ಸಂವಿಧಾನ ಬದಲಾವಣೆಯ ಸಂಚು; ನಝೀರ್ ಅಹ್ಮದ್‌

Update: 2016-10-18 18:37 GMT

ಬೆಂಗಳೂರು, ಅ.18: ಕೇಂದ್ರ ಸರಕಾರವು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ಮೂಲಕ ಪರೋಕ್ಷವಾಗಿ ಸಂವಿಧಾನವನ್ನು ಬದಲಾವಣೆ ಮಾಡುವ ಸಂಚು ರೂಪಿಸಿದೆ ಎಂದು ಜೆಡಿಯು ರಾಷ್ಟ್ರೀಯ ಶಿಸ್ತು ಸಮಿತಿಯ ಮಾಜಿ ಅಧ್ಯಕ್ಷ ಮುಹಮ್ಮದ್ ನಝೀರ್ ಅಹ್ಮದ್ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋವಾ, ಪಾಂಡಿಚೇರಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸ್ಥಳೀಯವಾದ ನಾಗರಿಕ ಸಂಹಿತೆಗಳನ್ನು ಅನುಸರಿಸಲಾಗುತ್ತಿದೆ ಎಂದರು.ೇಂದ್ರ ಸರಕಾರ ಏಕಾಏಕಿ ಈ ಸೂಕ್ಷ್ಮ ವಿಚಾರವನ್ನು ಕೈಗೆತ್ತಿಕೊಳ್ಳುವ ಮೊದಲು, ಏಕರೂಪ ನಾಗರಿಕ ಸಂಹಿತೆಯ ಸ್ವರೂಪವನ್ನು ಜನತೆಯ ಮುಂದಿಡಬೇಕಿತ್ತು. ಈ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.ಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಗೆ ಸಂವಿಧಾನದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ದೇಶದ ಮುಸ್ಲಿಮರು ಯಾವುದೆ ಕಾರಣಕ್ಕೂ ಶರೀಯತ್ ಕಾನೂನಿನಲ್ಲಿ ಬದಲಾವಣೆ ಅಥವಾ ಮತ್ತೊಬ್ಬರ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಈ ವಿಷಯವನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳುವುದು ಉತ್ತಮ ಎಂದು ನಝೀರ್ ಅಹ್ಮದ್ ತಿಳಿಸಿದರು.
ತ್ರಿವಳಿ ತಲಾಕ್ ವಿಷಯದಲ್ಲಿ ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವುದು ಸರಿಯಲ್ಲ. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಮೂಗು ತೂರಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಅವರು ಹೇಳಿದರು.ರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕಾದರೆ, ದೇಶದಲ್ಲಿ ಎಲ್ಲರೂ ಸಮಾನತೆಯನ್ನು ಹೊಂದಿರಬೇಕು. ಒಂದೇ ವರ್ಗ, ಧರ್ಮ, ಆಚಾರ-ವಿಚಾರಗಳನ್ನು ಅನುಸರಿಸುವ ಜನರಿರಬೇಕು. ಆದರೆ, ನಮ್ಮ ಬಹುಸಂಸ್ಕೃತಿಯ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯವಾದದ್ದು ಎಂದು ನಝೀರ್‌ಅಹ್ಮದ್ ತಿಳಿಸಿದರು.

ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಸಂಘಟಿತರಾದರೆ ಇವರು ಏನನ್ನೂ ಮಾಡಲು ಸಾಧ್ಯವಿಲ್ಲ. ಆದುದರಿಂದ, ದೇಶದಲ್ಲಿರುವಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ಇಂತಹ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಅವರು ದೂರಿದರು. ಶರೀಯತ್ ಕಾನೂನಿನಲ್ಲಿ ಬದಲಾವಣೆಗೆ ಆಗ್ರಹಿಸುತ್ತಿರುವವರಿಗೆ ನಾಚಿಕೆಯಾಗ
ಬೇಕು. ಇದು ದೇವರು ಹಾಗೂ ಪ್ರವಾದಿಯವರ ಮೂಲಕ ರಚನೆಯಾಗಿರುವಂತಹದ್ದು, ಮನುಷ್ಯನ ಜೀವನ ಸರಿಯಾದ ಹಾದಿಯಲ್ಲಿ ಸಾಗಲು ಈ ಕಾನೂನು ಸಹಕಾರಿಯಾಗಿದೆ ಎಂದು ನಝೀರ್‌ಅಹ್ಮದ್ ಹೇಳಿದರು.ೇಂದ್ರ ಸರಕಾರದ ಈ ನಡೆಯ ವಿರುದ್ಧ ದೇಶದಲ್ಲಿರುವ ಎಲ್ಲ ಮುಸ್ಲಿಮರು ಒಗ್ಗೂಡ
ಬೇಕು. ಈ ವಿಷಯದಲ್ಲಿ ಯಾವುದೇ ಭೇದಭಾವಗಳನ್ನು ಇಟ್ಟುಕೊಳ್ಳದೆ, ಸಂಘಟಿತ
ರಾಗುವ ಮೂಲಕ ತಕ್ಕ ಉತ್ತರ ನೀಡಬೇಕಿದೆ. ಜನರ ಆಕ್ರೋಶವನ್ನು ಅರ್ಥಮಾಡಿ ಕೊಂಡು ಸರಕಾರ ತನ್ನ ನಿಲುವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News