*ಕರ್ನಾಟಕಕ್ಕೆ ಟಿಪ್ಪು ಸುಲ್ತಾನನ ಕೊಡುಗೆ ಶೂನ್ಯ

Update: 2016-11-06 18:48 GMT

  *ಕರ್ನಾಟಕಕ್ಕೆ ಟಿಪ್ಪು ಸುಲ್ತಾನನ ಕೊಡುಗೆ ಶೂನ್ಯ
-ಪ್ರತಾಪ್ ಸಿಂಹ, ಸಂಸದ
  ಅದು ಗಣಿತ ಕ್ಷೇತ್ರಕ್ಕೆ ಪ್ರಾಚೀನ ಭಾರತೀಯರು ಕೊಟ್ಟ ಕೊಡುಗೆಯಲ್ಲವೇ?
---------------------
  ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ
-ರಮೇಶ್ ಕುಮಾರ್, ಸಚಿವ
  ಸರಕಾರಿ ಆಸ್ಪತ್ರೆಗಳ ಸುಲಿಗೆಗಳನ್ನು ಮೊದಲು ತಡೆಯಿರಿ.
---------------------
  ಪ್ರತಿಯೊಬ್ಬರ ಕುಟುಂಬದ ಒಬ್ಬರು ಸೇನೆಗೆ ಸೇರಿ ದೇಶ ಸೇವೆ ಮಾಡಬೇಕು
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ತಮ್ಮ ಮಗನನ್ನೇಕೆ ರಾಜಕೀಯಕ್ಕೆ ಸೇರಿಸಿದಿರಿ?
---------------------
  ಗೋವನ್ನು ಸಂರಕ್ಷಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಗೋವುಗಳಿಗೆ ಮಾತು ಬರುತ್ತಿದ್ದರೆ ಅದೆಷ್ಟು ಅತ್ಯಾಚಾರ ಪ್ರಕರಣಗಳು ಬಹಿರಂಗವಾಗುತ್ತಿದ್ದವೋ?
---------------------
  ನರೇಂದ್ರ ಮೋದಿ ಅವರ ಹಿತಾಸಕ್ತಿಗಳಿಗೆ ಅನುಗುಣವಾಗಿ ಪಾಕ್ ಪ್ರಧಾನಿ ನಡೆದುಕೊಳ್ಳುತ್ತಿದ್ದಾರೆ
-ಇಮ್ರಾನ್ ಖಾನ್, ಪಾಕ್ ತಹ್ರೀಕೆ ಇನ್ಸಾಫ್ ಪಕ್ಷದ ಅಧ್ಯಕ್ಷ
 ಮತ್ತು ಪಾಕ್ ಪ್ರಧಾನಿ ಹಿತಾಸಕ್ತಿಗಳಿಗೆ ಅನುಗುಣವಾಗಿ ನಮ್ಮ ಪ್ರಧಾನಿಯೂ.

---------------------
  ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ
-ತೇಜಸ್ವಿನಿ, ಬಿಜೆಪಿ ನಾಯಕಿ
  ಟಿವಿಯಲ್ಲಿ ಗಿಣಿ ಶಾಸ್ತ್ರ ಹೇಳಬಹುದಲ್ಲ?
---------------------
  ಮೋದಿಯವರ ಸಾಧನೆಯ ಹೆಸರಲ್ಲಿ ಬಿಜೆಪಿಯವರು ಚುನಾವಣೆಗೆ ಹೊರಟಿದ್ದಾರೆ
-ಟಿ.ಬಿ.ಜಯಚಂದ್ರ, ಸಚಿವ
  ಮತ್ತೆ ಅವರು ರಾಹುಲ್ ಸಾಧನೆಯ ಹೆಸರಲ್ಲಿ ಹೊರಡಬೇಕಾಗಿತ್ತೇ?
---------------------
  ಭದ್ರತಾ ಸಂಸ್ಥೆಗಳಿಂದಾಗಿ ನಾನು ಸುರಕ್ಷಿತ ಮತ್ತು ಭದ್ರವಾಗಿದ್ದೇನೆ.
-ಜಿತೇಂದ್ರ ಸಿಂಗ್, ಕೇಂದ್ರ ಸಚಿವ
  ತಮ್ಮ ಭದ್ರತೆಗಾಗಿ ಭದ್ರತಾ ಸಂಸ್ಥೆಗಳನ್ನು ಅಭದ್ರಗೊಳಿಸುವುದೇ?
---------------------
  ಯೋಗಿ ಮತ್ತು ಯೋಧ ಇಬ್ಬರದ್ದೂ ಸಮಾಜ ಸೇವೆಯೇ
-ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಮಣಿಪುರದಲ್ಲಿ ಯೋಧರು ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರಗಳ ಹಿನ್ನೆಲೆಯಲ್ಲೇ?
---------------------
  ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ತೊರೆದರೂ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ
-ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
  ತಾವು ಪಕ್ಷ ತೊರೆದರೆ ಪಕ್ಷಕ್ಕೆ ಲಾಭವಿದೆ.

