ಆ.1ರಿಂದ ಆಧಾರ್ ಮೂಲಕ ಪಡಿತರ ವಿತರಣೆ: ಸಚಿವ ಖಾದರ್

Update: 2016-07-28 18:33 GMT

ಬೆಂಗಳೂರು, ಜು.28: ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಪಡಿತರ ಧಾನ್ಯಗಳನ್ನು ಆ.1ರಿಂದ ಆಧಾರ್ ಸಂಖ್ಯೆ ಆಧಾರಿತ ಬಯೋಮೆಟ್ರಿಕ್ ಕೂಪನ್ ವ್ಯವಸ್ಥೆಯ ಮೂಲಕ ವಿತರಿಸಲಾಗುವುದು ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

  ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದಲ್ಲಿ ಸುಧಾರಿತ ಪಡಿತರ ವಿತರಣೆ ಕುರಿತ ಪಾಲಿಕೆ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿಂದ ಆಧಾರ್ ಸಂಖ್ಯೆಯ ಹೊಂದಾಣಿಕೆಯ ಕೂಪನ್ ವ್ಯವಸ್ಥೆಯಲ್ಲಿ ಸೀಮೆಎಣ್ಣೆಯನ್ನು ವಿತರಿಸಲಾಗಿದೆ. ಈ ಕ್ರಮದಿಂದ ಶೇ.80 ರಷ್ಟು ಸೀಮೆಎಣ್ಣೆ ಸೋರಿಕೆಯಾಗುತ್ತಿದ್ದುದನ್ನು ತಪ್ಪಿಸಲಾಗಿದೆ ಎಂದರು.

 ಪಡಿತರ ಧಾನ್ಯಗಳು ಅರ್ಹ ಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಪಡಿತರ ವಿತರಣೆಯಲ್ಲಿ ಆಗುವ ಸೋರಿಕೆ, ನಷ್ಟವನ್ನು ತಪ್ಪಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ಪ್ರಸ್ತುತ ಬಿಪಿಎಲ್ ಪಡಿತರ ಚೀಟಿ ಪಡೆಯಲು ಇರುವ 14 ಮಾನದಂಡಗಳನ್ನು ರದ್ದುಪಡಿಸಿ ಕೇವಲ ನಾಲ್ಕು ಮಾನದಂಡಗಳಿಗೆ ಇಳಿಸಲಾಗಿದೆ ಎಂದರು.

ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯಗಳ ಸೋರಿಕೆಯನ್ನು ತಡೆಗಟ್ಟಲು ಪಾಲಿಕೆ ಸದಸ್ಯರು ಇಲಾಖೆಯೊಂದಿಗೆ ಕೈಜೋಡಿಸಬೇಕು. ಈ ವ್ಯವಸ್ಥೆಯನ್ನು ಗ್ರಾಮೀಣ ಪ್ರದೇಶದಲ್ಲಿ ಕೂಡಲೆ ಚಾಲನೆ ನೀಡಲಾಗುವುದು ಎಂದರು.

 ನಗರದಲ್ಲಿ 6,11,118 ಪಡಿತರ ಕಾರ್ಡ್‌ಗಳ ಪೈಕಿ 18,064 ಅಂತ್ಯೋದಯ, 5,64,239 ಬಿಪಿಎಲ್ ಕಾರ್ಡ್‌ಗಳನ್ನು ಹಾಗೂ 88,064 ಪಡಿತರ ಚೀಟಿಗಳನ್ನು ಈಗಾಗಲೇ ವಿತರಿಸಲಾಗಿದೆ. ಅಲ್ಲದೆ ನಗರದ ವ್ಯಾಪ್ತಿಯಲ್ಲಿ ಶೇ.8ರಷ್ಟು ಬೋಗಸ್ ಪಡಿತರ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 23,77,056 ಕುಟುಂಬಗಳಿಗೆ ಶೇ. 25.70 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಎಲ್ಲ ಪಡಿತರ ಚೀಟಿಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಕಾರ್ಯ ಶೇ.99 ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

 ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 393 ಪಡಿತರ ವಿತರಣಾ ಯಂತ್ರಗಳನ್ನು ಸ್ಥಾಪಿಸಲಾಗಿದೆ. 800 ಕೂಪನ್‌ಗಳಿಗೆ ವಿತರಣೆ ಮಾಡುವಷ್ಟು ಆಹಾರ ಧಾನ್ಯಗಳನ್ನು ಸಂಗ್ರಹಿಸಲು ಪಡಿತರ ವಿತರಣಾ ಕೇಂದ್ರಗಳಿಗೆ ಅವಕಾಶ ನೀಡಲಾಗಿದೆ. ಆವಶ್ಯಕತೆಗಿಂತ ಶೇ.10ರಷ್ಟು ಹೆಚ್ಚು ಆಹಾರ ಧಾನ್ಯಗಳನ್ನು ಸರಕಾರದಿಂದ ಪೂರೈಸಲಾಗುತ್ತದೆ. ಅಕ್ರಮವಾಗಿ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡುವವರನ್ನು ಪತ್ತೆಹಚ್ಚಿ ಕೊಟ್ಟಲ್ಲಿ, ಒಟ್ಟಾರೆ ದಾಸ್ತಾನು ಆಧಾರದಡಿ ಶೇ. 5 ರಷ್ಟು ಬಹುಮಾನ ನೀಡಲಾಗುವುದು ಎಂದು ಪಡಿತರ ವಿತರಕರಿಗೆ ಮನವಿ ಮಾಡಿದರು.ಾರ್ಯದರ್ಶಿ ಹರ್ಷಕುಮಾರ್ ಮಾತನಾಡಿ, ಆಹಾರ ಧಾನ್ಯಗಳಿಗೆ ಒಮ್ಮೆ ಕೂಪನ್ ಪಡೆದರೆ, ಯಾವುದೇ ರೇಷನ್ ಅಂಗಡಿಗಳಿಗೆ ತೆರಳಿ ಅಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದು. ಇದರಿಂದ ಇಂಥದ್ದೇ ರೇಷನ್ ಅಂಗಡಿಗಳಿಗೆ ತೆರಳಿ ಪಡಿತರ ಖರೀದಿ ಮಾಡುವುದು ತಪ್ಪುತ್ತದೆ ಎಂದರು.ನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ಪಡಿತರ ವಿತರಣೆ ಮಾಡುವ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳಿಗೆ ವಹಿಸಲಾಗಿದೆ. ಸಮರ್ಪಕವಾಗಿ ಆಹಾರ ಧಾನ್ಯಗಳು ಪೂರೈಕೆಯಾಗುತ್ತಿರುವುದನ್ನು ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ಎರಡು ತಿಂಗಳಿಗೊಮ್ಮೆ ಸಾರ್ವಜನಿಕರ ಸಭೆಗಳನ್ನು ಹಮ್ಮಿಕೊಂಡು ಕುಂದುಕೊರತೆಗಳನ್ನು ಆಲಿಸಲಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಮೇಯರ್ ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬಿಪಿಎಲ್ ಕಾರ್ಡ್ ಯಾರಿಗೆ?

ಸರಕಾರಿ, ನಿಗಮ, ಮಂಡಳಿಗಳಲ್ಲಿ ಉದ್ಯೋಗ, ಆದಾಯ ತೆರಿಗೆ ಪಾವತಿಸುವವರು, ನಾಲ್ಕು ಚಕ್ರಗಳ ವಾಹನ ಹೊಂದಿರುವವರು, 125 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವವರು, ನಗರ ಪ್ರದೇಶದಲ್ಲಿ 800 ಚದರ ಅಡಿ, ಗ್ರಾಮೀಣ ಪ್ರದೇಶದಲ್ಲಿ 1,200 ಚದರ ಅಡಿ ವಿಸ್ತೀರ್ಣಕ್ಕೂ ಹೆಚ್ಚು ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರನ್ನು ಹೊರತುಪಡಿಸಿ ಉಳಿದವರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
-ಯು.ಟಿ.ಖಾದರ್, ಆಹಾರ ಸಚಿವ

 ಆನ್‌ಲೈನ್‌ನಲ್ಲಿ ಪಡಿತರ ಕಾರ್ಡ್‌

ಆನ್‌ಲೈನ್ ಮೂಲಕ ಪಡಿತರ ಕಾರ್ಡ್‌ಗಳನ್ನು ಪಡೆಯಲು ಹೊಸ ಸ್‌ಟಾವೇರ್ ಸಿದ್ಧಪಡಿಸಲು ಚಿಂತಿಸಲಾಗಿದೆ. ಇದರಿಂದ ಮನೆಯಲ್ಲೇ ಕುಳಿತುಕೊಂಡು ಪಡಿತರ ಚೀಟಿಗಳನ್ನು ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗಿ, ಭ್ರಷ್ಟಾಚಾರ ತಡೆಯಬಹುದಾಗಿದೆ.-ಯು.ಟಿ.ಖಾದರ್, ಆಹಾರ ಸಚಿವ

ಕೂಪನ್ ಪಡೆಯುವುದು ಹೇಗೆ?

ನಿರ್ದಿಷ್ಟ ಮೊಬೈಲ್ ನಂಬರ್‌ನಿಂದ ಪಡಿತರ ಕೂಪನ್ ಸಹಾಯವಾಣಿ ಸಂಖ್ಯೆ 1614ಕ್ಕೆ ಕರೆ ಮಾಡಿ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಕೂಡಲೇ ಕೂಪನ್ ನಂಬರ್ ನಿಮ್ಮ ಮೊಬೈಲ್‌ಗೆ ಸಂದೇಶದ ಮೂಲಕ ರವಾನೆಯಾಗುತ್ತದೆ. ಅಲ್ಲದೆ ಈ ಕೂಪನ್ ನಂಬರ್ ಸ್ಪಷ್ಟಪಡಿಸಲು ಐಸಿವಿಆರ್ ಮೂಲಕ ವಾಯ್ಸೆ ರೆಕಾರ್ಡ್ ದಾಖಲಾಗುತ್ತದೆ. ಈ ಕೂಪನ್ ನಂಬರ್ ಅಥವಾ ಎಸ್‌ಎಂಎಸ್ ಅನ್ನು ತೋರಿಸಿ ಪಡಿತರ ಪಡೆಯಬಹುದು.-ಹರ್ಷಕುಮಾರ್, ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News