ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ ನಾಡು, ನುಡಿಗೆ ಧಕ್ಕೆಯಾದಾಗ ಅನ್ಯಭಾಷಿಕರು ಕೈಜೋಡಿಸಲಿ

Update: 2016-10-14 18:28 GMT

ಬೆಂಗಳೂರು, ಅ.14: ಕನ್ನಡೇತರರು ಬೆಂಗಳೂರು ನಗರದಲ್ಲಿ ನೆಲ, ಜಲ ಹಾಗೂ ಕೆಲಸದಿಂದ ತಮ್ಮ ಬದುಕನ್ನು ಕಟ್ಟಿಕೊಂಡಂತೆ ಯೇ ಕನ್ನಡ ನಾಡು ನುಡಿಗೆ ತೊಂದರೆಯಾದಾಗ ಕನ್ನಡಿಗರೊಂದಿಗೆ ಕೈಜೋಡಿಸಬೇಕು ಎಂದು ಮಾಜಿ ಸಚಿವೆ, ಸಾಹಿತಿ ಡಾ.ಲೀಲಾ ದೇವಿ ಆರ್. ಪ್ರಸಾದ್ ಕರೆ ನೀಡಿದ್ದಾರೆ.

          
ಶುಕ್ರವಾರ ನಗರದ ಪುರಭವನದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಬೆಂಗಳೂರು ನಗರ ಜಿಲ್ಲಾ 10ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.ತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ನಾವು ಕನ್ನಡಿಗರು ಕನ್ನಡ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಈ ರೀತಿಯ ಸಂಸ್ಕೃತಿಗೆ ಕಡಿವಾಣ ಹಾಕಲು ಕನ್ನಡೇತರರು ಕನ್ನಡಿಗರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ನ್ನಡ ನಾಡಿನ ಪ್ರಮುಖ ಭಾಗವಾದ ಬೆಳಗಾವಿ ಜಿಲ್ಲೆ ಕನ್ನಡಮ್ಮನ ಒಂದು ಅಂಗವಾಗಿದ್ದು, ಬೆಳಗಾವಿ ಕನ್ನಡದ್ದೆಂದು ತೀರ್ಮಾನಿಸಲು ಕೇಂದ್ರ ಸರಕಾರವು ಮಹಾಜನ್ ಕಮಿಷನ್ ನೇಮಿಸಿತ್ತು ಹಾಗೂ ಮಹಾಜನ್ ಕೂಡ ಮಹಾರಾಷ್ಟ್ರದವರೇ ಆಗಿದ್ದರು. ಆದರೆ, ನಾನು ಕನ್ನಡತಿಯಾಗಿ ಮಹಾಜನ್ ಅವರು ಬೆಂಗಳೂರಿಗೆ ಬಂದಾಗ ಅವರ ಮುಂದೆ ಬೆಳಗಾವಿ ನಮ್ಮದು ಎಂದು ಸಾಕ್ಷಿ ಹೇಳಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿಯೇ ಉಳಿದಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
  


