ಹಂಸಲೇಖ, ಮಾನೂಬಾಯಿಗೆ ರಂಗಭೂಮಿ ಗೌರವ ಪ್ರಶಸ್ತಿ

Update: 2016-10-24 18:27 GMT

ಬೆಂಗಳೂರು, ಅ.24: 2015ನೆ ಸಾಲಿನ ರಂಗ ಭೂಮಿ ಗೌರವ ಪ್ರಶಸ್ತಿಗೆ ಹಿರಿಯ ರಂಗಭೂಮಿ ಕಲಾವಿದೆ ಮಾನೂಬಾಯಿ ನಾಕೋಡ ಹಾಗೂ 2016ನೆ ಸಾಲಿಗೆ ಹಂಸಲೇಖ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 50ಸಾವಿರ ರೂ.ಗೌರವಧನ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
 ಅಕಾಡಮಿ ವಾರ್ಷಿಕ ಪ್ರಶಸ್ತಿ-2015:ರ್ನಾಟಕದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಕಲಾವಿದರಿಗೆ ನಾಟಕ ಅಕಾಡಮಿ ವತಿಯಿಂದ 2015, 2016ನೆ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ. ಪ್ರಶಸ್ತಿಯ ವೌಲ್ಯವು 25ಸಾವಿರ ರೂ. ಗೌರವ ಧನ ಹಾಗೂ ಪ್ರಮಾಣ ಪತ್ರ ಒಳಗೊಂಡಿರುತ್ತದೆ.


ಪ್ರಶಸ್ತಿ ವಿವರ: ದೇವಿರಪ್ಪಶಿವಪ್ಪಬಣಕಾರ (ಹಾವೇರಿ ಜಿಲ್ಲೆ-ನಟ), ವೆಂಕಟೇಶ ಕುಲಕರ್ಣಿ(ಬಾಗಲಕೋಟೆ- ನಾಟಕಮಾಸ್ತರು, ನಿರ್ದೇಶಕರು), ಕೆ.ವಿ.ಕೃಷ್ಣಯ್ಯ(ಬೆಂಗಳೂರುನಗರ-ನಾಟಕಕಾರರು), ಪೂಜಾರ ಚಂದ್ರಪ್ಪ (ದಾವಣಗೆರೆ-ಹಾಮೋನಿಯಂ ಮಾಸ್ತರ್), ರಾಮಚಂದ್ರರಾವ್ (ಬೆಂಗಳೂರು-ನೇಪಥ್ಯ), ಕೆ.ವಿ.ವೆಂಕಟೇಶ್(ಚಾಮರಾಜ ನಗರ-ನಟ), ಎಸ್.ಕೆ.ಸೂರಯ್ಯ (ಚಿತ್ರದುರ್ಗ-ನಟ), ಸರೋಜಿನಿ(ಮೈಸೂರು-ನಟಿ), ವಿಠ್ಠಲಕೊಪ್ಪ(ಧಾರವಾಡ-ನಟ) ಕಿಶೋರ್ ಶೆಟ್ಟಿ(ಮಂಗಳೂರು-ನಟ, ಸಂಘಟಕ), ಚಂದ್ರು (ಉಡುಪಿ-ನಟಿ, ನೇಪಥ್ಯ), ಮಾನಮ್ಮ ರಾಯನಗೌಡ (ರಾಯ ಚೂರು- ನಟಿ, ಗಾಯಕಿ), ವನಜಶ್ರೀ ಶೆಟ್ಟಿ (ಬೆಂಗಳೂರು-ನಟಿ), ಬಿ.ಇ.ತಿಪ್ಪೇಸ್ವಾಮಿ (ದಾವಣಗೆರೆ-ನಟ, ಹಾಮೋನಿಯಂ ಮಾಸ್ತರ್) ಪರಶುರಾಮ ಪ್ರಿಯ(ಕೊಪ್ಪಳ-ನಟ) ಪ್ರಶಸ್ತಿಗೆ ಭಾಜನರಾಗಿದ್ದಾರೆ.
 
     

