--ಭೂತದ ನುಡಿಯಲ್ಲಿ ಅಭಯದ ವಾಗ್ದಾನ--

Update: 2016-08-04 17:05 GMT

ಪಂಚಾಯಿತಿ ಆದ ಮೇಲೆ ಎರಡೂ ಕಡೆಯವರನ್ನೂ ರಾಜಿ ಮಾಡಿಸುವುದು ಅಜ್ಜನ ವಿಶೇಷ. ಇದಕ್ಕಾಗಿ ಅಜ್ಜನನ್ನು ಎಲ್ಲರೂ ಇಷ್ಟ ಪಡುತ್ತಿದ್ದರು. ಆದರೂ ನ್ಯಾಯ ಪಂಚಾಯಿತಿ ಎಂದ ಮೇಲೆ ಒಂದು ಕಡೆಯವರು ಸೋಲಲೇಬೇಕಾಗಿತ್ತಲ್ಲ. ಇದು ಕೆಲವರು ಅಜ್ಜನ ಮೇಲೆ ದ್ವೇಷ ಕಟ್ಟಿಕೊಳ್ಳಲು ಕಾರಣವಾಗಿತ್ತು. ಅಜ್ಜನ ಎದುರಿಗೆ ಇದನ್ನು ತೋರಿಸದಿದ್ದರೂ ಒಳಗೊಳಗೆ ಕುದಿಯುತ್ತಿದ್ದರು. ಇಂತಹವರೆಲ್ಲ ಒಂದು ಕಡೆ ಸೇರಿದಾಗ, ಭೇಟಿಯಾದಾಗ ಹಿಂದಿನಿಂದ ಅಜ್ಜನ ಬಗ್ಗೆ ದ್ವೇಷ ಕಾರುತ್ತಿದ್ದರು. ಇದು ಅಜ್ಜನಿಗೂ ಗೊತ್ತಿತ್ತು. ಆದರೂ ಅಜ್ಜ ಈ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಯಾರೊಡನೆಯೂ ಹೇಳಿಕೊಂಡವರಲ್ಲ. ಯಾರೊಂದಿಗೂ ಕೋಪ, ದ್ವೇಷ ಇಟ್ಟುಕೊಂಡವರಲ್ಲ. ಅಜ್ಜನ ಮುಂದೆ ಇಂತಹವರೆಲ್ಲ ಬಾಲ ಮುದುಡಿಕೊಂಡು ಸುಮ್ಮನಿರುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಈ ತ್ಯಾಂಪಣ್ಣ ಶೆಟ್ಟಿ.

