ಜಾಗತಿಕ ಶಾಂತಿಗಾಗಿ ಮುಹಮ್ಮದ್ ಪೈಗಂಬರ್ ಸಂದೇಶ

Update: 2016-10-13 07:51 GMT

ಮುಹಮ್ಮದ್ ಪೈಗಂಬರರು ತಮ್ಮ ಶತ್ರುಗಳನ್ನು ದ್ವೇಷಿಸಲಿಲ್ಲ. ಪ್ರತಿಕಾರ ಮಾಡಲಿಲ್ಲ. ತಮ್ಮ ಶತ್ರುಗಳು ತಮ್ಮನ್ನು ಎಷ್ಟೇ ಹೀನಾಯವಾಗಿ ಕಂಡರೂ, ಎಷ್ಟೇ ಕಷ್ಟವನ್ನು ಕೊಟ್ಟರೂ, ಕಲ್ಲಿಂದ ಹೊಡೆದು ತಲೆಯಮೇಲೆ ಕಸವನ್ನು ಚೆಲ್ಲಿದರೂ, ತಮ್ಮ ತತ್ವಗಳನ್ನು ತಿರಸ್ಕರಿಸಿದ ಶತ್ರುಗಳಾದ ಯಹೂದಿಗಳನ್ನು ಅವರು ಹೇಗೆ ರಕ್ಷಣೆ ಮಾಡಿ, ಗೌರವಿಸಿದರು ಎಂಬ ಇತ್ಯಾದಿ ಪ್ರಸಂಗಗಳನ್ನು ಓದಿ ನಾನು ಭಾವಭರಿತನಾದೆ. ಇಂಥ ಶತ್ರುವತ್ಸಲರಾದ ಪರಮಕರುಣಾಸಿಂಧು ಸ್ಥಾಪಿಸಿದ ಧರ್ಮ ಇಸ್ಲಾಂ. ಇಸ್ಲಾಂ ಎಂದರೇ ಶಾಂತಿ. ಇಂಥ ಶಾಂತಿಧೂತರು ಸ್ಥಾಪಿಸಿದ ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸೆಯನ್ನು ನೋಡಿದರೆ ದುಃಖವಾಗುತ್ತಿದೆ. 

ನಾನು ಬಿಜಾಪುರ (ಈಗಿನ ವಿಜಯಪುರ)ದಲ್ಲಿದ್ದಾಗ ಒಂದು ದಿನ ನಮ್ಮ ನ್ಯಾಯಾಲಯದಲ್ಲಿ ವಕೀಲರಾಗಿದ್ದ ಮುಸ್ಲಿಂ ಯುವಕರೊಬ್ಬರು ಬಂದು ಈ ಶಹರದಲ್ಲಿ ಈದ್‌ಮೀಲಾದ್ (ಮುಹಮ್ಮದ್ ಪೈಗಂಬರರ ಜನ್ಮದಿನೋತ್ಸವ) ಆಚರಿಸುವುದಾಗಿಯೂ, ಒಂದು ಕಾರ್ಯಕ್ರಮವನ್ನು ಇಟ್ಟುಕೊಂಡಿರುವುದಾಗಿ ತಿಳಿಸಿದರು. ಆ ಪವಿತ್ರ ಪುಣ್ಯ ದಿನ ನಾನು ಮುಖ್ಯ ಅ‘ತಿಥಿ’ಯಾಗಿ ಬರಬೇಕೆಂದು ಕೇಳಿದರು. ಆ ವಕೀಲರು ಧರ್ಮಶ್ರದ್ಧೆಯುಳ್ಳವರೆಂದು ನಾನು ಕೇಳಿದ್ದೆ. ಆದರೆ ಮುಹಮ್ಮದ್ ಪೈಗಂಬರರ ಬಗ್ಗೆ ಬಹಿರಂಗ ಸಭೆಯಲ್ಲಿ ಮಾತನಾಡುವಷ್ಟು ಅವರ ಜೀವನವನ್ನು, ಮಹಿಮೆಯನ್ನು ಆಳವಾಗಿ ಅಭ್ಯಸಿರಲಿಲ್ಲವಾದ್ದರಿಂದ, ಆ ದಿನಾಚರಣೆಗೆ ಬರಲಾಗುವುದಿಲ್ಲ ಎಂದು ತಿಳಿಸಿದೆ. ಆದರೂ ನಾನು ಸರ್ವಧರ್ಮಗಳ ಮೂಲಸಿದ್ಧಾಂತಗಳನ್ನು ತಿಳಿದಿರುವುದರಿಂದ ನಾನು ಬರಲೇಬೇಕೆಂದು ಅಗ್ರಹಿಸಿದರು ಹಾಗೂ ಪೈಗಂಬರರ ಬಗ್ಗೆ ಮತ್ತು ಕುರ್‌ಆನ್ ಬಗ್ಗೆ ಇಂಗ್ಲಿಷ್ ಪುಸ್ತಕಗಳನ್ನು ಕಳಿಸುವುದಾಗಿ ತಿಳಿಸಿ, ಅವುಗಳನ್ನು ಅಭ್ಯಸಿಸಿ ಅರ್ಧಗಂಟೆ ನಾಲ್ಕಾರು ಮಾತುಗಳನ್ನು ಆಡಬೇಕೆಂದು ಒತ್ತಾಯಿಸಿದರು. ಅವರು ಕಳಿಸಿದ ಒಂದು ಇಂಗ್ಲಿಷ್ ಪುಸ್ತಕದ ಹೆಸರು ಪ್ರೊ. ಗಾಝಿ ಅಹ್ಮದ್ ಸಂಗ್ರಹಿಸಿದ ದಿಲ್ಲಿಯ ಕಿತಾಬ್ ಭವನ ಪ್ರಕಟಿಸಿದ ಖಜ್ಞಿಜ ಟ್ಛ ಋ್ಠಿಞಞ ಮತ್ತು ಮುಹಮ್ಮದ್ ಪೈಗಂಬರರು ತಮ್ಮ ಶತ್ರುಗಳೊಡನೆ ವರ್ತಿಸಿದ ರೀತಿ- ಈ ಪುಸ್ತಕದ ಇಂಗ್ಲಿಷ್ ಮತ್ತು ಉರ್ದು ಪುಸ್ತಕಗಳನ್ನು ಕಳಿಸಿದರು.

