ಹೊಸದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ: ಹೈಕೋರ್ಟ್ ಕಳವಳ
Update: 2016-11-07 18:36 GMT
ಬೆಂಗಳೂರು, ನ.7: ಹೊಸದಿಲ್ಲಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ದಟ್ಟ ಹೊಗೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯ ಮೂರ್ತಿ ಎ.ಎನ್.ವೇಣುಗೋಪಾಲಗೌಡ ಅವರಿದ್ದ ನ್ಯಾಯಪೀಠ, ರಾಜಧಾನಿ ಹೊಸ ದಿಲ್ಲಿಯ ಲ್ಲಿಯೇ ಈ ರೀತಿಯ ಪರಿಸ್ಥಿತಿ ಉಂಟಾಗಿದೆ ಹಾಗೂನಾವು ಎಲ್ಲಿಗೆ ತಲುಪುತಿದ್ದೇವೆ ಎಂಬುದೇ ತಿಳಿಯು ತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದೆ.
ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಸಿದ ಇಂತಹ ಸಂಗತಿಗಳ ಬಗ್ಗೆ ವಕೀಲರ ಪರಿಷತ್ ಗಮನ ಹರಿಸಬೇಕು ಎಂದು ಅವರು ವೌಖಿಕವಾಗಿ ತಿಳಿಸಿದರು.