ನಾಳೆಯಿಂದ ಅಂತಾರಾಷ್ಟ್ರೀಯ ‘ಯುನಾನಿ ವೈದ್ಯ’ ಸಮ್ಮೇಳನ
Update: 2016-10-23 18:34 GMT
ಬೆಂಗಳೂರು, ಅ. 23: ಯುನಾನಿ ವೈದ್ಯಕೀಯ ನ್ಯಾಶನಲ್ ಇನ್‌ಸ್ಟಿಟ್ಯೂಟ್ ವತಿಯಿಂದ ಅ.25ರಿಂದ ಎರಡು ದಿನಗಳ ಕಾಲ ಅಂತಾರಾಷ್ಟ್ರೀಯ ‘ಯುನಾನಿ ವೈದ್ಯ’ ಸಮ್ಮೇಳನ ಏರ್ಪಡಿಸಲಾಗಿದೆ.
ನಗರದ ಮಾಗಡಿ ರಸ್ತೆಯ ಕೊಟ್ಟಿಗೆಪಾಳ್ಯ ಸಮೀಪದ ಎನ್‌ಐಯುಎಂ ಸಭಾಂಗಣದಲ್ಲಿ ಅಂತಾ ರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದು, ಕೇಂದ್ರದ ಆಯುಷ್ ಖಾತೆ ಸಚಿವ ಶ್ರೀಪಾದ್ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೇಂದ್ರದ ಆಯುಷ್ ಇಲಾಖೆ ಕಾರ್ಯದರ್ಶಿ ಅಜಿತ್ ಎಂ.ಶರಣ್, ಜಂಟಿ ಕಾರ್ಯದರ್ಶಿ ಅನುರಾಗ್ ಶ್ರೀವಾಸ್ತವ್, ರಾಜ್ಯ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವೈಶ್ಯಾ ವಿವಿಯ ಕುಲಪತಿ ಡಾ.ಎಚ್.ಆರ್.ನಾಗೇಂದ್ರ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅಂತಾರಾಷ್ಟ್ರೀಯ ಯುನಾನಿ ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ.ಎಂ.ಎ.ಸಿದ್ದೀಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.