ಅಕಾಡಮಿ ವಾರ್ಷಿಕ ಪ್ರಶಸ್ತಿ-2016: ಎಲ್.ರಾಮಕಷ್ಣ, (ಬೆಂಗಳೂರು ಗ್ರಾಮಾಂತರ-ನಿರ್ದೇಶನ), ವಿರೂಪಾಕ್ಷರಾವ್ ಮೊರಗೇರಿ(ಬಳ್ಳಾರಿ-ತಬಲ), ಬಸವರಾಜ ಹೂಗಾರ(ವಿಜಯಪುರ-ತಬಲ), ಮಾಹಂತಯ್ಯ ಖಾನಪೂರ, (ಯಾದಗಿರಿಹಾರ್ಮೋನಿಯಂ) ಎಚ್.ಹನುಮಂತ ನರಬೋಳಿ(ಕಲಬುರ್ಗಿ-ತಬಲಾ), ಆಶೋಕ ನೇಸರಗಿ(ಬೆಳಗಾವಿ-ನಟ, ನಾಟಕಾರರು), ಸಿದ್ಧಪ್ಪ ನಿಂಗಪ್ಪಗುಳ್ಳೆ(ಗದಗ-ಹಾರ್ಮೋನಿಯಂ), ಭಾಗ್ಯಶ್ರೀ(ಬೆಂಗಳೂರು-ನಟಿ), ಮಹದೇವಪ್ಪ ಹುಣಶ್ಯಾಳ(ಬೀದರ್-ನೇಪಥ್ಯ), ಬೈರ್ನಯಳ್ಳಿ ಶಿವರಾಂ, ರಾಮನಗರ-ನಿರ್ದೇಶನ), ಚೌಡಶೆಟ್ಟಿ(ಮಂಡ್ಯ-ನಿರ್ದೇಶನ), ವೆಂಕಟೇಶ್(ಹಾಸನ-ನಟ), ವಾಸುದೇವರಾವ್, (ಉಡುಪಿ-ನಟ), ಲಕ್ಷ್ಮಣ್‌ದಾಸ್( ತುಮಕೂರು ನಟ-ನಿರ್ದೇಶನ), ಚೇತನ ಡಿ ಪ್ರಸಾದ್(ಕೋಲಾರ-ನಟ), ಕಮಲಮ್ಮ ಬೀಳಗಿ(ಬಾಗಲಕೋಟೆ-ನಟಿ), ಆಂಜನೇಯ(ಬೆಂಗಳೂರು ಗ್ರಾಮಾಂತರ-ನಟ, ನಾಟಕಕಾರರು), ಲಲಿತಾ ಸಣ್ಣಂಗಿ(ಹಾವೇರಿ-ನಟಿ), ವಿಜಯಕಾಶಿ(ಶಿವಮೊಗ್ಗ-ನಟ), ಛಾಯಾ ರೆಡ್ಡಿ(ಧಾರವಾಡ-ನಟಿ), ಪ್ರೇಮಾ ಆರ್ ತಾಳೀಕೋಟಿ (ವಿಜಯಪುರ-ನಟಿ), ವೆಂಕಟೇಶ್‌ಹೆಗಡೆ(ಉತ್ತರ ಕನ್ನಡ- ನಟ), ಸುಂದರಮೂರ್ತಿ ಆಲೆಮನೆ(ಬೆಂಗಳೂರು-ಮೇಕಪ್), ಎ.ಭದ್ರಪ್ಪ(ದಾವಣಗೆರೆ-ಸಂಘಟಕ),ಜಿ.ಎಂ.ಸಿದ್ಧರಾಜು (ಮಂಡ್ಯ-ನಟ) ಇವರು ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.


 2015ನೆ ಸಾಲಿನ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಪ್ರಶಸ್ತಿಗೆ ದಾವಣಗೆರೆಯ ಮಧುಕೇಶ್ ಹಾಗೂ 2016ನೆ ಸಾಲಿಗೆ ಬೆಂಗಳೂರಿನ ಮಹದೇವಪ್ಪ ಆಯ್ಕೆಯಾಗಿದ್ದಾರೆ. ಚಿಂದೋಡಿ ವೀರಪ್ಪನವರ 2015ನೆ ದತ್ತಿ ಪ್ರಶಸ್ತಿಗೆ ಬಾಗಲಕೋಟೆಯ ಗೂಡು ಸಾಹೇಬ್ ಚಟ್ನಿಹಾಳ, 2016ನೆ ಸಾಲಿಗೆ ತುಮಕೂರಿನ ಬಿ.ಗಂಗಾಧರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹಾಗೆಯೆ ಚಿಂದೋಡಿ ಲೀಲಾ 2015ನೆ ದತ್ತಿ ಪ್ರಶಸ್ತಿಗೆ ಮಮತಾ ಗುಡೂರು, 2016ನೆ ಸಾಲಿಗೆ ರಾಣಿಬೆನ್ನೂರಿನ ಉಮಾ ಆಯ್ಕೆಯಾಗಿದ್ದು, 5ಸಾವಿರ ರೂ.ಗೌರವಧನ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.
 2015ನೆ ಸಾಲಿನ ರಂಗಭೂಮಿಯ ಪುಸ್ತಕ ಪುರಸ್ಕಾರ ಪ್ರಶಸ್ತಿಗೆ ಪ್ರಕಾಶ್‌ಗರುಡ ಹಾಗೂ 2016ನೆ ಸಾಲಿಗೆ ಗೋಪಾಲ ವಾಜಪೇಯ್ ಆಯ್ಕೆಯಾಗಿದ್ದು, ಪ್ರಶಸ್ತಿ ಮೊತ್ತವು 25 ಸಾವಿರ ರೂ. ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News