‘ದ್ವೇಷ ರಾಜಕೀಯ’ ಕುರಿತ ಚರ್ಚೆ ‘ಕೋಮು ರಾಜಕೀಯ ಸರಿಯಲ್ಲ’
ಬೆಂಗಳೂರು, ಸೆ.25: ಕೇಂದ್ರದ ನರೇಂದ್ರ ಮೋದಿ ಸರಕಾರ ಗೋವಿನ ಹೆಸರಿನಲ್ಲಿ ಕೋಮು ರಾಜಕೀಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಪಿಎಫ್‌ಐ ಮಂಗಳೂರು ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ಕಿಡಿಕಾರಿದ್ದಾರೆ.
ರವಿವಾರ ನಗರದ ಹಮೀದ್ ಶಾ ಕಟ್ಟಡದಲ್ಲಿ ಎಸ್‌ಡಿಪಿಐ ಪ್ರಧಾನ ಕಚೇರಿಯಲ್ಲಿ ಪಿಎಫ್‌ಐ ಏರ್ಪಡಿಸಿದ್ದ, ‘ದ್ವೇಷ ರಾಜಕೀಯ’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭರವಸೆಗಳನ್ನು ನೀಡಿ ಬಿಜೆಪಿ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆಯಿತು. ಆದರೆ, ಇದೀಗ ಗೋವಿನ ಹೆಸರಿನಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಲ್ಲದೆ, ದನಕ್ಕೆ ನೀಡುವ ವೌಲ್ಯವನ್ನು ಮನುಷ್ಯರಿಗೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಂಪರೆಯಿಂದ ಗೋವು ಪೂಜೆಯ ಪ್ರಾಣಿಯಾಗಿದ್ದರೆ, ವೇದಗಳಲ್ಲಿ ಉಲ್ಲೇಖ ಮಾಡಲಾಗುತ್ತಿತ್ತು. ಆದರೆ, ಎಲ್ಲಿಯೂ ಗೋವು ಪೂಜೆಯ ವಸ್ತು ಎಂದು ಹೇಳಿಲ್ಲ. ಅದೇ ರೀತಿ, ಬ್ರಾಹ್ಮಣರು ಗೋವು ತಿನ್ನುತ್ತಿದ್ದರು ಎಂಬ ಮಾತುಗಳಿವೆ ಎಂದ ಅವರು, ಬ್ರಾಹ್ಮಣ ಮತ್ತು ಜೈನ ಮಾಲಕತ್ವದ ಕಂಪೆನಿಗಳು ಭಾರತದಿಂದ ವಿದೇಶಕ್ಕೆ ಗೋವಿನ ಮಾಂಸ ರಫ್ತು ಮಾಡುತ್ತಿವೆ ಎಂದು ಆರೋಪಿಸಿದರು.
ಧರ್ಮ,ಆಹಾರ,ಸಂಸ್ಕೃತಿ ಹೆಸರಿನಲ್ಲಿ ಕೋಮುಗಲಭೆಗಳು,ಹಲ್ಲೆಗಳು ಹೆಚ್ಚಾಗಿವೆ. ಅಲ್ಲದೆ, ದಲಿತ ಮತ್ತು ಅಲ್ಪಸಂಖ್ಯಾತರನ್ನುಗುರಿಯಾಗಿಸಿಕೊಂಡು ಕೆಲವೆಡೆ ಸಂಚು ರೂಪಿಸಿ ಮಾರಣಾಂತಿಕ ಹಲ್ಲೆಗಳನ್ನು ನಡೆಸಲಾಗುತ್ತಿದೆ. ಈ ಸಂಬಂಧ ಆಡಳಿತ ನಡೆಸುವ ಸರಕಾರಗಳು ದಿಟ್ಟ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಾಶ್ಮೀರದಲ್ಲಿ ನಡೆಯುತ್ತಿರುವ ಅನ್ಯಾಯಗಳಬಗ್ಗೆ ಮಾತನಾಡುವವರನ್ನು ದೇಶದ್ರೋಹಿಗಳೆಂದು ಬಿಂಬಿಸುವ ಹುನ್ನಾರ ನಡೆಯುತ್ತಿದ್ದು, ಆರೆಸ್ಸೆಸ್ ಮುಸ್ಲಿಮ್ ರಾಷ್ಟ್ರೀಯ ಮಂಚ್ ಸ್ಥಾಪಿಸುವ ಮೂಲಕ ಮುಸ್ಲಿಮ್ ಸಮುದಾಯವನ್ನೂ ಭಾಗ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.ಾತ್ಯತೀತವಾದಿಗಳೆಂದು ಹೇಳಿಕೊಳ್ಳುವ ಕೆಲ ಪಕ್ಷಗಳು ಕೋಮುಗಲಭೆ-ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರಕಾರ ಮುಂದಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅಯ್ಯೂಬ್ ಅಗ್ನಾಡಿ, ಬೆಂಗಳೂರಿನ ಪಿಎಫ್‌ಐ ಮುಖಂಡ ಹುಸೇನ್ ಸಿರಾಜ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.