ಹೊಸ ವರ್ಷಕ್ಕೆ ಹೊಸ ಪೊಲೀಸ್ ಅಧಿಕಾರಿಗಳು

Update: 2016-12-31 17:17 GMT

ಬೆಂಗಳೂರು, ಡಿ.31: ಹೊಸ ವರ್ಷದ ಸಂಭ್ರಮದ ಮಧ್ಯೆಯೇ ಬೆಂಗಳೂರು ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಸೇರಿ ಒಟ್ಟು 48 ಪ್ರಮುಖ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಪ್ರವೀಣ್ ಸೂದ್ ನೇಮಕಗೊಂಡಿದ್ದಾರೆ.

   ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಎನ್.ಎಸ್.ಮೇಘರಿಕ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಎಡಿಜಿಪಿ ಸ್ಥಾನಕ್ಕೆ ನೇಮಿಸಲಾಗಿದೆ. ಅದೇ ರೀತಿ, ಎಸಿಬಿ ಐಜಿಪಿಯಾಗಿದ್ದ ಡಾ.ಅಬ್ದುಲ್ ಸಲೀಂ ಅವರನ್ನು ದಾವಣಗೆರೆ ವಿಭಾಗದ ಐಜಿಪಿ ಹುದ್ದೆಗೆ ನೇಮಕ ಮಾಡಲಾಗಿದೆ. ಇನ್ನು ಈ ಸ್ಥಾನಕ್ಕೆ ಬೆಂ.ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಶರತ್‌ಚಂದ್ರ ಅವರನ್ನು ನೇಮಿಸಲಾಗಿದೆ.

ಯಾರು ಎಲ್ಲಿಗೆ:ಎಸ್.ರವಿ-ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ(ಬೆಂಗಳೂರು), ಪಿ.ಹರಿಶೇಖರನ್-ಐಜಿಪಿ(ಮಂಗಳೂರು), ಎಂ.ನಿಂಬಾಳ್ಕರ್ ಹೇಮಂತ್-ಬೆಂ.ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ, ಚರಣ್‌ರೆಡ್ಡಿ- ಐಜಿಪಿ, ಕೆಎಸ್ಸಾರ್ಪಿ, ಮಾಲಿನಿ ಕೃಷ್ಣಮೂರ್ತಿ- ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತೆ, ಅಲೋಕ್ ಕುಮಾರ್-ಐಜಿಪಿ, ಕಲಬುರ್ಗಿ ವಿಭಾಗ .

ಡಿ.ರೂಪಾ-ಡಿಐಜಿ ಕಾರಾಗೃಹ(ಬೆಂಗಳೂರು), ಸತೀಶ್ ಕುಮಾರ್-ಡಿಐಜಿ ಗುಪ್ತಚರ ವಿಭಾಗ(ಬೆಂಗಳೂರು), ಸಂದೀಪ್ ಪಾಟೀಲ್-ಎಸ್ಪಿ ಗುಪ್ತಚರ ವಿಭಾಗ(ಬೆಂಗಳೂರು), ಚಂದ್ರಗುಪ್ತ-ಡಿಸಿಪಿ ಕೇಂದ್ರ ವಿಭಾಗ(ಬೆಂಗಳೂರು), ಕಮಲ್ ಪಂತ್-ಎಡಿಜಿಪಿ ಆಡಳಿತ ವಿಭಾಗ(ಬೆಂಗಳೂರು), ನಂಜುಂಡಸ್ವಾಮಿ-ಹೆಚ್ಚುವರಿ ಪೊಲೀಸ್ ಆಯುಕ್ತ, ಆಡಳಿತ ವಿಭಾಗ(ಬೆಂಗಳೂರು).