ತ್ಯಾಂಪಣ್ಣ ಶೆಟ್ಟಿ ಈ ಊರಿಗೆ ಯಜಮಾನನಿದ್ದಂತೆ. ಊರಿನಲ್ಲಿದ್ದವರಿಗೆಲ್ಲಾ ನಿನ್ನ ಅಜ್ಜನನ್ನು ಕಂಡರೆ ಗೌರವವಾದರೆ, ತ್ಯಾಂಪಣ್ಣ ಶೆಟ್ಟಿಯನ್ನು ಕಂಡರೆ ಭಯ. ಅವರನ್ನು ಕಂಡರೆ ಯಾರಾದರೂ ಭಯ ಪಡಬೇಕು ಅಂತಹ ವ್ಯಕ್ತಿತ್ವ ಅವರದ್ದು. ಎತ್ತರ ದೇಹ, ಕಂಬಳದ ಎತ್ತಿನಂತಹ ಗಟ್ಟಿಮುಟ್ಟಾದ ಮೈಕಟ್ಟು, ಆನೆಯಂತಹ ದೊಡ್ಡ ಕಿವಿಗಳು, ಆ ಕಿವಿ ತುಂಬಾ ಗೆದರಿ ನಿಂತ ಕೂದಲು, ಕತ್ತಲ್ಲಿ ಸರಪಳಿಯಂತಹ ಚಿನ್ನದ ಸರ, ಕೈಯಲ್ಲಿ ದಪ್ಪದ ಚಿನ್ನದ ಬಳೆ, ಬೆರಳು ತುಂಬಾ ಉಂಗುರಗಳು, ಹೆಗಲಲ್ಲಿ ಬಿಳಿ ರೇಷ್ಮೆ ಶಾಲು. ಅವರು ರಸ್ತೆಯಲ್ಲಿ ಹೋಗುವಾಗಲೆಲ್ಲ ಅವರ ಹಿಂದೆ ಕೊಡೆ ಹಿಡಿಯಲು ಒಬ್ಬ ಆಳು. ಅವರು ರಸ್ತೆಯಲ್ಲಿ ಹೋಗುತ್ತಿದ್ದರೆ ಹೊರಗಿದ್ದ ಮಕ್ಕಳೆಲ್ಲ ಒಳಗೋಡಿ ಅವಿತುಕೊಳ್ಳುತ್ತಿದ್ದರು. ದೊಡ್ಡವರು ಎದುರು ಸಿಕ್ಕರೆ ಲುಂಗಿಯನ್ನು ಇಳಿಬಿಟ್ಟು ತಲೆಯಲ್ಲೋ ಹೆಗಲಲ್ಲೋ ಇದ್ದ ಬೈರಾಸನ್ನು ಕಂಕುಳಡಿಗೆ ತಳ್ಳಿ ಬದಿಗೆ ಸರಿದು ನಿಂತು ಕೈ ಎತ್ತಿ ಮುಗಿಯುತ್ತಿದ್ದರು. ಹೆಂಗಸರು ಕಿಟಕಿಯಲ್ಲಿ ಕಣ್ಣು ಪಿಳಿ ಪಿಳಿ ಮಾಡುತ್ತಾ ಇಣುಕಿ ಸೆರಗನ್ನು ಬಾಯಿಗೆ ಒತ್ತಿ ಹಿಡಿಯುತ್ತಿದ್ದರು. ಈ ತ್ಯಾಂಪಣ್ಣ ಒಳ್ಳೆಯವರಿಗೆ ಎಷ್ಟು ಒಳ್ಳೆಯವರೋ ಕೆಟ್ಟವರಿಗೆ ಅಷ್ಟೇ ಕೆಟ್ಟವರು. ಈ ಊರಿನಲ್ಲಿ ಎಂತದೇ ಸಣ್ಣ-ದೊಡ್ಡ ಗಲಾಟೆ-ಗಲಭೆಯಾಗಲಿ ಅದರಲ್ಲಿ ಅವರ ಕಡೆಯವರು ಇರುತ್ತಿದ್ದರು. ಕೋಳಿ ಅಂಕದಲ್ಲಿ, ಕಂಬಳದ ಕಳದಲ್ಲಿ, ಜಾತ್ರೆ-ಕೋಲದ ದಿನಗಳಲ್ಲಿ ಇವರ ಕಡೆಯವರ ಗಲಾಟೆ ಇದ್ದದ್ದೆ. ಮತ್ತೆ ಅಲ್ಲಿ ಪಂಚಾಯಿತಿ ಮಾಡಿಸಿ, ಸಂಧಾನ ಮಾಡಿಸಲು ಕರೆ ಬರುತ್ತಿದ್ದುದು ನಿನ್ನ ಅಜ್ಜನಿಗೆ. ಇಂತಹ ತ್ಯಾಂಪಣ್ಣ ನಿನ್ನ ಅಜ್ಜನ ಗೆಳೆಯ ಎಂದ ಮೇಲೆ ಅಜ್ಜನ ಮೈಮುಟ್ಟಲಿಕ್ಕೆ ಯಾರಿಗೆ ಧೈರ್ಯ ಬರಬೇಕು ಹೇಳು. ಗೆಳೆತನ ಎಂದರೆ ಎಂತಹ ಗೆಳೆತನಾಂತ ಹೇಳ್ತಿಯಾ ಅಣ್ಣ-ತಮ್ಮಂದಿರು ಕೂಡಾ ಹಾಗೆ ಇರಲಿಕ್ಕಿಲ್ಲ. ಅಂತಹ ಸ್ನೇಹ. ಎಲ್ಲಿಗೆ ಹೋಗಬೇಕಾದರೂ ಇಬ್ಬರೂ ಒಟ್ಟಿಗೆ ಹೋಗುವುದು, ತ್ಯಾಂಪಣ್ಣನ ಮನೆಯಲ್ಲಿ ಏನಾದರೂ ವಿಶೇಷವಿದ್ದರೆ ಅಜ್ಜನಿಗೆ ಕರೆಬರುತ್ತಿತ್ತು. ನಮ್ಮ ಮನೆಯಲ್ಲಿ ಏನಾದರೂ ವಿಶೇಷ ಅಡುಗೆ ಮಾಡಿದರೆ ಅಂದು ತ್ಯಾಂಪಣ್ಣ ಹಾಜ ರಾಗುತ್ತಿದ್ದರು. ರಾತ್ರಿ ಊಟ ಮುಗಿಸಿ ಎಲೆ-ಅಡಿಕೆ ಹಾಕಿಕೊಂಡು ಇಬ್ಬರೂ ಮಾತಿಗೆ ಕುಳಿತರೆಂದರೆ ಬೆಳಗಿನವರೆಗೂ ಮಾತು ಮಾತು ಮಾತು. ಯಕ್ಷಗಾನ ಬಯಲಾಟ, ಕಂಬಳ, ಕೋಳಿ ಅಂಕ, ಜಾತ್ರೆ, ಕೋಲ, ನಾಟಕ, ಪೆಟ್ಟು, ಗಲಾಟೆ... ಹೀಗೆ ಎಲ್ಲ ವಿಷಯ ಗಳೂ ಅಲ್ಲಿ ಚರ್ಚೆಗೆ ಬರುತ್ತಿತ್ತು. ಹೀಗೆ ತಿಂಗಳಲ್ಲಿ ಒಮ್ಮೆಯಾದರೂ ಈ ಬೆಂಕಿ-ನೀರು ನಮ್ಮ ಮನೆಯಲ್ಲಿ ಸೇರಿ ರಾತ್ರಿ ಬೆಳಗು ಮಾಡುತ್ತಿತ್ತು.

