ರಾಜ್ಯೋತ್ಸವಕ್ಕೆ ಸಂಕಟ ತಂದ ಸುಪ್ರೀಂ ಕೋರ್ಟ್: ಚಂಪಾ
Update: 2016-10-19 18:38 GMT
ಬೆಂಗಳೂರು, ಅ.19: ಕಾವೇರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಜ್ಯಕ್ಕೆ ಅನ್ಯಾಯವಾಗುವಂತೆ ತೀರ್ಪು ನೀಡುತ್ತಾ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಲದ ಕನ್ನಡ ರಾಜ್ಯೋತ್ಸವವನ್ನು ಸಂಕಟದಿಂದಲೇ ಆಚರಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಬುಧವಾರ ಕನ್ನಡ ಕಾರ್ಯಕರ್ತರ ಬಳಗ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆಯುತ್ತಿ ದ್ದರೂ ಕನ್ನಡದ ನೆಲ, ಜಲದ ಸಮಸ್ಯೆ ಮತ್ತಷ್ಟು ಕಂಗಟ್ಟಾಗುತ್ತಾ ಹೋಗುತ್ತಿದೆ. ಸುಪ್ರೀಂ ಕೋರ್ಟ್ ರಾಜ್ಯದ ವಿರುದ್ಧವಾಗಿಯೇ ತೀರ್ಪು ನೀಡುತ್ತಿರುವುದು ನೋವು ತಂದಿದೆ. ಕನ್ನಡಿಗರು ಸಂಕಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.