ಶತ್ರುಗಳೊಡನೆ ಮುಹಮ್ಮದ್ ಪೈಗಂಬರರು ವರ್ತಿಸಿದ ರೀತಿಯನ್ನು ಕುರಿತಾದ ಉರ್ದು ಪುಸ್ತಕವನ್ನು ನ್ಯಾಯಾಂಗದಲ್ಲಿದ್ದು ನಿವೃತ್ತರಾದ ಕನ್ನಡವನ್ನೇ ಕಲಿತು, ಬರೆಯಬಲ್ಲ ಶ್ರೀಮಾನ್ ಎ.ಎಂ. ಗೌಂಡಿ ಅವರಿಗೆ ಕನ್ನಡದಲ್ಲಿ ಅನುವಾದಿಸಲು ಕೊಟ್ಟೆ. ಅವರು ಅದನ್ನು ಉರ್ದುವಿನಿಂದ ಭಾಷಾಂತರ ಮಾಡಿದರು. ಮುಹಮ್ಮದ್ ಪೈಗಂಬರರ ಇಸ್ಲಾಂ ಧರ್ಮಸೂತ್ರಗಳನ್ನು ಸ್ವಲ್ಪಮಟ್ಟಿಗೆ ಬಲ್ಲವನಾದ್ದರಿಂದ ನಾನು ಪೈಗಂಬರರು ತಮ್ಮ ಶತ್ರುಗಳೊಡನೆ ವರ್ತಿಸಿದ ರೀತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ ಪುಸ್ತಕವನ್ನು ಆಸಕ್ತಿಯಿಂದ ಓದಿದೆ. ಆ ಪುಸ್ತಕಕ್ಕೆ ಬರೆದ ಮುನ್ನುಡಿಯನ್ನು ಶ್ರೀ. ಎ.ಎಂ. ಗೌಂಡಿ ಅವರು ಅನುವಾದಿಸಿದ್ದು ಈ ಕೆಳಗಿನಂತಿದೆ.

‘‘ಸೃಷ್ಟಿಕರ್ತನು ಈ ಸೃಷ್ಟಿಯನ್ನು ನಿರ್ಮಾಣ ಮಾಡಿದನು. ಈ ಸೃಷ್ಟಿಯಲ್ಲಿ ಸೂರ್ಯ, ಚಂದ್ರ, ಭೂಮಿ, ಆಕಾಶಗಳನ್ನು ನಿರ್ಮಾಣ ಮಾಡಿದನು. ಭೂಮಿಯ ಮೇಲೆ ಗುಡ್ಡ, ಪರ್ವತ, ಹೊಳೆ, ಹಳ್ಳ, ಸರೋವರ, ಸಮುದ್ರಗಳನ್ನು ನಿರ್ಮಿಸಿದನು. ಹವೆಯನ್ನು ಜಗತ್ತಿನ ತುಂಬಾ ಹರವಿದನು. ಅನೇಕ ಜಾತಿಯ ಪ್ರಾಣಿಗಳನ್ನು ಹುಟ್ಟಿಸಿ ಸಂರಕ್ಷಿಸಿದನು. ಇವೆಲ್ಲ ಪ್ರಾಣಿಗಳಲ್ಲದೆ ಮನುಷ್ಯಪ್ರಾಣಿಯನ್ನು ಹುಟ್ಟಿಸಿ, ಅದಕ್ಕೆ ಸುಂದರರೂಪ, ಸರಿಯಾದ ಯೋಗ್ಯ ಅವಯವಗಳನ್ನು ಕೊಟ್ಟು ಈ ಜಗತ್ತಿನಲ್ಲಿ ಎಲ್ಲ ವಸ್ತುಗಳ ಒಡೆಯನನ್ನಾಗಿಮಾಡಿ, ಶ್ರೇಷ್ಠ ಪದವಿಯನ್ನು ಕೊಟ್ಟು ಈ ಜಗತ್ತಿನಲ್ಲಿ ಹುಟ್ಟಿಸಿದನು. ಮನುಷ್ಯನಿಗೆ ಒಳ್ಳೆಯ ಬುದ್ಧಿ ಹಾಗೂ ಒಳ್ಳೆಯ ವಿಚಾರ ಮತ್ತು ಉತ್ತಮ ಗುಣಗಳನ್ನು ದಯಪಾಲಿಸಿದನು. ಈ ಜಗತ್ತಿನಲ್ಲಿ ಮನುಷ್ಯನೇ ಶ್ರೇಷ್ಠನು, ಮನುಷ್ಯನಿಗಾಗಿ ಈ ಜಗತ್ತನ್ನು ಹುಟ್ಟಿಸಿದ್ದಾನೆ. ಇಲ್ಲಿಯ ಎಲ್ಲ ವಸ್ತುಗಳು ಇವನ ಅೀನವಾಗಿವೆ. ಮನುಷ್ಯನು ಇವುಗಳನ್ನು ತನ್ನ ಜೀವನಕ್ಕೆ ಸರಿಯಾಗಿ ಉಪಯೋಗಿಸಲೆಂದು ಹುಟ್ಟಿಸಿದ್ದಾನೆ. ಅಲ್ಲದೆ ಈ ಜಗತ್ತನ್ನು ಹುಟ್ಟಿಸಿದ ದೇವರು ಒಬ್ಬನೇ ಇದ್ದಾನೆ. ಅವನ ಉಪಕಾರವನ್ನೇ ನಾವು ಸ್ಮರಿಸಬೇಕು. ಅವನನ್ನೇ ನಾವು ನೆನಸಬೇಕು. ಅವನನ್ನೇ ನಾವು ಪೂಜಿಸಬೇಕು. ಅವನ ಗುಣಗಾನವನ್ನೇ ನಾವು ಮಾಡಬೇಕು. ಅವನನ್ನೇ ನಾವು ಪ್ರಾರ್ಥಿಸಬೇಕು. ಎಲ್ಲರಿಗಿಂತ ಅವನೇ ದೊಡ್ಡವನೆಂದು ತಿಳಿಯಬೇಕು. ಅವನ ಹೊರತು ಬೇರೊಬ್ಬ ದೇವರಿಲ್ಲವೆಂದು ತಿಳಿಯಬೇಕು ಎಂಬುದನ್ನು ಹೇಳುವುದೇ ‘‘ಏಕೇಶ್ವರೀ ಪಂಥ’’ ಅಥವಾ ‘‘ಇಸ್ಲಾಂ ಧರ್ಮ’’.

