ಶೋರ್ಣೂರ್ ಹೆಮ್ಮಕ್ಕಳ ಸಾಗಾಟ, ಲೈಂಗಿಕ ಕಿರುಕುಳ ಪ್ರಕರಣ: ಹೊರ ರಾಜ್ಯಗಳತ್ತ ವ್ಯಾಪಿಸಿದ ತನಿಖೆ

Update: 2016-08-15 05:42 GMT

 ಪಾಲಕ್ಕಾಡ್, ಆ.15: ಶೋರ್ಣೂರ್ ಮಾನವ ಸಾಗಾಟ ಪ್ರಕರಣ ಎಂದು ಕರೆಯಲಾದ ಒಡಿಶ್ಸಾದಿಂದ ಕೇರಳಕ್ಕೆ ಕರೆತರಲಾದ ಹೆಮ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕಣದ ತನಿಖೆ ಇದೀಗ ಹೊರ ರಾಜ್ಯಗಳತ್ತ ವ್ಯಾಪಿಸಿದೆ ಎಂದು ವರದಿಯಾಗಿದೆ. ರೈಲ್ವೆ ಪೊಲೀಸರು ಜಾರ್ಖಂಡ್, ಒಡಿಶ್ಸಾ ರಾಜ್ಯಗಳಿಗೆ ತನಿಖೆಯನ್ನು ವಿಸ್ತರಿಸಿದ್ದು, ಈಗಾಗಲೇ ಪಾಲಕ್ಕಾಡ್ ಪೊಲೀಸರ ತಂಡ ಆ ಎರಡೂ ರಾಜ್ಯಗಳಿಗೆ ತೆರಳಿ ಪ್ರಾಥಮಿಕ ತನಿಖೆ ನಡೆಸಿ ಮರಳಿ ಬಂದಿದೆ ಎಂದು ವರದಿ ತಿಳಿಸಿದೆ. ಒಡಿಶ್ಸಾದಿಂದ ಕರೆತರಲಾದ ಹೆಮ್ಮಕ್ಕಳನ್ನು ಪಾಲಕ್ಕಾಡ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿ ಹೇಳಿಕೆ ಪಡೆಯಲಾಗಿದ್ದು, ಈ ಆಧಾರದಲ್ಲಿ ತನಿಖೆ ಮುಂದುವರಿಯುತ್ತಿದೆ ಎಂದು ತಿಳಿದು ಬಂದಿದೆ.

  ಪೊಲೀಸರು, ಕೇರಳಕ್ಕೆ ಕರೆತರಲಾದ ಹೆಮ್ಮಕ್ಕಳು ಅವರ ರಾಜ್ಯದಲ್ಲಿಯೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾರೆಂದು ಹೇಳುತ್ತಿದ್ದಾರೆ. ಈ ಹೆಮ್ಮಕ್ಕಳನ್ನು ಒಡಿಶ್ಸಾದಿಂದ ಕರೆತಂದಿರುವ ಜಾರ್ಖಂಡ್ ನಿವಾಸಿ ಸುಚಿತ್ರ ಸಿಂಗ್‌ಗೆ ರಿಮಾಂಡ್ ವಿಧಿಸಲಾಗಿದೆ. ಅವರನ್ನು ಮತ್ತೆ ಕಸ್ಟಡಿಗೆ ಪಡೆದು ತನಿಖೆ ನಡೆಸುವುದಕ್ಕೆ ಪೊಲೀಸರು ಸಿದ್ಧವಾಗಿಲ್ಲ. ಅವರು ಎರ್ನಾಕುಲಂನ ಸಿಗಡಿ ಫ್ಯಾಕ್ಟರಿಗಳಿಗೆ ಮಹಿಳಾ ಕಾರ್ಮಿಕರನ್ನು ಕರೆತಂದಿದ್ದ  ಏಜೆಂಟ್ ಮಾತ್ರ ಆಗಿದ್ದಾರೆಂದು ಪೊಲೀಸರು ಹೇಳುತ್ತಿದ್ದಾರೆ.

 ಎರ್ನಾಕುಲಂನಲ್ಲಿ ಸುಮಾರು 60ರಷ್ಟು ಸಿಗಡಿ ಫ್ಯಾಕ್ಟರಿಗಳು ಇದ್ದು, ಅಲ್ಲಿಗೆ ಕೆಲಸಕ್ಕಾಗಿ ಕಡಿಮೆ ಸಂಬಳಕ್ಕೆ ಇತರ ರಾಜ್ಯಗಳಿಂದ ಮಹಿಳೆಯರು, ಹೆಣ್ಮಕ್ಕಳನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ. ಇಂತಹ ಸಂಸ್ಥೆಗಳನ್ನು ಕೇಂದ್ರವಾಗಿಟ್ಟು ಲೈಂಗಿಕ ಶೋಷಣೆಗಳು ಕೂಡಾ ನಡೆಯುತ್ತಿವೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News