---------------------
  ಕಾಂಗ್ರೆಸ್‌ನಿಂದ ಬಡವರಿಗೆ ಅನ್ಯಾಯ ಆಗಿಲ್ಲ. ಬಿಜೆಪಿಯಿಂದ ಶ್ರೀಮಂತರಿಗೆ ಅನ್ಯಾಯ ಆಗಿಲ್ಲ
-ರಮಾನಾಥ ರೈ, ಸಚಿವ
  ಕಾಂಗ್ರೆಸ್‌ನಿಂದ ಕಾಂಗ್ರೆಸ್‌ಗಂತೂ ತುಂಬಾ ಅನ್ಯಾಯವಾಗಿದೆ.

---------------------
  ಹುಡುಗರಿಗಿಂತ ಹೆಚ್ಚು ಹುಡುಗಿಯರಿಗೆ ಪವರ್ ಜಾಸ್ತಿ ಕೊಟ್ಟ ಸಂಸ್ಕೃತಿ ನಮ್ಮದು
-ಶಕುಂತಳಾ ಶೆಟ್ಟಿ, ಶಾಸಕಿ
 ಆದರೆ ಪವರ್ ಕಟ್ ಸಮಸ್ಯೆಯಿಂದ ತೊಂದರೆಯಾಗಿದೆ.

---------------------
  ಪ್ರಧಾನಿ ನರೇಂದ್ರ ಮೋದಿ ಆಧುನಿಕ ವಲ್ಲಭಭಾಯಿ ಪಟೇಲ್ ಇದ್ದಂತೆ
-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  ಅವರ ಹರಕು ಬಾಯಿ ನೋಡಿ ಈ ಹೇಳಿಕೆಯೇ?
---------------------
  ಒಳ್ಳೆಯ ಆಡಳಿತಕ್ಕೆ ಉತ್ತಮ ಕಾನೂನುಗಳೂ ಅಗತ್ಯ
-ನರೇಂದ್ರ ಮೋದಿ, ಪ್ರಧಾನಿ
  ಉತ್ತಮ ಕಾನೂನು ಇಲ್ಲದಿರುವುದೇ ನಿಮ್ಮ ಕೆಟ್ಟ ಆಡಳಿತಕ್ಕೆ ಕಾರಣವೇ?
---------------------
  ಕಾಂಗ್ರೆಸ್‌ಗೆ ಉಗ್ರರ ಬಗ್ಗೆ ಮೃದು ಧೋರಣೆ ಇದೆ
 -ಜಗದೀಶ್ ಶೆಟ್ಟರ್, ವಿಧಾನ ಸಭಾ ವಿಪಕ್ಷ ನಾಯಕ
  ಹೌದು. ಇಲ್ಲವಾದರೆ ನಕಲಿ ಗೋರಕ್ಷಕರು ಬಹಿರಂಗವಾಗಿ ಮೆರೆಯುತ್ತಿದ್ದರೇ?
---------------------
ಮುಸ್ಲಿಮರು ಮಾತ್ರ ಯಾಕೆ ಜೈಲು ಬ್ರೇಕ್ ಮಾಡುತ್ತಾರೆ. ಹಿಂದೂಗಳೇಕೆ ಜೈಲಿನಿಂದ ಪರಾರಿಯಾಗುವುದಿಲ್ಲ
-ದಿಗ್ವಿಜಯ ಸಿಂಗ್, ಕಾಂಗ್ರೆಸ್ ನಾಯಕ  
ಬಿಜೆಪಿ ಸರಕಾರದಿಂದ ಮುಸ್ಲಿಮ್ ತುಷ್ಟೀಕರಣವಿರಬೇಕು.

