ಪೌರ ಕಾರ್ಮಿಕರ ವೇತನ ಹೆಚ್ಚಳದ ಚೆಕ್ ನೀಡಿದ ಸಿದ್ದರಾಮಯ್ಯ
Update: 2016-11-08 17:41 GMT
ಬೆಂಗಳೂರು, ನ.8: ಪೌರಕಾರ್ಮಿಕರ ವೇತನ ಹೆಚ್ಚಳದ ಪರಿಷ್ಕರಣೆಯ ಚೆಕ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಕೆಲವರಿಗೆ ನೀಡಿದರು.
ಪೌರಕಾರ್ಮಿಕರಿಗೆ 16, 582 ರೂ., ವಾಹನ ಚಾಲಕರಿಗೆ 14,940ರೂ. ಹಾಗೂ ಮೇಲ್ವಿಚಾರಕರಿಗೆ 17,284 ರೂ.ವರೆಗೂ ವೇತನದಲ್ಲಿ ಹೆಚ್ಚಳವಾಗಿದ್ದು, ಈ ವೇತನ ಕಳೆದ ಆಗಸ್ಟ್ ನಿಂದ ಬರುವಂತೆ ಸೂಚಿಸಲಾಗಿದೆ.
ಈ ವೇಳೆ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಅವರು ಮಾಡುವ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಪೌರ ಕಾರ್ಮಿಕರ ಆರೋಗ್ಯ ಸೇರಿದಂತೆ ಯಾವುದೆ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಸರಕಾರ ಸೇರಿದಂತೆ ಸರಕಾರದ ಕರ್ತವ್ಯ ಎಂದು ತಿಳಿಸಿದರು.