ಧಾರಾಕಾರ ಮಳೆಗೆ ಬೆಂಗಳೂರು ತತ್ತರ
ಬೆಂಗಳೂರು, ಜು.29: ಸತತ ಮೂರು ದಿನಗಳಿಂದ ಸುರಿ ಯುತ್ತಿರುವ ಭಾರೀ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ನಗರದ ಪ್ರಮುಖ ಪ್ರದೇಶಗಳು ಜಲಾವೃತ ವಾಗಿದ್ದು, ಮೂಲಭೂತ ಆವಶ್ಯಕತೆಯ ಕೊರತೆ ಯಿಂದಾಗಿ ಜನತೆ ಪರದಾಡುವಂತಹ ಪರಿಸ್ಥಿತಿ ನಿರ್ಮಾ ಣವಾಯಿತು.
ಗುರುವಾರ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಳೇಕನಹಳ್ಳಿ ವಾರ್ಡ್ ಕೋಡಿಚಿಕ್ಕನಹಳ್ಳಿ ಕೆರೆ ಒಡೆದ ಪರಿಣಾಮ ಸುತ್ತಮುತ್ತಲಿನ ಸುಮಾರು 100ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ನಿವಾಸಿಗಳು ಆತಂಕದಿಂದಲೇ ಇಡೀ ರಾತ್ರಿ ಕಳೆದಿದ್ದಾರೆ. ೋಡಿಚ್ಕಿಕನಹಳ್ಳಿ ಕೆರೆ ಒಡೆದ ಪರಿಣಾಮ ಕೆರೆ ಸಮೀಪದ ಡಿಯೋ ಎನ್‌ಕ್ಲೇವ್ ಮತ್ತು ಮಹಾವೀರ ಅಪಾರ್ಟ್‌ಮೆಂಟ್, ಅನುಗ್ರಹ ಲೇಔಟ್ ಸೇರಿದಂತೆ 10ಕ್ಕೂ ಹೆಚ್ಚು ಪ್ರದೇಶಗಳಲ್ಲಿನ ಮನೆಗಳಲ್ಲಿ ನೀರು ತುಂಬಿದ ಪರಿಣಾಮವಾಗಿ ಅಲ್ಲಿನ ನಿವಾಸಿಗಳು ಸಂಕಷ್ಟದ ಪರಿಸ್ಥಿತಿ ಎದುರಿಸಿದ್ದಾರೆ.
ರಸ್ತೆಗಿಳಿದ ಬೋಟ್‌ಗಳು: ಕೋಡಿಚಿಕ್ಕನಹಳ್ಳಿ ಕೆರೆ ಒಡೆದು ಅನಾಹುತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳ್ಕಕೆ ತೆರಳಿದ ಬಿಬಿಎಂಪಿ ಅಕಾರಿಗಳು ನೀರೆತ್ತುವ ಪಂಪ್‌ಸೆಟ್ ಸಹಾಯದಿಂದ ಅಪಾರ್ಟ್‌ಮೆಂಟ್ ಹಾಗೂ ಮನೆ ಗಳಲ್ಲಿ ನಿಂತಿದ್ದ ನೀರು ಹೊರ ಹಾಕಿದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಆಯುಕ್ತ ಮಂಜು ನಾಥ್ ಪ್ರಸಾದ್ ಹಾಗೂ ಹಿರಿಯ ಅಕಾರಿಗಳು ಸ್ಥಳ ಪರಿ ಶೀಲನೆ ನಡೆಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳು ವಂತೆ ಅಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾರ, ನೀರು ಪೂರೈಕೆ: ತಗ್ಗು ಪ್ರದೇಶದ ಮನೆ ಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿ ಗಳನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಿದರು. ಹಾಗೂ ಅಗತ್ಯ ವಸ್ತುಗಳಾದ ನೀರು, ಹಾಲು, ಬ್ರೆಡ್ ಹಾಗೂ ಆಹಾರ ಪದಾರ್ಥಗಳನ್ನು ಪೂರೈಸಿದರು. ಅಗತ್ಯವಿದ್ದರೆ ಇನ್ನೂ ಎರಡು-ಮೂರು ದಿನಗಳ ಕಾಲ ಅಗತ್ಯ ವಸ್ತು ಗಳನ್ನು ಪೂರೈಸಲಾಗುವುದು ಎಂದು ಸ್ಥಳೀಯ ಶಾಸಕ ಸತೀಶ್ ರೆಡ್ಡಿ ತಿಳಿಸಿದ್ದಾರೆ.್ಕೂ ಹೆಚ್ಚು ಮರಗಳು ಧರೆಗೆ: ಧಾರಾಕಾರ ಮಳೆಗೆ ನಗರದ ಹಲವೆಡೆ 10ಕ್ಕೂ ಹೆಚ್ಚು ಮರಗಳು ಧರೆಗು ರುಳಿವೆ. ಜಯನಗರದ ಅಡಿಗಾಸ್ ಹೊಟೇಲ್ ಬಳಿ, ಇಂದಿರಾನಗರ ಮತ್ತು ಹಲಸೂರು ಕೆರೆ ಬಳಿ, ರಾಜ್ ಕುಮಾರ್ ರಸ್ತೆ ಹಾಗೂ ಓಕಳಿಪುರಂನಲ್ಲಿ ಭಾರೀ ಗಾತ್ರದ ಮರಗಳು ಉರುಳಿದ ಪರಿಣಾಮ ಸಂಚಾರ ದಟ್ಟನೆ ಉಂಟಾಗಿ ವಾಹನ ಸವಾರರು ಆತಂಕಕ್ಕೆ ಒಳಗಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.
