ಕೆಆರ್‌ಎಸ್ ಜಲಾಶಯ ಖಾಲಿ: ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ

Update: 2016-09-26 18:27 GMT

ಮಂಡ್ಯ, ಸೆ.26: ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ಇನ್ನಿತರ ಜಿಲ್ಲೆಗಳ ಪಾಲಿಗೆ ಜೀವನಾಡಿಯಾಗಿರುವ ಕಾವೇರಿ ಕಣಿವೆ ಭಾಗದ ಪ್ರಮುಖ ಅಣೆಕಟ್ಟುಗಳ ಪೈಕಿ ಒಂದಾಗಿರುವ ಕೃಷ್ಣರಾಜಸಾಗರ ಜಲಾಶಯ ಬತ್ತಿಹೋಗಿದ್ದು, ಈಗಿರುವ ಕನಿಷ್ಠ ಪ್ರಮಾಣದ ನೀರು ಹೊರತುಪಡಿಸಿದರೆ ಜಲಾಶಯದ ವಿಸ್ತೀರ್ಣ ಇರುವೆಡೆ ಎಲ್ಲಿ ನೋಡಿದರೂ ಕೇವಲ ಕಲ್ಲು ಬಂಡೆಗಳೆ ಕಾಣಿಸುತ್ತಿವೆ.

ಕೃಷ್ಣರಾಜಸಾಗರ(ಕೆಆರ್‌ಎಸ್)ದಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯ 49.452 ಟಿಎಂಸಿ, ಡೆಡ್ ಸ್ಟೋರೇಜ್ 4.401 ಟಿಎಂಸಿ. ಇವತ್ತು ಜಲಾಶಯದಲ್ಲಿ 14.602 ಟಿಎಂಸಿ ಮಾತ್ರ ಲಭ್ಯವಿದೆ. ಇದರಲ್ಲಿ ಉಪಯೋಗಕ್ಕೆ ಲಭ್ಯವಾಗುವುದು ಕೇವಲ 6.223 ಟಿಎಂಸಿ ಮಾತ್ರ. ಪ್ರತಿ ತಿಂಗಳು ಕುಡಿಯಲು 2 ಟಿಎಂಸಿಯಂತೆ ಮುಂದಿನ ಮೇ ವರೆಗೆ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.ಲಾಶಯದಲ್ಲಿ ಈಗಿರುವ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಲು ನಿರ್ಧರಿಸಿರುವುದರಿಂದ, ಕೃಷಿಗೆ ನೀರು ಪೂರೈಸುವ ಸಾಧ್ಯತೆಗಳಿಲ್ಲ. ಕೆಆರ್‌ಎಸ್‌ಗೆ ಇಂದಿನ ಒಳಹರಿವು ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣ ತೀರ್ಥ ಮೂರು ನದಿಗಳು ಸೇರಿ 2,460 ಕ್ಯೂಸೆಕ್ ಇದೆ, ಮೈಸೂರು ನಗರಕ್ಕೆ ಕುಡಿಯುವ ನೀರು ಪೂರೈಸಲು 269 ಕ್ಯೂಸೆಕ್ ಹೊರ ಹರಿವು ಬಿಡಲಾಗುತ್ತಿದೆ. ಬೆಂಗಳೂರು, ಮೈಸೂರು ಮತ್ತು ಇತರ ನಗರಗಳಿಗೆ ಕುಡಿಯುವ ನೀರಿಗಾಗಿ 2017ರ ಮೇ ವರೆಗೆ ಕನಿಷ್ಠ 30 ಟಿಎಂಸಿ ನೀರಿನ ಅಗತ್ಯವಿದೆ.ಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿನ ನೀರಿನ ಸಂಗ್ರಹ ಹೀಗಿದೆ: ಕೆಆರ್‌ಎಸ್‌ನಲ್ಲಿ ಸಂಗ್ರಹವಿರುವುದು 14.602 ಟಿಎಂಸಿ, ಬಳಕೆ ಲಭ್ಯ ಇರುವುದು 6.223 ಟಿಎಂಸಿ. ಕಬಿನಿಯಲ್ಲಿ 11.879 ಟಿಎಂಸಿ ಸಂಗ್ರಹವಾಗಿದ್ದು, ಉಪಯೋಗಕ್ಕೆ ಲಭ್ಯವಿರುವುದು 2.067 ಟಿಎಂಸಿ. ಹಾರಂಗಿಯಲ್ಲಿ 5.548 ಟಿಎಂಸಿ ಸಂಗ್ರಹವಿದ್ದು, ಉಪಯೋಗಕ್ಕೆ 4.798 ಟಿಎಂಸಿ ಲಭ್ಯವಿದೆ. ಹೇಮಾವತಿಯಲ್ಲಿ 7.676 ಟಿಎಂಸಿ ಲಭ್ಯವಿದ್ದು, ಬಳಕೆಗೆ 3.305 ಟಿಎಂಸಿ ಇದೆ., ಒಟ್ಟಾರೆ ನಾಲ್ಕು ಜಲಾಶಯಗಳಲ್ಲಿ 32.029 ಟಿಎಂಸಿ ಸಂಗ್ರಹವಾಗಿದ್ದು, ಬಳಕೆಗೆ ಲಭ್ಯ ಇರುವುದು ಕೇವಲ 16.393 ಟಿಎಂಸಿ ಮಾತ್ರ.ವತ್ತಿನವರೆಗೆ ಕೆಆರ್‌ಎಸ್‌ಗೆ 63.508 ಟಿಎಂಸಿ, ಕಬಿನಿಗೆ 36.910 ಟಿಎಂಸಿ, ಹಾರಂಗಿ 27.811 ಟಿಎಂಸಿ ಹಾಗೂ ಹೇಮಾವತಿ 31.570 ಟಿಎಂಸಿ ಸೇರಿದಂತೆ ಒಟ್ಟು 159.799ಟಿಎಂಸಿ ಒಳಹರಿವುಬಂದಿದೆ, ಈ ಸಾಲಿನಲ್ಲಿ ಮಳೆಯ ಅಭಾವದಿಂದಾಗಿ ಜಲಾಶಯಗಳ ನೀರಿನ ಒಳ ಹರಿವು ಬಹಳಷ್ಟು ಕಡಿಮೆಯಾಗಿರುವುದು ಕಂಡು ಬಂದಿದೆ. ಕಳೆದ ವರ್ಷ ಇದೇ ಅವಧಿಗೆ ನಾಲ್ಕು ಜಲಾಶಯಗಳಲ್ಲಿ 176.69 ಟಿಎಂಸಿ ಒಳಹರಿವು ಇತ್ತು.ಾವೇರಿ ನದಿ ಕೊಳ್ಳದ ನದಿಗಳ ಪಾತ್ರದಲ್ಲಿ ಇಂದು ಪತ್ರಕರ್ತರ ತಂಡ ನಡೆಸಿದ ಅಧ್ಯಯನದಲ್ಲಿ ನೀರಿನ ಬವಣೆ ಕಂಡು ಬಂತು. ಹೇಮಾವತಿ ಜಲಾಶಯದ ಪಾತ್ರದಲ್ಲಿ ಕಳೆದ ಆ.12ರಿಂದ ಸೆ.21ರವರೆಗೆ ಕೆರೆಗಳಿಗೆ ನೀರು ತುಂಬಿಸಲು ನೀರು ಹರಿಸಲಾಗಿದೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಗೊರೂರು ನಾಲಾವಲಯದ 615 ಮತ್ತು ತುಮಕೂರು ನಾಲಾವಲಯದ 215 ಕೆರೆಗಳಿಗೆ ನೀರು ತುಂಬಿಸಲು ನಿರ್ಧರಿಸಲಾಗಿತ್ತು, ಅದರಂತೆ ಕೆಲವು ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ತುಂಬಿಸಲಾಗಿದೆ.
ಹೇಮಾವತಿ ಜಲಾಶಯ ಪಾತ್ರದಲ್ಲಿರುವ ರೈತರು ಕೃಷಿಗೆ ನೀರು ಬಿಡಬಹುದು ಎಂದು ನಂಬಿ ಆಲೂಗೆಡ್ಡೆ, ಶುಂಠಿ, ಜೋಳದಂತಹ ಅರೆ ನೀರಾವರಿ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ಅವುಗಳಿಗೂ ನೀರಿಲ್ಲದೆ ಬಹುತೇಕ ಬೆಳೆಗಳು ಒಣಗಿ ಹೋಗಿವೆ.
ಹೊಳೆನರಸೀಪುರ ತಾಲೂಕಿನ ಅಂಕನಹಳ್ಳಿಯಲ್ಲಿ ಹೇಮಾವತಿ ಜಲಾಶಯದ ನದಿ ನೀರನ್ನು ನಂಬಿ ಸಾವಿರಾರು ರೂಪಾಯಿ ಸಾಲ ಮಾಡಿ ಆಲೂಗೆಡ್ಡೆ ಬೆಳೆ ಬೆಳೆದಿದ್ದೆ, ಆದರೆ ನೀರಿಲ್ಲದೆ ಈಗ ಕೈಗೆ ಬಂದ ಬೆಳೆ ಒಣಗಿ ಹೋಗಿದೆ ಎಂದು ಜಮೀನಿನ ರೈತ ಅಳಲು ತೋಡಿಕೊಂಡಿದ್ದಾರೆ.