 ಕೆ.ವಿ.ಗಗನ್‌ದೀಪ್-ಎಡಿಜಿಪಿ-ಎಸಿಬಿ, ಡಾ.ರಾಜವೀರ್ ಪ್ರತಾಪ್ ಶರ್ಮಾ-ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ, ಕಮಲ್‌ಪಂತ್-ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ಆಡಳಿತ (ಬೆಂಗಳೂರು), ಭಾಸ್ಕರ್‌ರಾವ್-ಎಡಿಜಿಪಿ, ರಾಜ್ಯ ಪೊಲೀಸ್ ಮೀಸಲು ಪಡೆ, ಪ್ರಶಾಂತ್‌ಕುಮಾರ್ ಠಾಕೂರ್-ಎಡಿಜಿಪಿ, ಮೆಟ್ರೊ ಪಾಲಿಟನ್ ಟಾಸ್ಕ್ ಫೋರ್ಸ್, ಡಾ.ಎ.ಎಸ್.ಎನ್.ಮೂರ್ತಿ-ಎಡಿಜಿಪಿ-ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ, ಅರಣ್ ಚಕ್ರವರ್ತಿ-ಐಜಿಪಿ, ಆಂತರಿಕ ಭದ್ರತಾ ವಿಭಾಗ, ಬಿ.ಕುಮಾರ್‌ಸಿಂಗ್-ಐಜಿಪಿ, ತರಬೇತಿ ವಿಭಾಗ (ಬೆಂಗಳೂರು).

ಮಧುಕರ್ ಶೆಟ್ಟಿ-ಐಜಿಪಿ ಕರ್ನಾಟಕ ಪೊಲೀಸ್ ಅಕಾಡಮಿ(ಮೈಸೂರು), ವಿಪುಲ್‌ಕುಮಾರ್-ಐಜಿಪಿ(ಮೈಸೂರು), ಎಸ್.ಎಸ್. ರೇವಣ್ಣ- ಡಿಐಜಿ- ಕೆಎಸ್‌ಆರ್‌ಪಿ, ಪವಾರ್ ಪ್ರವೀಣ್ ಮಧುಕರ್-ಡಿಐಜಿ, ಎನ್.ಸತೇಶ್‌ಕುಮಾರ್-ಡಿಐಜಿ, ಗುಪ್ತಚರ (ಬೆಂಗಳೂರು), ಡಾ.ಬಿ.ಎ. ಮಹೇಶ್-ಐಜಿಪಿ, ನೇಮಕಾತಿ(ಬೆಂಗಳೂರು).

 ಡಾ.ಡಿ.ಸಿ.ರಾಜಪ್ಪ-ಡಿಜಿಪಿ-ಸಿಎಆರ್ (ಬೆಂಗಳೂರು), ಟಿ.ಆರ್.ಸುರೇಶ್-ಡಿಐಜಿಪಿ ಅಗ್ನಿಶಾಮಕ ದಳ(ಬೆಂಗಳೂರು), ಎಂ. ಎನ್. ನಾಗರಾಜ್-ಡಿಐಜಿಪಿ, ಕ್ರಿಮಿನಲ್ ತನಿಖಾ ವಿಭಾಗ, ಡಾ. ಪಿ. ಎಸ್. ಹರ್ಷ- ಡಿಸಿಪಿ (ಬಡ್ತಿ) ಸೇರಿ ಒಟ್ಟು 48 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

 ಎಸ್‌ಎಸ್‌ಎಫ್-ಐಎಫ್‌ಎಸ್: ವಿ.ವೆಂಕಟೇಶ್-ಡಿಸಿಎಫ್(ಬೆಂಗಳೂರು), ಡಾ.ಡಿ. ಮಂಜುನಾಥ್- ಡಿಸಿಎಫ್ (ಚಿಕ್ಕಬಳ್ಳಾಪುರ), ಡಿ.ಮಹೇಶ್ ಕುಮಾರ್-ಡಿಸಿಎಫ್ (ಬೆಂಗಳೂರು), ಜೆ.ದೀಪ್-ಡಿಸಿಎಫ್‌ಮತ್ತು ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಪರಿಸರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಬೆಂಗಳೂರು), ಎಂ.ಎನ್. ವಿಜಯಕುಮಾರ್- ಡಿಸಿಎಫ್, ಎ.ಚಂದ್ರಣ್ಣ- ಡಿಸಿಎಫ್(ಚಿಕ್ಕಮಗಳೂರು), ಎಂ.ಎಸ್.ಮಾಣಿಕ್-ಡಿಸಿಎಫ್(ಶಿವಮೊಗ್ಗ).

ಇಂದು ಸೂದ್ ಅಧಿಕಾರ ಸ್ವೀಕಾರ

‘ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಪ್ರವೀಣ್‌ಸೂದ್, ರವಿವಾರ ಮಧ್ಯಾಹ್ನ 12:30ಕ್ಕೆ ನಗರದ ಪೊಲೀಸ್ ಆಯುಕ್ತರ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಇವರು 1986ರ ಸಾಲಿನ ಐಪಿಎಸ್ ಅಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News