ಈ ಏಕೇಶ್ವರೀ ಪಂಥವನ್ನು ಆಚರಣೆಯಲ್ಲಿ ತರಲು ಈಶ್ವರನು (ಅಲ್ಲಾನು) ಈ ಜಗತ್ತಿನಲ್ಲಿ ಕಾಲಕಾಲಕ್ಕೆ ಅನೇಕ ಅವತಾರಿ ಪುರುಷರನ್ನೂ, ಧರ್ಮೋಪ್ರದೇಶಕರನ್ನೂ, ಶಿವಶರಣರನ್ನೂ ಹುಟ್ಟಿಸಿ ಮನುಷ್ಯ ಜಾತಿಗೆ ಸನ್ಮಾರ್ಗವನ್ನು ತೋರಿಸಿಕೊಟ್ಟನು. ಇಂಥವರಲ್ಲಿ ಒಬ್ಬರು ಹಝ್ರತ್ ಮುಹಮ್ಮದ್ ಪೈಗಂಬರರು.
****
 


 
  ಈ ಪುಸ್ತಕದಲ್ಲಿ ಕೇವಲ ವಿರೋ ಜನರೊಡನೆ ಮುಹಮ್ಮದ್ ಪೈಗಂಬರರು ವರ್ತನೆ ಹೇಗಿತ್ತು? ಎಂಬುದನ್ನು ಬರೆಯಲ್ಪಟ್ಟಿದೆ ಪೈಗಂಬರರು ತಮ್ಮ ಶತ್ರುಗಳೊಡನೆ ಹೇಗೆ ನಡೆದು ಕೊಂಡರು ಎಂಬ ವಿಚಾರದಲ್ಲಿ ನನಗೆ ಆಸಕ್ತಿವುಂಟಾಯಿತು. ಶತ್ರುಗಳೊಡನೆ ಹೇಗೆ ವರ್ತಿಸಿದರೆಂದು 63 ನಿಜಸಂಗತಿಗಳನ್ನು ಆ ಗ್ರಂಥದಲ್ಲಿ ಪ್ರಕಟಿಸಿದ್ದಾರೆ. ಅವುಗಳನ್ನು ಓದಿದ ಮೇಲೆ ಮುಹಮ್ಮದ್ ಪೈಗಂಬರರು ಭಕ್ತವತ್ಸಲರು ಮಾತ್ರವಲ್ಲದೆ, ಶತ್ರುವತ್ಸಲರೂ ಆಗಿದ್ದರು ಎಂದು ನನಗೆ ದಿಟವಾಯಿತು. ಪರಮಕರುಣಾಸಿಂಧು ಯೇಸುಕ್ರಿಸ್ತರು ತಮ್ಮನ್ನು ಶಿಲುಬೆಗೇರಿಸಲು ಸಿದ್ಧಮಾಡಿ, ಶಿಲುಬೆಗೆ ಏರಿಸುವಾಗ ಅವರು ಭಗವಂತನಲ್ಲಿ ‘‘ಹೇ ಭಗವಾನ್ ಇವರೆಲ್ಲರು ಏನೂ ಮಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ. ಅವರನ್ನು ನೀನು ರಕ್ಷಿಸು’’ ಎಂಬುದಾಗಿ ತಮ್ಮ ಶತ್ರುಗಳ ಕ್ಷೇಮಕ್ಕಾಗಿ ಪ್ರಾರ್ಥಿಸಿದರು ಎಂಬುದಾಗಿ ಯೇಸುಕ್ರಿಸ್ತನ ಕ್ಷಮಾ ಗುಣಗಳನ್ನು ಜಗತ್ತಿಗೆ ಬೋಸಿದರು. ಮುಹಮ್ಮದ್ ಪೈಗಂಬರರು ತಮ್ಮ ಶತ್ರುಗಳನ್ನು ದ್ವೇಷಿಸಲಿಲ್ಲ. ಪ್ರತೀಕಾರ ಮಾಡಲಿಲ್ಲ. ತಮ್ಮ ಶತ್ರುಗಳು ತಮ್ಮನ್ನು ಎಷ್ಟೇ ಹೀನಾಯವಾಗಿ ಕಂಡರೂ ಎಷ್ಟೇ ಕಷ್ಟವನ್ನು ಕೊಟ್ಟರೂ, ಕಲ್ಲಿಂದ ಹೊಡೆದು ತಲೆಯಮೇಲೆ ಕಸವನ್ನು ಚೆಲ್ಲಿದರೂ, ತಮ್ಮ ತತ್ವಗಳನ್ನು ತಿರಸ್ಕರಿಸಿದ ಶತ್ರುಗಳಾದ ಯಹೂದಿಗಳನ್ನು ಅವರು ಹೇಗೆ ರಕ್ಷಣೆ ಮಾಡಿ, ಗೌರವಿಸಿದರು ಎಂಬ ಇತ್ಯಾದಿ ಪ್ರಸಂಗಗಳನ್ನು ಓದಿ ನಾನು ಭಾವಭರಿತನಾದೆ.

