ನೋಟು ನಿಷೇಧ: ಆರ್‌ಬಿಐಗೆ ಮುತ್ತಿಗೆಗೆ ಯತ್ನಿಸಿದ ಸಂಘಟನೆಗಳು

Update: 2016-11-17 13:52 GMT
ನೋಟು ನಿಷೇಧ: ಆರ್‌ಬಿಐಗೆ ಮುತ್ತಿಗೆಗೆ ಯತ್ನಿಸಿದ ಸಂಘಟನೆಗಳು
  • whatsapp icon

 ನ.17: ಕೇಂದ್ರ ಸರಕಾರ ಏಕಾಏಕಿ 500 ಹಾಗೂ 1 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿರುವುದನ್ನು ಖಂಡಿಸಿ ಸ್ವರಾಜ್ ಅಭಿಯಾನ್ ಸಂಘಟನೆ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖಂಡರುಗಳು ನಗರದಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರಾಜ್ ಅಭಿಯಾನದ ಅಧ್ಯಕ್ಷ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರು, ದೇಶದಲ್ಲಿ ಶೇ.6ರಷ್ಟು ಮಾತ್ರ ಕಪ್ಪು ಹಣ ನಗದು ರೂಪದಲ್ಲಿದೆ. ಇನ್ನುಳಿದಂತೆ ರಿಯಲ್ ಎಸ್ಟೇಟ್, ಬಂಗಾರ, ಷೇರುಗಳು ಹಾಗೂ ವಿದೇಶಿ ಬ್ಯಾಂಕುಗಳಲ್ಲಿದೆ ಎಂದು ಅನೇಕ ಆರ್ಥಿಕ ತಜ್ಞರು ಅಭಿಪ್ರಾಯಿಸಿದ್ದಾರೆ. ಆದರೆ, ಕೇಂದ್ರ ಸರಕಾರ ಏಕಾಏಕಿ ನೋಟು ಚಲಾವಣೆಯನ್ನು ರದ್ದು ಮಾಡಿರುವುದು ಬಡವರ ಮೇಲೆ ಬರೆ ಎಳೆದಂತಾಗಿದೆ ಎಂದು ಕಿಡಿಕಾರಿದರು.

 ಕೇಂದ್ರ ಸರಕಾರ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದರಿಂದ ಸಾರ್ವಜನಿಕರು ಹಣಕ್ಕಾಗಿ ಪರದಾಡುವಂತಾಗಿದೆ. ಇದರಿಂದ, ಆಸ್ಪತ್ರೆ, ಮದುವೆ ಇತ್ಯಾದಿಗಳ ಖರ್ಚು ವೆಚ್ಚವನ್ನು ಭರಿಸಲು ಕಷ್ಟವಾಗುತ್ತಿದೆ. ಅಲ್ಲದೆ, ಹಣಕ್ಕಾಗಿ ದಿನವಿಡೀ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಣ ಬದಲಿಸಿಕೊಳ್ಳುವ ಗಡುವು ವಿಸ್ತರಿಸಬೇಕು. ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಭಾರತೀಯರ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸಿದರು.


  ಮಾಜಿ ಸಚಿವ ಜರ್ನಾದನರೆಡ್ಡಿ ಅವರು ತಮ್ಮ ಮಗಳ ಮದುವೆಗೆ 500 ಕೋಟಿ ರೂ.ವೆಚ್ಚ ಮಾಡಿ ವೈಭವದ ಮದುವೆ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ನಾಯಕರುಗಳು ಇದರ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ರ್ನಾದನರೆಡ್ಡಿ ಅವರು ತಮ್ಮ ಮಗಳ ಮದುವೆಗೆ 500 ಕೋಟಿ ರೂ.ವೆಚ್ಚ ಮಾಡಿ ವೈವದಮದುವೆಮಾಡುತ್ತಿದ್ದಾರೆ.ಆದರೆ,ಬಿಜೆಪಿನಾಯಕರುಗಳುಇದರಬಗ್ಗ್ವೆನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬ್ಯಾಂಕ್‌ಗಳಿಗೆ ಹಣವನ್ನು ಬಿಡುಗಡೆ ಮಾಡಬೇಕು, ಎಟಿಎಂಗಳ ಬಾಗಿಲುಗಳನ್ನು ತೆರೆದು ಎಟಿಎಂಗಳಲ್ಲಿ ಹಣವನ್ನು ಶೇಖರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಆರ್‌ಬಿಐ ಬ್ಯಾಂಕ್‌ಗೆ ಸ್ವರಾಜ್ ಅಭಿಯಾನ, ಬೀದಿ ಬದಿ ವ್ಯಾಪಾರಿಗಳ ಸಂಘ, ಸಿಪಿಐಎಂಎಲ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಮತ್ತಿತರ ಸಂಘಟನೆಗಳ ಮುಖಂಡರುಗಳು ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ತಡೆದು ಬಂಧಿಸಿ ಬಿಡುಗಡೆಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News