ಬೇರುಗಳು
ಅಲ್ಲಿ ಮುಸ್ಲಿಮ್ ಲೀಗಿನ ಬೆಂಬಲಿಗರಿದ್ದರು. ಹಾಗೆಯೇ ಕಾಂಗ್ರೆಸ್ಸಿನ ಅನುಯಾಯಿಗಳೂ ಇದ್ದರು. ಎರಡೂ ಕುಟುಂಬಗಳಲ್ಲಿ ರಾಜಕೀಯ ಬೆಂಬಲಿಗರಿದ್ದಂತೆ. ಅವರ ಕುಟುಂಬದಲ್ಲಿ ಹಿಂದೂ ಮಹಾಸಭೆಯ ಅಭಿಮಾನಿಗಳೂ ಇದ್ದರು. ಪರಿಣಾಮವಾಗಿ, ಅವರವರ ಕುಟುಂಬಗಳಲ್ಲಿ ಆಗಾಗ ಧರ್ಮ ಮತ್ತು ರಾಜಕಾರಣ ಕುರಿತು ಅತ್ಯಂತ ಉಗ್ರ ವಾದ-ವಿವಾದಗಳು ನಡೆಯುತ್ತಿದ್ದವು. ಆದರೆ ಅವು ಪುಟ್ಬಾಲ್ ಅಥವಾ ಕ್ರಿಕೆಟ್ ಮ್ಯಾಚ್‌ನಲ್ಲಿ ಭಾಗವಹಿಸಿದ್ದಂತೆ ‘ಆಟದ ಸದ್ಭಾವ’ದಿಂದ ಕೂಡಿರುತ್ತಿದ್ದವು.
ನಮ್ಮ ಮುಖಗಳು ಬಣ್ಣ ಕಳೆದುಕೊಂಡು ಬಿಳಿಚಿದ್ದವು. ಅವುಗಳ ಸಹಜ ಬಣ್ಣ ಬಸಿದು ಹೋಗಿ ವಿವರ್ಣವಾಗಿದ್ದವು. ಕಳೆದ ಆರು ದಿನಗಳಿಂದ ಒಲೆ ಹೊತ್ತಿಸಿರಲಿಲ್ಲ. ಅಡುಗೆ ಮಾಡಿರಲಿಲ್ಲ. ಮಕ್ಕಳು ಶಾಲೆಗೆ ಹೋಗದೆ ಮನೆಯಲ್ಲಿಉಳಿದುಕೊಂಡು ಸಾಕಷ್ಟು ಕೀಟಲೆ ಮಾಡುತ್ತ ತಮ್ಮದಷ್ಟೇ ಅಲ್ಲ. ಮನೆಯಲ್ಲಿಯೇ ಪ್ರತಿ ಯೊಬ್ಬರ ಬದುಕನ್ನು ಸಂಕಟಮಯಗೊಳಿಸಿ ದ್ದರು. ಪರಸ್ಪರ ಬಡಿದಾಡುತ್ತ, ಸದ್ದುಗದ್ದಲ ಮಾಡುತ್ತ ಇತ್ತಿಂದತ್ತ ಓಡುತ್ತ ಲಾಗಾಹಾಕುತ್ತ ಎಲ್ಲರಿಗೂ ತಬಾ ಮಾಡಿದ್ದರು. ಆಗಸ್ಟ್ 15 ರಂದು ಏನೂ ಸಂಭವಿಸಿಯೇ ಇಲ್ಲವೇನೋ ಎಂಬಂತೆ ತಮ್ಮದೇ ಆದ ಕೀಟಲೆ, ಸದ್ದುಗದ್ದಲದ ನಿರಾಂತಕ ಪ್ರಪಂಚದಲ್ಲಿ ತೇಲಾಡುತ್ತಿದ್ದರು. ಆ ಬಡಪಾಯಿ ಮಕ್ಕಳಿಗೆ ಬ್ರಿಟಿಷರು ಭಾರತ ವನ್ನು ಬಿಟ್ಟು ಹೋಗಿದ್ದಾರೆಂಬ ಖಬರೂ ಇರಲಿಲ್ಲ! ಅಷ್ಟೇ ಯಾಕೆ, ಅವರು ಬಿಟ್ಟು ಹೋಗುವಾಗ ಎಂದೆಂದೂ ಮಾಯದ ಅತ್ಯಂತ ಆಳವಾದ ಗಾಯವನ್ನುಂಟು ಮಾಡಿ ಹೋಗಿದ್ದರೆಂಬು ವುದೂ ಆ ಮಕ್ಕಳಿಗೆ ಗೊತ್ತಿರಲಿಲ್ಲ. ಭಾರತದ ಮೇಲೆ ಶಸಚಿಕಿತ್ಸೆ ಮಾಡಿದ ಕೈಗಳು ಎಷ್ಟು