ಇಂಥ ಶತ್ರುವತ್ಸಲರಾದ ಪರಮಕರುಣಾಸಿಂಧು ಸ್ಥಾಪಿಸಿದ ಧರ್ಮ ಇಸ್ಲಾಂ. ಇಸ್ಲಾಂ ಎಂದರೆ ಶಾಂತಿ. ಇಂಥ ಶಾಂತಿಧೂತರು ಸ್ಥಾಪಿಸಿದ ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹಿಂಸೆಯನ್ನು ನೋಡಿದರೆ ದುಃಖವಾಗುತ್ತಿದೆ. ಈ ಪುಸ್ತಕವನ್ನು ಓದಿದರೆ ಮುಹಮ್ಮದ್ ಪೈಗಂಬರರ ಬಗ್ಗೆ ಪೂಜ್ಯ ಬುದ್ಧಿ ಉಂಟಾಗುತ್ತದೆ. ಇಂಥ ಪೈಗಂಬರರ ಜೀವನದಲ್ಲಿ ನಡೆದ ನಿಜಸಂಗತಿಗಳನ್ನು ಪ್ರಚುರಪಡಿಸುವ ಮೂಲಕ ಜಗತ್ತಿನಲ್ಲಿ ಶಾಂತಿ ನೆಲೆಸುವುದು, ಸಮಸ್ತ ಮಾನವ ಕೋಟಿ ಒಂದೇ ಎಂಬ ಭಾವನೆಯನ್ನು ಸಮಸ್ತ ಜನರಿಗೂ ತಿಳಿಸುವುದು ಮುಖ್ಯವೆಂದು ನಾನು ಭಾವಿಸಿದೆ. ಇದನ್ನು ಓದಿದ ಮೇಲೆ ಆ ವರ್ಷ ವಿಜಯಪುರದಲ್ಲಿ ನಡೆದ ಈದ್‌ಮೀಲಾದ್ ಆಚರಣೆಗೆ ಹೋಗಿ ನಾನು ಅಲ್ಲಿ ಮಾತನಾಡಿದ್ದು ಇಸ್ಲಾಂ ಧರ್ಮಸೂತ್ರಗಳಲ್ಲ, ಪೈಗಂಬರರ ಉಪದೇಶದ ಸೂಕ್ಷ್ಮ ಸಂಗತಿಗಳಲ್ಲ. ಏಕದೇವೋಪಾಸನೆ, ವಿಗ್ರಹರಾಧನೆಯ ನಿಷೇಧ- ಇವೆರಡೇ ಇಸ್ಲಾಂ ಧರ್ಮದ ಸಾರಸರ್ವಸ್ವ ಎಂಬುದಾಗಿ ನಾನು ಈ ಪ್ರಸಾರದ ಪ್ರಸಂಗಗಳನ್ನು ಕುರಿತು ಸಾಧಾರಣ ಜನಗಳಿಗೆ ತಿಳಿಯುವಂತೆ ಮಾತನಾಡಿದೆ. ಕೇಳಿದವರಿಗೆ ಎಷ್ಟು ಸಂತೋಷವಾಯಿತು ಎಂದು ನಾನು ಭಾವಿಸಿದೆ. ಮುಸ್ಲಿಂ ಯುವಕರು ಪೈಗಂಬರರ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದರು. ಅಂಥ 63 ಪ್ರಸಂಗಗಳಲ್ಲಿ ಒಂದೆರಡನ್ನು ಮಾತ್ರ ಇಲ್ಲಿ ಉಲ್ಲೇಖಿಸಬಯಸುತ್ತೇನೆ. ್ಙತಾವು ಬೋಸಿದ ವಿಗ್ರಹಾರಾಧನೆ ವಿಷಯದ ತತ್ವವನ್ನು ತಮಗೆ ತಾವೇ ವಿಸಿಕೊಂಡರು. ಇದು ಜಗತ್ತಿನ ಪ್ರಸಿದ್ಧ ಧರ್ಮಸಂಸ್ಥಾಪಕರ ವಿಷಯದಲ್ಲಿಯೂ ಕಂಡು ಬರುತ್ತದೆ.

