ತೃತೀಯ ರಂಗ ರಚನೆಗೆ ಇದು ಸಕಾಲ.

Update: 2016-07-31 18:05 GMT

ತೃತೀಯ ರಂಗ ರಚನೆಗೆ ಇದು ಸಕಾಲ.

- ಎಂ.ಸಿ.ನಾಣಯ್ಯ, ಜೆಡಿಎಸ್ ನಾಯಕ

ಇಲ್ಲವಾದರೆ ತನ್ನ ರಾಜಕೀಯ ಬದುಕು ಇಲ್ಲಿಗೇ ಮುಗಿದು ಹೋಗಬಹುದು ಎಂಬ ಆತಂಕವಿರಬೇಕು.

---------------------

ಮೋದಿ ಸರಕಾರದ ಕಾಂಗ್ರೆಸ್ ವಿರೋಧಿ ಮನಸ್ಥಿತಿಯೇ ಆರ್ಥಿಕ ಸುಧಾರಣೆಗೆ ಅಡ್ಡಿ.

- ಮನಮೋಹನ್ ಸಿಂಗ್, ಮಾಜಿ ಪ್ರಧಾನಿ

ದೇಶ ವಿರೋಧಿ ಮನಸ್ಥಿತಿ ಪರವಾಗಿಲ್ಲ ಅಂತೀರಾ?

---------------------

ಕನ್ನಡ ಭಾಷೆಯ ಉಳಿವಿಗಾಗಿ ಇಂದಿಗೂ ಹೋರಾಟ ನಡೆಸುತ್ತಿರುವುದು ವಿಷಾದನೀಯ.

- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ನೀವು ನಿಮ್ಮ ಉಳಿವಿಗಾಗಿ ಬಿಜೆಪಿಯೊಳಗೆ ಹೋರಾಟ ನಡೆಸುತ್ತಿರುವುದು ಕೂಡ.

---------------------

ನಮ್ಮನ್ನು ಜೆಡಿಎಸ್‌ನಲ್ಲೇ ಉಳಿಸಿಕೊಂಡರೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ.

-ಝಮೀರ್ ಅಹ್ಮದ್, ಜೆಡಿಎಸ್ ಭಿನ್ನಮತೀಯ ಶಾಸಕ

ನಿಮ್ಮನ್ನು ಹೊರ ಹಾಕಿ, ಕುಮಾರಸ್ವಾಮಿಯನ್ನು ಪ್ರಧಾನಮಂತ್ರಿ ಮಾಡುವ ಆಲೋಚನೆಯಲ್ಲಿದ್ದಾರೆ ದೇವೇಗೌಡರು.

---------------------

ತೆರಿಗೆಗಳ್ಳರಿಗೆ ಇನ್ನು ವಿನಾಯಿತಿ ಇಲ್ಲ.

- ಅರುಣ್ ಜೇಟ್ಲಿ, ಕೇಂದ್ರ ಸಚಿವ

ಕಳ್ಳರನ್ನೆಲ್ಲ ವಿದೇಶಗಳಿಗೆ ರವಾನಿಸಿದ ಬಳಿಕ ಘೋಷಣೆಯೇ?

---------------------

ಕೆಎಸ್ಸಾರ್ಟಿಸಿ ಲಾಭ ಮಾಡಿಕೊಳ್ಳುವುದಕ್ಕಾಗಿ ಹುಟ್ಟಿದ ಸಂಸ್ಥೆ ಅಲ್ಲ.

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ

ಕೆಎಸ್ಸಾರ್ಟಿಸಿ ಲಾಭ ಮಾಡದೇ ಇದ್ದರೇನಾಯಿತು, ರಾಜಕಾರಣಿಗಳು, ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರಲ್ಲ.

--------------------

ಮೋದಿ ಸರಕಾರದಲ್ಲಿ ಭಾರತ ಸುರಕ್ಷಿತವಾಗಿದೆ.

- ಮೋಹನ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಭಾರತದ ಸುರಕ್ಷತೆಯ ಕುರಿತಂತೆ ಆತಂಕವಿದೆ.

