ರಜನಿಕಾಂತ್ ಮುಖಮುದ್ರೆಯ ಬೆಳ್ಳಿನಾಣ್ಯ ವಿವಾದ

Update: 2016-07-27 18:44 GMT

ಬೆಂಗಳೂರು, ಜು.27: ಮುತ್ತೂಟ್ ಫೈನಾನ್ಸ್ ಕಂಪೆನಿಯು ನಟ ರಜನಿಕಾಂತ್ ಅವರ ಮುಖಮುದ್ರೆ ಹೊಂದಿದ ಬೆಳ್ಳಿ ನಾಣ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ನಗರದ ಸಿಟಿ ಸಿವಿಲ್ ಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವೇ ಸೂಕ್ತ ತೀರ್ಮಾನ ಕೈಗೊಳ್ಳಲಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಮುತ್ತೂಟ್ ಫೈನಾನ್ಸ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠವು ವಿಲೇವಾರಿ ಮಾಡಿತು.

ರಜನಿಕಾಂತ್ ಅವರ ಮುಖಮುದ್ರೆ ಇರುವ 5, 10 ಮತ್ತು 20 ಗ್ರಾಂ ತೂಕದ ಬೆಳ್ಳಿ ನಾಣ್ಯಗಳನ್ನು ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇಲ್ಲವೇ ಅವರ ಪರವಾದ ಮುತ್ತೂಟ್ ಪಚ್ಚಪ್ಪನ್ ಗ್ರೂಪ್‌ನವರು ಮುದ್ರಿಸಬಾರದು, ಮಾರಾಟ ಮಾಡಬಾರದು ಅಥವಾ ಯಾವುದೇ ರೀತಿಯಲ್ಲಿ ಪ್ರಚಾರ ಮಾಡಬಾರದು ಎಂದು ಸಿಟಿ ಸಿವಿಲ್ ಕೋರ್ಟ್ 44ನೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವೆಂಕಪ್ಪಹೊನ್ನಪ್ಪ ವಡ್ಡರ ಮಧ್ಯಾಂತರ ಆದೇಶ ನೀಡಿದ್ದರು.
ಮುತ್ತೂಟ್ ಫೈನಾನ್ಸ್ ಕಂಪೆನಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ನಟ ರಜನಿಕಾಂತ್ ಅವರನ್ನೂ ಇದರಲ್ಲಿ ಪ್ರತಿವಾದಿಯನ್ನಾಗಿ ಹೆಸರಿಸಿತ್ತು. ತನ್ಮಧ್ಯೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿಯೂ ಮುತ್ತೂಟ್ ಫೈನಾನ್ಸ್ ಕಂಪೆನಿಯು ಮಧ್ಯಾಂತರ ಆದೇಶ ತೆರವಿಗೆ ಮನವಿ ಸಲ್ಲಿಸಿತ್ತು. ಇದರ ವಿಚಾರಣೆಯು ನ್ಯಾಯಪೀಠದ ಎದುರು ನಡೆದಿತ್ತು.

ಪ್ರತಿವಾದಿಗಳಾದ ವ್ಯಾಲ್ಯೂ ಮಾರ್ಟ್ ಗೋಲ್ಡ್ ಆ್ಯಂಡ್ ಜ್ಯುವೆಲ್ ಕಂಪೆನಿ ಪರವಾಗಿ ಹಾಜರಾಗಿದ್ದ ವಕೀಲ ಎಸ್.ವಿ.ಗಿರಿಧರ ಅವರು ಹೈಕೋರ್ಟ್‌ನಲ್ಲಿ ಈ ವಿಷಯವನ್ನು ನ್ಯಾಯಪೀಠದ ಗಮನಕ್ಕೆ ತಂದರು.ದಕ್ಕೆ ಪ್ರತಿಕ್ರಿಯಿಸಿದ ಅಶೋಕ ಬಿ.ಹಿಂಚಿಗೇರಿ ಅವರು, ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡು ನ್ಯಾಯಾಲಯಗಳು ಹೇಗೆ ತಾನೆ ಪರಿಹಾರ ನೀಡಲು ಸಾಧ್ಯ. ನಿಮ್ಮ ಮೂಲ ಅರ್ಜಿ ಎಲ್ಲಿದೆಯೋ ಅಲ್ಲೇ ಪ್ರಕರಣವನ್ನು ಪರಿಹರಿಸಿಕೊಳ್ಳಿ ಎಂದು ಮುತ್ತೂಟ್ ಪರ ವಕೀಲರಿಗೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು.ಬಾಲಿ ನೆನಪಿಗೆ ನಾಣ್ಯ: ಕಬಾಲಿ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ನಾಯಕ ನಟ ರಜನಿಕಾಂತ್ ಅವರ ಮುಖಮುದ್ರೆ ಇರುವ ಬೆಳ್ಳಿನಾಣ್ಯಗಳನ್ನು ಹೊರತರಲು ನಾವು ನಿರ್ಧರಿಸಿದ್ದೆವು. ಇವುಗಳನ್ನು ಮುತ್ತೂಟ್‌ಫೈನಾನ್ಸ್ ಕಂಪೆನಿ ಮುಖಾಂತರ ಮಾರುವುದು ನಮ್ಮ ಯೋಜನೆಯಾಗಿತ್ತು. ಈ ಸಂಬಂಧ ರಜನಿಕಾಂತ್ ಮತ್ತು ನಮ್ಮ ಕಂಪೆನಿ ನಡುವೆ ಮಾತುಕತೆ ನಡೆದಿತ್ತು. ಆದರೆ ಮುತ್ತೂಟ್ ಫೈನಾನ್ಸ್ ಕಂಪೆನಿ ನಮ್ಮ ಈ ಯೋಜನೆಯನ್ನು ಹೈಜಾಕ್ ಮಾಡಿದೆ. ಹೀಗಾಗಿ, ಈ ನಾಣ್ಯಗಳ ಬಿಡುಗಡೆಗೆ ತಡೆ ನೀಡಬೇಕು ಎಂದು ವ್ಯಾಲ್ಯೂ ಮಾರ್ಟ್ ಗೋಲ್ಡ್ ಆ್ಯಂಡ್ ಜ್ಯುವೆಲ್ ಕಂಪೆನಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿತ್ತು.ದನ್ನು ಮಾನ್ಯ ಮಾಡಿದ್ದ ಸಿಟಿ ಸಿವಿಲ್ ಕೋರ್ಟ್ ನಾಣ್ಯ ಬಿಡುಗಡೆಗೆ ಮಧ್ಯಾಂತರ ತಡೆ ನೀಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಆದೇಶವನ್ನು ಸಿಟಿ ಸಿವಿಲ್ ಕೋರ್ಟ್ ಇದೇ 28ರಂದು ಪ್ರಕಟಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News