ಅಪರಿಣಿತವಾಗಿದ್ದವೆಂದರೆ, ಆ ನೈಪುಣ್ಯಹೀನ ಚಿಕಿತ್ಸೆಯ ಪ್ರಕ್ರಿಯೆಯಲ್ಲಿ ಹಲವಾರು ತಲೆ ಮಾರುಗಳೇ ನಾಶವಾಗಿ ಹೋಗಿದ್ದವು. ಎಲ್ಲೆಲ್ಲೂ ರಕ್ತದ ಕಾಲುವೆಗಳು ತುಂಬಿ ಹರಿದವು. ದೇಹದ ತುಂಬಾ ‘ಆ’- ಎಂದು ಬಾಯಿ ತೆರೆದಿದ್ದ ಅನೇಕ ಗಾಯಗಳಿಗೆ ಹೊಲಿಗೆ ಹಾಕುವ ಧೈರ್ಯವನ್ನು ಸಹ ಯಾರೂ ತೋರಲಿಲ್ಲ.
ಅದು ಸಾಮಾನ್ಯ ದಿನವಾಗಿದ್ದರೆ, ಆ ಹಾಳುಕಿಡಿಗೇಡಿ ಮಕ್ಕಳಿಗೆ ಗದರಿಸಿ ಶಾಲೆಗೆ ಕಳಿಸಬಹುದಾಗಿತ್ತು. ‘ಅಲ್ಲಿ ಹೋಗಿ ಬೇಕಾ ದಷ್ಟು ಗದ್ದಲ ಮಾಡಿರಿ. ಕುಣಿಯಿರಿ ಜಿಗಿಯಿರಿ ಮನಬಂದಂತೆ ಹಾರಾಡಿರಿ’ ಎಂದು ಹೇಳಿ ಸ್ಕೂಲಿಗೆ ಅಟ್ಟಬಹುದಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ನಗರದಲ್ಲಿ ವಾತಾವರಣ ತೀರ ಕೆಟ್ಟು ಹೋಗಿತ್ತು. ಪರಿಣಾಮವಾಗಿ,ಎಲ್ಲ ಮುಸ್ಲಿಮರು ಎಲ್ಲೆಲ್ಲಿಯೋ ಅಡಗಿ ಕೂಡುವ ಪರಿಸ್ಥಿತಿ ಬಂದೊದಗಿತ್ತು. ಎಷ್ಟೋ ಮನೆಗಳು ಮುಚ್ಚಿ ಕೀಲಿ ಹಾಕಲಾಗಿದ್ದವು. ಅವುಗಳ ಮುಂದೆ ಪೊಲೀಸರು ಪಹರೆ ನಿಂತಿದ್ದರು. ತಮ್ಮ ಹಳೆಯ ಗಾಯದ ಮೇಲೆ ಯಾರೋ ಉಪ್ಪು ಹಾಕಿ ತಿಕ್ಕುತ್ತಿದ್ದಾರೇನೋ ಎಂಬ ಭಾವನೆ ಮುಸ್ಲಿಮರಲ್ಲಿ ಮೊಳೆಯತೊಡ ಗಿತ್ತು. ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಯಥಾಪ್ರಕಾರ ಎಲ್ಲವೂ ಶಾಂತವಾಗಿತ್ತು. ಆದರೆ ಆ ಮಾತು ನಗರದ ಉಳಿದ ಭಾಗಗಳಿಗೆ ಅನ್ವಯಿಸುವಂತಿರಲಿಲ್ಲ.ಸಾಮಾನ್ಯವಾಗಿ ಹೊಲಸು ತುಂಬಿ ತುಳುಕುವುದು ಕೊಳೆಗೇರಿಗಳಲ್ಲಿಯೇ ಅಲ್ಲವೇ? ಅಂತೆಯೇ, ದ್ವೇಷ ತುಂಬಿ ತುಳುಕುವುದು ಕೂಡ ಅಜ್ಞಾನ ಮತ್ತು ಬಡತನ ಮಡುವುಗಟ್ಟಿದ್ದ ಸ್ಥಳದಲ್ಲಿಯೇ! ಇಂಥ ಸ್ಥಳಗಳಲ್ಲಿಯೇ, ಇಂಥ ಜನಗಳ ಮಧ್ಯದಲ್ಲಿಯೇ ಧರ್ಮೋನ್ಮಾದದ ವಿಷವೃಕ್ಷ ಟಿಸಿಲೊಡೆದು