ಅಜ್ಜಿಯ ನೆನಪಿನಂಗಳದಲ್ಲಿ ಅಜ್ಜನ ವೈಭವ!
""‘‘ಕೆಲವು ನೋವುಗಳು ಹಾಗೆಯೇನಮ್ಮಾ, ಎಷ್ಟು ಮರೆಯಬೇಕು ಎಂದು ಪ್ರಯತ್ನಿಸಿದೂ ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದರಲ್ಲೂ ನಾವು ಪ್ರೀತಿಸಿದವರಿಂದಲೇ ನಮಗಾಗುವ ನೋವು, ದ್ರೋಹ ಉಂಟಲ್ಲಾ ಅದನ್ನು ಮರೆಯುವುದು ಬಿಡು, ಸಹಿಸಿಕೊಳ್ಳಲಿಕ್ಕೂ ಸಾಧ್ಯವಾಗುವುದಿಲ್ಲ... ಅಂತಹ ಅಗ್ನಿ ಪರ್ವತವನ್ನೇ ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡು ಅಜ್ಜಿ ಇನ್ನೂ ಬದುಕಿದ್ದಾರೆ...’’ಸು ಮತ್ತೆ ಕೆಲವು ಹೊತ್ತು ಮೌನವಾದಳು... ಮತ್ತೆ ಹೇಳಿದಳು.ಾನೂ ಕೂಡಾ...’’ ಆ ಮಾತು ಬಹಳ ಆಳದಿಂದ ಬಂದಂತಿತ್ತು. ಆ ಮಾತು ಹೇಳುವಾಗ ಅವಳ ಧ್ವನಿ ಕಂಪಿಸುತ್ತಿತ್ತು. ಮುಖ ಬಿಳುಚಿಕೊಂಡಿತ್ತು. ಕಣ್ಣುಗಳು ಎತ್ತಲೋ ನೋಡುತ್ತಿದ್ದವು.
***
""ತನ್ನ ದೇಹದ ಮೇಲೆ ಏನೋ ಹರಿದಾಡಿದಂತಾಗಿ ತಾಹಿರಾಳಿಗೆ ಒಮ್ಮೆಲೆ ಎಚ್ಚರವಾಗಿ ಕಣ್ಣು ತೆರೆದಳು. ಅಜ್ಜಿ...! ಅಜ್ಜಿ ಪಕ್ಕ ಕುಳಿತು ಅವಳ ಬೆನ್ನು ತಡವುತ್ತಿದ್ದರು. ತಾಹಿರಾ ದಿಗ್ಗನೆ ಎದ್ದು ಕುಳಿತಳು.ಳು, ಎಂಥ ನಿದ್ದೆಯಿದು, ಗಂಟೆ ಹತ್ತಾಯಿತು’’. ಅಜ್ಜಿ ಮೊದಲ ಬಾರಿಗೆ ಅವಳಲ್ಲಿ ಮಾತನಾಡಿದ್ದರು. ಅವರ ಮಾತಿನಲ್ಲಿ ಅವಳು ಏಳಲು ತಡವಾದುದಕ್ಕೆ ಆಕ್ಷೇಪಣೆಯಿತ್ತು.ೀ...’’ ತಾಹಿರಾ ಪುಟ್ಟ ಮಗುವಿನಂತೆ ಅಜ್ಜಿಯನ್ನು ತಬ್ಬಿ ಹಿಡಿದಳು. ಅಜ್ಜಿಯ ಕೈ ಅವಳ ತಲೆ ಬೆನ್ನು ಸವರತೊಡಗಿತು... ಉದ್ವೇಗದಿಂದ ಅವಳ ಹೃದಯ ಬಡಿತ ಹೆಚ್ಚಾಗತೊಡಗಿತ್ತು. ಇಂತಹ ಸುಖ ಅವಳು ಹಿಂದೆಂದೂ ಅನುಭವಿಸಿರಲಿಲ್ಲ.ೀ.....’’ ಅವಳು ಮತ್ತೆ ನರಳಿದಳು.ೋಗು ಬೇಗ ಹೋಗಿ ಮುಖ ತೊಳೆದು ಬಾ. ಒಟ್ಟಿಗೆ ತಿಂಡಿ ತಿನ್ನೋಣ’’ ಅಜ್ಜಿ ಅವಳಿಂದ ಬಿಡಿಸಿ ಕೊಂಡು ಅವಳ ಮುಖವನ್ನೇ ನೋಡಿದರು. ಅವಳ ಕಣ್ಣುಗಳಲ್ಲಿ ಪ್ರೀತಿಯ ಮಳೆ ಸುರಿಯುತ್ತಿತ್ತು. ತಾಹಿರಾ ‘‘ಮಾಮೀ...’’ ಎಂದು ಕೂಗುತ್ತಾ ಅಡುಗೆ ಮನೆಗೆ ಓಡಿದಳು.ಾಮಿ.. ಅಜ್ಜಿ ನನ್ನಲ್ಲಿ ಮಾತನಾಡಿದರು. ಒಟ್ಟಿಗೆ ತಿಂಡಿ ತಿನ್ನೋಣ ಎಂದರು’’
ಬೆಳಗ್ಗಿನಿಂದ ನಿನ್ನನ್ನು ಕಾಯ್ತಿ ಇದ್ದಾರೆ. ಕಡಿಮೆ ಯೆಂದರೂ ಒಂದು ಹತ್ತು ಸಲವಾದರೂ ನಿನ್ನ ಕೋಣೆಗೆ ಹೋಗಿ ನೀನು ಎದ್ದಿದ್ದಿಯಾಂತ ನೋಡಿ ಬಂದರು. ನಿನ್ನನ್ನು ಎಬ್ಬಿಸಲಾಂತ ಕೇಳಿದ್ದಕ್ಕೆ ಬೇಡ ಎಂದರು. ಹೋಗು ಬೇಗ ಮುಖ ತೊಳೆದು ಬಾ ತಿಂಡಿ ಕೊಡ್ತೇನೆ’’ಷ್ಟು ಹೇಳುವಾಗಲೇ ಅಜ್ಜಿ ಬಂದು ಅಡುಗೆ ಕೋಣೆಯ ಬಾಗಿಲಲ್ಲಿ ನಿಂತಿದ್ದರು. ಅವರಿಂದು ಸ್ವಲ್ಪ ಗೆಲುವಾಗಿದ್ದಂತೆ ಕಂಡಿತು. ಬೆಳಗ್ಗಿನ ಹೊತ್ತು ಕೋಲು ಹಿಡಿದೇ ನಡೆಯುತ್ತಿದ್ದ ಅವರ ಕೈಯಲ್ಲಿ ಇಂದು ಕೋಲು ಇರಲಿಲ್ಲ.ಯ ಕೆನ್ನೆಗೆ ಮುತ್ತೊಂದನ್ನಿತ್ತ ತಾಹಿರಾ ಬಚ್ಚಲಿಗೆ ನಡೆದಳು. ಅಜ್ಜಿಯ ಮುಖ ತಾವರೆಯಂತೆ ಅರಳಿತು.