ನಿನ್ನ ಅಜ್ಜನಿಗೆ ಯಕ್ಷಗಾನದ ಹುಚ್ಚು ಹಿಡಿಸಿದ್ದೇ ಈ ತ್ಯಾಂಪಣ್ಣ ಶೆಟ್ಟಿ. ಎಲ್ಲೇ ಯಕ್ಷಗಾನ ಇದ್ದರೂ ಇಬ್ಬರು ರಾತ್ರಿಯಾಗುತ್ತಲೇ ಗುತ್ತಿನ ಕೆಲವು ಯುವಕರ ಗುಂಪು ಕಟ್ಟಿಕೊಂಡು ತೂಟೆ ಹಿಡಿದು ಹೊರಟರೆ ಮತ್ತೆ ಬರುವುದು ಬೆಳಗ್ಗೆಯೇ. ಬಂದ ಮೇಲೂ ಮಲಗುತ್ತಿರಲಿಲ್ಲ. ಯಕ್ಷಗಾನ ಪಾತ್ರಗಳ ಬಗ್ಗೆ, ವೇಷಭೂಷಣಗಳ ಬಗ್ಗೆ, ಕಥೆ-ಅರ್ಥಗಾರಿಕೆಯ ಬಗ್ಗೆ ಚರ್ಚೆಯಲ್ಲಿ ಮುಳುಗಿಬಿಡುತ್ತಿದ್ದರು. ಒಂದು ದಿನ ಇದೇ ತ್ಯಾಂಪಣ್ಣ ಶೆಟ್ಟಿ ನನ್ನನ್ನು ‘‘ನೀವೂ ಆಟ ನೋಡಲು ಬನ್ನಿ. ಎಷ್ಟೂಂತ ಮನೆಯಲ್ಲಿ ಕುಳಿತು ಒದ್ದಾಡುವುದು. ಒಂದಿಷ್ಟು ಮನೋರಂಜನೆಯೂ ಇರಲಿ’’ ಎಂದು ಒತ್ತಾಯಿಸಿದ್ದರು. ಬ್ಯಾರಿಗಳ ಹೆಂಗಸರು ಹಾಗೆಲ್ಲ ಹೊರಗೆ ಹೋಗುವುದಿಲ್ಲಾಂತ ಅವರಿಗೆ ಗೊತ್ತು. ಆದರೂ ನನ್ನ ಮೇಲಿನ ಪ್ರೀತಿಯಿಂದ ಅವರು ಕರೆದಿದ್ದರು. ಗುತ್ತಿನ ಹೆಂಗಸರೆಲ್ಲ ಆಟದ ಬಗ್ಗೆ ಮಾತನಾಡುವಾಗ ನನಗೂ ಒಮ್ಮೆ ಅದನ್ನು ನೋಡಬೇಕೂಂತ ಆಸೆಯಾಗುತ್ತಿತ್ತು. ಆದರೆ ಹೇಗೆ ಹೋಗುವುದು. ಬ್ಯಾರಿಗಳ ಹೆಂಗಸರು ಹಾಗೆಲ್ಲ ಹೋಗ್ತಾರಾ, ಹೋದರೆ ಊರವರು ಬಿಡ್ತಾರಾ? ‘‘ಕಾರಲ್ಲಿ ಕರೆದುಕೊಂಡು ಹೋಗಿ ಹಾಗೆಯೇ ಕಾರಲ್ಲಿ ಕರೆದುಕೊಂಡು ಬರ್ತೇನೆ ಬನ್ನಿ ಬ್ಯಾರ್ದಿ’’ ಎಂದು ಆತ ಎಷ್ಟೋ ಸಲ ಅಜ್ಜನ ಎದುರಲ್ಲೇ ಒತ್ತಾಯಿಸಿದ್ದರು. ನಾನು ಒಲ್ಲೆ ಎಂದಾಗ ಅಜ್ಜ ಮೌನವಾಗಿ ನಿಂತು ನಗುತ್ತಿದ್ದರು. ಆಮೇಲೆ ನನಗಾಗಿಯೇ, ನಾನು ನೋಡಲೆಂದೇ ಈ ತ್ಯಾಂಪಣ್ಣ ಇದೇ ನಮ್ಮ ತೋಟದ ಎದುರಿನ ಗದ್ದೆಯಲ್ಲಿ ಅವರ ಸ್ವಂತ ಖರ್ಚಿನಲ್ಲಿ ಎರಡು ಬಯಲಾಟವನ್ನು