---------------------
ಬಿಜೆಪಿ ಸರಕಾರಗಳು ಪೊಲೀಸರನ್ನು ತಮ್ಮ ರಾಜಕೀಯ, ಕೋಮುವಾದಿ ಉದ್ದೇಶಗಳನ್ನು ಪೂರೈಸಲು ಬಳಸಿಕೊಳ್ಳುತ್ತವೆ
-ಮಾಯಾವತಿ, ಬಿಎಸ್ಪಿ ನಾಯಕಿ
  ಸಂಘಪರಿವಾರ ಚೆಡ್ಡಿಯನ್ನು ಪ್ಯಾಂಟ್ ಆಗಿ ಪರಿವರ್ತಿಸಿರುವುದು ಮತ್ತೆ ಯಾವುದಕ್ಕೆ ಅಂತೀರಿ?
---------------------
  ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎಂಬ ತಾರತಮ್ಯ ಮಾಡಿಲ್ಲ
-ಎಸ್.ಎಂ ಕೃಷ್ಣ, ಮಾಜಿ ಮುಖ್ಯಮಂತ್ರಿ
ಮೂಲವ್ಯಾಧಿ ಪೀಡಿತ ಕಾಂಗ್ರೆಸ್ ಹಿರಿಯರ ಕೊರಗು.

---------------------
  ಪ್ರಧಾನಿ ಯೋಧರ ಹಕ್ಕುಗಳನ್ನು ಕಸಿದುಕೊಳ್ಳುವುದಕ್ಕಾಗಿ ರಾಜಕೀಯ ಮಾಡುತ್ತಿದ್ದರೆ ನಾವು ನಮ್ಮ ಯೋಧರ ಹಕ್ಕುಗಳನ್ನು ಕಲ್ಪಿಸಿಕೊಡಲು ರಾಜಕೀಯ ಮಾಡುತ್ತಿದ್ದೇವೆ
-ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
  ಅಲ್ಲಿ ಹತ್ಯೆ. ಇಲ್ಲಿ ಆತ್ಮಹತ್ಯೆ.

---------------------
  ಟಿಪ್ಪು ಹೊರತುಪಡಿಸಿ ಬೇರೆ ಯಾವ ರಾಜರೂ ಇತರರನ್ನು ಅಪಹರಿಸಿ ಮತಾಂತರಿಸಿ ಎಂದು ಹೇಳಿಲ್ಲ
-ಚಿದಾನಂದ ಮೂರ್ತಿ, ಸಂಶೋಧಕ
  ಬಹುಶಃ ಲವ್‌ಜಿಹಾದ್ ಅನ್ವೇಷಕ ಟಿಪ್ಪು ಇರಬಹುದೇ?
---------------------
  ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಸಚಿವ ರೋಶನ್ ಬೇಗ್ ಸುಪಾರಿ
-ಶೋಭಾ ಕರಂದ್ಲಾಜೆ, ಸಂಸದೆ
  
ಯಡಿಯೂರಪ್ಪ ಪತ್ನಿಯ ಆತ್ಮಹತ್ಯೆಯ ಹಿಂದೆ ಇರುವ ಸುಪಾರಿಯ ಬಗ್ಗೆಯೂ ಒಂದಿಷ್ಟು ತನಿಖೆ ನಡೆಸಿ. --------------------

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!