ಪಸರಿಸಿ, ದಿಕ್ಕು ದಿಕ್ಕಿಗೂ ಬೆಳೆಯುವುದು ಸಹಜವಾಗಿತ್ತು. ಹಾಗೆಂದೇ ಬಡವರು ಬದುಕುತ್ತಿದ್ದ ಕೊಳೆಗೇರಿಗಳೆಲ್ಲ ಧರ್ಮೋನ್ಮಾದದ ದಳ್ಳುರಿಯಲ್ಲಿ ಧಗ ಧಗಿಸುತ್ತಿದ್ದವು. ಇಡೀ ವಾತಾವರಣ ಮಲಿನಗೊಂಡು ನಾರುತ್ತಿತ್ತು. ಇದಕ್ಕೆ ಕಳಸವಿಟ್ಟಂತೆ ಪ್ರತಿದಿನವೂ ಪಂಜಾಬಿನಿಂದ ಹರಿದು ಬರುತ್ತಿದ್ದ ನಿರಾಶ್ರಿತರ, ಸಂತ್ರಸ್ತರ ಸಂಖ್ಯಾ ಮಾಪೂರ ಅಲ್ಪಸಂಖ್ಯಾತ ಸಮುದಾಯದವರ ಎದೆಯಲ್ಲಿ ಭೀತಿ ಉಲ್ಬಣಗೊಳ್ಳುವಂತೆ ಮಾಡುತ್ತಿತ್ತು.
ಈಗಾಗಲೇ ಎರಡು ಗಲಭೆಗಳು ಕಾಣಿಸಿಕೊಂಡಿದ್ದವು. ಆದರೆ ಮೇವಾ ಡದಲ್ಲಿ ಹಿಂದೂ ಮುಸ್ಲಿಮ್‌ರ ಸ್ನೇಹದ ಬದುಕು ಎಷ್ಟು ಗಾಢವಾಗಿತ್ತೆಂದರೆ, ಅವರ ಹೆಸರು, ಮುಖ ಲಕ್ಷಣ, ವೇಷ-ಭೂಷಣಗಳಿಂದ ಯಾರು ಯಾರೆಂದು ಗುರುತಿಸುವುದೇ ಕಷ್ಟವಾಗಿತ್ತು. ಸೌಹಾರ್ದತೆಯಿಂದ ಎಲ್ಲರೂ ಕೂಡಿಯೇ ಬಾಳುತ್ತಿದ್ದರು; ಅದೊಂದು ರೀತಿಯ ಸಾಂಸ್ಕೃತಿಕ ಸಮ್ಮಿಶ್ರ ಬದುಕು. ಉಳಿದ ವರಿಂದ ಭಿನ್ನರೆಂದು ಗುರುತಿಸಬಹುದಾಗಿದ್ದ ಜನರು ಈಗಾಗಲೇ ಮೇವಾಡ ಬಿಟ್ಟು ಪಾಕಿಸ್ತಾನಕ್ಕೆ ಹೊರಟು ಹೋಗಿದ್ದರು. ಆಗಸ್ಟ್ 15ರಂದು ಏನೋ ಸಂಭವಿಸಲಿದೆ ಎನ್ನುವುದರ ಸುಳಿವು ಸಿಕ್ಕಿದ್ದೇ ತಡ ಅವರೆಲ್ಲ ಅಲ್ಲಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು. ಇನ್ನೂ ಹಲವಾರು ತಲೆಮಾರುಗಳಿಂದ ಈ ಪ್ರದೇಶದಲ್ಲಿ ಬದುಕು ಸಾಗಿಸುತ್ತಿದ್ದ ಅನೇಕರಿಗೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮಸ್ಯೆಯ ನೈಜ ಸ್ವರೂಪ, ಸ್ವಭಾವದ ಪ್ರಜ್ಞೆಯಾಗಲಿ, ಅದನ್ನು ತಿಳಿದುಕೊಳ್ಳುವ ತಾಕತ್ತಾಗಲಿ ಎಳಷ್ಟೂ ಇರಲಿಲ್ಲ. ಮೇಲಾಗಿ, ಅಲ್ಲಿ ಅದನ್ನು ಅವರಿಗೆ ವಿವರಿಸಿ ಹೇಳುವ ಜನರೂ ಇರಲಿಲ್ಲ.