""ಬಹಳ ವರ್ಷಗಳಿಂದ ಅಡುಗೆ ಮನೆಗೆ ಕಾಲಿಡದಿದ್ದ ಅಜ್ಜಿ, ಇಂದು ಒಳಗೆ ಬಂದಿದ್ದರು. ಐಸು ಅಲ್ಲೇ ಇದ್ದ ಕುರ್ಚಿಯಲ್ಲಿ ಅಜ್ಜಿಯನ್ನು ಕುಳ್ಳಿರಿಸಿದಳು.ನಜ್ಜೀ. ಜ್ವರ ಕಮ್ಮಿಯಾಯಿತಾ?’’ಅತ್ತಿತ್ತ ನೋಡುತ್ತಾ ಕಣ್ಣು ಪಿಳಿ ಪಿಳಿ ಮಾಡುತ್ತಾ ಇದ್ದರು. ಮಾತನಾಡಲಿಲ್ಲ.ೀ... ನಾನು ಕೇಳಿದ್ದು ಕೇಳಿಸ್ತಾ, ಜ್ವರ ಕಮ್ಮಿಯಾಯಿತಾ?’’ಚ್ಟ‘‘................’’ಾತ್ರಿ ಕೋಣೆಯಲ್ಲಿ ಸದ್ದೇ ಇರಲಿಲ್ಲ. ಒಳ್ಳೇ ನಿದ್ದೆ ಬಂತಾ?’’ನು ತಿಂಡಿ?’’ ಅಜ್ಜಿ ಬಡಿಸಿದ್ದನ್ನು ತಿನ್ನುತ್ತಿದ್ದರೇ ಹೊರತು ಯಾವತ್ತೂ ಹೀಗೆ ಕೇಳಿದವರಲ್ಲ. ಐಸುಗೆ ಅವರ ಪ್ರಶ್ನೆ ಕೇಳಿ ನಗು ಬಂತು.ೀರುದೋಸೆ. ಆಡಿನ ಕಾಲಿನ ಸೂಪು ಮಾಡಿದ್ದೇನೆ’’ಾಂ..?’’ೀರುದೋಸೆ, ಆಡಿನ ಕಾಲಿನ ಸೂಪು ಮಾಡಿದ್ದೇನೆ. ಕೇಳಿಸ್ತಾ?’’ಚ್ಟ‘‘................’’ಸಿವಾಗ್ತದಾ?’’ುಧ್ಯಾಹ್ನ ನೈಚೋರು ಮಾಡು, ಗಂಧಸಲೆ ಅಕ್ಕಿದ್ದು... ಅಕ್ಕಿ ಉಂಟಲ್ಲಾ’’ನಿಗೆ ಗಂಧಸಲೆ ಅಕ್ಕಿಯ ನೈಚೋರು ಅಂದರೆ ತುಂಬಾ ಇಷ್ಟ. ಅದಕ್ಕೆ ತನಗಿಷ್ಟವಾದವರು, ಆತ್ಮೀಯರು ಯಾರಾದರೂ ಮನೆಗೆ ಬಂದರೆ ಅದನ್ನೇ ಮಾಡಲಿಕ್ಕೆ ಹೇಳ್ತಾ ಇದ್ದರು.ುರಿ ಮಾಂಸ ತರಿಸು, ಹಪ್ಪಳ ಬೇಕು’’ನು ಪಟ್ಟಿ ಬಹಳ ದೊಡ್ಡದುಂಟಲ್ಲಾ ಇವತ್ತು’’ುತ್ತೆ... ಮತ್ತೆ... ಕಡ್ಲೆ ಬೇಳೆ ಮನ್ನಿ ಮಾಡು’’ದೆಲ್ಲ ಯಾರು ತಿನ್ಲಿಕ್ಕೆ?’’ಚ್ಟ‘‘................’’ಬಂದಿದ್ರಾ ರಾತ್ರಿ’’ೂಂ...’’