ಅಂದಮೇಲೆ ಇಸ್ಲಾಂ ಧರ್ಮದ ಮೂಲ ಸಿದ್ಧಾಂತ ಏಕದೇವೋಪಾಸನೆ. ದೇವನೆಂದರೆ- ಅಲ್ಲಾ, ಅಲ್ಲಾ ಎಂದರೆ ಪುರುಷಾಕಾರದ ವ್ಯಕ್ತಿ ಅಲ್ಲ. ತರುವಾಯ ನಾನು ಸರ್ ಅಲ್ಲಾಮ ಮುಹಮ್ಮದ್ ಇಕ್ಬಾಲ್ ಅವರ ಬಗ್ಗೆ ಓದಿದೆ. ಪಂಜಾಬ್ ಹಾಗೂ ಹರಿಯಾಣ ರಾಜ್ಯದ ರಾಜ್ಯಪಾಲರಾಗಿದ್ದ ಹಝ್ರತ್ ಎ್ಎಚ್‌ಎಂ ಬರ್ನಿ ಅವರು ಅಜ್ಮೀರ್ ಶಹರದಲ್ಲಿ ಸರ್ ಅಲ್ಲ್ಲಾಮ ಮುಹಮ್ಮದ್ ಇಕ್ಬಾಲ್ ಅವರ ಜೀವನ ಚರಿತ್ರೆಯನ್ನು ಸರ್ವಸಾಧಾರಣ ಜನರಿಗೆ ತಿಳಿಯುವಂತೆ ಉರ್ದುವಿನಲ್ಲಿ ಮಾತನಾಡಿದ್ದರು. ಆ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಪಂಜಾಬ್ ಹಾಗೂ ಹರಿಯಾಣ ಸಾಹಿತ್ಯ ಅಕಾಡಮಿ ಪ್ರಕಟಿಸಿತ್ತು. ಆ ಭಾಷಣಗಳ ಜೊತೆಗೆ ಹಝ್ರತ್ ಬರ್ಲಿ ಅವರು ಮತ್ತೆರಡು ಲೇಖನಗಳನ್ನು ಸೇರಿಸಿ, ಇಂಗ್ಲಿಷ್ ಗ್ರಂಥವನ್ನು ಸಿದ್ಧಪಡಿಸಿದ್ದರು. ಅದನ್ನು ನಾನು ಕನ್ನಡಕ್ಕೆ ಅನುವಾದಿಸಿದೆ. ಅದನ್ನು ಕರ್ನಾಟಕ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ. ಅದರಲ್ಲಿ ಅಲ್ಲಾ ಎಂಬುದೇನೆಂಬುದನ್ನು ವಿಶ್ಲೇಷಿಸಿದ್ದಾರೆ. ಅಲ್ಲಾ ಎಂಬ ಶಬ್ದಕ್ಕಿರುವ ಅರ್ಥ ಬಹುಶಃ ಭಾರತೀಯ ತತ್ವಜ್ಞಾನದಲ್ಲಿ ಬ್ರಹ್ಮ ಎಂಬ ಅರ್ಥ ಕಂಡುಬರುತ್ತದೆ. ಆ ಬ್ರಹ್ಮಶಕ್ತಿಯೆ ಸಕಲ ಸೃಷ್ಟಿಕರ್ತ. ಅದು ಸರ್ವಾಂತರ್ಯಾಮಿ. ಅದು ಅಜಮ್ (ಹುಟ್ಟು ಇಲ್ಲದ್ದು) ಅಂದರೆ ಅದಕ್ಕೆ ಸಾವು ಇಲ್ಲದ್ದು. ಅದು ಏನೆಂಬುದನ್ನು ಯಾವ ಮಾತಿನಿಂದ ಹೇಳಲೂ ಬಾರದು.

ಅದು ನಿರಾಕಾರಂ, ಏಕಂ, ನಿತ್ಯ, ಶುದ್ಧ, ನಿರ್ವೀಕಾರ. ಇದೇ ಕಲ್ಪನೆ ಅಲ್ಲಾ ಎಂಬ ಶಬ್ದದಲ್ಲಿಯೂ ಇದ್ದಂತೆ ಕಾಣುತ್ತದೆ. ಅದನ್ನು ಪಡೆಯುವುದೇ ಮಾನವ ಜೀವಿತೋದ್ದೇಶ. ಆದ್ದರಿಂದ ಈ ಜೀವಿತೋದ್ದೇಶವನ್ನು ಸಾಕ್ಷ್ಷಾತ್ಕಾರ ಮಾಡಿಕೊಳ್ಳಲು ಅದನ್ನೆ (ತತ್ ಅನ್ನು) ಧ್ಯಾನಿಸಬೇಕು, ಅದರಂತಾಗಬೇಕು. ಅದನ್ನೆ ಅಲ್ಲಮ ಪ್ರಭುಗಳು ಶೂನ್ಯ ಸಂಪಾದನೆ ಎಂದು ಕರೆದಿರಬೇಕು. ಬಹುಶಃ ಅಲ್ಲಮ ಪ್ರಭು ಎಂಬ ಹೆಸರು ಈ ಅಲ್ಲಾಕ್ಕೆ ಸಮಾನವಾದ ಶಬ್ದವೆಂಬಂತೆ ತೋರುತ್ತದೆ. ಈ ವಿಚಾರವಾಗಿ ಹೆಚ್ಚು ತಿಳಿಯಬಯಸುವವರು ದಿ. ಡಾ. ವೃಷಭೇಂದ್ರಸ್ವಾಮಿಯವರು ತಮ್ಮ ಡಾಕ್ಟರೇಟ್ ಪದವಿಗಾಗಿ ಬರೆದಿರುವ ಉದ್ಗಂಥದಲ್ಲಿ ವಿವರವಾಗಿ ತಿಳಿಸಿದ್ದಾರೆ. ಹಾಗೆಯೇ ಬೇಲ್ದಾಳದ ಬಸವಶ್ರೀ ಸಿದ್ದರಾಮ ಶರಣರು ತಮ್ಮ ಕೃತಿ ‘‘ಶೂನ್ಯ ಸಂಪಾದನೆಯ ರಹಸ್ಯ’’ದಲ್ಲಿ ವಿವರಿಸಿದ್ದಾರೆ. ಸಿದ್ದರಾಮ ಶರಣರು ಬರೆದ ಗ್ರಂಥದಲ್ಲಿ ಹಾಗೂ ಅವರಿಗಿಂತ ಮೊದಲು ಅಲ್ಲಮ ಪ್ರಭುಗಳ ಬಗ್ಗೆ ಬರೆದ ಕನ್ನಡದ ಗ್ರಂಥಗಳಲ್ಲಿಯೂ ಪ್ರಕಟಿಸಲಾಗಿದೆ.

