ಅಧಿಕಾರಿಗಳಿಂದಲೇ ಗೃಹ ಮಂಡಳಿ ನಿವೇಶನಗಳಿಗೆ ನಕಲಿ ದಾಖಲೆನನ್ನಸೇವಾವ ತೃಪ್ತಿ ತಂದಿಲ್ಲ: ಎಸ್.ಜೆ.ನಂಜಯ್ಯಮಠ

Update: 2016-08-24 18:14 GMT

ಬೆಂಗಳೂರು, ಆ.24:  ಕರ್ನಾಟಕ ಗೃಹ ಮಂಡಳಿ ವತಿಯಿಂದ ಹಂಚಿಕೆ ಮಾಡಲಾದ ನಿವೇಶನ, ವಸತಿಗೃಹಗಳಿಗೆ ಮಂಡಳಿಯ ಅಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಮೂಲಕ ಅವ್ಯವಸ್ಥೆಯ ಆಗರವನ್ನಾಗಿಸಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ ಬೇಸರ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಗೃಹಮಂಡಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಮಂಡಳಿಯಿಂದ ಹಂಚಿಕೆ ಮಾಡಲಾಗಿದ್ದ ನಿವೇಶನ, ವಸತಿಗೃಹಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮತ್ತೊಬ್ಬರಿಗೆ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಸಹಾಯಕ ಇಂಜಿಯರ್ ಉದಯಕುಮಾರ್, ಸಹಾಯಕ ಕಂದಾಯ ಅಕಾರಿ ಜಯಣ್ಣ, ಕೇಸ್‌ವರ್ಕರ್ ಶ್ರೀನಿವಾಸ್, ಡಿ ಗ್ರೂಪ್ ನೌಕರ ರೆಡ್ಡಿ ಸೇರಿದಂತೆ ಐವರನ್ನು ಅಮಾನತು ಮಾಡಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ತಿಳಿಸಿದರು. ಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆರವರ ಅಳಿಯ ರಾಧಾಕೃಷ್ಣರ ಯಲಹಂಕದಲ್ಲಿರುವ ವಸತಿಗೃಹಕ್ಕೆ ಅಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದಾರೆ. ಹೀಗಿರುವಾಗ ಸಾಲಸೋಲ ಮಾಡಿ, ನಿವೇಶನ ಕೊಳ್ಳುವ ಜನಸಾಮಾನ್ಯರ ಪಾಡೇನು. ಒಂದು ವರ್ಷದಲ್ಲಿ ಆಗುವ ಕೆಲಸಗಳನ್ನು ಅನಗತ್ಯವಾಗಿ ಏಳೆಂಟು ವರ್ಷಗಳ ಕಾಲ ದೂಡುತ್ತಾರೆ. ರೈತರಿಂದ ಕಡಿಮೆ ಬೆಲೆಗೆ ಜಮೀನು ಪಡೆದರೂ ಅದಕ್ಕೆ ಹಣ ಸಂದಾಯ ಮಾಡದೆ ಇತ್ತ ರೈತರು ಜಮೀನಿನಲ್ಲಿ ವ್ಯವಸಾಯ ಮಾಡದಂತಹ ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ೃಹ ಮಂಡಳಿ ಅಕಾರಿಗಳ ಅದಕ್ಷತೆ, ಭ್ರಷ್ಟಾಚಾರ ಕೆಟ್ಟ ಆಡಳಿತವನ್ನು ಸರಿಪಡಿಸದೇ ಹೋದರೆ ಕರ್ನಾಟಕ ಗೃಹ ಮಂಡಳಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ದಿನಗಳ ಕಾಲ ದೂರವಿಲ್ಲ. ರೈತರಿಂದ ಪಡೆದ ಜಮೀನಿಗೆ ಮುಂಬರುವ ಮಾರ್ಚ್ ಅಂತ್ಯದ ವೇಳೆಗೆ 375 ಕೋಟಿ ರೂ. ನೀಡುವುದು ಸೇರಿದಂತೆ ಒಟ್ಟಾರೆ ಬಾಕಿ ಮೊತ್ತ ಸೇರಿಸಿ 1,370 ಕೋಟಿ ರೂ. ರೈತರಿಗೆ ನೀಡಬೇಕಾಗಿದೆ ಎಂದು ಅವರು ಹೇಳಿದರು.