ಪುಪ್ಪುಸ ಉರಿತ - ನ್ಯೂಮೋನಿಯ ರೋಗ

Update: 2016-07-15 18:17 GMT

ಸಾಮಾನ್ಯವಾಗಿ ಈ ರೋಗವು ಮೈಕೊಪ್ಲಾಸ್ಮ್ಮ ಸಂಸರ್ಗ (Mycoplasma Infection)ದಿಂದ ಬರುತ್ತದೆ. ಮತ್ತು ಇದು ನಮ್ಮ ದೇಹದಲ್ಲಿರುವ ಸೂಕ್ಷ್ಮದರ್ಶಕ ಜೀವಧಾರಿಕ ರಚನೆಯ ಸಂಬಂಧಿಸಿದ ಕಾಯಿಲೆ. ಇದರಲ್ಲಿ ಶ್ವಾಸಕೋಶದ ಅಂಗಾಂಶಗಳು ಕೆರಳಿ, ನೀರನ್ನು ಸ್ರವಿಸುತ್ತ ಜ್ವರ, ಶ್ವಾಸೋಚ್ಛಾಸದ ತೊಂದರೆಗಳಲ್ಲಿ ಪರ್ಯಾವಸಾನವಾಗುತ್ತದೆ.
ಈ ರೋಗ ಬರಲು ಮುಖ್ಯ ಕಾರಣ ಬ್ಯಾಕ್ಟೀರಿಯಗಳು. ಈ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಈ ರೋಗಕ್ಕೆ ತುತ್ತಾಗಿರುವ ವ್ಯಕ್ತಿಯ ಸ್ಪರ್ಶದಿಂದ ಮತ್ತೊಬ್ಬರಿಗೆೆ ಅಂಟಿಕೊಳ್ಳುತ್ತದೆ. ಮತ್ತು ಕುಟುಂಬದಲ್ಲಿರುವ ಎಲ್ಲರಿಗೂ ಹರಡುತ್ತದೆ.
ಪುಪ್ಪುಸ ಉರಿತ ಎಂದರೇನು?
ಪುಪ್ಪುಸಗಳು ಗಾಳಿ ತುಂಬಿಕೊಂಡು ಟೊಳಾಗಿದ್ದು, ಉಸಿರಾಟದ ಅನಿಲಗಳ ಸರಬರಾಜನ್ನು ದೇಹಕ್ಕೆ ನಿರಂತರವಾಗಿ ಮಾಡುತ್ತಿರುತ್ತವೆ. ಈ ಕೆಲಸಕ್ಕೆ ಪುಪ್ಪುಸಗಳ ರಚನಾತ್ಮಕ ಹೊಂದಾಣಿಕೆಯನ್ನೂ ಮನಗಂಡಿದ್ದೇವೆ. ಈ ಸಜ್ಜಾದ ವ್ಯವಸ್ಥೆ ಒಂದೊಮ್ಮೆ ಇದ್ದಕ್ಕಿದ್ದಂತೆ ಕಲ್ಲ್ಲಿನಂತೆ ಗಡುಸಾಗಿ ಬಿಟ್ಟಿತೆಂದುಕೊಳ್ಳಿ. ಆಗ ಉಸಿರಾಡುವಿಕೆಯಲ್ಲಿ, ದೇಹದ ಇತರ ಕೆಲಸಗಳಲ್ಲಿ ಕಂಡುಬರುವ ಏರುಪೇರುಗಳಿಗೆ ಕಾರಣವಾಗುವ ರೋಗವೇ ಪುಪ್ಪುಸ ಉರಿತ. ಅನೇಕ ಸೂಕ್ಷ್ಮಾಣುಜೀವಿಗಳು, ವಿಷಕಣಗಳು ಮತ್ತು ಪುಪ್ಪುಸದ ಇತರ ಕಾಯಿಲೆಗಳು ಈ ರೋಗವನ್ನು ತರುತ್ತವೆ. ಇಡೀ ದೇಹದ ತುಂಬ ಅತೀ ಶೀಘ್ರವಾಗಿ ನಂಜೇರಿಸಿ, ಶ್ವಾಸಕೋಶಗಳನ್ನು ಉಬ್ಬಿಸಿ ಅವು ಕೆಲಸಕ್ಕೆ ಬಾರದಂತೆ ಈ ರೋಗ ಮಾಡುತ್ತದೆ.
ಟೊಳ್ಳಾಗಿರುವ ಪುಪ್ಪುಸಗಳು ಗಾಳಿ ತುಂಬಿಕೊಂಡು ಉಸಿರಾಟದ ಅನಿಲಗಳ ಸರಬರಾಜನ್ನು ದೇಹಕ್ಕೆ ನಿರಂತರವಾಗಿ ಮಾಡುವ ಸಂದರ್ಭದಲ್ಲಿ ಅನೇಕ ಸೂಕ್ಷ್ಮಾಣು ಜೀವಿಗಳು, ವಿಷಕಣಗಳು ಮತ್ತು ಪುಪ್ಪುಸದ ಇತರ ಕಾಯಿಲೆಗಳು ಈ ರೋಗವನ್ನು ತರುತ್ತವೆ. ಪುಪ್ಪುಸ ಉರಿತದಲ್ಲ್ಲಿ ಗಾಳಿ ಚೀಲಗಳನ್ನು ಸುತ್ತುವರಿದಿರುವ ಲೋಮನಾಳಗಳಿಂದ ರಕ್ತರಸ, ಕೆಂಪು ಮತ್ತು ಬಿಳಿಯ ರಕ್ತಕಣಗಳು ಗಾಳಿಗೂಡುಗಳ ತುಂಬ ತುಂಬಿಕೊಂಡು ಒಳಗೆಳೆದುಕೊಂಡ ಗಾಳಿ ಪುಪ್ಪುಸದ ಪೊರೆಯನ್ನು ತಲುಪದಂತಾಗುತ್ತದೆ.
ಈ ಹಾನಿಕರ ಬದಲಾವಣೆ ಪುಪ್ಪುಸದ ಸ್ವಲ್ಪ ಭಾಗದಲ್ಲಾದರೂ ಆಗಬಹುದು. ಒಂದೊಂದು ಹಾಲೆಯಲ್ಲಾದರೂ ಆಗಬಹುದು. ಈ ರೋಗ ಪುಪ್ಪುಸದಲ್ಲೆಲ್ಲ ವ್ಯಾಪಕವಾಗಿದ್ದಲ್ಲಿ ಉಸಿರಾಟದ ಅನಿಲಗಳ ಅದಲಿಬದಲಿಗೆ ಅಗತ್ಯವಾದ ಪುಪ್ಪುಸ ಪೊರೆಯೇ ಇಲ್ಲದಂತಾಗುತ್ತದೆ. ಈ ರೋಗದ ಸೋಂಕು ಸಾಮಾನ್ಯವಾಗಿ 15 ರಿಂದ 25 ದಿನಗಳ ನಂತರ ಕಂಡು ಬರುತ್ತವೆ. ಆ ನಂತರ ಇದರ ಲಕ್ಷಣಗಳು ನಿಧಾನವಾಗಿ ಪುಪ್ಪುಸದುರಿತದ ಪೂರ್ಣಸ್ಥಿತಿಗೆ ಬರುತ್ತದೆ. ಆದುದರಿಂದ ಪುಪ್ಪುಸ ಉರಿತ ಅತೀ ತುರ್ತಾಗಿ ಚಿಕಿತ್ಸೆ ಮಾಡಿಸಬೇಕಾದ ಕಾಯಿಲೆ. ಈ ಬಾಧೆ ಎಲ್ಲ ವಯಸ್ಸಿನ ಜನರಿಗೂ ತಟ್ಟಬಹುದು. ಈ ತೊಂದರೆ ನಾಲ್ಕರಿಂದ ಎಂಟು ವರ್ಷಕ್ಕೊಮ್ಮೆ ಬೇಸಿಗೆಕಾಲ ಮುಗಿಯುವ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಸಾಮಾನ್ಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಅಂಟಿಸಿಕೊಳ್ಳುವ ರೋಗ. ಸಾಮಾನ್ಯವಾಗಿ ಈ ರೋಗವು ಹತ್ತು ದಿನಗಳವರೆಗೆ ಇರುತ್ತದೆ. ಹೆಚ್ಚಾಗಿ ಮೂಗು ಇಲ್ಲವೆ ಗಂಟಿಲಿನಲ್ಲಿ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆೆ. ಆದರೆ ಇದರ ಅರಿವು ಅನೇಕರಿಗೆ ತಿಳಿದಿರುವುದಿಲ್ಲ.

