ನೋಟಿನ ಸಮಸ್ಯೆ ಬಗ್ಗೆ ಮಾಧ್ಯಮಗಳು ಸುಳ್ಳು ಹೇಳುತ್ತಿವೆಯೇ?

Update: 2016-11-21 06:31 GMT

ಬೆಂಗಳೂರು, ನ.21: ನೋಟು ಅಮಾನ್ಯದ ನಂತರ  ಜನಸಾಮಾನ್ಯರು ಎದುರಿಸುತ್ತಿರುವ ಹತ್ತು ಹಲವು ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ವ್ಯತಿರಿಕ್ತ ವರದಿಗಳನ್ನು ಮಾಡುತ್ತಿವೆಯೇ ? ಈ ವರದಿಗಳ ಸತ್ಯಾಸತ್ಯತೆಯನ್ನು ಅರಿಯಲು  ಬೆಂಗಳೂರು ಮೂಲದ ಸಾಮಾಜಿಕ ಜಾಲತಾಣ ಪ್ರಿಯರಾದ ಟಿನು ಚೆರಿಯನ್ ಅಬ್ರಹಾಂ ಅವರು ರವಿವಾರ ನಗರ ಪ್ರದಕ್ಷಿಣೆ ಮಾಡಿದಾಗಲೇ ಅವರಿಗೆ ವಸ್ತುಸ್ಥಿತಿ ಅರಿವಾಗಿದ್ದು.
 
ರವಿವಾರದಂದು ಅವರು ಬೆಂಗಳೂರು ನಗರದ 23 ಎಟಿಎಂಗಳಲ್ಲಿ ಪರಿಸ್ಥಿತಿ ಹೇಗಿದೆಯೆಂದು ರಿಯಲ್ ಟೈಮ್ ಟ್ವೀಟ್ ಮಾಡಿದ್ದರು. ನಡೆದುಕೊಂಡೇ ಅವರು ವೈಟ್ ಫೀಲ್ಡ್ ಹಾಗೂ ಕೆ ಆರ್ ಪುರಂ ಪ್ರದೇಶದ ಎಟಿಎಂ ಗಳಿಗೆ ತೆರಳಿದಾಗ ಹೆಚ್ಚಿನ ಎಟಿಎಂ ಗಳಲ್ಲಿ `ನೋ ಕ್ಯಾಶ್' ಬೋರ್ಡ್ ಕಾಣಿಸಿತು ಹಾಗೂ ಹಲವು ಎಟಿಎಂಗಳ ಶಟರ್ ಬಂದ್ ಆಗಿತ್ತು. ಇನ್ನು ಕೆಲವು ಎಟಿಎಂಗಳಲ್ಲಿ ಉದ್ದ ಸರತಿ ಸಾಲುಗಳಿದ್ದವಲ್ಲದೆ ಅವುಗಳು ಕೇವಲ 2000 ರೂ ನೋಟು ಮಾತ್ರ ನೀಡುತ್ತಿದ್ದವು.

ಟಿನು ಅವರು ಒಟ್ಟು 23 ಎಟಿಎಂ ಗಳಿಗೆ ಭೇಟಿ ನೀಡಿದ್ದರೆ ಅವುಗಳಲ್ಲಿ ಕೇವಲ 4 ಎಟಿಎಂ ಗಳು ಕಾರ್ಯನಿರ್ವಹಿಸುತ್ತಿದ್ದವು. ಪ್ರತಿಯೊಂದು ಎಟಿಎಂ ಗೆ ಹೋದಾಗಲೂ ಅಲ್ಲಿನ ಪರಿಸ್ಥಿತಿ  ಬಗ್ಗೆ ಅವರು ಟ್ವೀಟ್ ಮಾಡಿದ್ದರು. ಹೆಚ್ಚಿನ ಎಟಿಎಂ ಗಳು ತಾವು ದಿನದ 24 ಗಂಟೆಗಳ ಕಾಲ ಸೇವೆ ನೀಡುವುದಾಗಿ ಹೇಳಿದ್ದರೂ  ತಮ್ಮ ಮಾತು ತಪ್ಪಿದ್ದು ಸ್ಪಷ್ಟವಾಗಿತ್ತು. ಹೆಚ್ಚಿನ ಎಟಿಎಂ ಗಳಲ್ಲಿ ಕ್ಯಾಶ್ ಇಲ್ಲದೆ ಬಂದ್ ಮಾಡಲಾಗಿತ್ತು.
ಎಟಿಎಂ ಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಜನಸಾಮಾನ್ಯರಿಗಾಗುವ ತೊಂದರೆ ಹೇಳತೀರದಾಗಿದೆ ಎಂದು ಟಿನು ಚೆರಿಯನ್ ಹೇಳಿದ್ದಾರೆ.

ಕೃಪೆ:thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News