ಬೆಂಗಳೂರು ನಗರ ಪಾಲಿಕೆಗೆ 1957ರಲ್ಲಿ ಅವಿರೋಧವಾಗಿ ಆಯ್ಕೆಯಾದ ತಕ್ಷಣ ಬೆಂಗಳೂರಿನ ಎಲ್ಲ ಬಡಾವಣೆಯಲ್ಲಿ 100 ಕನ್ನಡ ನರ್ಸರಿ ಶಾಲೆಗಳನ್ನು ಹುಟ್ಟು ಹಾಕಿ, ಅದಕ್ಕೆ ಬೇಕಾದ ಉಪಾಧ್ಯಾಯರನ್ನು ನೇಮಿಸಲಾಗಿತ್ತು. ಅಂದಿನ ನನ್ನ ಶಿಕ್ಷಣದ ಪರಿಕಲ್ಪನೆಯಂತೆಯೇ ಎಳೆಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಕನ್ನಡದಲ್ಲಿ ಪ್ರಾರಂಭಿಸಿ ಉಳಿಸಿಕೊಂಡು ಬಂದಿದ್ದರೆ, ಇಂದು ಕನ್ನಡ ಶಾಲೆಗಳು ಮುಚ್ಚುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಹಕಾರ ಕ್ಷೇತ್ರ ಮಹಿಳೆಯರ ಬದುಕಿಗೆ ಬಹಳ ಹತ್ತಿರವಾದ ಕ್ಷೇತ್ರವಾಗಿದ್ದು, ಮಹಿಳೆಯರೆಲ್ಲರೂ ಸೇರಿ ಸೋದರಿ ಗ್ರಾಹಕರ ಸಹಕಾರ ಸಂಘವನ್ನು ಹುಟ್ಟು ಹಾಕಿ ಪ್ರಪ್ರಥಮ ಬಾರಿಗೆ ಆಹಾರಧಾನ್ಯಗಳನ್ನು ವಿತರಿಸಿದ್ದು ಇನ್ನೂ ನೆನಪಿದೆ ಎಂದು ಹೇಳಿದರು. ನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತ ನಾಡಿ, ಕನ್ನಡವು 1ನೆ ಶತಮಾನದಿಂದಲೇ ಸಂಸ್ಕೃತ, ತಮಿಳು ಸೇರಿ ದಂತೆ ಇತರೆ ಭಾಷೆಗಳಿಗೆ ಸಹಕಾರಿಯಾಗಿದೆ ಎಂದು ಹೇಳಿದರು.

 ಸಾಹಿತಿ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿ, ಹಿಂದಿನ ಕಾಲ ದಿಂದಲೂ ಮಹಿಳೆಯರು ದೇವಸ್ಥಾನಗಳನ್ನು ಕಟ್ಟಿಸುವುದಕ್ಕಿಂತಲೂ ಕೆರೆ, ಕಟ್ಟೆಗಳನ್ನು ಕಟ್ಟಿಸಿ ಪರಿಸರವನ್ನು ಕಾಪಾಡಿದ್ದಾರೆ ಎಂದು ಸ್ಮರಿಸಿ ದರು. ದೇ ರೀತಿಯಾಗಿ ಲೀಲಾದೇವಿ ಆರ್. ಪ್ರಸಾದ್ ಅವರೂ ಬಿಜಾಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿ ಅದರಲ್ಲಿ ಜಯಗಳಿಸಿದರು. ಹಾಗೂ ಕಿತ್ತೂರುರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಅಕ್ಕಮಹಾದೇವಿ ಅವರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಅವರ ಶ್ರಮವಿದೆ ಎಂದರು. ನಾಡಿನ ಸಂಸ್ಕೃತಿ ಬಿಂಬಿಸುವ ಪ್ರದರ್ಶನದ ಮೆರವಣಿಗೆ ಮೈಸೂರು ರಸ್ತೆಯ ಸಿರಸಿ ವೃತ್ತದಿಂದ ಬೆಂಗಳೂರು ಮುದ್ರಣಾ ಲಯ, ಸೈಂಟ್ ಜೋಸ್ೆ ಚರ್ಚ್, ಹೊಸ ತರಗುಪೇಟೆ, ಕೃಷ್ಣ ರಾಜೇಂದ್ರ ಮಾರುಕಟ್ಟೆ, ಮಸೀದಿ, ಸಿಲ್ವರ್ ಜ್ಯೂಬಿಲಿ ಪಾರ್ಕ್, ಪುರಭವನಕ್ಕೆ ಬಂದು ತಲುಪಿತು.ಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ, ಸಾಹಿತಿಗಳಾದ ಪ್ರೊ.ಜಿ.ರಾಮಕೃಷ್ಣ, ಡಾ.ಭೈರಮಂಗಲ ರಾಮೇಗೌಡ, ಬೆಂನಜಿಕಸಾಪ ಅಧ್ಯಕ್ಷ ಮಾಯಣ್ಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News