ಆಡಿಸಿದ್ದರು. ನಾನು ಆ ಆಟವನ್ನು ಈ ಮನೆಯ ಜಗಲಿಯಲ್ಲಿ ಕುಳಿತುಕೊಂಡು ನೋಡುವಂತೆ ರಂಗಸ್ಥಳವನ್ನು ಮನೆಗೆ ಸರೀ ಎದುರಾಗಿ ಜೋಡಿಸಿದ್ದರು. ಈಗಲೂ ಆ ಬಯಲಾಟ ನನ್ನ ಕಣ್ಣಿಗೆ ಕಟ್ಟಿದಂತೆ ನೆನಪಾಗುತ್ತದೆ. ಒಂದು ಆಟದ ಹೆಸರು ಅಗೋಳಿ ಮಂಜಣ್ಣ. ಮತ್ತೊಂದು... ಮತ್ತೊಂದು... ಕೃಷ್ಣ ಲೀಲೆ ಕಂಸ ವಧೆ. ಆ ವೇಷಭೂಷಣ, ಆ ಕುಣಿತ, ಹಾಡುಗಾರಿಕೆ, ಹಾಸ್ಯ, ಚೆಂಡೆ ಎಷ್ಟು ಚೆಂದ ಗೊತ್ತುಂಟಾ. ನಾನು ಬೆಳಗಿನವರೆಗೆ ಮನೆಯ ಜಗಲಿಯಲ್ಲಿ ಕುಳಿತೇ ನೋಡಿದ್ದೆ. ಗಳಿಗೆಗೊಮ್ಮೆ ಬಂದು ತ್ಯಾಂಪಣ್ಣ ಕಡ್ಲೆ ಮಿಠಾಯಿ, ಖರ್ಜೂರ, ಕೊಬ್ಬರಿ ಮಿಠಾಯಿ, ಚರ್ಮುರಿ, ಗೋಳಿ ಸೋಡ ತಂದು ಕೊಟ್ಟು ‘‘ಬ್ಯಾರ್ದಿ, ಈ ಆಟ ನಿಮಗಾಗಿ ಆಡಿಸಿದ್ದು. ನೀವು ನೋಡಬೇಕೆಂದೇ ಆಡಿಸಿದ್ದು. ನಿದ್ದೆ ಮಾಡಿ ಬಿಡಬೇಡಿ. ಬೆಳಗಿನವರೆಗೆ ಕುಳಿತು ನೋಡಬೇಕು’’ ಎಂದು ಒತ್ತಾಯಿಸುತ್ತಿದ್ದರು. ಅಷ್ಟು ಪ್ರೀತಿ, ಕಾಳಜಿ ಅವರಿಗೆ ನನ್ನ ಮೇಲೆ. ನಾನು ಮೊದಲು ನೋಡಿದ್ದು ದೊಂದಿಯ ಬೆಳಕಿನಲ್ಲಿ ಆಡುವ ಬಯಲಾಟ. ರಂಗಸ್ಥಳದ ಕಂಬಗಳಿಗೆ ತಲಾ 2-3 ದೊಂದಿಗಳನ್ನು ಕಟ್ಟುತ್ತಿದ್ದರು. ಅದಕ್ಕೆ ಎಣ್ಣೆ ಹಾಕಲೆಂದೇ ಒಬ್ಬ ಅಲ್ಲೇ ಬದಿಯಲ್ಲಿ ನಿಂತಿರುತ್ತಿದ್ದ. ದೊಂದಿಯ ಬೆಳಕು ಕಡಿಮೆಯಾದಂತೆಲ್ಲಾ ಆತ ಅದಕ್ಕೆ ಎಣ್ಣೆ ಸುರಿಯುತ್ತಿದ್ದ. ಸುತ್ತಲೂ ಕತ್ತಲೆ. ಆ ಕರ್ಗತ್ತಲೆಯ ಮಧ್ಯೆ ರಂಗಸ್ಥಳ. ರಂಗಸ್ಥಳದಲ್ಲಿ ಉರಿಯುತ್ತಿದ್ದ ದೊಂದಿಯ ಕೆಂಪು ಬೆಳಕು. ಆ ಕೆಂಪು ಬೆಳಕಿನಲ್ಲಿ ವೇಷಧಾರಿಗಳನ್ನು ಅವರ ಕುಣಿತವನ್ನು ನೋಡುವುದೇ ಒಂದು ಸಂಭ್ರಮ.