ಕೆಲವರು ಅನೇಕ ಕಥೆ ವದಂತಿಗಳಿಗೆ ಕಿವಿಗೊಟ್ಟು ಪಾಕಿಸ್ತಾನಕ್ಕೆ ಪಯಣ ಬೆಳೆಸಿದ್ದರೆ, ಇನ್ನೂ ಕೆಲವರು ಯಾವ್ಯಾವುದೋ ಆಸೆ ಆಮಿಷಗಳಿಗೆ ಬಲಿಬಿದ್ದು ಆ ಕಡೆಗೆ ಹೆಜ್ಜೆ ಹಾಕಿದ್ದರು. ಪಾಕಿಸ್ತಾನದಲ್ಲಿ ರೂಪಾಯಿಗೆ ನಾಲ್ಕು ಸೇರು ಗೋ, ನಾಲ್ಕಾಣೆಗೆ ಒಂದು ಅಂಗೈ ಅಂಗಲದ ನಾನ್ ಇತ್ಯಾದಿ ಇತ್ಯಾದಿ ಅತ್ಯಂತ ಅಗ್ಗದ ಬೆಲೆಗೆ ದೊರೆಯಲಿವೆ ಎಂಬಂತಹ ಮರೀಚಿಕೆಯ ಬೆಂಬತ್ತಿ ಪಾಕಿಸ್ತಾನದ ಕಡೆಗೆ ಪಾದ ಬೆಳೆಸಿದ್ದರು. ಅಂಥವರಲ್ಲಿ ಅನೇಕರು ಈಗ ಮತ್ತೆ ಹಿಂದಿರುಗಿ ಬರತೊಡಗಿದ್ದರು. ಯಾಕೆಂದರೆ, ಒಮ್ಮೆ ಪಾಕಿಸ್ತಾನಕ್ಕೆ ಮುಟ್ಟಿದ ತಕ್ಷಣ ಅವರಿಗೆ ಅರಿವಾದದ್ದು; ರೂಪಾಯಿಗೆ ನಾಲ್ಕು ಸೇರು ಗೋದಿ ದೊರೆಯುತ್ತಿದ್ದದ್ದೇನೋ ಸತ್ಯವೇ. ಅಂತೆಯೇ, ಅತ್ಯಂತ ಅಗ್ಗದ ಬೆಲೆಗೆ ಅಂಗೈ ಅಗಲದ ನಾನ್‌ಗಳು ಕೂಡ ದೊರೆಯುತ್ತಿದ್ದವು. ಆದರೆ ಖರೀದಿಸಲು ಹಣ ಕೊಡಲೇ ಬೇಕಾಗಿತ್ತು. ಹಣ ಎಲ್ಲಿಂದ ತರುವುದು! ಅದು ಹೊಲಗದ್ದೆಗಳಲ್ಲಿ ಬೆಳೆಯುವುದಲ್ಲ. ಅಂಗಡಿಗಳಲ್ಲಿ ಖರೀದಿಸಿದೆ. ದೊರೆಯುವುದಲ್ಲ. ಹಣ ಸಿಗಬೇಕಾದರೆ ದುಡಿಯಬೇಕು. ದುಡಿಯಲು ದುಡಿಮೆಗೆ ಅವಕಾಶವಿರಬೇಕು. ಅವಕಾಶವಿರಲಿಲ್ಲ. ಆದ್ದರಿಂದ ಅವರು ದುಡಿಯಲಿಲ್ಲ. ದುಡಿಮೆಯಿಲ್ಲದೆ ಹಣ ದೊರೆಯಲಿಲ್ಲ. ತಮ್ಮ ಜೀವನಾವಶ್ಯಕ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಹಣ ಬೇಕೇ ಬೇಕಿತ್ತು. ಎಷ್ಟು ಹಿಕ್ಮತ್ತಿನಿಂದ ಹೆಣಗಾಡಿದರೂ ಹಣ ಅವರಿಗೆ ಎಟುಕಲೇ ಇಲ್ಲ. ಪರಿಣಾಮವಾಗಿ, ಹಿಂದಿರುಗಿ ಬರುವವರ ಪ್ರವಾಹ ಬೆಳೆಯುತ್ತಲೇ ಹೋಯ್ತು.
