ಗುಟ್ಕಾ ಹಾಗೂ ಪಾನ್‌ಮಸಾಲ ಮಾರಾಟಕ್ಕೆ ಕಡಿವಾಣ’

Update: 2016-10-27 18:26 GMT

ಬೆಂಗಳೂರು, ಅ.27: ನಿಕೋಟಿನ್ ಮತ್ತು ತಂಬಾಕು ಅಂಶವಿರುವ ಗುಟ್ಕಾ ಹಾಗೂ ಪಾನ್‌ಮಸಾಲಾವನ್ನು ರಾಜ್ಯದಲ್ಲಿ ಇನ್ನು ಮುಂದೆ ಪ್ರತ್ಯೇಕ ಪ್ಯಾಕೆಟ್‌ಗಳಾಗಿ ಮಾರಾಟ ಮಾಡುವಂತಿಲ್ಲ ಎಂದು ಆಹಾರ ಸಂರಕ್ಷಣಾ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದರೆ, ತಂಬಾಕು ಮತ್ತು ನಿಕೋಟಿನ್ ಅಂಶವಿಲ್ಲದ ಅಡಿಕೆ ಮಾರಾಟಕ್ಕೆ ಯಾವುದೇ ಅಡ್ಡಿ ಇಲ್ಲ. 2013ರ ಮೇ 30 ರಿಂದಲೇ ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯದಲ್ಲಿ ಅಕೃತವಾಗಿ ಗುಟ್ಕಾ ನಿಷೇಸಲಾಗಿದೆ. ಆದರೂ ತಂಬಾಕು, ನಿಕೋಟಿನ್ ಅಂಶವಿರುವ ಗುಟ್ಕಾ ಹಾಗೂ ಪಾನ್ ಮಸಾಲಾವನ್ನು ಪ್ರತ್ಯೇಕ ಪ್ಯಾಕೆಟ್‌ಗಳಲ್ಲಿ ವಿವಿಧ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿರುವುದು ಕಂಡು ಬಂದಿದೆ. ಬೇರೆ ಬೇರೆ ಹೆಸರಿನಲ್ಲಿ ಅಥವಾ ಅಂತಿಮ ಉತ್ಪನ್ನ ರೂಪದಲ್ಲಿ ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ಆಹಾರ ಸಂರಕ್ಷಣಾ ಆಯುಕ್ತರು ಎಲ್ಲ ಜಿಲ್ಲಾಕಾರಿಗಳು, ನಿಯೋಜಿತ ಅಕಾರಿಗಳು ಮತ್ತು ಆಹಾರ ಸುರಕ್ಷತಾ ಅಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರಿಂದಾಗಿ, ಜಗಿಯುವ ತಂಬಾಕನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News