ೃಹ ಮಂಡಳಿ ನಿರ್ಮಾಣ ಮಾಡಿರುವ 1,390 ನಿವೇಶನ, 371 ಮನೆಗಳು ಸೇರಿದಂತೆ 1,761 ಸ್ವತ್ತುಗಳಿಗೆ ಅರ್ಜಿ ಹಾಕಿ ಕಾಯುತ್ತಿರುವವರಿಗೆ ನೀಡಿಲ್ಲ. ಈ ಮನೆಗಳು, ನಿವೇಶನಗಳು ಅಕ್ರಮ ಚಟುವಟಿಕಗಳ ತಾಣವಾಗಿದೆ. ಮನೆಗಳನ್ನು ಜನರಿಗೆ ನೀಡಿದರೆ 150 ಕೋಟಿ ರೂ. ಗೂ ಅಕ ಹಣ ಬರಲಿದೆ. ಆ ಕೆಲಸವನ್ನೂ ಮಾಡಿಲ್ಲ. ಯಲಹಂಕದಲ್ಲಿ ಹಂಚಿಕೆ ಮಾಡಲಾಗಿದ್ದ 700 ನಿವೇಶನ, ಮನೆಗಳಿಗೆ ಕಡತಗಳೇ ಇಲ್ಲವಾಗಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.ನೇಕಲ್ ಸಮೀಪದ ಸೂರ್ಯನಗರದಲ್ಲಿ ಹಿಂದಿನ ಮಂಡಳಿಯ ಆಯುಕ್ತ ಜಯರಾಂ ಕಾನೂನು ಬಾಹಿರವಾಗಿ 237 ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಅವುಗಳಿಗೆ ತಡೆಯಾಜ್ಞೆ ತರಲಾಗಿದೆ. ಯಲಹಂಕ ವಾಣಿಜ್ಯ ಕಟ್ಟಡದ ನಿಧಾನಗತಿಯ ಕಾಮಗಾರಿಯಿಂದಾಗಿ ಪ್ರತಿ ತಿಂಗಳು ಕೋಟ್ಯಂತರ ರೂ. ಬಡ್ಡಿ ಕಟ್ಟಬೇಕಾಗಿದೆ. ಕರ್ನಾಟಕ ಗೃಹ ಮಂಡಳಿಯ ಮೇಲೆ ಜನರಿಗೆ ವಿಶ್ವಾಸ ಬರುವಂತಾಗಲು ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ ಗೃಹ ಮಂಡಳಿ ಮೂಲಕ ರಾಜ್ಯದಲ್ಲಿ ಒಟ್ಟು 12,000 ನಿವೇಶನಗಳನ್ನು ಹಂಚಿಕೆಗೆ ಸಿದ್ಧಪಡಿಸಲಾಗಿದ್ದು, ತಮ್ಮ ಆಡಳಿತಾವಯಲ್ಲಿ 2,175 ಎಕರೆ ಭೂಮಿಯನ್ನು ಸ್ವಾೀನಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ತಿಳಿಸಿದರು.


ಗೃಹ ಮಂಡಳಿಯ ಅಧ್ಯಕ್ಷನಾಗಿ ಎರಡು ವರ್ಷಗಳ ನನ್ನ ಸೇವೆ ತೃಪ್ತಿ ತಂದಿಲ್ಲ. ಅಕಾರಿ ನಿರ್ಲಕ್ಷ, ಅದಕ್ಷತೆಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದು ನನಗೆ ನೋವುಂಟು ಮಾಡಿದೆ. ಮುಂದಿನ ದಿನಗಳಲ್ಲಾದರು ಅಕಾರಿಗಳು ಎಚ್ಚೆತ್ತುಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುವಂತಾಗಲಿ.
-ಎಸ್.ಜಿ.ನಂಜಯ್ಯಮಠ .
ಅಧ್ಯಕ್ಷ, ಕರ್ನಾಟಕ ಗೃಹ ಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News