ಮತ್ತೊಂದು ಆಟವನ್ನು ನಾನು ನೋಡಿದ್ದು ಗ್ಯಾಸ್‌ಲೈಟ್ ಬೆಳಕಿನಲ್ಲಿ. ಅದೂ ಹಾಗೆಯೇ ರಂಗಸ್ಥಳದ ಸುತ್ತಲೂ ಗ್ಯಾಸ್‌ಲೈಟ್‌ಗಳನ್ನು ಹಚ್ಚಿ ತೂಗು ಹಾಕಿರ್ತಾರೆ. ಅದರ ಬೆಳಕು ಕಡಿಮೆಯಾದಾಗಲೆಲ್ಲಾ ಅದಕ್ಕೆ ಪಂಪ್ ಹಾಕಲು, ಎಣ್ಣೆ ಹಾಕಲು ಅಲ್ಲೇ ಒಬ್ಬ ನಿಂತಿರುತ್ತಿದ್ದ. ಆದರೆ ದೊಂದಿಯ ಬೆಳಕಿನಲ್ಲಿ ನಡೆಯುವ ಆಟ ನೋಡಿದರೆ ಉಂಟಲ್ಲಾ, ಈ ಗ್ಯಾಸ್‌ಲೈಟ್ ಬೆಳಕಿನಲ್ಲಿ ನಡೆಯುವ ಆಟ ಏನೂ ಅಲ್ಲ. ನಿಜವಾಗಿ ಆಟ ನೋಡಬೇಕೆಂದರೆ ದೊಂದಿ ಬೆಳಕಿನಲ್ಲಿಯೇ ನೋಡಬೇಕು.

