ನೋಟು ರದ್ದು ಸಮರ್ಥನೆಗೆ ಬಾರದ ಬಿಜೆಪಿ ನಾಯಕರು...!

Update: 2017-01-22 13:53 GMT

ಬೆಂಗಳೂರು, ಜ.22: ಕೇಂದ್ರದ ಮೋದಿ ಸರಕಾರ ದಿಢೀರ್ ಗರಿಷ್ಠ ಮುಖಬೆಲೆಯ ನೋಟು ರದ್ದುಗೊಳಿಸಿದ ಉದ್ದೇಶ, ಇದರ ಪರಿಣಾಮ ಮತ್ತು ಪರಿಹಾರದ ಕುರಿತು ಏರ್ಪಡಿಸಿದ್ದ, ‘ಬಹಿರಂಗ ಮುಕ್ತ ಚರ್ಚೆ’ಗೆ ರಾಜ್ಯ ಬಿಜೆಪಿ ನಾಯಕರೇ ಗೈರು ಆಗಿದ್ದಾರೆ.

ರವಿವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಕರ್ನಾಟಕ ಜನಶಕ್ತಿ, ದಸಂಸ ಹಾಗೂ ಸ್ವರಾಜ್ ಅಭಿಯಾನ ಸೇರಿ ಪ್ರಮುಖರು ಬೆಳಗ್ಗೆ 10:30ರಿಂದ ನೋಟುರದ್ದು ಬಗ್ಗೆ ಬಿಜೆಪಿ ನಾಯಕರೊಂದಿಗೆ ಬಹಿರಂಗ ಮುಕ್ತ ಚರ್ಚೆ ಏರ್ಪಡಿಸಲಾಗಿತ್ತು.ಆದರೆ, ಸಾರ್ವಜನಿಕವಾಗಿ ಹಾಗೂ ಮಾಧ್ಯಮಗಳಲ್ಲಿ ನೋಟುರದ್ದು ಸರಿ ಇದೆ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯ ಪ್ರಮುಖ ನಾಯಕರು ಮಾತ್ರ ಇಲ್ಲಿನ ಚರ್ಚೆಗೆ ಹಾಜರಾಗಿಲ್ಲ.

ಚರ್ಚೆಯಲ್ಲಿ ಉದ್ದಿಮೆದಾರರು, ರೈತರು, ವರ್ತಕರು, ಕಾರ್ಮಿಕ ಸಂಘಗಳು, ಪ್ರಗತಿಪರರು,ಆರ್ಥಿಕ ತಜ್ಞರು ಸೇರಿ ಪ್ರಮುಖರು ಪಾಲ್ಗೊಂಡಿದ್ದರು. ಆದರೆ, ‘ಕೇಂದ್ರ ಸಚಿವ ಅನಂತ್‌ಕುಮಾರ್, ಸಂಸದ ಪ್ರತಾಪ್‌ಸಿಂಹ, ಶಾಸಕ ಸಿ.ಟಿ.ರವಿ ಹಾಗೂ ನರೇಂದ್ರಮೋದಿ ಪರ ಬರಹಗಾರರಿಗೆ ಅಂಚೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಆಹ್ವಾನ ನೀಡಿದರೂ, ಗೈರು ಆದ ಕಾರಣ ಪದೇ ಪದೇ ಧ್ವನಿವರ್ಧಕದಲ್ಲಿ ‘ಬಿಜೆಪಿ ನಾಯಕರು ಬಂದಿದ್ದರೆ, ವೇದಿಕೆಗೆ ಬನ್ನಿ’ ಎಂದು ಆಹ್ವಾನಿಸುವ ಶಬ್ದ ಕೇಳಿಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News