ಸರಕಾರದ ಜೊತೆ ಚರ್ಚೆ ಮಾಜಿ ಸಚಿವ ಅಂಬರೀಷ್
ಬೆಂಗಳೂರು, ನ.8: ನಟ ದುನಿಯಾ ವಿಜಯ್ ನಟನೆಯ ಮಾಸ್ತಿಗುಡಿ ಸಿನೆಮಾ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ದುರಂತದಲ್ಲಿ ಸಾವನ್ನಪಿದ್ದ ನಟರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು ಸರಕಾರದ ಜೊತೆ ಚರ್ಚಿಸುತ್ತೇನೆ ಎಂದು ಹಿರಿಯ ನಟ ಅಂಬರೀಷ್ ಭರವಸೆ ನೀಡಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಯುವ ನಟರು ಯಾವುದೋ ಒಂದು ಆಸೆ ಇಟ್ಟುಕೊಂಡು ಚಿತ್ರರಂಗಕ್ಕೆ ಬಂದಿರುತ್ತಾರೆ. ಅಂಥ ಅಪಘಾತ ಅನಿರೀಕ್ಷಿತ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರ ಕಿಸಲು ಸರಕಾರದ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಹೋದ ಪ್ರಾಣ ಮರಳಿ ಬರೋದಿಲ್ಲ. ಆದರೆ ಸಾಹಸ ದೃಶ್ಯ ಗಳಲ್ಲಿ ಪಾಲ್ಗೊಳ್ಳುವ ಮೊದಲು ಮುನ್ನೆಚ್ಚರಿಕೆ ಅಗತ್ಯ. ಇವತ್ತಿನ ತಂತ್ರಜ್ಞಾನ ಸಾಕಷ್ಟು ಬೆಳೆದಿದೆ. ಅದನ್ನು ಬಳಸಿಕೊಳ್ಳಬೇಕಿತ್ತು. ಸಾಹಸ ದೃಶ್ಯ ಮಾಡುವ ಮೊದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳ ಬೇಕಿತ್ತು ಎಂದು ಚಿತ್ರ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದುರಂತ ಸುದ್ದಿ ಇಡೀ ಚಿತ್ರರಂಗ ಮತ್ತು ಇಡೀ ರಾಜ್ಯದ ಜನತೆಗೆ ಆಘಾತ ತಂದಿದೆ. ಆತುರ ಪಟ್ಟು ನಿರ್ಧಾರ ತೆಗೆದು ಕೊಂಡರೆ ಈ ರೀತಿಯಾದ ಅನಾಹುತಗಳು ಸಂಭವಿಸುತ್ತವೆ. ಒಂದೇ ಜಾಗದಲ್ಲಿ ಶವ ಇದೆ. ಇನ್ನು ಯಾಕೆ ಮೃತ ದೇಹಗಳು ಸಿಕ್ಕಿಲ್ಲ ಅನ್ನೋಅರ್ಥ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಾಹಸ ನಿರ್ದೇಶಕರ ನಿರ್ಲಕ್ಷ ದ ಪರಮಾವಧಿಗೆ ಇಬ್ಬರು ಉದಯೋನ್ಮುಖ ಕಲಾವಿದರು ಬಲಿಯಾಗಿದ್ದಾರೆ. ಆಕಸ್ಮಿಕವಾಗಿ ಈ ಘಟನೆ ನಡೆದಿಲ್ಲ. ಸಂಪೂರ್ಣ ಚಿತ್ರತಂಡ ನಿರ್ಲಕ್ಷದಿಂದ ನಡೆದಿದೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಹಸ ನಿರ್ದೇಶಕ ರವಿವರ್ಮಗೆ ಹಾಲಿವುಡ್ ಮಟ್ಟದಲ್ಲಿ ಆಫರ್‌ಗಳಿವೆ. ಆದರೆ ಅಂತ ನಿರ್ದೇಶಕ ಕನಿಷ್ಠ ಮುಜಾಗ್ರತೆಯನ್ನೂ ಇಟ್ಟುಕೊಳ್ಳದೆ ಸಾಹಸಕ್ಕೆ ಇಳಿದದ್ದು ತಪ್ಪು. ನಟ ಅನಿಲ್ಗೆ ಇಬ್ಬರು ಎಳೆಯ ಮಕ್ಕಳಿದ್ದಾರೆ. ಅವರನ್ನ ನೋಡಿದರೆ ಮನ ಕಲುಕುತ್ತದೆ, ನಾಳೆ ಸಂಜೆ ವಾಣಿಜ್ಯ ಮಂಡಳಿಯಲ್ಲಿ ಹಮ್ಮಿಕೊಂಡಿರುವ ಸಭೆ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಾಸ್ತಿಗುಡಿ ದುರಂತ ಹಿನ್ನೆಲೆ ನಟರಾದ ಮೃತಪಟ್ಟ ಉದಯ್ ಹಾಗೂ ಅನಿಲ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.