ಹೇಮಾವತಿ ಜಲಾಶಯದ ಅಚ್ಚುಕಟ್ಟಿನಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯೇ ಆಗಿಲ್ಲ. ಈ ಭಾಗದಲ್ಲಿ ಅಂತರ್ಜಲ ಕೂಡ ಒಂದು ಸಾವಿರ ಅಡಿಗಿಂತಲೂ ಆಳಕ್ಕಿಳಿದಿದೆ. ಕಷ್ಟ ಪಟ್ಟು ಬೋರ್‌ವೆಲ್ ಕೊರೆಸಿದರೂ ನೀರಿರುವುದಿಲ್ಲ. ನೀರು ಸಿಕ್ಕರೂ ವಿದ್ಯುತ್ ಸರಿಯಾಗಿ ಇರುವುದಿಲ್ಲ. ಅಣೆಕಟ್ಟಿನ ಭಾಗದ ರೈತರಿಗೆ ಕೊಳವೆಬಾವಿ ನೀರಿನ ಅಗತ್ಯ ಇಲ್ಲ ಎಂದು ವಿದ್ಯುತ್ ಇಲಾಖೆಯವರು ಬಹುತೇಕ ನಮ್ಮ ಭಾಗಕ್ಕೆ ತ್ರೀ ಫೇಸ್ ವಿದ್ಯುತ್ ನೀಡುವುದೇ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು.ೆಆರ್‌ಎಸ್ ಭಾಗದಲ್ಲೂ ಇದೇ ಪರಿಸ್ಥಿತಿಯಿದ್ದು, ಜಲಾಶಯದಲ್ಲಿ ಒಣಗಿದ ತಳ ಭಾಗ ಕಂಡು ಅಲ್ಲಿನ ಸಿಬ್ಬಂದಿ ಮಮ್ಮಲ ಮರುಗುತ್ತಾರೆ. ಇಂತಹ ಭೀಕರ ಸ್ಥಿತಿ ಅಪರೂಪಕ್ಕೆ ಬರುತ್ತದೆ. ಈ ಬಾರಿಯಂತೂ ಮಳೆ ಬರುವ ಸಾಧ್ಯತೆಯೇ ಇಲ್ಲ, ಈಗಾಗಲೇ ಬಹುತೇಕ ನೀರು ಖಾಲಿ ಆಗಿದೆ. ಮುಂದಿನ ಮಳೆಗಾಲದವರೆಗೆ ಜಲಾಶಯ ಸಂಪೂರ್ಣ ಬರಿದಾಗಬಹುದು, ಕುಡಿಯುವ ನೀರಿನ ಆಸರೆಯ ಜಲಾಶಯವೇ ಬತ್ತಿ ಹೋದರೆ ಗತಿಯೇನು ಎಂದು ಆತಂಕ ವ್ಯಕ್ತ ಪಡಿಸುತ್ತಾರೆ. ಸಾಮಾನ್ಯ ವರ್ಷದಲ್ಲಿ ತುಮಿಳುನಾಡಿಗೆ 127.33 ಟಿಎಂಸಿ ನೀರು ಬಿಡಬೇಕಿತ್ತು. ಈ ವರ್ಷ ಸಂಕಷ್ಟ ವರ್ಷವಾಗಿದ್ದು, 52.419 ಟಿಎಂಸಿಯನ್ನು ಬಿಡುಗಡೆ ಮಾಡಲಾಗಿದೆ. ತಮಿಳುನಾಡಿ ತನ್ನ ಪಾಲಿನ ನೀರಿಗಾಗಿ ಸಲ್ಲಿಸಿರುವ ತಕರಾರು ಅರ್ಜಿ ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ, ಈ ನಡುವೆ ಕರ್ನಾಟಕ ವಿಧಾನಮಂಡಲ ಕಾವೇರಿ ನದಿಕೊಳ್ಳದ ಜಲಾಶಯಗಳ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಎಂದು ತೀರ್ಮಾನಿಸಿದೆ, ಇಲ್ಲಿ ಜಲಾಶಯಗಳು ಸಂಪೂರ್ಣ ಖಾಲಿ ಆಗಿವೆ, ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News