ನಮ್ಮ ಪ್ರದೇಶದಿಂದ ಮುಸ್ಲಿಮರನ್ನು ಹೊರಹಾಕಬೇಕೆಂಬ ಘೋಷಣೆಗಳು ಖುಲ್ಲಂಖಲ್ಲಾ ಮೊಳಗತೊಡಗಿದಾಗ ಇದ್ದಕ್ಕಿದ್ದಂತೆ ಅನೇಕ ಕಷ್ಟಗಳು ಹುಟ್ಟಿಕೊಂಡವು. ಠಾಕೂರರು ಆ ಘೋಷಣೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು. ಯಾಕೆಂದರೆ ಅಲ್ಲಿಯ ಜನಪದರ ಗುರುತಿಸಲು ಅನೇಕ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕಾಗುತ್ತಿತ್ತು. ಠಾಕೂರರ ಪ್ರಕಾರ ಅದೆಲ್ಲ ಸುಮ್ಮನೆ ಹಣದ ಅಪವ್ಯಯ. ಅದರ ಬದಲಾಗಿ ಅದೇ ಹಣವನ್ನು ಬಳಸಿ ನಿರಾಶ್ರಿತರಿಗೆ ಅರಣ್ಯ ಭೂಮಿಯನ್ನು ಖರೀದಿಸಿ ಕೊಡಬಹುದು. ಅದಕ್ಕಾಗಿ ತಾವು ಉದಾರ ಕೈಯಿಂದ ಸಾಕಷ್ಟು ಸಹಾಯ ಮಾಡಲು ಸಿದ್ಧ ಎಂದರು. ಹೇಗಿದ್ದರೂ ಅರಣ್ಯಗಳಲ್ಲಿ ಕೇವಲ ಪ್ರಾಣಿಗಳು ಮಾತ್ರ ವಾಸಿಸುತ್ತಿದ್ದವು. ಅವಶ್ಯವಿರುವಲ್ಲೆಲ್ಲಾ ಅವುಗಳನ್ನು ಬೇರೆಡೆಗೆ ಓಡಿಸಿ ಭೂಮಿ ಕೃಷಿ ಮಾಡಬಹುದೆನ್ನುವುದು ಅವರ ಅನಿಸಿಕೆ.
ಹೋಗಬಯಸಿದ್ದವರೆಲ್ಲ ಹೋದ ಮೇಲೂ ಅಲ್ಲಿ ಕೆಲವು ಸುಸ್ಥಾಪಿತ ಮುಸ್ಲಿಮರ ಕುಟುಂಬಗಳು ಉಳಿದಿದ್ದವು. ಅವರೆಲ್ಲ ಸಮಾಜದ ಉಳ್ಳವರ ಪೈಕಿ-ಕೆಲವರು ಸರಕಾರಿ ನೌಕರರಾಗಿದ್ದರೆ, ಇನ್ನು ಹಲವರು ಮಹಾರಾಜನ ನೆಚ್ಚಿನವರಾಗಿದ್ದರು. ಹಾಗಾಗಿ ಅವರೆಲ್ಲ ಅಲ್ಲಿಂದ ತೊಲಗುವ ಪ್ರಶ್ನೆಯೇ ಉದ್ಭವಿಸಲಿಲ್ಲ. ಇವರ ಹೊರತಾಗಿ ಅಲ್ಲಿ ಇನ್ನೂ ಕೆಲವು ಮುಸ್ಲಿಮ್ ಕುಟುಂಬಗಳಿದ್ದವು. ಅವರೆಲ್ಲ ಭಾರತವೋ ಪಾಕಿಸ್ತಾನವೋ, ಒಟ್ಟಿನಲ್ಲಿ ಅಲ್ಲಿಂದ ಕದಲದೆ ಅಲ್ಲಿಯೇ ಇದ್ದುಬಿಡಲು ನಿರ್ಧರಿಸಿದ್ದರು ಮತ್ತು ಅವರ ನಿರ್ಧಾರ ಅಚಲವಾಗಿತ್ತು. ಅಂಥವರ ಪೈಕಿ ನಮ್ಮ ಕುಟುಂಬವೂ ಒಂದು. ಪರಿಣಾಮವಾಗಿ, ನಾವೇನೂ ಹೊರಡುವ ಅವಸರದಲ್ಲಿರಲಿಲ್ಲ.