ಈ ಪ್ರಬಂಧದ ಮುಖ್ಯ ಉದ್ದೇಶ ಪೈಗಂಬರರ ತಮ್ಮ ಮೂಲಸಿದ್ಧಾಂತ ಸೂತ್ರ ಅಲ್ಲಾನೊಬ್ಬನೇ ದೇವರು, ಅಲ್ಲಾನಲ್ಲದೆ ಬೇರೆ ದೇವರಿಲ್ಲ. - ಈ ಸಿದ್ಧಾಂತವನ್ನು ಭದ್ರವಾಗಿ ಸ್ಥಾಪಿಸಲು ವಿಗ್ರಹಾರಾಧನೆಯನ್ನು ವಿರೋಸಿದರು. ಅವರ ಅವತಾರೋದ್ದೇಶದ ಈ ಮೂಲಸಿದ್ಧಾಂತವನ್ನು ಆಚರಣೆಯಲ್ಲಿ ತರುವಾಗಲು ತಮ್ಮ ಶತ್ರುಗಳೊಡನೆ ಹೇಗೆ ವರ್ತಿಸಿದರು? ಎಂಬುದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

ಮುಹಮ್ಮದ್ ಪೈಗಂಬರರು ಈ ಸಿದ್ಧಾಂತವನ್ನು ಸ್ಥಾಪಿಸಲು ತಮ್ಮ ಜೀವಮಾನದಲ್ಲಿ 28 ಯುದ್ಧಗಳಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ 18 ಯುದ್ಧಗಳು ಆತ್ಮರಕ್ಷಣೆಗಾಗಿ ನಡೆದವು. ಇನ್ನು 10 ಯುದ್ಧಗಳು ತಾವು ಅರಬ್ ರಾಜ್ಯಗಳಲ್ಲಿ ಸ್ಥಾಪಿಸಿದ ಇಸ್ಲಾಂ ಧರ್ಮವನ್ನು ಧ್ವಂಸಮಾಡಲು ಉಗ್ರರು ಹೂಡಿದ ಆಕ್ರಮಣವನ್ನು, ಉಗ್ರರ ಉಪಟಳವನ್ನು ಸದೆಬಡಿಯಲು ಯುದ್ಧ ಮಾಡಿದರು. ಅದನ್ನೇ ಜಿಹಾದ್ ಎಂದು ಕರೆದರು. ಇಷ್ಟು ಯುದ್ಧದಲ್ಲಿ ಭಾಗಿಯಾಗಿ ಶಾಂತಿ ನೆಲೆಸಲೆಂದು ಯಹೂದಿಯರೊಡನೆ ಅನೇಕ ಸಂಧಾನಗಳನ್ನು ನಡೆಸಿದರು.

ಒಮ್ಮೆ ಸಂಧಾನಕ್ಕೆ ಬಂದಿದ್ದ ಯಹೂದಿಗಳು ಪೈಗಂಬರರ ಪ್ರತಿನಿಗಳೊಡನೆ ಸಂಧಾನದ ಮಾತುಕತೆಯೂ ನಡೆಸಿದರು. ಯಹೂದಿಗಳು ತಾವು ಹಾಕಿದ ಷರತ್ತುಗಳನ್ನು ಪೈಗಂಬರರು ಒಪ್ಪುವುದಾದರೆ, ಸಂಧಾನಕ್ಕೆ ಸಿದ್ಧರೆಂದು ಹೇಳಿದರು. ಆ ಷರತ್ತುಗಳನ್ನೆಲ್ಲ ಬರೆದು ಪೈಗಂಬರರಿಗೆ ತೋರಿಸಿದಾಗ, ಆ ಷರತ್ತುಗಳನ್ನೆಲ್ಲ ಪೈಗಂಬರರು ಒಪ್ಪಿ, ಯಹೂದಿಗಳಿಂದ ಸಹಿ ಮಾಡಿಸಿಕೊಂಡು ಬರುವಂತೆ ಹೇಳಿದರು. ಪೈಗಂಬರರ ಪ್ರತಿನಿಗಳು ಆ ಒಡಂಬಡಿಕೆ ಕರಾರು ಪತ್ರವನ್ನು ತೆಗೆದುಕೊಂಡು ಹೋಗಿ ಇದಕ್ಕೆ ಸಹಿ ಮಾಡಬೇಕೆಂದು ತಿಳಿಸಿದರು.