""Hಮತ್ತೆ ಮೂರು ನಾಟಕಗಳನ್ನು ತ್ಯಾಂಪಣ್ಣ ನಾನು ನೋಡಲೆಂದೇ ಅದೇ ಜಾಗದಲ್ಲಿ ವ್ಯವಸ್ಥೆ ಮಾಡಿದ್ದರು. ತುಳು ನಾಟಕ. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಬೇಕು. ಅಷ್ಟು ಚೆನ್ನಾಗಿದ್ದವು. ಅದರ ಹೆಸರು ನನಗೆ ನೆನಪಿಲ್ಲ. ಮತ್ತೊಮ್ಮೆ ಅವರ ಮನೆಯ ನೇಮವನ್ನು ನಾನು ನೋಡಲೆಂದೇ ಅವರ ಮನೆಯ ಕೆಲವರನ್ನು ಎದುರು ಹಾಕಿಕೊಂಡು ಅದೇ ಜಾಗದಲ್ಲಿ ಮಾಡಿಸಿದ್ದರು. ನಿಜವಾಗಲು ಆ ಭೂತಕೋಲ ನೋಡಿ ನಾನು ಹೆದರಿ ಹೋಗಿದ್ದೆ. ಬ್ಯಾಂಡ್ ವಾದ್ಯಗಳ ತಾಳಕ್ಕೆ ಭೂತದ ಕುಣಿತ ಬಹಳ ಖುಷಿ ಕೊಟ್ಟಿತ್ತು. ಮತ್ತೆ ಅದಕ್ಕೆ ದರ್ಶನ ಬಂದಾಗ ಅದರ ಅವತಾರ ನೋಡಿ ನನಗೆ ಭಯವಾಗಿತ್ತು. ಆವತ್ತು ಏನಾಯಿತು ಗೊತ್ತಾ? ಭೂತ ಒಂದು ಕೈಯಲ್ಲಿ ಸೂಟೆ, ಒಂದು ಕೈಯಲ್ಲಿ ಗಗ್ಗರ ಹಿಡಿದುಕೊಂಡು ಬ್ಯಾಂಡ್-ವಾದ್ಯಗಳ ತಾಳಕ್ಕೆ ಅರಚುತ್ತಾ ಆವೇಶದಿಂದ ಕುಣಿಯುತ್ತಿತ್ತು. ನಾನು ಜಗಲಿಯಲ್ಲಿ ಮೈತುಂಬಾ ಸೆರಗು ಹೊದ್ದುಕೊಂಡು ಅದನ್ನೇ ನೋಡುತ್ತಿದ್ದೆ. ಅದು ನಾನು ಮೊದಲ ಬಾರಿಗೆ ನೋಡುತ್ತಿದ್ದ ಭೂತಕೋಲ. ಇದ್ದಕ್ಕಿದ್ದಂತೆ ಭೂತ ಜೋರಾಗಿ ಅರಚುತ್ತಾ ಒಂದೇ ನೆಗೆತಕ್ಕೆ ಗಾಳಿಯಲ್ಲಿ ಹಾರಿ ಬಂದಂತೆ ಬಂದು ಈ ಮನೆಯ ಅಂಗಳದಲ್ಲಿ ನಿಂತಿತ್ತು. ಅದರ ಹಿಂದೆ ತ್ಯಾಂಪಣ್ಣ ಸಹಿತ ಹಲವಾರು ಯುವಕರು ಓಡಿ ಬಂದಿದ್ದರು. ನಾನು ಹೆದರಿ ಹೈರಾಣಾಗಿದ್ದೆ. ತ್ಯಾಂಪಣ್ಣ ನನ್ನ ಪಕ್ಕ ಬಂದು ನಿಂತು ಏನೂ ಹೆದರಬೇಡಿ ಬ್ಯಾರ್ದಿ, ಭೂತಕ್ಕೇನೋ ನಿಮ್ಮ ಮನೆಗೆ ಬರಬೇಕೂಂತ ಆಸೆಯಾಗಿರಬೇಕು. ಅದಕ್ಕೆ ಬಂದಿದೆ. ಏನೂ ಹೆದರಬೇಡಿ ಎಂದರು. ಭೂತ ಮತ್ತೂ ಜೋರಾಗಿ ಕಿರುಚತೊಡಗಿತು. ಸೂಟೆಯ ಕೆಂಪು ಬೆಳಕಿನಲ್ಲಿ ಅದರ ಮುಖ ಕಣ್ಣುಗಳನ್ನು ನೋಡಿ ನಾನು ಭೂಮಿಗಿಳಿದು ಹೋಗಿದ್ದೆ. ಭೂತ ನನ್ನನ್ನು ಕರೆದಾಗ ನಾನು ಕಂಪಿಸತೊಡಗಿದ್ದೆ. ನಿನ್ನ ಅಜ್ಜ ಬಂದು ಹಿಡಿದುಕೊಳ್ಳದಿದ್ದರೆ ನಾನು ಬಿದ್ದೇ ಬಿಡುತ್ತಿದ್ದೆ. ಅಂದು ಭೂತ ತುಳುವಿನಲ್ಲಿ ಹೇಳಿದ ಕೆಲವು ಮಾತುಗಳು ನನಗೆ ಈಗಲೂ ಸ್ವಲ್ಪ ಸ್ವಲ್ಪ ನೆನಪಿದೆ.ನದು ಅಜ್ಜಿ ಭೂತ ಹೇಳಿದ್ದು’’ ಅಜ್ಜಿ ಕತೆ ಹೇಳುವ ರೀತಿಯಲ್ಲಿ ಹೇಳುವ ವಿವರಣೆ, ಅವರ ಹಾವ-ಭಾವಗಳು ತಾಹಿರಾಳನ್ನು ಉಸಿರು ಬಿಗಿ ಹಿಡಿದು ಕೇಳುವಂತೆ ಮಾಡಿತ್ತು. ಅವಳು ಕಣ್ಣಗಲಿಸಿ, ಕಿವಿಯಾನಿಸಿ ಬೆದರಿದಂತೆ ಅಜ್ಜಿಯ ಬಾಯಿಯಿಂದ ಮತ್ತೆ ಬರುವ ಮಾತಿಗಾಗಿ ಕಾಯುತ್ತಾ ಕುಳಿತಿದ್ದಳು.ದು ಹೇಳಿದ್ದು... ಅದು ಹೇಳಿದ್ದು...

