ಲೇವಾದೇವಿ ವ್ಯವಹಾರಕ್ಕೆ ಪರವಾನಿಗೆ ಕಡ್ಡಾಯ

Update: 2016-09-03 14:35 GMT

ಬೆಂಗಳೂರು, ಸೆ. 3: ಲೇವಾದೇವಿ ವ್ಯವಹಾರ, ಹಣಕಾಸು ಸಂಸ್ಥೆಗಳು, ಕರ್ನಾಟಕ ಲೇವಾದೇವಿಗಾರರ ಕಾಯ್ದೆ-1961ರ ಪ್ರಕರಣ 5ರಡಿ ಮತ್ತು ಗಿರಿವಿದಾರರು ಕರ್ನಾಟಕ ಗಿರಿವಿದಾರರ ಕಾಯ್ದೆ-1961ರ ಪ್ರಕರಣ 3ರಡಿ ಪರವಾನಿಗೆ ಹೊಂದಿರುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
 ಚೀಟಿ ವ್ಯವಹಾರ ನಡೆಸಲು ನಿಬಂಧಕರಿಂದ ಅನುಮತಿ ಪಡೆದಿರಬೇಕು ಎಂದು ರಾಜ್ಯ ಸಹಕಾರ ಇಲಾಖೆ ತಿಳಿಸಿದೆ. ಸರಕಾರದ ಅಧಿಸೂಚನೆಯನ್ವಯ ಲೇವಾದೇವಿ ದಾರರು ಭದ್ರತಾ ಸಾಲಕ್ಕೆ ವಾರ್ಷಿಕ ಶೇ.14 ಮತ್ತು ಭದ್ರತಾ ರಹಿತ ಸಾಲಕ್ಕೆ ವಾರ್ಷಿಕ ಶೇ.16 ಮಾತ್ರ ಬಡ್ಡಿ ವಿಧಿಸಲು ಅವಕಾಶವಿರುತ್ತದೆ.
ಈ ದರಕ್ಕಿಂತ ಹೆಚ್ಚಿನ ಬಡ್ಡಿ ದರ ವಿದಿಸುವುದು ಅಪರಾಧ. ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಡೆಸುವ ಯಾವುದೇ ಲೇವಾದೇವಿ, ಹಣಕಾಸು ಸಂಸ್ಥೆ, ಗಿರವಿ, ಚೀಟಿ ಸಂಸ್ಥೆಗಳೊಡನೆ ಸಾರ್ವಜನಿಕರು ಯಾವುದೇ ವ್ಯವಹಾರವನ್ನು ನಡೆಸಬಾರದು ಎಂದು ಸಹಕಾರ ಮನವಿ ಮಾಡಿದೆ
 ಲೇವಾದೇವಿ ಹಣಕಾಸು ಸಂಸ್ಥೆಗಳು ಮತ್ತು ಗಿರವಿದಾರರು ಬಡ್ಡಿ ದರವನ್ನು ಬಿಂಬಿಸುವ 2-1ಅಡಿ ಫಲಕವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಿಂದ ಅಧಿಕ ಬಡ್ಡಿ ವಸೂಲಾತಿ ಮಾಡಿದಲ್ಲಿ ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮ 2004ರ ಪ್ರಕರಣ 4ರಡಿ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ಜುಲ್ಮಾನೆ ವಿಧಿಸಬಹುದು ಎಂದು ಎಚ್ಚರಿಸಲಾಗಿದೆ.

ಕಾಯ್ದೆಯ ಅವಕಾಶಗಳನ್ನು ಉಲ್ಲಂಘಿಸಿ ಅಧಿಕ ಬಡ್ಡಿ ವಸೂಲಾತಿ ಮಾಡಿದ ಅಥವಾ ಅನಧಿಕೃತವಾಗಿ ಲೇವಾದೇವಿ ವ್ಯವಹಾರ ಮಾಡುವುದು ಕಂಡುಬಂದಲ್ಲಿ ದೂರು ದಾಖಲಿಸಲು ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೋಲೀಸ್ ವರಿಷ್ಠಾಧಿಕಾರಿಗಳು, ಸಹಕಾರ ಸಂಘಗಳ ನಿಬಂಧಕರು, ನಂ.1, ಅಲಿ ಆಸ್ಕರ್ ರಸ್ತೆ, ಬೆಂಗಳೂರು-560 052, ದೂ.ಸಂಖ್ಯೆ-080-22269 636. ಆಯಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು, ಸಹಕಾರ ಇಲಾಖೆಯ ಸಹಕಾರ ಸಿಂಧು ಜಾಲತಾಣದಲ್ಲಿ ನಿಬಂಧಕರು/ಜಿಲ್ಲಾ ಉಪನಿಬಂಧಕರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆ ಲಭ್ಯವಿರುತ್ತದೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ ಇವರನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸಹಕಾರ ಇಲಾಖೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News