ಆಗ ಯಹೂದಿಗಳು ನಾವು ಇದಕ್ಕೆ ಸಹಿ ಮಾಡುವುದಿಲ್ಲ ಎಂದು ಸಂಧಾನಕ್ಕೆ ಒಪ್ಪಲಿಲ್ಲ. ಆದ್ದರಿಂದ ಪೈಗಂಬರರ ಪ್ರತಿನಿಗಳು ಮತ್ತೆ ಪೈಗಂಬರರ ಬಳಿಹೋಗಿ ಯಹೂದಿಗಳು ಸಂಧಾನಕ್ಕೆ ಒಪ್ಪುವುದಿಲ್ಲ ಯುದ್ಧ ಅನಿವಾರ್ಯ ಎಂದು ಕಾಣುತ್ತದೆ ಎಂದರು. ‘‘ಏಕೆ ಸಹಿ ಮಾಡುವುದಿಲ್ಲ’’ ಎಂದು ಪೈಗಂಬರರು ಕೇಳಿದರು. ‘‘ಈ ಕರಾರು ಪತ್ರದ ಮೇಲ್ಪಂಕ್ತಿಯಲ್ಲಿ ‘‘ಅಲ್ಲಾನೊಬ್ಬನೇ ದೇವರು, ಅಲ್ಲಾನಲ್ಲದೆ ದೇವರಿಲ್ಲ (ಲಾ ಇಲಾಹಿ ....) ಎಂದಿದೆ’’ ಅದಕ್ಕೆ ಎಂದರು. ಆಗ ಪೈಗಂಬರರು, ‘‘ಕರಾರು ಪತ್ರದಲ್ಲಿ ಆ ವಾಕ್ಯ ಎಲ್ಲಿದೆ? ತೋರಿಸಿ ಎಂದು, ಆ ವಾಕ್ಯವನ್ನು ಒಡೆದು’’ ಹಾಕಿದರು. ಆಗ ಅವರ ಶಿಷ್ಯರು ದಿಗ್ಭಾ†ಂಥರಾದರು. ಯಾವ ಧರ್ಮಸೂತ್ರವನ್ನು ಸ್ಥಾಪಿಸಲಿಕ್ಕಾಗಿ ಇಷ್ಟು ಯುದ್ಧ ಮಾಡಿದ್ದರೋ, ಆ ವಾಕ್ಯವನ್ನೇ ಪೈಗಂಬರರು ಒಡೆದು ಹಾಕಿದರು. ಅವರ ಶಿಷ್ಯರು ‘‘ನೀವೇ ಜೀವನಾದ್ಯಂತ ಸ್ಥಾಪಿಸಲು ಬಯಸಿದ ಸತ್ಯವನ್ನು ನೀವೇ ಅಳಿಸಿದರೆ ಏನಿದು’’ ಎಂದು ಕೇಳಿದರು. ಅದಕ್ಕೆ ಪೈಗಂಬರರು, ‘‘ಈ ಕರಾರು ಪತ್ರದ ಶಿರೋನಾಮೆಯಲ್ಲಿ ಬರೆದರೆ ಮಾತ್ರ ಅಲ್ಲಾನೊಬ್ಬನೇ ದೇವರು, ಇಲ್ಲದಿದ್ದರೆ ಇಲ್ಲ ಎಂದೇ, ಆ ವಾಕ್ಯ ಒಡೆದು ಹಾಕಿದ್ದಕ್ಕೆ ಅಲ್ಲಾನೊಬ್ಬನೇ ದೇವರು ಎಂಬ ಮಾತು ಸುಳ್ಳಾಗದು. ಅಲ್ಲಿ ಬರೆದರೂ, ಬರೆಯದಿದ್ದರೂ ಇರುವವನೊಬ್ಬನೇ ಅಲ್ಲಾ, ಅವರು ಸಹಿ ಮಾಡುವುದಾದರೆ ಆ ವಾಕ್ಯವನ್ನು ಅಳಿಸುವುದರಿಂದ ಆ ಸಿದ್ಧಾಂತಕ್ಕೆ ತೊಂದರೆಯಿಲ್ಲ’’ ಎಂದರು. ಶಾಂತಿ ನೆಲೆಸುವುದಾದರೆ ಅವರು ಸಂಧಾನಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುವವರಿದ್ದರು. ಇಂಥವರ ಹೆಸರಿನಲ್ಲಿ ಯುದ್ಧಗಳಾಗುವುದೆಂದರೆ ದುಃಖದ ಸಂಗತಿ.

