ಸುಪ್ರೀಂ ಆದೇಶ ಆಘಾತಕಾರಿ: ಸುರೇಶ್ ಕುಮಾರ್
Update: 2016-09-12 07:27 GMT
ಬೆಂಗಳೂರು, ಸೆ.12: ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು ತಮಿಳುನಾಡಿಗೆ ಇನ್ನೂ ಮೂರು ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವಂತೆ ಆದೇಶಿಸಿರುವುದು ಆಘಾತಕಾರಿ ಎಂದು ರಾಜ್ಯ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಮರುಪರಿಶೀಲನಾ ಅರ್ಜಿ ಕುರಿತ ಸುಪ್ರೀಂ ಆದೇಶದ ಕುರಿತು ಪ್ರತಿಕ್ರಿಯಿಸಿದ ಅವರು,ಈಗಾಗಲೇ ಕರ್ನಾಟಕ ನೀರಿನ ಸಂಕಷ್ಟ ಎದುರಿಸುತ್ತಿರುವಾಗ ಇಂದಿನ ವಿಚಾರಣೆಯಲ್ಲಿ ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಬಹುದು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು.ಆದರೆ ಸುಪ್ರೀಂ ಕೋರ್ಟ್ ನ ತೀರ್ಪು ಆಘಾತ ತಂದಿದೆ ಎಂದರು.
ಇದರಿಂದ ಕರ್ನಾಟಕದ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.