ುತ್ತೆ ಮಾವಿನಹಣ್ಣು ಬೇಕು ಊಟಕ್ಕೆ. ಕತ್ತರಿಸಿ ಇಡಬೇಕು’’ವೆಲ್ಲ ಅಜ್ಜ ಹೇಳಿದ್ದಾ?’’ೂಂ..., ಮರದಿಂದ ನಾಲ್ಕು ಗೆಂದಾಳಿ ಎಳನೀರು ತೆಗೆಸಬೇಕು’’ನು ಹೇಳಿದರು ಅಜ್ಜ?’’ಚ್ಟ‘‘................’’ಾನು ಹೇಳಿದ್ದು ಕೇಳಿಸ್ತಾ...? ಅಜ್ಜ ಏನು ಹೇಳಿದರು?’’ಚ್ಟ‘‘................’’ೊಮ್ಮಗಳು ಬಂದದ್ದು ಅಜ್ಜನಿಗೆ ಖುಷಿಯಾಗಿ ದೆಯಾ?’’ನಗೆ ಕುಡಿಯಲು ಒಂದು ಲೋಟ ನೀರು ಕೊಡು’’ಸು ಅಜ್ಜಿಗೆ ನೀರು ಕುಡಿಸಿದಳು. ಅವರು ಯಾವುದೇ ಲೋಕದಲ್ಲಿದ್ದಂತಿದ್ದರು. ಐಸು ಹೇಳುವುದು ಯಾವುದೂ ಅವರಿಗೆ ಕೇಳಿಸು ತ್ತಿರಲಿಲ್ಲ. ಇನ್ನು ತಾನು ಮಾತಾಡಿ ಪ್ರಯೋಜನವಿಲ್ಲ ಎಂದರಿತ ಅವಳು ದೋಸೆ ಹೊಯ್ಯಲು ಪ್ರಾರಂಭಿಸಿ ದಳು.ಾತ್ರಿ ನೈಪತ್ತಿರ್, ಸುಕ್ಕ...’’ ನೆನಪಿಸಿ ನೆನಪಿಸಿ ಹೇಳುತ್ತಿದ್ದ ಅಜ್ಜಿಯನ್ನು ನೋಡಿ ಐಸು ಮನಸ್ಸಿನಲ್ಲೇ ನಕ್ಕಳು.ಯಿತಾ ಇನ್ನೂ ಉಂಟಾ...?’’ಾಗಿ ಶರ್ಬತ್, ರಾತ್ರಿ ಕುಡಿಯಲು ರಾಗಿ ಶರ್ಬತ್...’’ಷ್ಟರಲ್ಲಿ ತಾಹಿರಾಳ ಪ್ರವೇಶವಾಯಿತು. ಅಜ್ಜಿ ಗೋಡೆ ಹಿಡಿದು ಎದ್ದು ನಿಂತರು.ೋಗು ಮುಖ ಒರೆಸಿ ಬಾ, ತಿಂಡಿ ಕೊಡುತ್ತೇನೆ’’ ಐಸುಳ ಮಾತು ತಾಹಿರಾಳಿಗೆ ಕೇಳಿಸ ಲಿಲ್ಲ. ಅವಳು ಒದ್ದೆ ಮುಖ, ಕೈಯಿಂದಲೇ ಅಜ್ಜಿಯನ್ನು ತಬ್ಬಿಕೊಂಡಳು. ಅಜ್ಜಿ ತನ್ನ ಸೆರಗಿನಲ್ಲೇ ಅವಳ ಮುಖ ಒರೆಸಿದರು. ಮತ್ತೆ ಅವಳ ಹೆಗಲು ಹಿಡಿದುಕೊಂಡೇ ತನ್ನ ಕೋಣೆಗೆ ನಡೆದರು.ಸು ತಿಂಡಿ ಬಡಿಸಿ ತಂದಾಗ ಇಬ್ಬರೂ ಮೇಜಿನ ಮುಂದೆ ಒಬ್ಬರಿಗೊಬ್ಬರು ಒರಗಿ ಮೌನವಾಗಿ ಕುಳಿತಿದ್ದರು.