ಆದರೆ ಬರಬರುತ್ತ, ಪರಿಸ್ಥಿತಿ ಬದಲಾಗಹತ್ತಿತ್ತು. ದೊಡ್ಡಣ್ಣ ಅಜ್ಮೀರ್‌ನಿಂದ ಬಂದ ತಕ್ಷಣವೇ ಮನೆಯ ವಾತಾವರಣವೇ ಬದಲಾಯಿತು. ಅವನು ಮನೆಯಲ್ಲಿದ್ದ ಪ್ರತಿಯೊಬ್ಬರನ್ನೂ ಹುರಿದುಂಬಿಸಿದನು. ಭಾವೋದ್ವೇಗದ ಮಾತುಗಳನ್ನಾಡಿ ಮನೆ ಮಂದಿಯ ಕೋಪಾಗ್ನಿಗೆ ಆಜ್ಯ ಹೊಯ್ದನು. ಆವೇಶ ಉನ್ಮಾದಗೊಂಡು ಅವರು ವಿವೇಕವನ್ನೇ ಕಳೆದುಕೊಳ್ಳುವಂತೆ ಮಾಡಿದನು. ಅಷ್ಟಾಗಿಯೂ ಮನೆಯಲ್ಲಿ ಯಾರೊಬ್ಬರೂ ಪಾಕಿಸ್ತಾನಕ್ಕೆ ವಲಸೆ ಹೋಗುವ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಛಬ್ಬಾ ಮಿಂಯಾ-ದೇವರು ಅವನನ್ನು ಕರುಣೆಯಿಂದ ಕಾಪಾಡಲಿ-ದಾಂಧಲೆಯನ್ನು ಬಡಿದೆಬ್ಬಿಸಿರದಿದ್ದರೆ, ಸುಮ್ಮ ಸುಮ್ಮನೆ ಸಮಸ್ಯೆಯೊಂದನ್ನು ಸೃಷ್ಟಿಸಿರದಿದ್ದರೆ, ಯಾರೊಬ್ಬರೂ ದೊಡ್ಡಣ್ಣನ ಮಾತಿಗೆ ಸೊಪ್ಪು ಹಾಕುತ್ತಿರಲಿಲ್ಲ. ಅಂತೂ ಇಂತೂ ದೊಡ್ಡಣ್ಣ ಮಾತ್ರ ಬಿಟ್ಟು ಹೋಗುವ ನಿರ್ಧಾರ ಮಾಡಿದನು. ಅವನು ನಮ್ಮ ಜೊತೆ ವಾದ ಮಾಡುವಷ್ಟು ಮಾಡಿ, ಕೊನೆಗೆ ಸೋಲೊಪ್ಪಿಕೊಂಡು ವಾದಕ್ಕಿಳಿಯುವುದನ್ನೇ ನಿಲ್ಲಿಸಿಬಿಟ್ಟನು. ವಿಷಾದನೀಯ ಸಂಗತಿಯೆಂದರೆ, ಒಂದು ದಿನ ಛಬ್ಬಾ ಮಿಂಯಾ ಶಾಲೆಯ ಗೋಡೆಯ ಮೇಲೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಗೀಚಲು ನಿರ್ಧರಿಸಿದನು.
ರೂಪ್‌ಚಂದ್‌ಜೀಯ ಮಕ್ಕಳು ಅದನ್ನು ವಿರೋಸಿದರು. ವಿರೋಧ ಲೆಕ್ಕಿಸದೆ ಅವನು ಬರೆದೇ ಬಿಟ್ಟನು-‘ಪಾಕಿಸ್ತಾನ್ ಜಿಂದಾಬಾದ್’. ತಕ್ಷಣವೇ ಅವರು ಆ ಘೋಷಣೆಯನ್ನು ಅಳಿಸಿ, ‘ಅಖಂಡ ಹಿಂದೂಸ್ತಾನ್’ ಎಂದು ಬರೆದರು. ಅದರಿಂದ ಜಗಳ ಶುರುವಾಯ್ತು. ಎರಡೂ ಗುಂಪುಗಳು ಪರಸ್ಪರರನ್ನು ನಿರ್ನಾಮ ಮಾಡುವುದಾಗಿ ಪ್ರಮಾಣ ಮಾಡಿದವು. ‘ಈ ಭೂಮಿಯ ಮೇಲೆ ನಿಮ್ಮ ಗುರುತೇ ಇಲ್ಲದಂತೆ ಅಳಿಸಿ ಹಾಕುತ್ತೇವೆ’-ಎಂದು ಇವರು ಉತ್ಕಂಠರಾಗಿ ಅಬ್ಬರಿಸಿದರೆ, ‘ನಿಮ್ಮನ್ನು ನಾಮೋ ನಿಶಾನ್ ನಿರ್ನಾಮ ಮಾಡುತ್ತೇವೆ’- ಎಂದು ಅವರು ಗರ್ಜಿಸಿದರು. ಪರಿಸ್ಥಿತಿ ಕೈಮೀರಿ ಹೋಯಿತು. ಕೂಡಲೇ ಪೊಲೀಸರನ್ನು ಕರೆಯಬೇಕಾ ಯಿತು. ಅವರು ಗಲಭೆ ಆರಂಭಿಸಿದ್ದ ಕೆಲವು ಮುಸ್ಲಿಮ್ ಹುಡುಗರನ್ನು ತದಕಿ ತಹಬಂದಿಗೆ ತಂದು ಮನೆಗೆ ಅಟ್ಟಿದರು.
