*ಬಿಜೆಪಿಯನ್ನು ಅಧಿಕಾರಕ್ಕೆ ತರುವುದು, ಯಡಿಯೂರಪ್ಪರನ್ನು ಸಿಎಂ ಮಾಡುವುದು ಬ್ರಿಗೇಡ್ ಗುರಿ

Update: 2016-10-16 18:46 GMT

*ಬಿಜೆಪಿಯನ್ನು ಅಧಿಕಾರಕ್ಕೆ ತರುವುದು, ಯಡಿಯೂರಪ್ಪರನ್ನು ಸಿಎಂ ಮಾಡುವುದು ಬ್ರಿಗೇಡ್ ಗುರಿ

- ಈಶ್ವರಪ್ಪ, ವಿ.ಪ.ವಿ.ನಾಯಕ 
     ಮತ್ತು ಸಂಗೊಳ್ಳಿರಾಯಣ್ಣನ ಚಾರಿತ್ರಕ್ಕೆ ಮಸಿ ಬಳಿಯೋದು.
---------------------

ಸಿಎಂ ಕುದ್ರೋಳಿ ದೇವಸ್ಥಾನಕ್ಕೆ ಬರುತ್ತಿದ್ದರೆ ಅವರನ್ನು ಸ್ವಾಗತಿಸಿ, ಮುಂದೆಯೂ ಅವರೇ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸುತ್ತಿದ್ದೆ

-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ಮುಂದಿನ ಬಾರಿಯಾದರೂ ಸಂಸದನನ್ನಾಗಿ ಮಾಡಪ್ಪ ಎಂದು ನಿಮಗಾಗಿಯೇ ನೀವು ಪ್ರಾರ್ಥಿಸಿ.
---------------------
     ಎತ್ತಿನಹೊಳೆ ತಿರುವು ಅಲ್ಲ, ಪ್ರವಾಹದ ನೀರು ಲಿಫ್ಟ್

-ಸಿದ್ದರಾಮಯ್ಯ, ಮುಖ್ಯಮಂತ್ರಿ
     ಒಟ್ಟಿನಲ್ಲಿ ರಾಜಕಾರಣಿಗಳಿಗೆ ತಕ್ಷಣ ಲಿಫ್ಟ್ ಬೇಕಾಗಿದೆ.
---------------------
     ಅಭಿವೃದ್ಧಿ ರಾಜಕಾರಣದಲ್ಲಿ ಮಾಯಾವತಿ ದೊಡ್ಡ ಸೊನ್ನೆ

-ಶ್ರೀಕಾಂತ್ ಶರ್ಮ, ಬಿಜೆಪಿ ಕಾರ್ಯದರ್ಶಿ
     ಅಂತಹದೊಂದು ಸೊನ್ನೆ ಕೇಂದ್ರದಲ್ಲಿ ಪ್ರಧಾನಿಯೇ ಆಗಿರುವಾಗ....
---------------------
     ನಾವು ಬೆಳಗ್ಗೆ ಎದ್ದು ವ್ಯಾಯಾಮ ಮಾಡಿದರೆ ನಮ್ಮ ನೆರೆಯವರು ಯಾಕೆ ಆತಂಕಗೊಳ್ಳಬೇಕು

-ನರೇಂದ್ರ ಮೋದಿ, ಪ್ರಧಾನಿ
ಅವರ ಅಂಗಳದಲ್ಲಿ ಹೋಗಿ ವ್ಯಾಯಾಮ ಮಾಡುವಾಗ ಸಮಸ್ಯೆಗಳು ಆರಂಭವಾಗುತ್ತವೆ.

---------------------
     ಚುಟುಕು ಕವನಗಳಿಂದ ಹಗೆ ಪರಿಹಾರ

-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
     ಸದ್ಯಕ್ಕೆ ಉಡುಪಿ ತುಂಬಾ ಕುಟುಕು ಕವನಗಳೇ.
---------------------
     ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ

-ಸದಾನಂದ ಗೌಡ, ಕೇಂದ್ರ ಸಚಿವ
     ಯಾವ ರಾಜ್ಯದಲ್ಲಿ ಎನ್ನುವುದನ್ನಾದರೂ ಹೇಳಬಾರದೇ?
---------------------
     ಭಾರತ ಈಗ ಜಗತ್ತಿನ ಕೇಂದ್ರ ಬಿಂದು

-ಅರುಣ್ ಜೇಟ್ಲಿ, ಕೇಂದ್ರ ಸಚಿವ
     
ಜಾತೀಯತೆ, ಕೋಮುಹಿಂಸೆ, ಗೋರಕ್ಷಕರು ಮೊದಲಾದ ಕಾರಣಗಳಿಗಾಗಿ.

