ಕಾಶ್ಮೀರ ಬಿಕ್ಕಟ್ಟನ್ನು ಪರಿಹರಿಸಲು ವಾಜಪೇಯಿ ಸಿದ್ಧಾಂತದಿಂದ ಮಾತ್ರ ಸಾಧ್ಯ

Update: 2016-09-04 18:13 GMT

ಕಾಶ್ಮೀರ ಬಿಕ್ಕಟ್ಟನ್ನು ಪರಿಹರಿಸಲು ವಾಜಪೇಯಿ ಸಿದ್ಧಾಂತದಿಂದ ಮಾತ್ರ ಸಾಧ್ಯ

-ಮೆಹಬೂಬ ಮುಫ್ತಿ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ

ಆದರೆ ಆ ಸಿದ್ಧಾಂತ ಕೋಮಾದಲ್ಲಿದೆ.

 ---------------------

ಹಿಂದುತ್ವದ ಸಿದ್ಧಾಂತ ಯಾರ ವಿರೋಧಿಯೂ ಅಲ್ಲ

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಆದರೆ ಆರೆಸ್ಸೆಸ್‌ನ ಮನುಸಿದ್ಧಾಂತದ ಬಗ್ಗೆ ದೇಶಕ್ಕೆ ಭಯವಿದೆ.

 ---------------------

ಅಂಗಾಂಗ ದಾನಕ್ಕೆ ಜನರು ಮುಂದಾಗಬೇಕು

-ನಳಿನ್ ಕುಮಾರ್ ಕಟೀಲು, ಸಂಸದ

ಮನುಷ್ಯ ಜೀವಂತವಿರುವಾಗಲೇ ದಾನ ಮಾಡಬೇಕು ಎಂದರೆ ಹೇಗೆ?

---------------------

ರಾಜಕಾರಣಿಗಳಿಂದಲೇ ಮಾನವ ಹಕ್ಕು ಉಲ್ಲಂಘನೆ

-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ

ಉಲ್ಲಂಘನೆ ನಮ್ಮ ಹಕ್ಕು ಎನ್ನುವ ಸೊಕ್ಕು.

 ---------------------

ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಆ ವರ್ಗವನ್ನು ಮರೆತಿದ್ದಾರೆ

-ಕೆ.ಎಸ್. ಈಶ್ವರಪ್ಪ, ವಿಪಕ್ಷ ನಾಯಕ

ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದು ಹಿಂದೂಗಳನ್ನು ಮರೆತಂತೆ.

---------------------

ಮೋದಿ ಯುಗಕ್ಕಿಂತ ವೈದಿಕ ಯುಗದಲ್ಲೇ ಮಹಿಳೆಯರಿಗೆ ಹೆಚ್ಚು ಸ್ವಾತಂತ್ರ ಇತ್ತು

-ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ಹೊರ ಬರುತ್ತಿರುವ ಸಿಡಿಗಳು ಕೇಜ್ರಿವಾಲ್ ಯುಗದ ಸ್ವಾತಂತ್ರದ ಸಂಕೇತವೇ?

---------------------

ಭಾರತದ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ವಿದೇಶಿ ಪ್ರವಾಸಿ ಮಹಿಳೆಯರು ಸ್ಕರ್ಟ್ ಧರಿಸಬೇಡಿ

-ಮಹೇಶ್ ಶರ್ಮ, ಕೇಂದ್ರ ಸಚಿವ

ಅದನ್ನೂ ಧರಿಸದಿದ್ದರೆ ಹೇಗೆ?

---------------------

ನಾನು ಐದನೆ ತರಗತಿಗೆ ನೇರವಾಗಿ ಶಾಲೆಗೆ ಸೇರಿದವನು

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಆದ ಹಾಗೆ.

 ---------------------

ದೇಶಕ್ಕೆ ಯಾರು ಸ್ವಾತಂತ್ರ ತಂದುಕೊಟ್ಟರು ಎನ್ನುವುದು ಈಗ ಅಪ್ರಸ್ತುತ

-ಎಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಆ ಸ್ವಾತಂತ್ರವನ್ನು ಯಾರು ಕಿತ್ತುಕೊಂಡರು ಎನ್ನುವುದೇ ಸದ್ಯಕ್ಕೆ ಪ್ರಸ್ತುತ.

---------------------

ದೇಶದ ಸ್ವಾತಂತ್ರ ಹೋರಾಟದಲ್ಲಿ ಸಾವರ್ಕರ್ ಕೂಡಾ ಇದ್ದರು

-ಎಚ್.ಎಸ್ ದೊರೆಸ್ವಾಮಿ, ಸ್ವಾತಂತ್ರ ಹೋರಾಟಗಾರ

ಆದರೆ ಸಂಘಪರಿವಾರದ ಸಂಗವಾದ ಬಳಿಕ ಅದರಿಂದ ದೂರವಾದರು.

---------------------

ರಿಯೋ ಒಲಿಂಪಿಕ್ಸ್‌ನಲ್ಲಿ ಹೆಣ್ಣುಮಕ್ಕಳು ದೇಶದ ಮಾನ ಉಳಿಸಿದರು

-ನರೇಂದ್ರ ಮೋದಿ, ಪ್ರಧಾನಿ

ಮಾನ ತೆಗೆಯುವುದಕ್ಕೆ ತಾವೇ ಇದ್ದೀರಲ್ಲ, ಏಕೈಕ ಗಂಡು.

