*ಕೆಲಸ ಮಾಡದ ಕಾರಣ ಶ್ರೀನಿವಾಸ್ ಪ್ರಸಾದ್‌ರನ್ನು ಸಂಪುಟದಿಂದ ಕೈಬಿಟ್ಟೆ

Update: 2016-10-30 18:21 GMT

  *ಕೆಲಸ ಮಾಡದ ಕಾರಣ ಶ್ರೀನಿವಾಸ್ ಪ್ರಸಾದ್‌ರನ್ನು ಸಂಪುಟದಿಂದ ಕೈಬಿಟ್ಟೆ
-ಸಿದ್ದರಾಮಯ್ಯ, ಮುಖ್ಯಮಂತ್ರಿ
 ಸಾಧಾರಣವಾಗಿ ಕೆಲಸ ಮಾಡದವರಿಗೆ ಗೃಹ ಸಚಿವ ಸ್ಥಾನ ಕೊಡುವುದು ಕಾಂಗ್ರೆಸ್ ಪದ್ಧತಿ.

---------------------
  ಅಧಿಕಾರದ ಹೊಟ್ಟೆ ತುಂಬಿದವರಿಗೆ ಅತೃಪ್ತರ ನೋವು ಅರ್ಥವಾಗುವುದಿಲ್ಲ
-ಎಚ್.ವಿಶ್ವನಾಥ್, ಮಾಜಿ ಸಂಸದ
 ಅಧಿಕಾರವಿಲ್ಲದ ನೋವು ಸಹಿಸುವುದು ಸ್ವಲ್ಪ ಕಷ್ಟ.

---------------------
ರಾಜ್ಯಕ್ಕೆ ಪ್ರಾದೇಶಿಕ ಪಕ್ಷ ಬೇಕು ಎಂಬ ವಿಶ್ವಾಸದಿಂದ ಜೆಡಿಎಸ್‌ಗೆ ಯಾರು ಬೇಕಾದರೂ ಬರಬಹುದು
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
  ರಾಜ್ಯಕ್ಕೆ ಒಳ್ಳೆಯ ಸರಕಾರ ಬೇಕು ಎನ್ನುವವರು ಎಲ್ಲಿಗೆ ಹೋಗಬೇಕು?
---------------------

ಕೇರಳದಲ್ಲಿ ಕಮ್ಯುನಿಸ್ಟರ ಕೆಂಪು ಭಯೋತ್ಪಾದನೆ ನಡೆಯುತ್ತಿದೆ
-ನಳಿನ್ ಕುಮಾರ್ ಕಟೀಲು, ಸಂಸದ
  ದೇಶದಲ್ಲಿ ನಡೆಯುತ್ತಿರುವ ಕೇಸರಿ ಭಯೋತ್ಪಾದನೆಯ ಬಗ್ಗೆ ತಮ್ಮ ಅಭಿಪ್ರಾಯ?
---------------------
  ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿಯನ್ನು ಪೂಜಿಸಲು ಮೇಲ್ಜಾತಿಯವರು ಸಿದ್ಧರಿಲ್ಲ
-ಶ್ರೀರಾಮುಲು, ಸಂಸದ
  
ವಾಲ್ಮೀಕಿ ಗಣಿ ಉದ್ಯಮಿಯಾಗಿದ್ದರೆ ಖಂಡಿತ ಪೂಜಿಸುತ್ತಿದ್ದರು.

---------------------
ಆಕಾಶದಲ್ಲಿನ ಚಂದ್ರನನ್ನು ತೋರಿಸಿ ಜನರನ್ನು ಮರುಳು ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಎಕ್ಸ್‌ಪರ್ಟ್
-ಜಗದೀಶ್ ಶೆಟ್ಟರ್, ವಿ.ಸ.ಪ್ರತಿಪಕ್ಷ ನಾಯಕ
 ಮೋದಿಯಲ್ಲೇ ಸೂರ್ಯ, ಚಂದ್ರರನ್ನು ತೋರಿಸುವ ನಿಮಗಿಂತ ವಾಸಿ.

---------------------
  ಕರ್ನಾಟಕ ನಮಗೆ ಹಿರಿಯಣ್ಣ ನಿದ್ದಂತೆ
-ಲಕ್ಷ್ಮೀಕಾಂತ ಪಾರ್ಸೇಕರ್, ಗೋವಾ ಸಿಎಂ
  ಅಣ್ಣನಿಗೆ ಹೊಡೆಯುವುದು ನಿಮ್ಮ ಹಕ್ಕು ಎಂದು ತಿಳಿದುಕೊಂಡಿದ್ದೀರ?
---------------------
  ಮುಸ್ಲಿಂ ಸಮಾಜದಲ್ಲಿ ಜಯಂತಿ ಆಚರಣೆ ಪದ್ಧತಿ ಇಲ್ಲ
-ಶೋಭಾ ಕರಂದ್ಲಾಜೆ, ಸಂಸದೆ
  ಟಿಪ್ಪು ಜಯಂತಿ ಮುಸ್ಲಿಮರ ಆಚರಣೆ ಅಲ್ಲ, ದೇಶದ ಆಚರಣೆ.

