ರುದ್ರೇಶ್ ಕೊಲೆ: ನಾಲ್ವರ ಬಂಧನ

Update: 2016-10-27 18:29 GMT

ಬೆಂಗಳೂರು, ಅ. 27: ಸಿವಿಲ್ ಕಾಂಟ್ರಾಕ್ಟರ್ ಹಾಗೂ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ನಾಲ್ವರನ್ನು ಬಂಸಿರುವ ಪೊಲೀಸರು, ಆರೋಪಿಗಳಿಗೆ ರುದ್ರೇಶ್ ಕಿರುಕುಳ ನೀಡಿದ್ದ ಎನ್ನುವ ಮಾಹಿತಿ ವಿಚಾರಣೆ ಯಲ್ಲಿ ಬೆಳಕಿಗೆ ಬಂದಿದೆ ಎಂದು ಬೆಂ.ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಹೇಳಿದ್ದಾರೆ.

ಬಂತ ಆರೋಪಿಗಳನ್ನು ಜೆಸಿ ನಗರದ ಮುಹಮ್ಮದ್ ಮಝರ್(35), ಗೋವಿಂದಪುರದ ರ್ಇಾನ್(30) ಹಾಗೂ ಆರ್‌ಟಿ ನಗರದ ನಿವಾಸಿಗಳಾದ ಮುಜೀಬುಲ್ಲಾ (44), ವಸೀಂ ಅಹ್ಮದ್(30) ಎಂದು ಪೊಲೀಸರು ಗುರುತಿಸಿದ್ದು, ವಿಚಾರಣೆಗೊಳಪಡಿಸಲಾಗಿದೆ.ರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ಬೈಕ್ ವಶಕ್ಕೆ ಪಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳಾದ ವಸೀಂ ರುದ್ರೇಶ್ ಮೇಲೆ ಮಾರಕಾಸಗಳಿಂದ ದಾಳಿ ನಡೆಸಿದ್ದು, ಮಝರ್ ಬೈಕ್ ಚಾಲನೆ ಮಾಡುತ್ತಿದ್ದ. ಅದೇ ರೀತಿ, ಮುಜೀಬುಲ್ಲಾ ರುದ್ರೇಶ್ ಚಲನವಲನಗಳ ಬಗ್ಗೆ ಕಣ್ಣಿಟ್ಟಿದ್ದ. ಇನ್ನು ರ್ಇಾನ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಘಟನೆಗಳ ನಂಟಿಲ್ಲ: ರುದ್ರೇಶ್ ಪ್ರಕರಣ ಸಂಬಂಧ ಕೆಲ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಈ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಮತ್ತು ಯಾವುದೇ ಸಂಘಟನೆಗಳ ಹಿನ್ನೆಲೆಯಿರುವುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ: ಅ.16ರಂದು ಮಧ್ಯಾಹ್ನ 12:30 ಸುಮಾರಿಗೆ ಇಲ್ಲಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಕಾಮರಾಜ ರಸ್ತೆಯ ಬಿಇಒ ಕಚೇರಿ ಬಳಿ ರುದ್ರೇಶ್(38) ಎಂಬಾತನನ್ನು ದುಷ್ಕರ್ಮಿಗಳ ತಂಡ ಬೈಕ್‌ನಲ್ಲಿ ಬಂದು ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ತದನಂತರ ಕೆಲ ಪಕ್ಷಗಳು ಪ್ರತಿಭಟನೆ ನಡೆಸಿ, ಶಿವಾಜಿನಗರ ಬಂದ್‌ಗೆ ಕರೆ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News