ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮತ್ತೊಮ್ಮೆ ಮನವಿ: ಸಿಎಂ

Update: 2016-11-11 18:41 GMT

ಬೆಳಗಾವಿ, ನ.11: ಬರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ಹಣಕಾಸು ನೆರವು ಕೋರಿ ಕೇಂದ್ರ ಸರಕಾರಕ್ಕೆ ಮುಂದಿನ ವಾರ ಹೊಸದಾಗಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಶುಕ್ರವಾರ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕಲಕುಪ್ಪಿ, ಸವದತ್ತಿ ತಾಲೂಕಿನ ಚಚಡಿ, ಬೂದಿಗೊಪ್ಪ, ಯರಗಟ್ಟಿ ಗ್ರಾಮಗಳು ಸೇರಿದಂತೆ ಬರಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದ 139 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಪರಿಹಾರ ಕಾಮಗಾರಿಗಳಿಗೆ ಹಣಕಾಸು ನೆರವು ಕೋರಿ ಕೃಷಿ ಮತ್ತು ಕಂದಾಯ ಸಚಿ ವರು ಈಗಾಗಲೇ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ. ಎರಡು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಲೂ ಬೆಳೆ ಹಾನಿ ಸಂಭವಿಸಿದೆ. ಎನ್ಡಿಆರ್ಎ್ ನಿಯಮಾವಳಿ ಪ್ರಕಾರ 4,656 ಕೋಟಿ ರೂ.ಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ವಾಸ್ತವವಾಗಿ ಬರಗಾಲದಿಂದ ರಾಜ್ಯದಲ್ಲಿ 16 ಕೋಟಿ ರೂ.ಮೌಲ್ಯದ ಬೆಳೆ ಹಾನಿಗೊಳಗಾಗಿದೆ. ಅತಿವೃಷ್ಟಿಯಿಂದ 386 ಕೋಟಿ ರೂ.ನಷ್ಟ ಸಂಭವಿಸಿದೆ. ಕೇಂದ್ರ ತಂಡವೂ ರಾಜ್ಯಕ್ಕೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ಒಂದು 1.02 ಲಕ್ಷ ಹೆಕ್ಟೇರ್ ಪ್ರದೇಶ ದಲ್ಲಿ ಬೆಳೆ ಹಾಳಾಗಿ 605 ಕೋಟಿ ರೂ.ನಷ್ಟ ವಾಗಿದೆ. ಕಳೆದ ವರ್ಷ 395 ಕೋಟಿ ರೂ.ಪರಿಹಾರ ಒದಗಿಸ ಲಾಗಿದೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಲ್ಲಿ 55 ಲಕ್ಷ ಮಾನವ ದಿನಗಳು ಸೃಷ್ಟಿಯಾಗಿದ್ದು, ಅದನ್ನು 96 ಲಕ್ಷಕ್ಕೆ ಹೆಚ್ವಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.ಲ್ಲಾಕಾರಿಗಳ ಬಳಿ 12 ಕೋಟಿ ರೂ. ಅನುದಾನ ಇದ್ದು, ಕುಡಿಯುವ ನೀರು, ಜಾನುವಾರುಗಳ ಮೇವು ಮತ್ತು ಕೂಲಿ ಕಾರ್ಮಿಕರ ಉದ್ಯೋಗಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ 21 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾ ಗಿದ್ದು, ಮಾರ್ಚ್ ವೇಳೆಗೆ 18 ಯೋಜನೆ ಗಳನ್ನು ಪೂರ್ಣ ಗೊಳಿಸಲು ಆದೇಶಿಸಿದೆ ಎಂದು ಅವರು ತಿಳಿಸಿದರು.


ಬರಪೀಡಿತ ಪ್ರದೇಶಗಳಲ್ಲಿ ಮೇವು ಬ್ಯಾಂಕ್, ಅಗತ್ಯ ವಿರುವ ಕಡೆಗಳಲ್ಲಿ ಗೋಶಾಲೆ ತೆರೆಯಲು ಹೇಳಿದೆ. ಕುಡಿಯುವ ನೀರಿಗಾಗಿ ರಾಜ್ಯಾದ್ಯಂತ ಟಾಸ್ಕ್ ೆರ್ಸ್ ಗಳಿಗೆ ಇಂದು ತಲಾ 50 ಲಕ್ಷ ರೂ.ಬಿಡುಗಡೆ ಮಾಡಲಾ ಗಿದೆ. ಬರ ಪರಿಸ್ಥಿತಿಯನ್ನು ಕಳೆದ ವರ್ಷ ಸಮರ್ಥವಾಗಿ ನಿಭಾಯಿಸಿದ್ದೇವೆ. ಈ ವರ್ಷವು ಸಮರ್ಪಕವಾಗಿ ಎದುರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.


ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ನೋಡಿಕೊಳ್ಳಿ. ಜಲಮೂಲ ಇಲ್ಲದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಇದಕ್ಕೂ ಮುನ್ನ ಅಕಾರಿಗಳಿಗೆ ಸಭೆಯಲ್ಲಿ ಮುಖ್ಯ ಮಂತ್ರಿ ಸೂಚನೆ ನೀಡಿದರು.ೂಲಿ ಕಾರ್ಮಿಕರಿಗೆ ತಪ್ಪದೇ ಉದ್ಯೋಗ ನೀಡಿ ಅವರು ಗುಳೆ ಹೋಗದಂತೆ ನೋಡಿಕೊಳ್ಳಿ. ಜಾನುವಾರು ಗಳಿಗೆ ಈಗಿನಿಂದಲೇ ಮೇವು ಶೇಖರಣೆ ಮಾಡಿ. ಜಾನುವಾರುಗಳು ಎಷ್ಟಿವೆ ಎಂದು ಅಕಾರಿಗಳು ಹಳ್ಳಿ ಹಳ್ಳಿಗೆ ಹೋಗಿ ಲೆಕ್ಕ ಮಾಡಬೇಕು. ರಾಸುಗಳಿಗೆ ರೋಗ ಬಾರದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಾಥಮಿಕ, ಸಮಯದಾಯ ಆರೋಗ್ಯ ಕೇಂದ್ರಗಳು, ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಗೆ ಔಷಧ ಸಿಗುವಂತೆ ನೋಡಿಕೊಳ್ಳಿ ಎಂದು ಅಕಾರಿಗಳಿಗೆ ಅವರು ತಾಕೀತು ಮಾಡಿದರು.ೆರೆ ಸಂಜೀವಿನಿ-2 ಆರಂಭ: ಕೆರೆ ಸಂಜೀವಿನಿ ಯೋಜನೆ ಯ ಎರಡನೆ ಭಾಗ ಆರಂಭವಾಗಿದ್ದು, ನೀರಿಲ್ಲದೆ ಬತ್ತಿರುವ ಕೆರೆಗಳನ್ನು ಮಳೆಗಾಲದ ಒಳಗೆ ಅಭಿವೃದ್ಧಿ ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಕೃಷಿ ಸಚಿವ ಕೃಷ್ಣಭೈರೇಗೌಡ, ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕರಾದ ಫಿರೋಝ್ ಸೇಠ್, ಅಶೋಕ್ ಪಟ್ಟಣ್, ಸತೀಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ ಮತ್ತಿತರರು ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News