---------------------
  ರಾಜ್ಯದ ಕಾಂಗ್ರೆಸ್ ಸರಕಾರ ಮುಳುಗುವ ಹಡಗಿದ್ದಂತೆ
-ಆರ್.ಅಶೋಕ್, ಮಾಜಿ ಡಿಸಿಎಂ
  ಮುಳುಗಿರುವ ನೀವು ಮೊದಲು ಯಾವುದಾದರೂ ತೆಪ್ಪ ಹತ್ತಿಕೊಳ್ಳಿ.

ಉಡುಪಿ ಮಠಗಳಲ್ಲಿರುವ ಜಾತಿ ವ್ಯವಸ್ಥೆ, ಪಂಕ್ತಿಭೇದ ನೋಡಿ ಕನಕದಾಸರು ಅಳುತ್ತಿರುವಂತೆ ಕಾಣುತ್ತಿದೆ
-ಅರವಿಂದ ಮಾಲಗತ್ತಿ, ಸಾಹಿತಿ
  ಜೊತೆಗೆ ಕೃಷ್ಣನೂ ಕೂಡ.
---------------------
  ಒಬ್ಬ ಶ್ರೀನಿವಾಸ ಪ್ರಸಾದ್ ಹೋದರೇನಂತೆ ಅವರಂತಹ ನೂರಾರು ಪ್ರಸಾದ್‌ಗಳು ಹುಟ್ಟುತ್ತಾರೆ
-ಡಾ. ಜಿ.ಪರಮೇಶ್ವರ್, ಸಚಿವ
 ಹೊಸಕಿ ಹಾಕುವವರಿರುವವರೆಗೆ ಅದೆಷ್ಟು ಪ್ರಸಾದರು ಹುಟ್ಟಿದರೂ ಪ್ರಯೋಜನವಿಲ್ಲ ಬಿಡಿ.

---------------------
  ನನ್ನ ರಕ್ತದಲ್ಲಿ ಬೇಕಾದರೂ ಬರೆದುಕೊಡುತ್ತೇನೆ ನಂಬಿಕೆ, ವಿಶ್ವಾಸಕ್ಕೆ ನಾನೆಂದೂ ದ್ರೋಹ ಬಗೆಯುವುದಿಲ್ಲ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಶೋಭಾ ಕರಂದ್ಲಾಜೆ ರಕ್ತದಲ್ಲಿ ಬರೆದುಕೊಟ್ಟರೆ ಜನರು ನಂಬಬಹುದೇನೋ.

---------------------
  ಆಹಾರ ನಮ್ಮ ಹಕ್ಕೆಂದು ಗೋಮಾಂಸ ತಿನ್ನಬೇಡಿ
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ನೀವು ಬದನೆ ಗೊಜ್ಜು ತಿನ್ನುವುದನ್ನು ಬಿಟ್ಟರೆ ಅವರು ಗೋಮಾಂಸ ಬಿಡುತ್ತಾರಂತೆ.

---------------------
  ಎಲ್ಲೇ ರಾಜಕೀಯ ದ್ವೇಷದ ಹಲ್ಲೆ ನಡೆಯಲಿ ಅದರ ಹಿಂದೆ ಸಿಪಿಎಂ ಕೈವಾಡವಿರುತ್ತದೆ
-ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಆರೆಸ್ಸೆಸ್, ಬಜರಂಗದಳ ನಡೆಸುತ್ತಿರುವ ಕೊಲೆಗಳ ಹಿಂದಿರುವವರು ಯಾರು?
---------------------
ಇನ್ನೂ ಆರು ವರ್ಷ ಡಾ. ಪರಮೇಶ್ವರ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿರಲಿ
-ಡಿ.ಕೆ ಶಿವಕುಮಾರ್, ಸಚಿವ
ಅಂದರೆ ಮುಂದಿನ ಆರುವರ್ಷ ಪರಮೇಶ್ವರ್‌ಗೆ ಮುಖ್ಯಮಂತ್ರಿಯಾಗುವ ಅವಕಾಶ ಇಲ್ಲ ಎಂದೇ?