ಇನ್ನೊಂದು ಪ್ರಸಂಗವನ್ನು ಸ್ಮರಿಸೋಣ. ಇನ್ನೊಂದು ಬಾರಿ ಯಹೂದಿಗಳು ಸಂಧಾನಕ್ಕಾಗಿ ಬಂದರು. ಆ ಬಾರಿ ಸಂಧಾನ ಕುದುರಲಿಲ್ಲ. ಮಕ್ಕಾದಿಂದ ಹೋಗುವಾಗ ಅವರು ತಂಗಿದ್ದ ಮಸೀದಿಯಲ್ಲಿ ಮಲಮೂತ್ರ ವಿಸರ್ಜನೆ ಮಾಡಿ ಹೊರಟು ಹೋಗಿದ್ದರು. ಈ ಹೇಯ ಕೃತ್ಯವನ್ನು ಮಾಡಿದ್ದ ಯಹೂದಿಗಳನ್ನು ಮುಸ್ಲಿಮರು ಬೆನ್ನಟ್ಟಿದರು. ಇದನ್ನು ಕೇಳಿದ ಮುಹಮ್ಮದ್ ಪೈಗಂಬರರು ಬೆನ್ನಟ್ಟಿದವರನ್ನು ಕೂಡಲೇ ವಾಪಸು ಬರುವಂತೆ ಸಂದೇಶ ಕಳಿಸಿದರು. ಅವರು ಬಂದಮೇಲೆ ಅಲ್ಲಿದ್ದ ತಮ್ಮ ಶಿಷ್ಯರನ್ನು ಕರೆದು ‘‘ಒಂದೆರಡು ಬಿಂದಿಗೆ, ಒಂದು ಪೊರಕೆಯನ್ನು ತನ್ನಿ’’ ಎಂದರು. ನಂತರ ಪೈಗಂಬರರು ನೀರಿನಿಂದ ಆ ಹೇಸಿಗೆಯನ್ನು ತೊಳೆದು ನಿಟ್ಟುಸಿರು ಬಿಟ್ಟು ಹೇಳಿದರಂತೆ- ‘‘ಈ ಬಿಂದಿಗೆಯ ನೀರಿನಿಂದ ತೊಳೆಯಬಹುದಾದ ಹೊಲಸನ್ನು ಅರಬ್ಬಿ ಸಮುದ್ರದ ಎಲ್ಲ ನೀರಿನಿಂದಲೂ ತೊಳೆಯಲಾಗದ ರಕ್ತಪಾತವನ್ನೇಕೆ ಮಾಡುತ್ತೀರಿ?.’’ ಹೀಗೆ ತಮ್ಮ ಶತ್ರುಗಳನ್ನು ಕ್ಷಮಿಸಿದರು.

ಇಂಥ 63 ಪ್ರಸಂಗಗಳನ್ನು ಆ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದು ಬಹಳ ನಗಣ್ಯವೆನಿಸುವ ಪ್ರಸಂಗ- ಪೈಗಂಬರರು ಅರಬ್ ರಾಜ್ಯದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದ ಮೇಲೆ ಒಂದು ದಿನ ಒಬ್ಬ ವಿಧವೆ ಅವರ ಸಮ್ಮುಖದಲ್ಲಿ ಬಂದು ನಿಂತರು. ಆಕೆಯನ್ನು ನೋಡಿದ ಪೈಗಂಬರರು ಮುರಿದು ಹೋಗಿದ್ದ ತಮ್ಮ ಒಂದು ಹಲ್ಲನ್ನು ತಮ್ಮ ನಾಲಿಗೆಯಿಂದ ಮುಟ್ಟಿನೋಡಿಕೊಂಡರು. ಆಗ ಆ ಹೆಣ್ಣುಮಗಳು ತನ್ನ ಗಂಡನೇ ಪೈಗಂಬರರಿಗೆ ಕಲ್ಲಿನಿಂದ ಹೊಡೆದು ಮುರಿದ ಹಲ್ಲು ಎಂದು ಆಕೆ ನೆನಪು ಮಾಡಿಕೊಂಡು ಹೆದರಿದಳು. ಆಗ ಪೈಗಂಬರರು ‘‘ಏಕೆ ತಾಯಿ ಹೆದರಿದ್ದೀಯಾ?’’ ಎಂದರು. ಆಗ ಆ ಮಹಿಳೆ ‘‘ತನ್ನ ಗಂಡನೇ ಕಲ್ಲನ್ನು ಹೊಡೆದು ಹಲ್ಲು ಮುರಿದಿದ್ದರು ಆದ್ದರಿಂದ ತನಗೆ ಹೆದರಿಕೆಯಾಯಿತು’’ ಎಂದಳು. ಅದಕ್ಕೆ ಪೈಗಂಬರರು ‘‘ಇಲ್ಲ ತಾಯಿ, ನಿನ್ನ ಗಂಡನ ಮೇಲೆ ನನಗೆ ಸಿಟ್ಟಿಲ್ಲ. ಆತನಿಂದ ನಾನು ಒಂದು ಪಾಠ ಕಲಿತೆ. ಅದೇನೆಂದರೆ, ತಾಳ್ಮೆಯಿರಬೇಕು ಮುರಿದ ಹಲ್ಲನ್ನು ನೋಡಿಕೊಂಡಾಗ ನನಗೆ ತಾಳ್ಮೆ ಬೇಕು ಎಂಬುದು ನೆನಪಾಗುತ್ತದೆ’’ ಎಂದು ಆಕೆಗೆ ಸಮಾಧಾನ ಮಾಡಿ ಕಳಿಸಿದರು. ಕನ್ನಡಕ್ಕೆ ಅನುವಾದವಾದ ಈ ಪುಸ್ತಕವನ್ನು ಯಾರಾದರೂ ಪ್ರಕಟಿಸಿದರೆ ಇನ್ನಿತರೆ ಪ್ರಸಂಗಗಳನ್ನು ಓದಿ ಇಸ್ಲಾಂ ಧರ್ಮ ಬೋಸಿದ ಶಾಂತಿ, ತಾಳ್ಮೆಯ ಪಾಠವನ್ನು ಕಲಿಯಬಹುದು.

Writer - ಕೋ. ಚೆನ್ನಸಬಸಪ್ಪ

contributor

Editor - ಕೋ. ಚೆನ್ನಸಬಸಪ್ಪ

contributor

Similar News