ಮಕ್ಕಳು ಮನೆಗೆ ಬಂದೊಡನೆಯೇ ಹೈಜಾ ಟೌನಿನ ತಾಯಂದಿರು ದಡಬಡಿಸಿ ಹೊರಬಂದು ತಮ್ಮ ತಮ್ಮ ಅಕ್ಕರೆಯ ಮಕ್ಕಳನ್ನು ಅಪ್ಪಿಕೊಂಡರು. ಆದರೆ ಈ ಹಿಂದೆ ಛಬ್ಬಾ, ರೂಪ್‌ಚಂದ್‌ಜೀಯ ಮಕ್ಕಳೊಡನೆ ಜಗಳವಾಡಿ ಮನೆಗೆ ತಿರುಗಿ ಬಂದಾಗಲೆಲ್ಲ ಅವನ ತಾಯಿ ಅವನಿಗೆ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಚೆನ್ನಾಗಿ ಬೈದು, ರೂಪ್‌ಚಂದ್‌ಜೀಯ ಮನೆಗೆ ಹೋಗಿ ಒಂದಿಷ್ಟು ಹರಳೆಣ್ಣೆ ಮತ್ತು ಕ್ವಿನಾಯಿನ್ ಇಸಿದುಕೊಂಡು ಬರಲು ತಿರುಗಿ ಕಳುಹಿಸುತ್ತಿದ್ದಳು. ರೂಪ್‌ಚಂದ್‌ಜೀ ಕೇವಲ ನಮ್ಮ ್ಯಾಮಿಲಿ ಡಾಕ್ಟರ್ ಅಷ್ಟೇ ಅಲ್ಲದೆ ಅವರು ನನ್ನ ತಂದೆಯ ಆತ್ಮೀಯ ಗೆಳೆಯರೂ ಆಗಿದ್ದರು. ಅವರ ಗಂಡುಮಕ್ಕಳು ಮತ್ತು ನಮ್ಮ ಕುಟುಂಬದ ಹುಡುಗರ ಮಧ್ಯೆ ಅನನ್ಯ ಗೆಳೆತನವಿತ್ತು. ಅವರ ಮನೆಯ ಮಹಿಳೆಯರು ನಮ್ಮ ಕುಟುಂಬದ ಮಹಿಳೆಯರೊಂದಿಗೆ ಚಿಕ್ಕ ಮಕ್ಕಳೂ ಕೂಡ ಪರಸ್ಪರ ಸ್ನೇಹ ಸಲುಗೆ ಬೆಳೆಸಿಕೊಂಡಿದ್ದವು. ಹೀಗಾಗಿ ಬಹುದೀರ್ಘಕಾಲದಿಂದ ಎರಡೂ ಕುಟುಂಬಗಳ ಬದುಕು ಅವಿಭಾಜ್ಯವಾಗಿ ಹೆಣೆದುಕೊಂಡಿತ್ತು. ಈ ಎರಡೂ ಕುಟುಂಬಗಳ ಮೂರೂ ತಲೆಮಾರುಗಳು ಎಷ್ಟು ಅನ್ಯೋನ್ಯವಾಗಿ, ಆತ್ಮೀಯವಾಗಿ ಬದುಕುತ್ತಿದ್ದವೆಂದರೆ, ವಿಭಜನೆಯ ನಂತರ ಅವರ ಮಧ್ಯೆ ಇಂತಹ ಕಾದಾಟ ಕಾಣಿಸಿಕೊಂಡು ಬೆಸೆಯಲಸಾಧ್ಯವಾದ ಒಂದು ಬಿರುಕು ಬೆಳೆಯ ಬಹುದೆಂದು ಯಾರೂ ಭಾವಿಸಿರಲಿಲ್ಲ.