ವಾಹನಗಳು ಜಖಂ: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಕಂಪೆನಿಯ ಕಾಂಪೌಂಡ್ ಕುಸಿದು 7 ವಾಹನಗಳು ಜಖಂಗೊಂಡಿರುವ ಘಟನೆ ಎಚ್‌ಎಎಲ್‌ನ ಸಂಜಯನಗರದಲ್ಲಿ ನಡೆದಿದ್ದು, ಆಟೋ, ಮೂರು ಇಂಡಿಕಾ ಕಾರು, ಟೆಂಪೋ ಸೇರಿ 7 ವಾಹನಗಳಿಗೆ ಹಾನಿ ಯಾಗಿದೆ.ಇನ್ನೂ 3 ದಿನ ಮಳೆ ನಗರದಲ್ಲಿ ಸುರಿಯುತ್ತಿರುವ ಮಳೆ ಇನ್ನೂ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕಿ ಗೀತಾ ಹೋತ್ರಿ ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆ ಸುರಿಯುತ್ತಿದ್ದು, ಅದು ಇನ್ನೂ ಕೆಲವು ದಿನಗಳ ಕಾಲ ಮುಂದುವರಿೆಯುವ ಸಾಧ್ಯತೆಗಳಿವೆ. ಹೀಗಾಗಿ ಜನರು ಎಚ್ಚರಿಕೆ ವಹಿಸುವ ಅಗತ್ಯವಿದೆ.
ಗಂಟೆಗಟ್ಟಲೆ ನಿಂತ ವಾಹನಗಳು
ರಸ್ತೆಗಳಲ್ಲಿ 2ರಿಂದ 3ಅಡಿಗಳಷ್ಟು ಮಳೆನೀರು ನಿಂತ ಪರಿಣಾಮ ಬೈಕ್ ಹಾಗೂ ಕಾರು ಕೆಟ್ಟು ನಿಂತು ವಾಹನ ದಟ್ಟನೆ ಹೆಚ್ಚಾಗಲು ಕಾರಣವಾಯಿತು. ಇದರಿಂದಾಗಿ ಶಾಲಾ ವಾಹನಗಳು, ಆ್ಯಂಬುಲೆನ್ಸ್ ಗಂಟೆಗಟ್ಟಲೆ ರಸ್ತೆಗಳಲ್ಲಿಯೆ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬಾಪೂಜಿನಗರ ಸಮೀಪ ವಿರುವ ವೃಷಭಾವತಿ ರಾಜಕಾಲುವೆ ತುಂಬಿ ಹರಿಯುತ್ತಿದ್ದು, ಸಮೀಪದ ಕೊಳೆಗೇರಿಗೆ ನೀರು ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಆಂಜನೇಯ ಸ್ವಾಮಿ ದೇವಾಲ ಯದ ಬಳಿಯೂ ರಾಜಕಾಲುವೆ ತುಂಬಿ ಹರಿದ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿತ್ತು.
ರಾಮಮೂರ್ತಿ ನಗರದಲ್ಲಿ ಡೆಲಿವರಿಗಾಗಿ ಕಾರಿನಲ್ಲಿ ಹೋಗುತ್ತಿದ್ದ ತುಂಬು ಗರ್ಭಿಣಿ ಟ್ರಾಫಿಕ್ ಜಾಮ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕೊಂಡರು. ಕೂಡಲೇ ಸ್ಥಳೀಯರ ಸಹಾಯದಿಂದ ಪರ್ಯಾಯ ರಸ್ತೆಯ ಮೂಲಕ ಆಸ್ಪತ್ರೆಗೆ ಸಾಗಿಸ ಲಾಯಿತು.