---------------------

ಚುನಾವಣೆಯಲ್ಲಿ ವಿದ್ಯಾವಂತರು ಹಿಂದೆ ಸರಿಯುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ

-ಆರ್.ಅಶೋಕ್, ಶಾಸಕ
         ತಮ್ಮಂಥವರು ಅಧಿಕಾರಕ್ಕೆ ಬರಲು ಪೂರಕವಾಯಿತು ಬಿಡಿ.

ನಾವು ಎಷ್ಟೇ ಸಾಕ್ಷ ನೀಡಿದರೂ ಪಾಕ್ ತಾನು ಉಗ್ರ ಪೋಷಕ ರಾಷ್ಟ್ರ ಎಂದು ಒಪ್ಪಿಕೊಳ್ಳುವುದಿಲ್ಲ

-ಮೀನಾಕ್ಷಿ ಲೇಖಿ, ಬಿಜೆಪಿ ನಾಯಕಿ
ಆರೆಸ್ಸೆಸ್ ತನ್ನನ್ನು ತಾನು ಉಗ್ರ ಸಂಘಟನೆ ಎಂದು ಒಪ್ಪಿಕೊಳ್ಳುತ್ತಿಲ್ಲವಲ್ಲ, ಹಾಗೆಯೇ ಇದು ಇರಬೇಕು.

---------------------
ನಾವು ಯಾರು ಎನ್ನುದನ್ನು ನಮ್ಮ ಕೆಲಸ ತೋರಿಸುತ್ತದೆ

-ಬಾಬಾ ರಾಮ್‌ದೇವ್, ಯೋಗಗುರು

ಹೌದು. ನೀವು ಯಾರು ಎನ್ನುವುದು ನಿಮ್ಮ ನಕಲಿ ಔಷಧಗಳೇ ತೋರಿಸಿ ಕೊಡುತ್ತಿವೆ.
---------------------

ಎಸ್ಪಿ, ಕಾಂಗ್ರೆಸ್‌ಗೆ ಮತ ನೀಡಿದರೆ ಬಿಜೆಪಿಗೆ ಲಾಭ

-ಮಾಯಾವತಿ, ಬಿಎಸ್ಪಿ ಮುಖ್ಯಸ್ಥೆ
     ಬಳಿಕ ಬಿಜೆಪಿಯೊಂದಿಗೆ ನೀವು ಹೊಂದಾಣಿಕೆ ಮಾಡಿಕೊಂಡರಾಯಿತು ಬಿಡಿ.

---------------------

ದೇಶದಲ್ಲಿ ಬಹುಸಂಖ್ಯಾತ ಒಳ್ಳೆಯ ಜನ ಗೋರಕ್ಷಣೆಯಲ್ಲಿ ತೊಡಗಿದ್ದಾರೆ

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

  ಗೋವುಗಳನ್ನು ಸಾಕುವ ರೈತರೇ ನಿಮ್ಮ ಪಾಲಿನ ಕೆಟ್ಟ ಗೋರಕ್ಷಕರಾಗಿರಬಹುದು.

---------------------

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹೊಂಚು ಹಾಕಿ ಮಹಿಳೆಯರನ್ನು ಅತಿ ಹೆಚ್ಚು ದುರುಪಯೊಗ ಪಡಿಸಿಕೊಂಡಿದ್ದಾರೆ

-ಡೊನಾಲ್ಡ್ ಟ್ರಂಪ್

ದುರ್ಬಲರನ್ನು ದುರುಪಯೋಗ ಪಡಿಸಿಕೊಳ್ಳುವುದು ಅಮೆರಿಕನ್ ನಾಯಕರ ಹೆಗ್ಗಳಿಕೆಯಲ್ಲವೇ?
---------------------

ಯಾವುದೇ ತಪ್ಪು ಮಾಡದ ನನ್ನನ್ನು ಉದ್ದೇಶ ಪೂರ್ವಕ ಸಂಚು ಮಾಡಿ ಜೈಲಿಗೆ ಅಟ್ಟಲಾಯಿತು

-ಜನಾರ್ದನ ರೆಡ್ಡಿ, ಮಾಜಿ ಸಚಿವ

ತಪ್ಪು ಮಾಡಿದ್ದೆಲ್ಲ ಮತದಾರರು. ಅವರನ್ನೇ ಜೈಲಿಗಟ್ಟಬೇಕಾಗಿತ್ತೇ?

---------------------

ನನ್ನ ಜನ್ಮ ದಿನ ಉತ್ಸವವಲ್ಲ -ಅಮಿತಾಭ್ ಬಚ್ಚನ್, ನಟ

ಅದರಲ್ಲೂ ವ್ಯಾಪಾರವೇ?