---------------------

ಹಸುವಿನ ತುಪ್ಪ ಸೇವಿಸಿದರೆ ಕ್ರೀಡಾಪಟುಗಳು ಪದಕ ಗೆಲ್ಲಬಹುದು ಹೊರತು ಮಾಂಸ ಸೇವನೆಯಿಂದಲ್ಲ

-ಬಾಬಾ ರಾಮ್‌ದೇವ್, ಯೋಗಗುರು

ತಾವೇ ಯಾಕೆ ಒಲಿಂಪಿಕ್ಸ್‌ಗೆ ಹೋಗಬಾರದು?

---------------------

ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಮನೆಗೆ ಹೋಗಿಲ್ಲ

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಮನೆಗೆ ಹೋಗದೆ, ಯಾರ ಮನೆಯಲ್ಲಿ ತಂಗಿದ್ದೀರಿ ಎನ್ನುವುದನ್ನು ನೀವು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

 ---------------------

ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಸಿಂಗ್ ಇಬ್ಬರೂ 420ಗಳು

-ಸುಬ್ರಮಣಿಯನ್ ಸ್ವಾಮಿ, ರಾಜ್ಯಸಭಾ ಸದಸ್ಯ

ಹಿರಿಯ 420ಯಿಂದ ಪ್ರಮಾಣ ಪತ್ರವೇ?

---------------------

ಉದ್ಯೋಗದ ಹಿನ್ನೆಲೆಯಲ್ಲಿ ಶಿಕ್ಷಣ ಪಡೆಯುವುದು ಸ್ವಾರ್ಥವೇ ಹೊರತು ಬೇರೇನೂ ಅಲ್ಲ

-ಬಸವರಾಜ ರಾಯ ರೆಡ್ಡಿ, ಸಚಿವ

ಭಿಕ್ಷಾಟನೆಗಾಗಿ ಯಾರಾದರೂ ಶಿಕ್ಷಣ ಪಡೆಯುತ್ತಾರೆಯೇ?

---------------------

ನ್ಯಾಯಾಲಯ ಹೇಳಿದರೆ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ಅನಿವಾರ್ಯ

-ಕಾಗೋಡು ತಿಮ್ಮಪ್ಪ, ಸಚಿವ

ನ್ಯಾಯಾಲಯದ ಮೂಲಕ ಹೇಳಿಸಿ ಎಂದು ಜಯಲಲಿತಾರಿಗೆ ಪರೋಕ್ಷ ಸೂಚನೆಯೇ?

---------------------

ನಾಗರಿಕ ಸಮಾಜದಲ್ಲಿ ದಲಿತರ ಮೇಲಿನ ದೌರ್ಜನಕ್ಕೆ ಜಾಗವಿಲ್ಲ

-ನರೇಂದ್ರ ಮೋದಿ, ಪ್ರಧಾನಿ

ನಮ್ಮ ದೇಶ ನಾಗರಿಕ ಸಮಾಜ ಆಗುವುದು ಯಾವಾಗ?

---------------------

ಸಿದ್ದರಾಮಯ್ಯ ಸರಕಾರ ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿದೆ

-ಪ್ರತಾಪ್ ಸಿಂಹ, ಸಂಸದ

ಅಷ್ಟೇ ಅಲ್ಲ, ಅವರು ಸಂಸದರಾಗುವುದಕ್ಕೂ ಅವಕಾಶ ನೀಡುತ್ತಿದೆ.

 ---------------------

ಯುವ ಬ್ರಿಗೇಡ್ ಯಾರು ಬೇಕಾದರೂ ಕಟ್ಟಬಹುದು

-ಸದಾನಂದ ಗೌಡ, ಕೇಂದ್ರ ಸಚಿವ

ಸದ್ಯಕ್ಕಂತೂ ಕ್ರಿಮಿನಲ್‌ಗಳೆಲ್ಲ ಬ್ರಿಗೇಡ್ ಕಟ್ಟುವುದರಲ್ಲಿ ಅತ್ಯುತ್ಸಾಹ ಹೊಂದಿದ್ದಾರೆ.

---------------------

ಇಂದು ಡಾಟಾಗಿಂತ ಅಟಾ(ಗೋಧಿ) ತುಟ್ಟಿಯಾಗಿದೆ

-ಲಾಲು ಪ್ರಸಾದ್ ಯಾದವ್, ಆರ್‌ಜೆಡಿ ಮುಖ್ಯಸ್ಥ

ಮೊಬೈಲ್ ಡಾಟಾ ಮೂಲಕ ಅಟಾ ಡೌನ್‌ಲೋಡ್ ಮಾಡಿದರೆ ಆಯಿತು.

---------------------

ತಪ್ಪು ದಾರಿ ತುಳಿಯುತ್ತಿರುವ ಯುವಕರನ್ನು ಸರಿದಾರಿಗೆ ತರುವ ಕಾರ್ಯವನ್ನು ಸಾಧು ಸಂತರು ಮಾಡಬೇಕು

-ಬಿ.ಕೆ ಹರಿಪ್ರಸಾದ್, ರಾಜ್ಯಸಭಾ ಸದಸ್ಯ

ಸಾಧು ಸಂತರ ಜೊತೆ ಸೇರಿ ತಪ್ಪು ದಾರಿ ತುಳಿದವರನ್ನು ಸರಿದಾರಿಗೆ ತರುವುದು ಯಾರು?

---------------------

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!