ಮತ್ತೊಂದು ಪ್ರಕರಣದಲ್ಲಿ ಕೋಡಿ ಚಿಕ್ಕನ ಹಳ್ಳಿಯಲ್ಲಿ ಗರ್ಭಿಣಿಯನ್ನ ಬೋಟಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾ ವೃತವಾದ ಪರಿಣಾಮ ವಿಯಿಲ್ಲದೆ ಬೋಟಿನಲ್ಲಿ ಕರೆದೊಯ್ಯಬೇಕಾಯಿತು ಎಂದು ಸ್ಥಳೀಯರು ತಿಳಿಸಿದರು.
ಮಳೆಗೆ ಸಿಲುಕಿದ ಗರ್ಭಿಣಿಯರು:
ರಾಮಮೂರ್ತಿ ನಗರದಲ್ಲಿ ಡೆಲಿವರಿಗಾಗಿ ಕಾರಿನಲ್ಲಿ ಹೋಗುತ್ತಿದ್ದ ತುಂಬು ಗರ್ಭಿಣಿ ಟ್ರಾಫಿಕ್ ಜಾಮ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಕೊಂಡರು. ಕೂಡಲೇ ಸ್ಥಳೀಯರ ಸಹಾಯದಿಂದ ಪರ್ಯಾಯ ರಸ್ತೆಯ ಮೂಲಕ ಆಸ್ಪತ್ರೆಗೆ ಸಾಗಿಸ ಲಾಯಿತು.
ಮತ್ತೊಂದು ಪ್ರಕರಣದಲ್ಲಿ ಕೋಡಿ ಚಿಕ್ಕನ ಹಳ್ಳಿಯಲ್ಲಿ ಗರ್ಭಿಣಿಯನ್ನ ಬೋಟಿನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಸ್ತೆಗಳು ಸಂಪೂರ್ಣವಾಗಿ ಜಲಾ ವೃತವಾದ ಪರಿಣಾಮ ವಿಯಿಲ್ಲದೆ ಬೋಟಿನಲ್ಲಿ ಕರೆದೊಯ್ಯಬೇಕಾಯಿತು ಎಂದು ಸ್ಥಳೀಯರು ತಿಳಿಸಿದರು.
ರಸ್ತೆಯಲ್ಲಿ ಮೀನು ಹಿಡಿದ ಜನತೆರಾತ್ರಿ ಸುರಿದ ಮಳೆಯಿಂದಾಗಿ ಕೋಡಿಚಿಕ್ಕನಹಳ್ಳಿ ಹಾಗೂ ಮಡಿವಾಳ ಕೆರೆಗಳು ಕೋಡಿ ಹರಿದು ಬಿಟಿಎಂ ಲೇಔಟ್‌ನ ಸುತ್ತಮುತ್ತಲ ರಸ್ತೆಗಳಲ್ಲಿ ನೀರು ಹರಿಯಿತು. ಈ ವೇಳೆ ಕೆರೆಯಲ್ಲಿದ್ದ ಮೀನು ಗಳು ಮಳೆ ನೀರಿನ ಜೊತೆಗೆ ರಸ್ತೆಗೆ ಬಂದಿವೆ. ಇದನ್ನು ನೋಡಿದ ಸಾರ್ವಜನಿಕರು ಸೊಳ್ಳೆ ಪರದೆಯನ್ನು ತಂದು ಮೀನು ಹಿಡಿದರು.
ಸಾರ್ವಜನಿಕರು ಮೀನು ಹಿಡಿಯಲು ರಸ್ತೆಗೆ ಇಳಿದ ಪರಿಣಾಮ ಟ್ರಾಫಿಕ್ ಜಾಮ್‌ಹೆಚ್ಚಾಯಿತು. ಮೀನು ಹಿಡಿಯುತ್ತಿದ್ದ ಸಾರ್ವ ಜನಿಕರ ಸಂಖ್ಯೆಯು ಹೆಚ್ಚಾಯಿತು. ಇದರಿಂದಾಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವುದರ ಮೂಲಕ ಸಾರ್ವಜನಿಕರನ್ನು ಚದುರಿಸಿದರು.