ಖಾಸಗೀಕರಣವೇ ಮೋದಿ ಮಂತ್ರ: ತೀಸ್ತಾ ಸೆಟಲ್ವಾಡ್

Update: 2016-09-22 18:45 GMT

ಬೆಂಗಳೂರು, ಸೆ. 22: ಹಂತ ಹಂತವಾಗಿ ಎಲ್ಲವನ್ನೂ ಖಾಸಗೀಕರಣಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರ ಮುಂದಾಗಿದ್ದು, ಇದೀಗ ಸಾಮಾನ್ಯ ಬಜೆಟ್ ಜತೆ ರೈಲ್ವೆ ಬಜೆಟ್ ವಿಲೀನಗೊಳಿಸುವ ಮೂಲಕ ಖಾಸಗೀಕರಣವೇ ಮೂಲ ಮಂತ್ರ ಎಂದಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕಿಡಿಕಾರಿದ್ದಾರೆ.

  ಗುರುವಾರ ಇಲ್ಲಿನ ಶಿವಾಜಿನಗರದ ವೈಟ್ ಮ್ಯಾನರ್ ಸಭಾಂಗಣದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಮ್ಮಿಕೊಂಡಿದ್ದ ‘ಭಾರತದಲ್ಲಿ ಫ್ಯಾಶಿಸಂ ಸಿದ್ಧಾಂತಗಳ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ೇಂದ್ರ ಸರಕಾರ ಖಾಸಗಿವಲಯವನ್ನು ಬಲಗೊಳಿಸಲು ಈಗಾಗಲೇ ಹಲವು ಕಾನೂನುಗಳನ್ನು ವ್ಯವಸ್ಥಿತವಾಗಿ ಬದಲಾವಣೆ ಮಾಡುತ್ತಿದೆ. ಅದೇ ರೀತಿ, ಕಾರ್ಮಿಕ ಕಾನೂನುಗಳನ್ನೂ ಬದಲಾಯಿಸಿದೆ. ಅಲ್ಲದೆ, ಬುಡಕಟ್ಟು ಜನಾಂಗಗಳನ್ನು ಹೊರ ಹಾಕಿ, ಶ್ರೀಮಂತರಿಗೆ ಸರಕಾರಿ ಭೂಮಿಯನ್ನೂ ನೀಡುತ್ತಿದೆ ಎಂದ ಅವರು, ಕರ್ನಾಟಕ ಸರಕಾರ ಬಡವರಿಗೆ ಸರಕಾರಿ ಭೂಮಿ ನೀಡುತ್ತಿರುವುದು ಮೆಚ್ಚುಗೆ ಸಂಗತಿ ಎಂದರು.ೋ-ತಾಲಿಬಾನ್: ಗೋರಕ್ಷಣೆ ಹೆಸರಿನಲ್ಲಿ ಬಡ-ಸಾಮಾನ್ಯರಿಗೆ ತೊಂದರೆ ನೀಡುತ್ತಿರುವವರನ್ನು ‘ಗೋ-ತಾಲಿಬಾನ್’ ಎಂದು ಕರೆಯಬೇಕಾಗಿದೆ. ಅದೇ ರೀತಿ, ಗೋ ರಕ್ಷಣೆ ಎಂದು ಹೇಳಿಕೊಂಡು ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ-ಗಲಭೆ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂ ಮತ್ತು ಜೈನ್ ಮಾಲಕತ್ವದ ಬೃಹತ್ ಕಂಪೆನಿಗಳು ಗೋ-ಮಾಂಸವನ್ನು ವಿದೇಶಿಗಳಿಗೆ ಹೆಚ್ಚು ರಫ್ತು ಮಾಡುತ್ತಿದ್ದಾರೆ. ಅಲ್ಲದೆ, ಇವರು ಕಂಪೆನಿಗಳ ಹೆಸರಿನಲ್ಲಿ ‘ಅಲ್’ ಎಂದು ಉಲ್ಲೇಖಿಸಿದ್ದಾರೆ ಎಂದ ಅವರು, ಕೇಂದ್ರ ಸರಕಾರಕ್ಕೆ ಹಿಂದೂ ರಾಷ್ಟ್ರ ನಿರ್ಮಾಣವೇ ಮೂಲ ಗುರಿಯಾಗಿದ್ದು, ಇದರ ವಿರೋಧ ಜನಾಂದೋಲನ ಆಗಬೇಕಾಗಿದೆ ಎಂದು ತಿಳಿಸಿದರು. ಚರ್ಚೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಕೋಸೌವೇಯ ತ್ರಿಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News