ನಕಲಿ ಆದಾಯ ತೆರಿಗೆ ಅಧಿಕಾರಿಯ ಬಂಧನ
Update: 2016-12-16 08:29 GMT
ಬೆಂಗಳೂರು,ಡಿ. 16: ಆದಾಯ ತೆರಿಗೆ ಅಧಿಕಾರಿಯೆಂದು ಹೇಳಿಕೊಂಡು ದಾಳಿ ನಡೆಸಿದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ಮನೆಗಳಿಗೆ ಮತ್ತು ಸಂಸ್ಥೆಗಳಿಗೆ ದಾಳಿ ಮಾಡಿ ಹಣವನ್ನು ಕಬಳಿಸಿದ ಶಿವಾನಂದ ಬಜಂತ್ರಿ ಎಂಬಾತನನ್ನು ಹುಬ್ಬಳಿ ಪೊಲೀಸರು ಬಂಧಿಸಿದ್ದಾರೆ.
ಬಸವರಾಜ್ ಪೂಜಾರ್ ಎಂಬವರ ಮನೆಗೆ ಆದಾಯ ತೆರಿಗೆ ಅಧಿಕಾರಿಯ ವೇಷದಲ್ಲಿ ಬಂದು ತಪಾಸಣೆ ನಡೆಸಿ 1.5 ಲಕ್ಷರೂಪಾಯಿಯನ್ನು ತೆಗೆದುಕೊಂಡು ಪರಾರಿಯಾಗಿದ್ದ ಈತನ ತಂಡದಲ್ಲಿ ಇನ್ನಿಬ್ಬರು ಸಹಾಯಕರು ಕೂಡಾ ಇದ್ದರು ಎನ್ನಲಾಗಿದೆ.
ಮರಳು ಸಾಗಿಸುವ ಲಾರಿ ಮಾಲಕರಿಂದ ರೆವೆನ್ಯೂ ಅಧಿಕಾರಿಯ ವೇಷ ತೊಟ್ಟು ಈತನ ನೇತೃತ್ವದ ತಂಡ ಖಾಯಮ್ಮಾಗಿ ಹಣ ಪೀಕಿಸುತ್ತಿತ್ತು. ಕಳೆದ ದಿವಸ ಎರಡು ಲಾರಿ ಮಾಲಕರಿಂದ 60,000ರೂಪಾಯಿ ಪಡೆದಿದ್ದ ಬಜಂತ್ರಿ ಮತ್ತಾತನ ತಂಡ ಹೆಚ್ಚು ಹಣಕ್ಕೆ ಬೇಡಿಕೆ ಇಟ್ಟದ್ದರಿಂದ ಲಾರಿ ಮಾಲಕರಲ್ಲೊಬ್ಬರು ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿ ತಿಳಿಸಿದೆ.