ಡಾ. ಸಲೀಂ ಸಹಿತ ರಾಜ್ಯದ 22 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕದ ಗೌರವ

Update: 2017-01-24 15:07 GMT

ಬೆಂಗಳೂರು, ಜ.24: ಪೊಲೀಸರ ವಿಶೇಷ ಹಾಗೂ ಶ್ಲಾಘನೀಯ ಸೇವೆಗಾಗಿ ಗಣರಾಜ್ಯೋತ್ಸವದ ಅಂಗವಾಗಿ ಪ್ರದಾನ ಮಾಡಲಾಗುವ ರಾಷ್ಟ್ರಪತಿ ಪದಕದ ಗೌರವಕ್ಕೆ ರಾಜ್ಯದ 22 ಮಂದಿ ಪೊಲೀಸರು ಪಾತ್ರರಾಗಿದ್ದಾರೆ.

ವಿಶೇಷ ಸೇವೆ: ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿ ಡಾ.ಎಂ.ಅಬ್ದುಲ್ಲಾ ಸಲೀಮ್, ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ಎಸ್.ಆರ್. ಚರಣ್‌ರೆಡ್ಡಿ ಹಾಗೂ ತುಮಕೂರಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ.ಮಂಜುನಾಥ ತಮ್ಮ ವಿಶೇಷ ಸೇವೆಗಾಗಿ ರಾಷ್ಟ್ರಪತಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

ಶ್ಲಾಘನೀಯ ಸೇೆ: ಬೆಂಗಳೂರು ದಕ್ಷಿಣ ಸಿಎಆರ್ ಡಿಸಿಪಿ ಪಿ.ಪಾಪಣ್ಣ, ಬೆಳಗಾವಿ ಜಿಲ್ಲೆಯ ಖಡೆಬಝಾರ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ.ಟಿ.ಜಯಕುಮಾರ್, ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ್‌ನಾಯಕ್, ಸಿಐಡಿಯ ಡಿಎಸ್ಪಿ ಸಿ.ಆರ್.ರವಿಶಂಕರ್.

ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಡಿಎಸ್ಪಿ ಅಂತೋಣಿ ಜಾನ್ ಜೆ.ಕೆ., ಕೆಎಸ್‌ಆರ್‌ಪಿ ಸಹಾಯಕ ಕಮಾಂಡೆಂಟ್ ಎಂ.ಕೆ.ಗಣೇಶ್, ಬೆಂಗಳೂರು ಕೇಂದ್ರ ವಿಭಾಗದ ಡಿಎಸ್ಪಿ ಎಸ್.ಬಿ.ಮಹೇಶ್ವರಪ್ಪ, ಮಂಗಳೂರು ನಗರದ ಸಿಸಿಆರ್‌ಬಿ ಸಹಾಯಕ ಪೊಲೀಸ್ ಆಯುಕ್ತ ವ್ಯಾಲೆಂಟೈನ್ ಡಿ’ಸೋಜಾ.

ಬೆಂಗಳೂರಿನ ಗುಪ್ತಚರ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಎಸ್.ವಡ್ಡರ್, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣೆಯ ಎಸ್ಸೈ ಕೆ.ಆರ್.ಸುನೀತಾ, ಬೆಂಗಳೂರಿನ ಪಿಸಿಡಬ್ಲು ಎಸ್ಸೈ ಕೆ.ರೀನಾ, ಮೈಸೂರಿನ ಐಎಸ್‌ಡಿ ದಕ್ಷಿಣ ವಲಯ ಎಸ್ಸೈ ಲಕ್ಷ್ಮಿ ರಾಜಣ್ಣ, ಬೆಂಗಳೂರಿನ ಗುಪ್ತಚರ ವಿಭಾಗದ ಎಸ್ಸೈ ಪಿ.ಎಂ.ಸುಬ್ಬಯ್ಯ.

ಮೈಸೂರಿನ ಕೆಎಸ್‌ಆರ್‌ಪಿ ತುಕಡಿಯ ಎಸ್ಸೈ ಎನ್.ಮುರಳೀಧರ ಮಾನೆ, ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಪೊಲೀಸ್ ಠಾಣೆಯ ಎಸ್ಸೈ ಕೆ.ಪುಡ್ಡ, ಬೆಂಗಳೂರಿನ ಐಜಿಪಿ ಎಫ್‌ಸಿ ಕಚೇರಿಯ ಮುಖ್ಯ ಪೇದೆಗಳಾದ ಕೆ.ಕೆ.ಹೊನ್ನೇಗೌಡ, ಮುಕುಂದ, ಸಿಐಡಿ ಕಚೇರಿಯ ಮುಖ್ಯಪೇದೆ ಸಂಜೀವಯ್ಯನ್ ಸಂಪತ್‌ಕುಮಾರ್ ಹಾಗೂ ಕೆಎಸ್‌ಆರ್‌ಪಿ ತುಕಡಿಯ ಮುಖ್ಯಪೇದೆ ರಾಮಚಂದ್ರರಾವ್ ಶ್ಲಾಘನೀಯ ಸೇವಾ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News