ಪ್ರತಿಷ್ಠಿತ ಎಸ್ ಎನ್ ಡಿ ರಿಯೋ ಒಲಿಂಪಿಕ್ಸ್ ಪುಟ ವಿನ್ಯಾಸ ಸ್ಪರ್ಧೆಯಲ್ಲಿ ಕನ್ನಡಕ್ಕೆ ಗೌರವ

Update: 2016-11-09 06:32 GMT
ಮೆಚ್ಚುಗೆ ಪಡೆದ ಕನ್ನಡ ಪ್ರಭದ ಎರಡು ಸೆಂಟರ್ ಸ್ಪ್ರೆಡ್ ಪುಟಗಳು 

ಬೆಂಗಳೂರು, ನ.9: ‘ಕನ್ನಡಪ್ರಭ’ ಪತ್ರಿಕೆಯು ಅತ್ಯುತ್ತಮ ಸುದ್ದಿ-ಚಿತ್ರ ವಿನ್ಯಾಸಕ್ಕಾಗಿ ವಿಶ್ವದರ್ಜೆಯ ಎನ್‌ಎಸ್‌ಡಿ ಮನ್ನಣೆಗೆ ಪಾತ್ರವಾಗಿದ್ದು, ಈ ಸಾಧನೆಗೈದ ಕನ್ನಡದ ಏಕೈಕ ಹಾಗೂ ದೇಶದ ಎರಡನೆ ಪ್ರಾಂತೀಯ ಪತ್ರಿಕೆಗ ಎಂಬ ಹಿರಿಮೆಗೆ ಪತ್ರಿಕೆ ಪಾತ್ರವಾಗಿದೆ.
ಈ ಬಗ್ಗೆ ‘ಕನ್ನಡಪ್ರಭ’ ಇಂದು ವರದಿ ಪ್ರಕಟಸಿದ್ದು, ಇತ್ತೀಚೆಗೆ ಬ್ರೆಝಿಲ್‌ನಲ್ಲಿ ಜರಗಿದ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಹಾಗೂ ಈ ಕ್ರೀಡಾಕೂಟದ ಇತಿಹಾಸದ ಸುದ್ದಿ- ಚಿತ್ರಣಗಳ ವಿನ್ಯಾಸಕ್ಕಾಗಿ ಪತ್ರಿಕೆಯು ಗೌರವಾನ್ವಿತ ಉಲ್ಲೇಖ (ಹಾನರೇಬಲ್ ಮೆನ್ಷನ್) ಗರಿ ಪ್ರಾಪ್ತವಾಗಿದೆ.
ಒಲಿಂಪಿಕ್ಸ್ ಕೂಟದ ಹಾಗುಹೋಗುಗಳನ್ನು ಸುಂದರವಾಗಿ ಚಿತ್ರಿಸಿದ್ದ ಜಗತ್ತಿನ ಪತ್ರಿಕೆಗಳ ಸ್ಪರ್ಧೆಯಲ್ಲಿ ‘ಕನ್ನಡಪ್ರಭ’ದ ಪ್ರಧಾನ ವಿನ್ಯಾಸಕಾರ ಬಿ.ಜಿ.ಜನಾರ್ದನ್ ವಿನ್ಯಾಸಗೊಳಿಸಿದ್ದ ಜೂನ್ 26ರ ‘ಭಾವ ಬೆಸುಗೆಯ 27 ಕೊಂಡಿಗಳು’ ಮತ್ತು ಆಗಸ್ಟ್ 4ರ ‘16 ದಿನಗಳ ಅಂತಾರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ಸೊಸೈಟಿ ಫಾರ್ ಡಿಸೈನ್(ಎಸ್‌ಎನ್‌ಡಿ)ನ ಮೆಚ್ಚುಗೆಯ ಪಟ್ಟಿಗೆ ಸೇರ್ಪಡೆಯಾಗಿದೆ.
ಕೇರಳದ ‘ಮಲಯಾಳ ಮನೋರಮಾ’ಗೆ ಸ್ವರ್ಣ, ‘ಇಂಡಿಯನ್ ಎಕ್ಸ್‌ಪ್ರೆಸ್’ಗೆ ಬೆಳ್ಳಿ ಪದಕ ದೊರೆತರೆ, ‘ಹಿಂದೂಸ್ಥಾನ್ ಟೈಮ್ಸ್’ ‘ಕನ್ನಡಪ್ರಭ’ದಂತೆ ‘ಗೌರವಾನ್ವಿತ ಉಲ್ಲೇಖ’ಕ್ಕೆ ಪಾತ್ರವಾಗಿದೆ.
ಇನ್ನೂ ಪ್ರಶಸ್ತಿಗೆ ಹಾಗೂ ಮೆಚ್ಚುಗೆಗೆ ಆಯ್ಕೆಯಾದ ಬ್ರೆಝಿಲ್‌ನ ಎಝಡ್ ಸೆಂಟ್ರಲ್, ಕೊಲಂಬಿಯಾದ ದಿ ಮಿಸ್ಸೋರಿಯಾ ಸೇರಿದಂತೆ ವಿಶ್ವದ ವಿವಿಧ ಪತ್ರಿಕೆಗಳ ಪುಟಗಳನ್ನು ಈ ಎಸ್‌ಎನ್‌ಡಿ ವೆಬ್‌ ()ನಲ್ಲಿ ಕಾಣಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News