ಬ್ಯಾರ್ದಿ... ಈರೆನ ಬ್ಯಾರಿ ಪಂಡ ತ್ಯಾಂಪಣ್ಣಗ್ ಜೂವರೆ ಬ್ಯಾರಿಗ್‌ಲಾ ತ್ಯಾಂಪಣ್ಣ ಪಂಡ ಜೂವುಲು ಒಂಜಪ್ಪೆಬಂಜಿಡ್ ಪುಟುದಿಜೆರ್‌ಂಡಲಾ ಒಂಜಪ್ಪೆಬಾಲೆಲೆಕ್ಕ ಮಲ್ತ್ ಕೊರ್ತೆ

ಸೂರ್ಯ-ಚಂದ್ರೆರ್ ಉಪ್ಪಿಕಾಲ ಕಾಪುವೆೆಲ ಪೋಲಿಲು ತ್ಯಾಂಪಣ್ಣನಲಾ ಬ್ಯಾರಿನಲಾ ಸಂಬಂದೊಗು ಪುಲಿ ಪುಂಟೆರೆ ತೂವೊಂದುಲ್ಲೆರ್‌ಲ್ೆನ್ ಯಾನ್ ತೂವೊನುವೆಮಣ್ಣ್‌ದ ಮಾಮಲ್ಲ ಶಕ್ತಿ ಯಾನ್‌ಕಾಲಡ್ದು ಮೇಲ್ ಕಾಲ ಮುಟ್ಟ ್ಲೆಡ್ ಒಡಕ್‌ದಾಂತೆ ಕಾಪಾಡುನ ಬಾರ ಎನ್ನವು.