  ತ್ರಿವಳಿ ತಲಾಖ್‌ನಿಂದ ಮುಸ್ಲಿಂ ಮಹಿಳೆಯರ ಬಾಳು ಹಾಳಾಗಲು ಬಿಡಲಾರೆ
-ನರೇಂದ್ರ ಮೋದಿ, ಪ್ರಧಾನಿ
  ಆ ಕಾರಣಕ್ಕಾಗಿ ತಾವು ಜಶೋದಾ ಬೆನ್‌ಗೆ ತಲಾಖ್ ನೀಡದೇ ಸತಾಯಿಸುತ್ತಿದ್ದೀರಾ?
---------------------
  ಅಪ್ಪ ಬಯಸಿದರೆ ರಾಜೀನಾಮೆ
-ಅಖಿಲೇಶ್ ಯಾದವ್, ಉ.ಪ.ಮುಖ್ಯಮಂತ್ರಿ
  ಮುಲಾಯಂ ಸಿಂಗ್ ಬಯಸಿದರೆ ಸಾಕಾಗುವುದಿಲ್ಲವೇ?
---------------------
  ಸಾಯುವವರೆಗೆ ರೈತರ ಪರವಾಗಿ ಹೋರಾಡುತ್ತೇನೆ
-ದೇವೇಗೌಡ, ಮಾಜಿ ಪ್ರಧಾನಿ
ಅಂತೂ ರೈತರು ಸಾಯುವುದನ್ನೇ ಕಾಯುತ್ತಿದ್ದೀರಿ ಎಂದಾಯಿತು.

---------------------
ವಿಧಾನಸೌಧ ಪ್ರವೇಶ ದ್ವಾರದ ಬಳಿ ಪತ್ತೆಯಾದ ಹಣಕ್ಕೂ ಯಡಿಯೂರಪ್ಪರಿಗೂ ಯಾವುದೇ ಸಂಬಂಧವಿಲ್ಲ
-ಶೋಭಾ ಕರಂದ್ಲಾಜೆ, ಸಂಸದೆ
  ಬಹುಶಃ ಅನೈತಿಕ ಸಂಬಂಧವಿರಬಹುದೇ?
---------------------
  ರಾಹುಲ್ ಗಾಂಧಿಗೆ ಶೀಘ್ರ ಕಾಂಗ್ರೆಸ್ ಅಧ್ಯಕ್ಷ ಪಟ್ಟ
-ಅಂಬಿಕಾ ಸೋನಿ, ಕಾಂಗ್ರೆಸ್ ನಾಯಕಿ
ಅಂತೂ ಶಿಲುಬೆ ತಯಾರಾಗುತ್ತಿದೆ ಎಂದಾಯಿತು.

---------------------
  ರಾಜ್ಯದ ಮುಖ್ಯಮಂತ್ರಿಯಾಗುವ ಅರ್ಹತೆ, ಶಕ್ತಿ ಎಲ್ಲವೂ ನನಗಿದೆ
-ಬಸವನ ಗೌಡ ಪಾಟೀಲ, ಮಾಜಿ ಸಚಿವ
ಜೊತೆಗೆ ಚುನಾವಣೆ ಗೆಲ್ಲುವ ಅರ್ಹತೆಯೂ ಬೇಕು.

---------------------
  ಹಸಿವು ಮುಕ್ತ ಕರ್ನಾಟಕ ನಮ್ಮ ಧ್ಯೇಯ
-ಯು.ಟಿ.ಖಾದರ್, ಸಚಿವ
  ಕಾಂಗ್ರೆಸ್‌ನೊಳಗಿರುವ ಅಧಿಕಾರ, ಹಣದ ಹಸಿವನ್ನು ಮುಕ್ತ ಮಾಡುವ ಬಗ್ಗೆ ಯೋಜನೆ ಇದೆಯೇ?
---------------------

ಇಂದು ರಾಜಕೀಯ ಎನ್ನುವುದು ಜಾತಿ ಮತ್ತು ಸ್ವಾರ್ಥದ ಚೌಕಟ್ಟಿನಲ್ಲಿ ಮುಳುಗಿ ಹೋಗಿದೆ
-ವೀರಪ್ಪ ಮೊಯ್ಲಿ, ಸಂಸದ
  ಆ ಚೌಕಟ್ಟಿನಲ್ಲೇ ತಾನೆ ತಾವು ಆಯ್ಕೆಯಾಗಿರುವುದು.

---------------------
  ಎಲ್ಲ ಪಕ್ಷಗಳಲ್ಲೂ ಭ್ರಷ್ಟರಿದ್ದಾರೆ
-ರಮೇಶ್ ಕುಮಾರ್, ಸಚಿವ
  ತಾವು ಭ್ರಷ್ಟರಾಗಿರುವುದಕ್ಕೆ ಸಮರ್ಥನೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!