--------------------

ಬದುಕಿನ ಪ್ರಶ್ನೆಗೆ ಉತ್ತರ ಹುಡುಕಿದವನು ಸಂತನಾಗುತ್ತಾನೆ.

- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

ಹಾಗೆ ಉತ್ತರ ಹುಡುಕಲು ಹೊರಟು ಜೈಲಿ ಸೇರಿದವರೂ ಇದ್ದಾರೆ.

--------------------

ಪಂಜಾಬನ್ನು ಬಿಡೆಂದರು, ಬಿಜೆಪಿಯನ್ನೇ ಬಿಟ್ಟೆ.

- ನವಜೋತ್ ಸಿಂಗ್‌ಸಿಧು, ರಾಜ್ಯಸಭೆಯ ಮಾಜಿ ಸದಸ್ಯ

ಬಿಜೆಪಿಯ ಅದೃಷ್ಟ, ಪಂಜಾಬಿನ ದುರದೃಷ್ಟ.

---------------------

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಮೇಲೆ ನಿಗಾ ವಹಿಸಲು ಶರಿಯಾ ರೀತಿಯ ಕಾನೂನಿನ ಅಗತ್ಯವಿದೆ.

- ರಾಜ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ

ಸದ್ಯಕ್ಕೆ ಸಂವಿಧಾನದ ಕಾನೂನುಗಳಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ.

--------------------

ಯೋತ್ಪಾದನೆ ವಿಷಯದಲ್ಲಿ ಮೋದಿ ಸರಕಾರ ಮೃದು ಧೋರಣೆ ಅನುಸರಿಸುತ್ತಿದೆ.

- ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

ಮತ್ತು ಶಿವಸೇನೆಯ ವಿಷಯದಲ್ಲಿ ಕಠಿಣ ಧೋರಣೆ ಅನುಸರಿಸುತ್ತಿದೆ ಎಂಬ ಆಕ್ಷೇಪವೇ?

---------------------

ಸಿದ್ದರಾಮಯ್ಯ ಸರಕಾರದಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.

- ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ

ಅದೇನೇ ಸಂಚು ಮಾಡಿದರೂ ಸಿದ್ದರಾಮಯ್ಯ ಕೆಳಗೆ ಇಳಿಯದೇ ಇರುವ ಕಾರಣಕ್ಕಾಗಿಯೆ?

---------------------

ಸಿದ್ದರಾಮಯ್ಯ ಕುರ್ಚಿ ಅಲುಗಾಡುತ್ತಿದೆ.

- ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ

ಗ್ರಾಮಪಂಚಾಯತ್‌ನ ಕುರ್ಚಿಯೂ ದಕ್ಕದ ಮಾಜಿ ಸಚಿವರ ಹತಾಷೆಯ ಹೇಳಿಕೆ.

---------------------

ರಾಜ್ಯದ ಸಮಸ್ಯೆ ಬಗ್ಗೆ ಚರ್ಚಿಸಲು ಪುನಃ ಅಧಿವೇಶನ ಕರೆಯಬೇಕು.

- ಈಶ್ವರಪ್ಪ, ಬಿಜೆಪಿ ನಾಯಕ

ಮತ್ತು ಬಳಿಕ ಧರಣಿಯ ಹೆಸರಲ್ಲಿ ಅದನ್ನು ಪೋಲು ಮಾಡಬೇಕು ಅಲ್ಲವೆ?

---------------------

ರಾಷ್ಟ್ರಪತಿ ಪ್ರಣವ್ ಮುಖರ್ಜಿ ನನ್ನ ಗುರು.

- ನರೇಂದ್ರ ಮೋದಿ, ಪ್ರಧಾನಿ

ಇಂತಹ ಅದೆಷ್ಟು ಗುರುಗಳು ಕಾಂಗ್ರೆಸ್‌ನೊಳಗೆ ಅಜ್ಞಾತವಾಗಿದ್ದಾರೆಯೋ ಯಾರಿಗೆ ಗೊತ್ತು?

---------------------

ಪ್ರಧಾನಿ ಮೋದಿ ನನ್ನನ್ನು ಕೊಲ್ಲಿಸಬಹುದು.

- ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಅವರ ಕಾರು ವೇಗವಾಗಿ ಹೋಗುತ್ತಿರುವಾಗ ಜಾಗೃತೆಯಾಗಿರಿ.

--------------------

ಬೇಳೆ ಕಾಳುಗಳನ್ನು ಹೊರತುಪಡಿಸಿ ಬೇರೆ ಯಾವ ಆಹಾರ ಉತ್ಪನ್ನಗಳ ಬೆಲೆಯೂ ಏರಿಲ್ಲ.

- ರಾಮ್ ವಿಲಾಸ್ ಪಾಸ್ವಾನ್, ಕೇಂದ್ರ ಸಚಿವ

ಇಂತಹ ಹೇಳಿಕೆಗಳಿಂದ ತಮ್ಮ ಬೆಲೆ ದಿನದಿಂದ ದಿನಕ್ಕೆ ಇಳಿಯುತ್ತಿದೆ.

---------------------

ಭಾರತದಲ್ಲಿ ಅಭಿವೃದ್ಧಿಯ ಶಕೆ ಆರಂಭಗೊಂಡಿದೆ.

- ನಳಿನ್ ಕುಮಾರ ಕಟೀಲು, ಸಂಸದ

ಅದನ್ನು ಶಾಖೆ ಎಂದು ತಿದ್ದಿದರೆ ಒಳ್ಳೆಯದಿತ್ತು.

--------------------

ಉಗ್ರ ಬುರ್ಹಾನ್‌ವಾನಿಗೆ ಜೀವದಾನ ನೀಡಬೇಕಿತ್ತು.

- ಮೆಹೆಬೂಬ ಮುಫ್ತಿ, ಜಮ್ಮುಕಾಶ್ಮೀರ ಮುಖ್ಯಮಂತ್ರಿ

ಜೀವ ತೆಗೆಯುವುದಕ್ಕೆಂದು ನಿಯೋಜಿಸಲ್ಪಟ್ಟವಲ್ಲಿ ಜೀವ ದಾನವನ್ನು ಕೇಳಿದರೆ ಹೇಗೆ?

---------------------

ನವಜೋತ್ ಸಿಂಗ್‌ಸಿಧು ರೀತಿಯ ಅವಕಾಶವಾದಿಗಳಿಗೆ ಪಂಜಾಬಿನಲ್ಲಿ ಜಾಗವಿಲ್ಲ.

- ಪ್ರಕಾಶ್ ಸಿಂಗ್ ಬಾದಲ್, ಪಂಜಾಬ್ ಮುಖ್ಯಮಂತ್ರಿ

ಬರೇ ಡ್ರಗ್ಸ್‌ವಾದಿಗಳಿಗೆ ಮಾತ್ರವೇ?

---------------------

ಪ್ರಧಾನಿ ಮೋದಿ ಜನರಿಗೆ ಏನು ಬೇಕೋ ಅದನ್ನು ಮಾಡುತ್ತಿಲ್ಲ.

- ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ಯಾವ ಪ್ರಶಸ್ತಿ ಬೇಕು ಹೇಳಿ, ಕೊಡುತ್ತೇವೆ ಎನ್ನುತ್ತಿದ್ದಾರೆ ಮೋದಿ ಬಳಗ.

---------------------

ಸಮಸ್ಯೆ ಮತ್ತು ಪರಿಹಾರ ಎರಡು ನಮ್ಮೊಳಗೇ ಇರುತ್ತವೆ.

- ರಮ್ಯಾ, ಕಾಂಗ್ರೆಸ್ ನಾಯಕಿ

ಯಾವ ಸಿನಿಮಾದ ಸಂಭಾಷಣೆ?

---------------------

ನನ್ನ ಜೀವನ ಮಹಿಳೆಯರಿಂದಲೇ ರೂಪಿತವಾಗಿದೆ.

-ಶಾರುಖ್ ಖಾನ್, ಬಾಲಿವುಡ್ ನಟ

ಅದೆಷ್ಟು ಮಹಿಳೆಯರು ಅದಕ್ಕಾಗಿ ಬಲಿಯಾಗಬೇಕಾಯಿತು ಎನ್ನುವುದನ್ನೂ ಹೇಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!