***
‘‘ಅಜ್ಜಿ, ಅಜ್ಜ ನೋಡ್ಲಿಕ್ಕೆ ಹೇಗಿದ್ದರು?’’ ಅಜ್ಜಿಯ ಕೋಣೆಯಲ್ಲಿ, ಅಜ್ಜಿಯ ಹಾಸಿಗೆಯಲ್ಲಿ, ಅಜ್ಜಿಯ ಮುಂದೆ ಚಕ್ಕಳಮಕ್ಕಳ ಹಾಕಿ ಕುಳಿತಿದ್ದ ತಾಹಿರಾ ಕೇಳಿದಳು.ಅವಳನ್ನೇ ನೋಡಿದರು, ಉತ್ತರಿಸಲಿಲ್ಲ.ನ ೆಟೊ ಏನಾದರೂ ಇದೆಯ ಅಜ್ಜಿ ನಿಮ್ಮಲ್ಲಿ?’’ಲ್ಲು ಬೊಂಬೆಯಂತೆ ಕುಳಿತಿದ್ದ ಅಜ್ಜಿ ಈಗಲೂ ಮಾತನಾಡಲಿಲ್ಲ. ಮೊಮ್ಮಗಳ ಕುತೂಹಲ ಕಂಡು ಅವರ ಬಾಯಿ ಬಂದಾಗಿತ್ತು.ೇಳಿ ಅಜ್ಜಿ, ನನಗೆ ಅಜ್ಜ ಹೇಗಿದ್ದರೂಂತ ನೋಡ ಬೇಕು’’ ತಾಹಿರಾ ಹಟ ಹಿಡಿದಳು. ಬೇಡ ಸ್ವಲ್ಪದಿನ ಹೋಗಲಿ... ಅವರನ್ನೇ ತೋರಿಸುತ್ತೇನೆ’’ ಅಜ್ಜಿ ಮುಖದಲ್ಲಿ ತುಂಟತನವಿತ್ತು.ಂತದು ೆಟೊನಾ?’’ಲ್ಲ...’’ುತ್ತೆ’’ ತಾಹಿರಾಳಿಗೆ ಅಜ್ಜಿಯ ಮಾತು ಅರ್ಥ ವಾಗಲಿಲ್ಲ.ಾನು ತೋರಿಸ್ತೇನೆ ಹೇಳಿದ್ದಲ್ಲವಾ... ತೋರಿಸ್ತೇನೆ...’’ ಇನ್ನು ಆ ಬಗ್ಗೆ ಏನೂ ಕೇಳಬಾರದು ಎಂಬಂತೆ ಕಡಕ್ಕಾಗಿತ್ತು ಅಜ್ಜಿಯ ಉತ್ತರ. ಅಜ್ಜಿ ಯಾಕೋ ಇಂದು ಅಷ್ಟೊಂದು ಸರಿಯಾಗಿಲ್ಲ ಎನಿಸಿತವಳಿಗೆ.ನನಗೆ ನಿಮ್ಮ ಬಗ್ಗೆ ಎಲ್ಲ ತಿಳಿದುಕೊಳ್ಳ ಬೇಕೂಂತ ಆಸೆ. ಹೇಳಿ ಅಜ್ಜಿ’’ನ್ನ ಬಗ್ಗೆ! ನನ್ನ ಬಗ್ಗೆ ಎಂತದು ಮಣ್ಣು. ನನ್ನ ಬಗ್ಗೆ ಹೇಳಲಿಕ್ಕೆ ಎಂತದೂ ಇಲ್ಲ’’ಾಗಾದರೆ ಅಜ್ಜನ ಬಗ್ಗೆ ಹೇಳಿ’’ಮೌನವಾಗಿ ಮುಖ ತಿರುಗಿಸಿ ಎತ್ತಲೋ ನೋಡತೊಡಗಿದರು.ನೀವು ಮದುವೆಯಾಗುವಾಗ ಹೇಗಿದ್ದರು ಅಜ್ಜಿ?’’ೇಗಿದ್ದರು ಅಂದರೆ?’’ೇಗಿದ್ದರು ಅಂದರೆ... ಎತ್ತರವಾ, ಗಿಡ್ಡವಾ, ದಪ್ಪವಾ, ಕಪ್ಪಾ...’’