ಅಲ್ಲಿ ಮುಸ್ಲಿಮ್ ಲೀಗಿನ ಬೆಂಬಗಲಿಗರಿದ್ದರು. ಹಾಗೆಯೇ ಕಾಂಗ್ರೆಸ್ಸಿನ ಅನುಯಾಯಿಗಳೂ ಇದ್ದರು. ಎರಡೂ ಕುಟುಂಬಗಳಲ್ಲಿ ರಾಜಕೀಯ ಬೆಂಬಲಿಗರಿದ್ದಂತೆ. ಅವರ ಕುಟುಂಬದಲ್ಲಿ ಹಿಂದೂ ಮಹಾಸಭೆಯ ಅಭಿಮಾನಿಗಳೂ ಇದ್ದರು. ಪರಿಣಾಮವಾಗಿ, ಅವರವರ ಕುಟುಂಬಗಳಲ್ಲಿ ಆಗಾಗ ಧರ್ಮ ಮತ್ತು ರಾಜಕಾರಣ ಕುರಿತು ಅತ್ಯಂತ ಉಗ್ರವಾದ ವಾದ-ವಿವಾದಗಳು ನಡೆಯುತ್ತಿದ್ದವು. ಆದರೆ ಅವು ಪುಟ್ಬಾಲ್ ಅಥವಾ ಕ್ರಿಕೆಟ್ ಮ್ಯಾಚ್‌ನಲ್ಲಿ ಭಾಗವಹಿಸಿದ್ದಂತೆ ‘ಆಟದ ಸದ್ಭಾವ’ದಿಂದ ಕೂಡಿರುತ್ತಿದ್ದವು. ಉದಾಹರಣೆಗೆ: ನನ್ನ ತಂದೆ ಕಾಂಗ್ರೆಸಿಗರಾಗಿದ್ದರೆ, ಡಾಕ್ಟರ್ ಸಾಹೇಬರು ಮತ್ತು ನನ್ನ ಜ್ಯೇಷ್ಠ ಸಹೋದರ ಮುಸ್ಲಿಮ್ ಲೀಗಿನ ಕಟ್ಟಾ ಬೆಂಬಲಿಗರಾಗಿದ್ದರು.
ಜ್ಞಾನ್‌ಚಂದ್ ಮಹಾಸಭೆಯ ಅಭಿಮಾನಿ ಯಾಗಿದ್ದರೆ, ನನ್ನ ಕಿರಿಯ ಸಹೋದರ ಒಬ್ಬ ಕಮ್ಯೂನಿಸ್ಟ್‌ನಾಗಿದ್ದ. ಅದಕ್ಕೆ ಪ್ರತಿಯಾಗಿ, ಗುಲಾಬ್‌ಚಂದ್ ಸಮಾಜವಾದಿ ಯಾಗಿದ್ದ. ಇನ್ನು ಮಕ್ಕಳು ಮತ್ತು ಮಹಿಳೆಯರು ತಮ್ಮ ತಮ್ಮ ತಂದೆ ತಾಯಂದಿರ ಅಥವಾ ತಮ್ಮ ತಮ್ಮ ಗಂಡಂದಿರ ಪಕ್ಷಗಳ ಬೆಂಬಲಿಗರಾಗಿರುತ್ತಿದ್ದರು. ಸಾಮಾನ್ಯವಾಗಿ ವಾದ-ವಿವಾದ ತಾರಕಕ್ಕೇರಿ ದಾಗ, ಬಹುಸಂಖ್ಯಾತರು ಕಾಂಗ್ರೆಸಿನ ಬೆಂಬಲಕ್ಕೆ ನಿಲ್ಲುತ್ತಿದ್ದರು. ಕಮ್ಯೂ ನಿಸ್ಟರು ಮತ್ತು ಸೋಷಲಿಸ್ಟ್‌ರು ಎಲ್ಲರನ್ನು ಜೋರಾಗಿ ಬೈಯುತ್ತಿದ್ದರಾದರೂ, ಕೊನೆಗೆ ಕಾಂಗ್ರೆಸ್ಸಿನ ಬೆಂಬಲಕ