ವಾಸ್ತು ಶಾಸ್ತ್ರ ಖಂಡಿತವಾಗಿಯೂ ಒಂದು ವಿಜ್ಞಾನ

-ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
     
ಮುಂದಿನ ಬಾರಿ ನೊಬೆಲ್‌ಗಾಗಿ ವಿಜ್ಞಾನ ಕ್ಷೇತ್ರದಲ್ಲಿ ಪ್ರಯತ್ನಿಸಿ.

---------------------

ವೀರಪ್ಪನ್ ನನ್ನ ಅಪಹರಣಕ್ಕೂ ಯತ್ನಿಸಿದ್ದ -ಸಿದ್ದರಾಮಯ್ಯ, ಸಿಎಂ
ಆದರೆ ಆರೋಪ ದೇವೇಗೌಡರ ಕುಟುಂಬದ ಮೇಲೆ ಬರುತ್ತಿತ್ತು.

---------------------

ನಾನು ಹುಟ್ಟಿದ್ದೂ ಬಿಜೆಪಿಯಲ್ಲಿ, ಸಾಯುವುದು ಬಿಜೆಪಿಯಲ್ಲೇ

-ಕೆ.ಎಸ್ ಈಶ್ವರಪ್ಪ, ವಿ.ಪ.ವಿ ನಾಯಕ 

ಸಾಯಿಸುವುದಕ್ಕೆ ಬಿಜೆಪಿಯೊಳಗೇ ತುದಿಗಾಲಲ್ಲಿ ನಿಂತಿದ್ದಾರೆ.

---------------------

ಭಾರತದಲ್ಲಿ ಕಾಶ್ಮೀರದ ಕಲಾವಿದರಿಗೆ ನಿಷೇಧ ಹೇರಬೇಕು

-ಪುನೀತ್ ರಾಜ್‌ಕುಮಾರ್, ನಟ

ಅವರು ಡಬ್ಬಿಂಗ್ ಪರವಾಗಿದ್ದಾರೆಯೇ?
---------------------

ಸರಕಾರಿ ಶಾಲೆ ಮುಚ್ಚುವುದಿಲ್ಲ

-ತನ್ವೀರ್ ಸೇಠ್, ಸಚಿವ
     ಮುಚ್ಚುವುದಕ್ಕೆ ಸರಕಾರಿ ಶಾಲೆಗಳಿಗೆ ಬಾಗಿಲೆಲ್ಲಿದೆ?
---------------------

ಆರೆಸ್ಸೆಸ್ ಚಡ್ಡಿ ಬಿಡಲು ರಾಬ್ರಿ ಕಾರಣ -

ಲಾಲೂ ಪ್ರಸಾದ್ ಯಾದವ್, ಆರ್‌ಜೆಡಿ ಅಧ್ಯಕ್ಷ
     
ಹಾಗೆಂದು ತಾವು ಚಡ್ಡಿ ಹಾಕುವುದನ್ನು ಬಿಟ್ಟು ಬಿಡಬೇಡಿ. ತಮಾಷೆಯಾದೀತು.

---------------------
‘ದೇವರ ನಾಡು’ ಎಂದು ಪ್ರಸಿದ್ಧಿಯಾಗಿರುವ ಕೇರಳ ‘ದೆವ್ವಗಳ ನಾಡು’ ಎಂದು ಬದಲಾಗಲಿದೆ

-ರಮೇಶ್ ಚೆನ್ನಿತ್ತಲ, ಕೇರಳ ವಿಪಕ್ಷ ನಾಯಕ
ಬಾರಿ ಬಿಜೆಪಿ ಒಂದು ಸ್ಥಾನವನ್ನು ತನ್ನದಾಗಿಸಿಕೊಂಡ ಪರಿಣಾಮವಿರಬಹುದು.

---------------------
ಮಠಕ್ಕೆ ಮುತ್ತಿಗೆ ಹಾಕಿದರೆ ಉಪವಾಸ ಕೂರುತ್ತೇನೆ

-ವಿಶ್ವೇಶ ತಿರ್ಥ ಸ್ವಾಮೀಜಿ, ಪೇಜಾವರ ಮಠ
ಉಪವಾಸ ಕೂತರೆ ಸಹಪಂಕ್ತಿ ಭೋಜನ ಮಾಡುವುದರಿಂದ ತಪ್ಪಿಸಿಕೊಳ್ಳಬಹುದು ಎಂಬ ಉಪಾಯವೇ?
---------------------

ಭಾರತಕ್ಕೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳಿಂದಲೇ ಹೆಚ್ಚು ಅಪಾಯ

-ಶಿವಶಂಕರ್ ಮೆನನ್, ರಾಷ್ಟ್ರೀಯ ಭದ್ರತಾ ಮಾಜಿ ಸಲಹೆಗಾರ

ಒಳಗಿನ ಶತ್ರುಗಳು ಪ್ರಧಾನಮಂತ್ರಿಗಳ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!