ ಮೋದಿಯ ಬಟ್ಟೆಯ ಖರ್ಚಿಗಿಂತಲೂ ಕಡಿಮೆ .
-ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
ಅವರು ಬಟ್ಟೆ ಹಾಕಿಕೊಂಡು ಓಡಾಡುತ್ತಿದ್ದಾರಲ್ಲ, ಅದಕ್ಕೆ ಸಂತೋಷ ಪಡೋಣ.
---------------------
ನಾಯಕತ್ವ ಬದಲಾವಣೆ ನನ್ನ ಬೇಡಿಕೆಯಲ್ಲ.
-ಖಮರುಲ್ ಇಸ್ಲಾಂ, ಮಾಜಿ ಸಚಿವ
ಸಚಿವ ಸ್ಥಾನ ವಜಾ ತೀರ್ಮಾನದಲ್ಲಿ ಬದಲಾವಣೆ ಬೇಕು ಅಷ್ಟೇ.
---------------------
ಜೀವನ ಪೂರ್ತಿ ಸಿದ್ದರಾಮಯ್ಯರ ಮುಖ ನೋಡಲ್ಲ.
- ಶ್ರೆನಿವಾಸ ಪ್ರಸಾದ್, ಮಾಜಿ ಸಚಿವ
ಅಂದರೆ ಸಾರ್ವಜನಿಕವಾಗಿ ಓಡಾಡುವುದನ್ನೇ ನಿಲ್ಲಿಸುತ್ತೀರಿ ಅಂತಾಯಿತು.
---------------------
ನನಗೆ ಅಬಕಾರಿ ಸಚಿವ ಎಂದು ಹೇಳಿಕೊಳ್ಳಲು ಮುಜುಗರವಾಗುತ್ತದೆ.
- ಎಚ್.ವೈ. ಮೇಟಿ, ಅಬಕಾರಿ ಸಚಿವ
ಅಂಬರೀಷ್ ಅವರಿಗೆ ಈ ಖಾತೆ ಬೇಕೇ ಎಂದು ಕೇಳಿ ನೋಡಿ.
---------------------
ಬಿಜೆಪಿ ಯಾರ ಸ್ವತ್ತೂ ಅಲ್ಲ.
- ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಈ ಬಾರಿ ನೀವೆಲ್ಲ ಸೇರಿ ಬಿಜೆಪಿಯನ್ನು ಸೋಲಿಸಿ ಯಡಿಯೂರಪ್ಪರಿಗೆ ಪಾಠ ಕಲಿಸಿ.
---------------------
ಚುನಾವಣೆಯಲ್ಲಿ ಸ್ಪರ್ಧಿಸುವುದು ಎಂದರೆ ಮನೆ, ಮಠ ಹಾಳು ಮಾಡಿಕೊಂಡಂತೆ.
- ಕಾಗೋಡು ತಿಮ್ಮಪ್ಪ, ಸಚಿವ
*ಶ್ರೀಸಾಮಾನ್ಯನ ಮೆ, ಮಠ ತಾನೆ. ನಿಮಗೇಕೆ ಚಿಂತೆ?