ಪುಪ್ಪುಸ ಉರಿತಕ್ಕೆ ಮುಖ್ಯ ಕಾರಣಗಳು :
ಪುಪ್ಪುಸ ಉರಿತಕ್ಕೆ ಸುಮಾರು 30 ಬೇರೆ ಬೇರೆ ಕಾರಣಗಳಿವೆ. ಇದರಲ್ಲಿ ಬಹಳ ಪ್ರಾಮುಖ್ಯವಾದ ಐದು ಮುಖ್ಯ ಕಾರಣಗಳು.
ಏಕಾಣು, ವಿಷಕಣಗಳು (ವೈರಸ್, ಮೈಕೊಪ್ಲಾಸ್ಮ, ಇತರ ಸೋಂಕು ನಿಯೋಗಿಗಳಾದ ಬೂಜು ಮತ್ತು ಇತರ ರಸಾಯನಿಕಗಳು.

ರೋಗ ಲಕ್ಷಣಗಳು :
 ಮೈನಡುಕ, ಚಳಿ, ವಾಂತಿ, ಮೈಕೈನೋವು, ಕ್ಯಾಕರಿಸಿ ಉಗಿದರೂ ಕತ್ತರಿಸಿಕೊಂಡು ಕೆಳಗೆ ಬೀಳದಂತಹ ಕಫ, ಒಣಕೆಮ್ಮು ಇತ್ಯಾದಿ.

ಔಷಧಿಗಳು:
ಇರಿಥ್ರೋಮೈಸಿನ್(Erythromycin) ಕ್ಲಾರಿಥ್ರೋಮೈಸಿನ್ (Clarithromycin) ಅಥವಾ ಅಝಿಥ್ರೋಮೈಸಿನ್ (Azithromycin) ಜೀವನಿರೋಧಕ ಚಿಕಿತ್ಸೆ ಪಡೆದು ರೋಗಿ 3-4 ದಿವಸಗಳೊಳಗೆ ಗುಣಮುಖವಾಗಬಹುದು. ನಂತರ ವಿಶ್ರಾಂತಿ ಒಳ್ಳೆಯದು.
ಅಮೆರಿಕದಲ್ಲಿ 1936ರಲ್ಲಿ ಪುಪ್ಪುಸ ಉರಿತ ಅಸಂಖ್ಯಾತ ಜನರನ್ನು ಬಲಿ ತೆಗೆದುಕೊಂಡಿದೆ. ಆನಂತರ ಜೀವನಿರೋಧಕಗಳ ಮೂಲಕ ಈ ರೋಗವನ್ನು ತಡೆಗಟ್ಟಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News