ತ್ತರವೂ ಅಲ್ಲದ ಗಿಡ್ಡವೂ ಅಲ್ಲದ ದೇಹ, ಆಕರ್ಷಕ ಮೈಕಟ್ಟು, ಚಂದ್ರನಂತೆ ಉರುಟಾದ ಮುಖ, ಮುಖದ ತುಂಬಾ ಗಡ್ಡ, ಉದ್ದ ತೋಳಿನ ಬಿಳಿ ಅಂಗಿ, ಬಿಳಿ ಚೌಕಳಿ ಲುಂಗಿ, ಬೊಗಸೆ ಕಂಗಳು. ಆ ಕಣ್ಣುಗಳಿಗೆ ದಿನಾ ಸುರ್ಮ ಹಚ್ಚುತ್ತಿದ್ದರು. ಆಲೂಗಡ್ಡೆಯಂತೆ ಬಿಳಿ-ಹಳದಿ ಮಿಶ್ರಿತ ಬಣ್ಣ. ಅವರು ದಿನಾ ಜನ್ನತ್ತುಲ್ ಫಿರ್ದೌಸ್ ಅತ್ತರ್ ಹಾಕಿಕೊಳ್ಳುತ್ತಿದ್ದರು. ಈ ಊರಿನಲ್ಲಿ ಆ ಅತ್ತರ್ ಹಾಕುತ್ತಿದ್ದುದು ಅವರೊಬ್ಬರೇ. ಇದರಿಂದ ನೂರುಮಾರು ದೂರದಿಂದಲೇ ನಿನ್ನಜ್ಜ ಬರುತ್ತಿದ್ದಾರೆ ಎಂದು ತಿಳಿಯುತ್ತಿತ್ತು. ಮುತ್ತು ಉದುರಿದಂತೆ ಮಾತು. ನೂರು ಮಾತಿಗೆ ಒಂದೇ ಉತ್ತರ. ಯಾವಾಗಲೂ ಮುಖ ತುಂಬಾ ನಗು. ಹೊಳೆಯುವ ಕಣ್ಣುಗಳು, ಮುತ್ತು ಪೋಣಿಸಿದಂತಹ ಹಲ್ಲುಗಳು. ಆ ಮುಖವನ್ನು ನೋಡುವುದೇ ಒಂದು ಸಂಭ್ರಮ...’’ಪಟ ಪಟಾಂತ ಹೇಳುತ್ತಾ ಇದ್ದರು.ರಿನಲ್ಲಿ ಯಾವುದೇ ಧರ್ಮ, ಜಾತಿಯವರ ಮದುವೆ, ಮುಂಜಿ, ಪಂಚಾಯಿತಿ ಇರಲಿ ಇವರು ಬೇಕು. ಇವರ ಮಾತೇ ಅಂತಿಮ. ಇವರು ಹೇಳಿದ್ದೇ ನ್ಯಾಯ. ನ್ಯಾಯ ತಪ್ಪಿ ಎಂದೂ ಹೋದವರಲ್ಲ. ಒಮ್ಮೆ ಒಬ್ಬರನ್ನು ಬಿಟ್ಟರೆ ಅವರಿಗೆ ಎದುರಾಡುವ ಧೈರ್ಯ ಇಷ್ಟರವರೆಗೆ ಈ ಊರಲ್ಲಿ ಯಾರೂ ತೋರಿದ್ದಿಲ್ಲ. ಅಂತಹ ವ್ಯಕ್ತಿತ್ವ ಅವರದ್ದು...’’ಒಬ್ಬ ವ್ಯಕ್ತಿ ಯಾರಜ್ಜಿ’’ ಎತ್ತಲೋ ನೋಡುತ್ತಾ ಉದ್ದಕ್ಕೆ ಹೇಳುತ್ತಿದ್ದ ಅಜ್ಜಿಯ ಮಾತನ್ನು ತಡೆದು ತಾಹಿರಾ ಕೇಳಿದಳು.್ಯಾಂಪಣ್ಣ ಶೆಟ್ಟಿ...’’ ಅಜ್ಜಿಗೆ ಏನೋ ಆಗಿರಬೇಕು ಏನೇನೋ ಆಡುತ್ತಿದ್ದಾರಲ್ಲ ಎಂದು ಊಹಿಸಿದ ತಾಹಿರ್ಯಾಾಂಪಣ್ಣ ಶೆಟ್ಟಿ! ಅದ್ಯಾರಜ್ಜಿ ತ್ಯಾಂಪಣ್ಣ ಶೆಟ್ಟಿ?’’ನ್ನ ಅಣ್ಣ. ನನ್ನನ್ನು ಒಡಹುಟ್ಟಿದ ತಂಗಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ತ್ಯಾಂಪಣ್ಣ’’ಪಣ್ಣ ಶೆಟ್ಟಿ ಹಿಂದೂ ಅಲ್ಲವಾ ಅಜ್ಜಿ, ಅದು ಹೇಗೆ ನಿಮ್ಮ ಅಣ್ಣ ಆಗ್ತಾರೆ’’ ತಾಹಿರಾ ಅಜ್ಜಿಯ ಮುಖವನ್ನೇ ನೋಡಿದಳು. ಗೊಂದಲದ ಮಾತು ಗಳಿಂದ ಅಜ್ಜಿ ಇವತ್ತು ಅಷ್ಟೊಂದು ಸಹಜ ಸ್ಥಿತಿಯಲ್ಲಿಲ್ಲ ಎಂಬುದು ಅವಳಿಗೆ ಖಾತ್ರಿಯಾಯಿತು.ಹಿಂದೂ-ಮುಸ್ಲಿಮ್! ತ್ಯಾಂಪಣ್ಣ ಇಲ್ಲದಿದ್ದರೆ ಮುಸ್ಲಿಮರೇ ನಿನ್ನಜ್ಜನನ್ನು ಅಂದು ಕೊಲ್ಲುತ್ತಿದ್ದರು’’ೆ ಮತಿಭ್ರಮಣೆಯಾಗಿರಬೇಕು... ಆದರೂ ಅವಳಿಗೆ ಕುತೂಹಲ ಕೆರಳಿತು. ಯಾಕೆ ಕೊಲ್ಲಲು ಬಂದಿದ್ದು, ಬಿಡಿಸಿ ಹೇಳಿ ಅಜ್ಜಿ’’ನ್ನ ಅಜ್ಜ ಯಾವಾಗಲೂ ಊರಿಡೀ ನ್ಯಾಯ ಪಂಚಾಯಿತಿಗೆ ಓಡಾಡಿಕೊಂಡಿದ್ದರು. ಊರಿನಲ್ಲಿ ಎಲ್ಲೇ ವಿವಾದವಿರಲಿ, ಗಲಾಟೆ-ಮನಸ್ತಾಪವಿರಲಿ, ನ್ಯಾಯ ಪಂಚಾಯಿತಿಗೆ ಅಜ್ಜನಿಗೆ ಕರೆ ಬರುತ್ತಿತ್ತು. ಇದರಲ್ಲಿ ಹಿಂದೂ-ಮುಸ್ಲಿಮ್ ಎಂದು ಇಲ್ಲ. ಎಲ್ಲರಿಗೂ ನಿನ್ನ ಅಜ್ಜ ಬೇಕು. ಅವರು ಹೇಳಿದ್ದೇ ನ್ಯಾಯ. ಅವರದ್ದೇ ಕೊನೆಯ ಮಾತು. ನಿನ್ನಜ್ಜ ಎಂದೂ ಸತ್ಯ, ನ್ಯಾಯ ತಪ್ಪಿ ಹೋದವರಲ್ಲ. ತಮ್ಮವರು, ತಮಗೆ ಬೇಕಾದವರು ಎಂದು ಪಕ್ಷ ವಹಿಸಿ ಮಾತನಾಡಿದವರಲ್ಲ. ಇವರ ಮಾತಿನ ಮೇಲೆ ಎಲ್ಲರಿಗೂ ಗೌರವ. ಎಲ್ಲರಿಗೂ ವಿಶ್ವಾಸ.