ನಿಕ್ಲೆ ಬೆರಿ ಸಾಯೊಗು ಯಾನುಲ್ಲೆರೆತಿನಾಯೆನ್ ಪರ್ಪಾವೆ

ಮೊರೆತಿನಾಯೆನ್ ಮುಕ್ಕಾವೆ

ಸೊರ್ಕಿನಾಯೆನ್ ಸಿರ್ಕಾವ್ಲೆೆನ್ ಎಡ್ಡೆಡ್ ಬಾಲಾವೆ

ಸೂರ್ಯ ಚಂದ್ರಾದಿ ಕಾಲಮುಟ್ಟ ಎಡ್ಡೆ ಪನ್ಪಾವೆ

ಮಾನಗು ಊನ ಬರಂದಿಲೆಕ್ಕ ಯಾನ್ ಕಾತ್ ರಕ್ಷಣೆ ಮಲ್ಪುವೆ

ಪಂಡಿ ಪಾತೆರ ಪಲಿಪಾವೆ

ಪಾಡಿ ಬಿತ್ತ್ ಕೊಡಿಪಾವೆ

ತರೆ ದೆರ್ತ್ ನಡಪಾವೆ

ನಿಕ್ಲೆ ಸಂಬಂದೊನು ಪೇರ್ ಉರ್ಕಯಿಲೆಕ್ಕ ಉರ್ಕಾವೆಚ್ಟ................ಷ್ಟು ಹೇಳಿದ ಭೂತ ಒಮ್ಮೆ ಜೋರಾಗಿ ದರ್ಶನ ಬಂದು ಅರಚುತ್ತಾ ಅಲ್ಲಿಂದ ಕಳಕ್ಕೆ ಓಡಿತ್ತು. ನಾನು ಬೆವೆತು ಒದ್ದೆಯಾಗಿದ್ದೆ. ಭೂತ ಹೇಳಿದ ಮಾತು ಕೇಳಿ ಹೆದರಿ ಕಂಪಿಸತೊಡಗಿದ್ದೆ.ೂತ ಎಂತ ಹೇಳಿದ್ದು ಅಜ್ಜಿ.!’’ನಗೆ ಅರ್ಥ ಆಗಲಿಲ್ಲವಾ..?’’ಲ್ಲ...’’ನಗೆ ತುಳು ಬರುವುದಿಲ್ಲವಾ?’’ಲ್ಲ’’ುತ್ತೆಂತ ಮಣ್ಣು. ಅದು ಹೇಳಿದ್ದು’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75