ಪದಕ ಗೆದ್ದ ಸಿಂಧುಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ
Update: 2016-08-20 07:12 GMT
ಬೆಂಗಳೂರು, ಆ.20: ರಿಯೋ ಒಲಂಪಿಕ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಹೆಮ್ಮೆಯ ಆಟಗಾರ್ತಿ ಸಿಂಧು ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿನಂದಿಸಿದ್ದಾರೆ.
ಹೈದರಾಬಾದ್‌ನ ಸಿಂಧು ನಮ್ಮ ದೇಶದ ಗೌರವ, ಹಿರಿಮೆ ಹೆಚ್ಚಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಬಾಡ್ಮಿಂಟನ್‌ನಲ್ಲಿ ಈವರೆಗೆ ಯಾರೂ ಮಾಡದ ಸಾಧನೆ ಮಾಡಿದ್ದಾರೆ. ಸಿಂಧು ಬೆಳ್ಳಿ ಪದಕ ಪಡೆದು ಇಡಿ ಭಾರತಕ್ಕೆ ಗೌರವ ತಂದಿದ್ದಾರೆ. ಕರ್ನಾಟಕ ರಾಜ್ಯದ ಜನರ ಪರವಾಗಿ ನಾನು ಸಿಂಧುಗೆ ಶುಭ ಕೋರುತ್ತೇನೆ. ಇವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಸಿಎಂ ಶುಭಹಾರೈಸಿದ್ದಾರೆ.